Amruthadhaare ; ಗೆಳೆಯನಿಗಾಗಿ ಒದ್ದಾಡುತ್ತಿರುವ ಗೌತಮ್ : ಜೈದೇವ್ ಮಾತಿಗೆ ಸ್ಪಂದಿಸಿದ ಆನಂದ್..!
ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಗೆ ಅಪಘಾತವಾಗಿರುವ ವಿಚಾರಕ್ಕೆ ಮಲ್ಲಿ ಬೇಸರ ಮಾಡಿಕೊಂಡಿದ್ದರೆ, ಜೈದೇವ್ ಫುಲ್ ಖುಷಿಯಾಗಿದ್ದಾನೆ.ಸಾಯಬೇಕಿದ್ದವನು ಬದುಕಿದ್ದಾನೆ. ನನ್ನ ತಂಟೆಗೆ ಬಂದರೆ ಅಷ್ಟೇ. ಇನ್ನು ಮುಂದೆ ತನ್ನ ಬಗ್ಗೆ ಆನಂದ್ ಗೌತಮ್ ಬಳಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅರಾಮಾಗಿದ್ದಾನೆ. ದಿಯಾಳಿಗೆ ಜೈದೇವ್ ಮಾಡಿರುವ ಕೆಲಸ ಗೊತ್ತಾಗಿದ್ದು, ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾಳೆ. ದಿಯಾ ಜೈದೇವ್ ನಿಂದ ದೂರ ಆಗುತ್ತಾಳಾ, ಇಲ್ಲ ಸತ್ಯವನ್ನು ಗೌತಮ್ ಗೆ ತಿಳಿಸುತ್ತಾಳಾ ಗೊತ್ತಿಲ್ಲ.
ಮನೆಯಿಂದ ಕಾಣೆಯಾಗಿರುವ ಸದಾಶಿವ
ಇತ್ತ ಸದಾಶಿವ ಮಗಳು ಬೇಡ ಎಂದು ಹೇಳಿದರೂ ಮನೆಯವರನ್ನು ವಿರೋಧಿಸಿ ಮದುವೆಯಾದಳು. ಈ ವಿಚಾರ ಈಗ ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದರಿಂದ ಸದಾಶಿವ ಬಹಳ ಬೇಸರ ಮಾಡಿಕೊಂಡಿದ್ದು, ಇದ್ದಕ್ಕಿದ್ದ ಹಾಗೆಯೇ ಮನೆಯೀಮದ ಕಾಣೆಯಾಗಿದ್ದಾನೆ. ವಾಕಿಂಗ್ ಹೋಗಿರುವ ಸದಾಶಿವ ಎಷ್ಟೋತ್ತಾದರೂ ಮನೆಗೆ ಬಾರದಿರುವುದಕ್ಕೆ, ಫೋನ್ ಮಾಡುತ್ತಾರೆ. ಫೋನ್ ಸ್ವಿಚ್ ಆಫ್ ಆಗಿರುವುದಕ್ಕೆ ಗಾಬರಿಯಾಗಿ ಜೀವನ್ ಹುಡುಕಿಕೊಂಡು ಬರಲು ಹೋಗುತ್ತಾನೆ. ರಾತ್ರಿಯಾದರೂ ಸದಾಶಿವ ನಾಪತ್ತೆಯಾದಾಗ ಮಹಿಮಾ ರೂಮ್ ನಲ್ಲಿ ಡೈರಿ ಚೆಕ್ ಮಾಡುತ್ತಾಳೆ. ಸದಾಶಿವ ತನ್ನ ಮನಸ್ಸಿಗೆ ಬೇಸರವಾಗಿದ್ದು, ಏಕಾಂತ ಬೇಕಾಗಿದೆ. ಹಾಗಾಗಿ ಸ್ವಲ್ಪ ದಿನಗಳ ಕಾಲ ಕಳೆದು ವಾಪಸ್ ಬರುವುದಾಗಿ ಬರೆದಿರುತ್ತಾನೆ. ಇದರಿಂದ ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿರುತ್ತಾರೆ.

ಅಪೇಕ್ಷಾಳಿಗೆ ಬುದ್ಧಿ ಹೇಳಿದ ಭೂಮಿಕಾ
ಇನ್ನು ಅಪೇಕ್ಷಾ ತನ್ನ ಅತ್ತೆ ಶಕುಂತಲಾ ಮಾತುಗಳನ್ನು ಕೇಳಿ ಅವಳ ಆಲೋಚನೆಗಳ ಧಾಟಿಯೇ ಬದಲಾಗಿದೆ. ಆನಂದ್ ನನ್ನು ಮನೆಗೆ ಕರೆದುಕೊಂಡು ಬಂದಿರುವುದೇ ತಪ್ಪು ಎಂಬಂತಾಗಿದೆ. ಹೀಗಾಗಿ ಭೂಮಿಕಾ ಬಳಿ ಈ ವಿಚಾರವಾಗಿ ಮಾತನಾಡುತ್ತಾಳೆ. ಆನಂದ್ ಅವರು ಈ ಮನೆಯಲ್ಲಿ ಇರುವುದು ಎಷ್ಟು ಸರಿ ಎಂದು ಬುದ್ಧಿ ಹೇಳಲು ಮುಂದಾಗುತ್ತಾಳೆ. ಭೂಮಿಕಾಳಿಗೆ ಕೋಪ ಬಂದು ಅಪೇಕ್ಷಾಳಿಗೆ ಬೈಯುತ್ತಾಳೆ. ಈ ರೀತಿ ಮಾತನಾಡಬೇಡ. ಆನಂದ್ ನನ್ನ ಮೈದುನ ಇದ್ದ ಹಾಗೆ ಅವರಿಬ್ಬರು ಇಲ್ಲೇ ಇರುತ್ತಾರೆ ಎಂದು ತರಾಟೆಗೆ ತೆಗೆದುಕೊಳ್ಳುತಾಳೆ. ಇನ್ನು ಅಪೇಕ್ಷಾಳಿಗೆ ಮತ್ತೆ ಶಕುಂತಲಾ ಬಂದು ನಿಮ್ಮ ಅಕ್ಕನ ಬುದ್ಧಿಯೇ ಅಷ್ಟು ನಾವು ಹೇಳುವುದು ಅರ್ಥವಾಗಿವುದಿಲ್ಲ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.
ಜೈದೇವ್ ಮಾತಿಗೆ ಸ್ಪಂದಿಸಿದ ಆನಂದ್
ಗೌತಮ್ ಆನಂದ್ ಗೆ ಪ್ರಜ್ಞೆ ಬರಲಿ ಎಂದು ಇಡೀ ದಿನ ಮಾತನಾಡಿಸುತ್ತಾನೆ. ಕಾಮಿಡಿ ಮಾಡುವುದು, ಬೇಕಂತಲೇ ರೇಗಿಸುವುದು ಎಲ್ಲವನ್ನೂ ಮಾಡುತ್ತಾನೆ. ಆದರೆ, ಆನಂದ್ ಕಡೆಯಿಂದ ರೆಸ್ಪಾನ್ಸ್ ಇರುವುದಿಲ್ಲ. ಅವನಿಗೆ ಇಷ್ಟ ಎಂದು ಗೌತಮ್ ತನ್ನ ಕೈಯ್ಯಾರೆ ಕ್ಯಾರೆಟ್ ಹಲ್ವಾ ಮಾಡಿಕೊಂಡು ಬರುತ್ತಾನೆ. ಆದರೂ ಆನಂದ್ ರೆಸ್ಪಾನ್ಸ್ ಮಾಡುವುದೇ ಇಲ್ಲ. ಮಲ್ಲಿ ಬಲವಂತಕ್ಕೆ ಜೈದೇವ್ ಆನಂದ್ ಅನ್ನು ನೊಡಲು ಬರುತ್ತಾನೆ. ನಾಟಕೀಯವಾಗಿ ಆನಂದ್ ಬ್ರೋ ನಿಮಗೆ ಹೀಗೆ ಆಗಿದ್ದು ಬೇಸರವಾಗಿದೆ ಎಂದು ಕೈ ಮುಟ್ಟಿ ಮಾತನಾಡಿಸುತ್ತಾನೆ. ಜೈದೇವ್ ಮಾತುಗಳಿಗೆ ಆನಂದ್ ಕಣ್ಣಾಡಿಸುತ್ತಾನೆ. ಇದನ್ನು ಗೌತಮ್ ಗಮನಿಸುತ್ತಾನೆ.

ಆನಂದ್ ಪ್ರತಿಕ್ರಿಯೆಯನ್ನು ಗಮನಿಸಿದ ಗೌತಮ್
ಜೈದೇವ್ ಧ್ವನಿಗೆ ಆನಂದ್ ಸ್ಪಂದಿಸಿದ್ದಕ್ಕೆ ಗೌತಮ್ ಖುಷಿಯಾಗುತ್ತಾನೆ. ವೈದ್ಯರಿಗೆ ಫೋನ್ ಮಾಡುತ್ತಾನೆ. ಜೈದೇವ್ ಗೆ ಇಲ್ಲೇ ಇದ್ದು ಆನಂದ್ ಅನ್ನು ನೋಡಿಕೋ ಎಂದು ಎಕ್ಸೈಟ್ ಆಗುತ್ತಾನೆ. ಜೈದೇವ್ ಗೆ ಆನಂದ್ ಎಚ್ಚರಾವಗಿ ಕಪಾಳಕ್ಕೆ ಹೊಡೆದಂತೆ ಭಾವಿಸುತ್ತಾನೆ. ಜೈದೇವ್ ಗಾಬರಿಯಾಗುತ್ತಾನೆ. ಜೈದೇವ್ ಮಾತಿಗೆ ಆನಂದ್ ಸ್ಪಂದಿಸುತ್ತಿದ್ದು, ಬೇಗ ಚೇತರಿಸಿಕೊಳ್ಳಬಹುದು ಎಂದು ಗೌತಮ್ ನಂಬಿದ್ದಾನೆ.


Click it and Unblock the Notifications











