Amruthadhaare ; ಗೌತಮ್ ಮತ್ತು ಭೂಮಿಕಾನ ದೂರ ಮಾಡಲು ನಾನಾ ಕಸರತ್ತು,ಶಕುಂತಲಾ ಹೊಸ ಪ್ಲ್ಯಾನ್ ಏನು ?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತನ್ನ ಬದುಕಿನಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಗೌತಮ್ ಮನೆಯವರ ಬಳಿ ದೊಡ್ಡ ಸುಳ್ಳನ್ನು ಹೇಳಿದ್ದಾನೆ. ತನ್ನಲ್ಲೇ ದೋಷವಿದ್ದು, ಮಕ್ಕಳಾಗುವುದಿಲ್ಲ ಎಂದು ಎಲ್ಲರ ಎದುರು ಹೇಳಿದ್ದಾನೆ. ವೈದ್ಯರು ಭೂಮಿಕಾಳಲ್ಲಿ ಸಮಸ್ಯೆ ಇದೆ ಎಂದು ಹೇಳಿದ್ದನ್ನು ಮುಚ್ಚಿಟ್ಟಿದ್ದಾನೆ. ಗೌತಮ್ ಅಜ್ಜಿಗೆ ಸತ್ಯವನ್ನು ಕೇಳಿ ಶಾಕ್ ಆಗಿದೆ. ಆದರೆ, ಅಜ್ಜಿ ಗೌತಮ್ ಗೆ ಬುದ್ಧಿ ಹೇಳಿದ್ದಾರೆ. ಭೂಮಿಕಾಳನ್ನು ಮಗುವಿನಂತೆ ನೋಡಿಕೋ. ಮಗು ಆಗುವುದಿಲ್ಲ ಎಂದು ಕುಗ್ಗಬೇಡಿ ಎಂದು ಹೇಳಿದ್ದಾರೆ.
ಸತ್ಯ ತಿಳಿದು ಒದ್ದಡುತ್ತಿರುವ ಭೂಮಿಕಾ
ಇತ್ತ ಶಕುಂತಲಾ ಮಾಡಿದ್ದ ಪ್ಲಾನ್ ಬೇರೆಯೇ ಆಗಿತ್ತು. ಆದರೆ, ಗೌತಮ್ ಮನೆಯಲ್ಲಿ ಸುಳ್ಳು ಹೇಳಿ, ಶಕುಂತಲಾಳ ಪ್ಲಾನ್ ಉಲ್ಟಾ ಮಾಡಿದ್ದಾನೆ. ಹೀಗಾಗಿ ಶಕುಂತಲಾ ಈಗ ರಿಪೋರ್ಟ್ ಸಮೇತವಾಗಿ ಭೂಮಿಕಾ ಬಳಿ ಸತ್ಯ ಹೇಳಲು ಮುಂದಾಗಿದ್ದಾಳೆ. ಗೌತಮ್ ನಲ್ಲಿ ಯಾವುದೇ ದೋಷವಿಲ್ಲ. ಭೂಮಿಕಾ ನಿನಗೆ ಮಕ್ಕಳಾಗುವುದಿಲ್ಲ. ನಿನಗೆ ನೋವಾಗಬಾರದು ಎಂದು ಗೌತಮ್ ಸುಳ್ಳನ್ನು ಹೇಳಿದ್ದಾನೆ ಎಂದು ಶಕುಂತಲಾ ರಿಪೋರ್ಟ್ ನೀಡುತ್ತಾಳೆ. ರಿಪೋರ್ಟ್ ನೋಡಿದ ಭೂಮಿಕಾಳಿಗೆ ಶಾಕ್ ಆಗುತ್ತದೆ. ತನ್ನಲ್ಲೇ ದೋಷವಿದೆ ಎಂಬ ನೋವಿಗಿಂತಲೂ ತನಗೋಸ್ಕರ ಗೌತಮ್ ಸುಳ್ಳು ಹೇಳಿದರು ಎಂದು ಅಳಲು ಶುರು ಮಾಡುತ್ತಾಳೆ. ಏನು ಮಾಡುವುದು ಎಂದು ತಿಳಿಯದ ಭೂಮಿಕಾ ಮನದಲ್ಲೇ ಒದ್ದಾಡುತ್ತಾಳೆ.

ಭೂಮಿಕಾಳಿಗೆ ಸಮಾಧಾನ ಮಾಡಿದ ಭಾಗ್ಯ
ಭಾಗ್ಯಳನ್ನು ನೋಡಲು ಹೋದ ಭೂಮಿಕಾ ತನ್ನ ಅತ್ತೆಯ ಬಳಿ ದುಃಖವನ್ನು ಹೇಳಿಕೊಳ್ಳುತ್ತಾಳೆ. ನನ್ನ ಕೈಯ್ಯಲ್ಲಿ ಈ ವಂಶಕ್ಕೆ ಒಂದು ಕುಡಿಯನ್ನು ನೀಡಲು ಸಾಧ್ಯವಿಲ್ಲ ಎಂದು ಕೊರಗುತ್ತಾಳೆ. ಭೂಮಿಕಾಳ ದುಃಖವನ್ನು ಕಂಡ ಭಾಗ್ಯ ಕೈ ಮುಟ್ಟಿ ಸಮಾಧಾನ ಮಾಡಲು ಯತ್ನಿಸುತ್ತಾಳೆ. ಭಾಗ್ಯ ನಿಧಾನವಾಗಿ ಭೂಮಿಕಾಳ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಿರುವುದಲ್ಲದೇ, ಸೊಸೆಗೆ ಸ್ಪಂದಿಸಲು ಶುರು ಮಾಡಿದ್ದಾಳೆ. ಇನ್ನು ಭೂಮಿಕಾ ಗೌತಮ್ ಆಫೀಸ್‌ನಿಂದ
ಬಂದ ಮೇಲೆ ಪ್ರಶ್ನೆ ಮಾಡುತ್ತಾಳೆ. ತನ್ನಲ್ಲೇ ಸಮಸ್ಯೆ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂದು ಕೇಳುತ್ತಾಳೆ. ಗೌತಮ್ ಅದಕ್ಕೂ ಸಮಾಧಾನಕರವಾದ ಉತ್ತರವನ್ನು ಕೊಡುತ್ತಾನೆ.
ಅಪ್ಪನ ಬಳಿ ಸಂಕಟ ಹೇಳಿಕೊಳ್ಳುತ್ತಾಳಾ ಭೂಮಿಕಾ
ಬಳಿಕ ಭೂಮಿಕಾ ತನ್ನಲ್ಲಿನ ದುಃಖವನ್ನು ತಾಳಲಾರದೆಯೇ ಅಪ್ಪನಿಗೆ ಫೋನ್ ಮಾಡುತ್ತಾಳೆ. ಅಪ್ಪ ಸದಾಶಿವನ ಜೊತೆಗೆ ಮಾತನಾಡಲು ಪ್ರಯತ್ನಿಸುತ್ತಾಳೆ. ಆದರೆ, ಈಗಾಗಳೇ ಸದಾಶಿವನಿಗೆ ಸತ್ಯ ಗೊತ್ತಿದ್ದು, ಮಗಳ ನೋವನ್ನು ಅರ್ಥ ಮಾಡಿಕೊಂಡು ಸಮಾಧಾನ ಮಾಡುತ್ತಾನೆ. ಇಷ್ಟಕ್ಕೆಲ್ಲಾ ದುಃಖ ಪಡಬೇಡ ಎಂದು ಹೇಳುತ್ತಾನೆ. ಭೂಮಿಕಾ ಕಣ್ಣೀರು ಹಾಕುತ್ತಲೇ ತಂದೆ ಜೊತೆಗೆ ಮಾತನಾಡುತ್ತಿರುತ್ತಾಳೆ. ಇತ್ತ ರಾಜೇಂದ್ರ ಭೂಪತಿ ಜೊತೆ ಜೀವನ್ ಎಣ್ಣೆ ಕೂಡ ಅಭ್ಯಾಸ ಮಾಡಿಕೊಳ್ಳುತ್ತಿದ್ದಾನೆ. ರಾಜೇಂದ್ರನನ್ನು ಬ್ಲೈಂಡ್ ಆಗಿ ನಂಬಿರುವ ಜೀವನ್ ಮೋಸದ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.
ಶಕುಂತಲಾಳ ಮುಂದಿನ ಪ್ಲಾನ್ ಏನು..?
ಶಕುಂತಲಾ ಈಗ ತನ್ನ ಆಲೋಚನೆಯಂತೆಯೇ ಸತ್ಯವನ್ನು ಭೂಮಿಕಾಳಿಗೆ ಹೇಳಿದ್ದಾಗಿದೆ. ಈಗ ಶಕುಂತಲಾ ಏನಿದ್ದರೂ ಭೂಮಿಕಾಳನ್ನು ಮನೆಯಿಂದ ಆಚೆ ಕಳಿಸುವುದಷ್ಟೇ ಬಾಕಿ ಇದೆ. ಇದಕ್ಕೋಸ್ಕರ ತನ್ನ ರೂಮಿನಲ್ಲಿ ಮಗ ಜೈದೇವ್ ಮತ್ತು ಅಣ್ಣ ಲಕ್ಷ್ಮೀಕಾಂತನ ಜೊತೆಗೆ ಪ್ಲಾನ್ ಮಾಡುತ್ತಿದ್ದಾಳೆ. ಹೇಗಾದರೂ ಮಾಡಿ ಭೂಮಿಕಾಳನ್ನು ಮನೆಯಿಂದ ಹೊರಗೆ ಕಳಿಸಬೇಕು. ಆಗ ತನಗೆ ಬೇಕಾದಂತೆ ಇರಬಹುದು ಎಂಬುದೇ ಶಕುಂತಲಾಳ ಐಡಿಯಾ. ಇನ್ನು ಅಪೇಕ್ಷಾ ದಿನ ದಿನಕ್ಕೂ ಹಾಳಾಗುತ್ತಿದ್ದು, ಕ್ಲಬ್ ನಲ್ಲಿ ಹಣ ಕಟ್ಟಿ ಕಾರ್ಡ್ ಹಾಡುವ ಚಟ ಕಲಿತಿದ್ದಾಳೆ. ಈಗ ಎರಡು ಲಕ್ಷ ಹಣವನ್ನು ಕಳೆದುಕೊಂಡು ಬಂದಿದ್ದಾಳೆ.


Click it and Unblock the Notifications











