Amruthadhaare ; ಅಶ್ವಿನಿಯನ್ನು ಲೆಕ್ಕ ಕೇಳಿದ ಭೂಮಿಕಾ : ಗೌತಮ್ ಬಳಿ ಹೋಯ್ತು ದೂರು..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ತಿಜೋರಿ ಕೀ ಸಿಕ್ಕಿರುವುದಕ್ಕೆ ಶಕುಂತಲಾ ತುಂಬಾ ಬೇಸರ ಮಾಡಿಕೊಂಡಿದ್ದಾಳೆ.ಇನ್ಮುಂದೆ ಒಂದೊಂದು ರೂಪಾಯಿ ಹಣಕ್ಕೂ ಅವಳ ಮುಂದೆ ಕೈಚಾಚಬೇಕು.ಇಷ್ಟು ದಿನದಲ್ಲಿ ಗೌತಮ್ ಒಂದು ದಿನವೂ ಲೆಕ್ಕ ಕೇಳಿರಲಿಲ್ಲ.ಆದರೆ,ಭೂಮಿಕಾ ಹಾಗಲ್ಲ.ಪ್ರತಿಯೊಂದಕ್ಕೂ ಲೆಕ್ಕ ಇಡುವುದು ಪಕ್ಕಾ ಎಂಬುದು ಇವರ ಲೆಕ್ಕಾಚಾರವಾಗಿದೆ.ಅಶ್ವಿನಿ ಪತಿ ಅರುಣ್ ಬೇರೆ ಹಣ ಬೇಕು ಎಂದು ಅಶ್ವಿನಿಯನ್ನು ಕೇಳಿದ್ದಾನೆ. ಹಣ ಪಡೆಯುವ ಮುನ್ನವೇ ಇಂತಹ ಬದಲಾವಣೆಯಾಗಿರುವುದು ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ.

ಮನೆಯ ಲೆಕ್ಕಾಚಾರ ಶುರು ಮಾಡಿದ ಭೂಮಿಕಾ

ಗೌತಮ್ ಗೆ ಭೂಮಿಕಾ ಕೈಗೆ ಜವಾಬ್ದಾರಿ ಬಂದಿರುವುದು ಖುಷಿ ತಂದಿದೆ. ಪ್ರತಿಯೊಬ್ಬರನ್ನೂ ಬಹಳ ಬೇಗ ಅರ್ಥ ಮಾಡಿಕೊಳ್ಳುವ ಭೂಮಿಕಾ,ಯಾರಿಗೆ ಯಾವಾಗ ಏನು ಬೇಕು ಎಂಬುದನ್ನು ತಿಳಿದುಕೊಳ್ಳುವ ಶಕ್ತಿ ಹಾಗೂ ಸಾಮರ್ಥ್ಯ ಭೂಮಿಕಾಳಿಗೆ ಇದೆ.ಹಾಗಾಗಿ ಈ ಜವಾಬ್ದಾರಿಯನ್ನು ಭೂಮಿಕಾ ಮುನ್ನೆಡೆಸಿಕೊಂಡು ಹೋಗುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದುಕೊಂಡಿದ್ದಾನೆ.ಶಕುಂತಲಾ ಬಳಿ ಹೋಗಿ ಭೂಮಿಕಾ ಮನೆಯಲ್ಲಿ ಯಾವು ಯಾವುದಕ್ಕೆ ಎಷ್ಟೆಷ್ಟು ಖರ್ಚಾಗುತ್ತದೆ ಎಂದು ಲೆಕ್ಕ ಕೇಳಿದ್ದಾಳೆ.ಶಕುಂತಲಾ ಪ್ರತಿಯೊಂದಕ್ಕೂ ನೆಪ ಹೇಳಿದ್ದು,ಯಾವುದಕ್ಕೂ ಲೆಕ್ಕ ಹಾಕುವುದಿಲ್ಲ.ಎಷ್ಟೆಷ್ಟು ಖರ್ಚಾಗುತ್ತದೆ ಎಂಬ ಲೆಕ್ಕವನ್ನು ಈ ಮನೆಯಲ್ಲಿ ಮಾಡುವುದಿಲ್ಲ.ಲಕ್ಷಾಂತರ ಕೋಟಿ ಲಾಭ ಪಡೆಯುವ ಈ ಮನೆಯಲ್ಲಿ ಖರ್ಚಿನ ಲೆಕ್ಕವಿಲ್ಲ ಎಂದು ಹೇಳುತ್ತಾಳೆ.ಆಗ ಭೂಮಿಕಾಳಿಗೆ ಇನ್ಮುಂದೆ ಲೆಕ್ಕ ಇಡಬೇಕು ಎಂಬುದು ಅರ್ಥವಾಗುತ್ತದೆ.

Amruthadhaare Serial 27 June episode written update

ಅಶ್ವಿನಿಯನ್ನು ಲೆಕ್ಕ ಕೇಳಿದ ಭೂಮಿಕಾ

ಮಾರನೇಯ ದಿನ ಗೌತಮ್ ಬಳಿ ಹೋಗಿ ಅಶ್ವಿನಿ ತನಗೆ ಖರ್ಚಿಗೆ ಹಣ ಬೇಕು ಎಂದು ಕೇಳುತ್ತಾಳೆ. ಆಗ ಗೌತಮ್ ಭೂಮಿಕಾಳ ಬಳಿ ಕೇಳಲು ಹೇಳುತ್ತಾನೆ. ಭೂಮಿಕಾ ಚೆಕ್ ಕೊಡುವ ಮುನ್ನ ಎಷ್ಟು ಬೇಕು ಎಂದು ಕೇಳುತ್ತಾಳೆ. ಅಶ್ವಿನಿ ನಾನೇ ಬರೆದುಕೊಳ್ಳುತ್ತೀನಿ ಎನ್ನುತ್ತಾಳೆ. ಆದರೆ ಭೂಮಿಕಾ ಲೆಕ್ಕ ಬೇಕು ಎಂದಿದ್ದಕ್ಕೆ ಮುಜುಗರದಿಂದ ಐದು ಕೋಟಿ ಎನ್ನುತ್ತಾಳೆ ಅಷ್ಟೋಂದು ಹಣ ಏನಕ್ಕೆ ಎಂದು ಕೇಳಿದ್ದಕ್ಕೆ ಅಶ್ವಿನಿ ಅಳುತ್ತಾ ಹೋಗುತ್ತಾಳೆ. ಶಕುಂತಲಾ ಬಳಿ ತನ್ನ ಅಳಲನ್ನು ತೋರಿಸಿಕೊಳ್ಳುತ್ತಾಳೆ. ಆದರೆ ಶಕುಂತಲಾ ಕೂಡ ಅದು ಬಹಳ ದೊಡ್ಡ ಅಮೌಂಟ್ ಎಂದು ಪ್ರಶ್ನಿಸಿದರೆ, ಅಶವಿನಿ ಆಗಲೂ ಬೇಸರ ಮಾಡಿಕೊಂಡು ಹೋಗುತ್ತಾಳೆ.

ಮಲ್ಲಿ ಜೊತೆಗೆ ಪಾರ್ಟಿಗೆ ಬಂದ ಜೈದೇವ್

ಇನ್ನು ದಿಯಾ ಹುಟ್ಟುಹಬ್ಬ ಹಿನ್ನೆಲೆ ಜೈದೇವ್ ನನ್ನು ಪಾರ್ಟಿಗೆ ಆಹ್ವಾನಿಸಿದ್ದಾಳೆ. ಜೈದೇವ್ ಖುಷಿಯಿಂದ ಪಾರ್ಟಿಗೆ ಹೊರಟಿದ್ದಾನೆ. ಆದರೆ, ಭೂಮಿಕಾ ಮಲ್ಲಿಯನ್ನು ನೀನು ಹೋಗಿ ಬಾ ಎಂದು ಕಳಿಸಿದ್ದಾಳೆ. ಮಲ್ಲಿ ರೇಷ್ಮೇ ಸೀರೆ ಧರಿಸಿಕೊಂಡು ಪಾರ್ಟಿಗೆ ಹೋಗಿದ್ದಾಳೆ. ಜೈದೇವ್ ಪತ್ನಿಯನ್ನು ನೋಡಿ ದಿಯಾ ಶಾಕ್ ಆಗಿದ್ದಾಳೆ.ಪಾರ್ಟಿಗೆ ಬಂದವರೆಲ್ಲಾ ಮಲ್ಲಿ ಅವತಾರವನ್ನು ಹೀಯಾಳಿಸಿದ್ದಾರೆ.ಆದರೆ,ಜೈದೇವ್ ಸಂಬಾಳಿಸಿದ್ದಾನೆ.ಇನ್ನು ದಿಯಾ ಜೊತೆಗೆ ಸಮಯ ಕಳೆಯುವುದು ಹೇಗೆ ಎಂಬುದು ತಿಳಿಯದೇ ಒದ್ದಾಡುತ್ತಿದ್ದಾನೆ.

Amruthadhaare Serial 27 June episode written update


ಅತ್ತಿಗೆ ಮೇಲೆ ಅಶ್ವಿನಿಗೆ ಬೇಸರ

ಅಶ್ವಿನಿ ಮನೆಯಲ್ಲಿ ಎಲ್ಲರ ಮೇಲೂ ಕೋಪ ಮಾಡಿಕೊಂಡಿರುತ್ತಾಳೆ. ಗೌತಮ್ ಮಾತನಾಡಿಸಿದರೂ ಅಶ್ವಿನಿ ಸರಿಯಾಗಿ ರೆಸ್ಪಾನ್ಸ್ ಮಾಡುವುದಿಲ್ಲ. ಭೂಮಿಕಾ ಏನಾಯ್ತು ಎಂಬುದನ್ನು ಹೇಳುವ ಮುನ್ನವೇ ಗೌತಮ್ ಶಕುಂತಲಾ ಬಳಿ ಹೋಗಿ ಕೇಳುತ್ತಾನೆ. ಶಕುಂತಲಾ ಅಶ್ವಿಯನ್ನೇ ಕರೆಸಿ ಮಾತನಾಡಿಸುತ್ತಾಳೆ. ಅಶ್ವಿನಿ ತಾನು ಕೇಳಿದ ಹಣಕ್ಕೆ ಅತ್ತಿಗೆ ಲೆಕ್ಕ ಕೇಳಿದರು.ನನಗೆ ಲೆಕ್ಕ ಕೊಟ್ಟು ಅಭ್ಯಾಸವಿಲ್ಲ ಎಂದು ಕಣ್ಣೀರು ಹಾಕುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X