Amruthadhaare ; ಅತ್ತೆ ಎದುರಿಗೇ ಗಟ್ಟಿ ಧ್ವನಿ ಎತ್ತಿದ ಮಲ್ಲಿ : ಹೆಂಡತಿಗೆ ಸುಳ್ಳು ಭರವಸೆ ಕೊಟ್ಟ ಜೈದೇವ..!
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ನಾದಿನಿ ಅಪೇಕ್ಷಾಳಿಗೆ ಒಳ್ಳೆಯದಾಗಲಿ ಎಂದು ತನ್ನ ಇನ್ಫ್ಲುಯೆನ್ಸ್ ಬಳಸಿಕೊಂಡು ಮಾಡೆಲಿಂಗ್ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾಳೆ. ಅತ್ತಿಗೆ ತನಗೋಸ್ಕರ ಇಷ್ಟೆಲ್ಲಾ ಒಳ್ಳೆಯದನ್ನು ಮಾಡುತ್ತಿದ್ದಾರಲ್ಲ ಎಂದು ಅಪೇಕ್ಷಾ ಖುಷಿ ಪಟ್ಟಿದ್ದಾಳೆ.
ಇನ್ನು ಅಪ್ಪಿ ಹಾಗೂ ಪಾರ್ಥನ ಪ್ರೇಮ ಲೀಲೆಗಳು ಹಾಗೆ ಮುಂದುವರೆದಿದೆ. ಇತ್ತ ಭೂಮಿಕಾ ಹಾಗೂ ಗೌತಮ್ ಇಬ್ಬರಿಗೂ ಮುತ್ತಿನ ಪ್ರಸಂಗ ಬಹಳ ಮುಜುಗರವನ್ನು ಉಂಟು ಮಾಡಿದೆ. ಆದರೆ, ಈ ಸಂದರ್ಭವನ್ನು ಎಸದುರಿಸಲಾಗದೇ ಗೌತಮ್ ವಾಪಸ್ ಆಫೀಸಿಗೆ ತೆರಳಿದ್ದಾನೆ.

ಸ್ನೇಹಿತನಿಗಿಂತ ಈಗ ಭೂಮಿಕಾಳೇ ಹೆಚ್ಚು
ಭೂಮಿಕಾ ತನ್ನ ಮನದಲ್ಲಿ ಉಂಟಾದ ಆನಂದವನ್ನು ಬರವಣಿಗೆ ಮೂಲಕ ಡೈರಿಯಲ್ಲಿ ಅಚ್ಚೊತ್ತಿದ್ದಾಳೆ. ಗೌತಮ್ ಪ್ರೀತಿಗಾಗಿ ಕಾಯುತ್ತಿರುವ ಭೂಮಿಕಾಳಿಗೆ ಈ ಪ್ರಸಂಗ ಬಹಳ ಖುಷಿ ಕೊಟ್ಟಿದೆ. ಅಲ್ಲದೇ, ಗೌತಮ್ ಮನೆಗೆ ಬಂದ ಮೇಲೆ ಇಬ್ಬರೂ ಮಾತನಾಡಿದ್ದು, ಗೌತಮ್ ಪರಿಸ್ಥಿತಿಯನ್ನು ಭೂಮಿಕಾ ಅರ್ಥ ಮಾಡಿಕೊಂಡಿದ್ದಾಳೆ. ನಾನೇನು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ಸಮಾಧಾನ ಹೇಳಿದ್ದಾಳೆ.
ಇದು ಗೌತಮ್ ಗೆ ಖುಷಿ ಕೊಟ್ಟಿದ್ದು, ಭೂಮಿಕಾಳಿಗೆ ಸ್ನೇಹಿತನಿಗಿಂತಲೂ ಒಂದು ಹೆಜ್ಜೆ ಎತ್ತರದ ಸ್ಥಾನವನ್ನು ಕೊಟ್ಟಿದ್ದಾನೆ. ಆದರೆ, ಲವರ್ ಗಿಂತಲೂ ಕಡಿಮೆ ಎಂದಿದ್ದಕ್ಕೆ ಗೌತಮ್ ನನ್ನು ಆನಂದ್ ಚುಡಾಯಿಸಿದ್ದಾನೆ. ಗೌತಮ್ ನಲ್ಲಿನ ಬೆಳವಣಿಗೆಯನ್ನು ಕಂಡು ಆನಂದ್ ಖುಷಿ ಕೂಡ ಪಟ್ಟಿದ್ದಾನೆ. ಗೌತಮ್ ಗೆ ಒಳ್ಳೆಯದನ್ನು ಬಯಸುವುದರಲ್ಲಿ ಅಪರ್ಣಾ ಹಾಗೂ ಆನಂದ್ ಮೊದಲಿಗರು ಎಂಬುದು ಆತನಿಗೂ ಅರಿವಿದೆ.

ನಾಟಕ ಮಾಡುತ್ತಿರುವ ಜೈದೇವ
ಮಲ್ಲಿ ಯಾವುದೋ ಪುಸ್ತಕವನ್ನು ಓದುತ್ತಿದ್ದು, ಅರ್ಥವಾಗುತ್ತಿಲ್ಲ ಎಂದು ಜೈದೇವ ಬಳಿ ಹೋಗಿ ಹೇಳುತ್ತಾಳೆ. ಆದರೆ, ಮಲ್ಲಿ ಎಂದರೆ ಉರಿದು ಬೀಳುವ ಜೈದೇವ ಕಪಾಳಕ್ಕೆ ಹೊಡೆಯುತ್ತಾನೆ. ನೀನೊಬ್ಬಳು ದರಿದ್ರ, ಯಾಕಾದರೂ ನನ್ನ ಬಾಳಿನಲ್ಲಿ ಬಂದೆಯೋ ಎಂದೆಲ್ಲಾ ಕೂಗಾಡುತ್ತಾನೆ. ಈ ಮಾತುಗಳನ್ನು ಕೇಳಿದ ಮಲ್ಲಿ ಮನಸ್ಸಿಗೂ ನೋವಾಗುತ್ತದೆ.
ಆ ನಂತರ ಮಲ್ಲಿಗೆ ನೋವು ಮಾಡಿದರೆ ತನಗೆ ಕಷ್ಟ ಎಂಬುದನ್ನು ಅರಿತು ಬಳಿಕ ಜೈದೇವ ಬಂದು ಮಲ್ಲಿಗೆ ಸಮಾಧಾನ ಮಾಡುತ್ತಾನೆ. ನೀನೆಂದರೆ ನನಗೆ ತುಂಬಾ ಇಷ್ಟ. ಆದರೆ, ನಿನ್ನ ಮೇಲಿನ ಪ್ರೀತಿಯನ್ನು ಹೇಗೆ ತೋರಿಸಿಕೊಳ್ಳುವುದು ಎಂಬುದು ಗೊತ್ತಾಗುತ್ತಿಲ್ಲ ಎಂದು ನಾಟಕ ಮಾಡುತ್ತಾನೆ. ಜೈದೇವನ ಮಾತುಗಳನ್ನು ಮಲ್ಲಿ ನಂಬುತ್ತಾಳೆ.

ಮಲ್ಲಿಗೆ ಬುದ್ಧಿ ಹೇಳಿ ಕಳಿಸಿದ ಭೂಮಿಕಾ
ಇನ್ನು ಮನೆಗೆ ಶಕುಂತಲಾಳನ್ನು ನೋಡಲು ಆಕೆಯ ಗೆಳತಿಯರು ಆಗಮಿಸುತ್ತಾರೆ. ಎಲ್ಲರೂ ಜೈದೇವನ ಪತ್ನಿಯನ್ನು ಪರಿಚಯ ಮಾಡಿಕೊಡಿ. ನಿಮ್ಮ ಸೊಸೆಯನ್ನು ನೋಡಿಕೊಂಡೇ ಹೋಗುವುದು ಎಂದು ಹೇಳುತ್ತಾರೆ. ಶಕುಂತಲಾ ತನ್ನ ಸೊಸೆ ತವರು ಮನೆಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳುತ್ತಾಳೆ. ಇದೇ ಸಮಯದಲ್ಲಿ ಮನೆಯಲ್ಲಿ ಕೆಲಸದವರು ಇಲ್ಲದ ಕಾರಣ ಕಾಫಿಯನ್ನು ಮಲ್ಲಿಯೇ ತಂದು ಕೊಡುತ್ತಾಳೆ. ಆಕಸ್ಮಾತ್ ಆಗಿ ಕಾಫಿ ಚೆಲ್ಲಿದ್ದಕ್ಕೆ ಶಕುಂತಲಾ ಗೆಳತಿಯೊಬ್ಬರು ಈ ಕೆಲಸದವಳನ್ನು ಮನೆಯಿಂದ ಹೊರಗೆ ಹಾಕಿ ಎಂದು ಬಹಳ ಹೀನಾಯವಾಗಿ ಬೈಯುತ್ತಾಳೆ. ಇದರಿಂದ ಬೇಸರಗೊಂಡು ಅಳುತ್ತಿದ್ದ ಮಲ್ಲಿಗೆ ಧೈರ್ಯ ತುಂಬುತ್ತಾಳೆ ಭೂಮಿಕಾ.
ಧೈರ್ಯವಾಗಿ ಮಾತನಾಡಿದ ಮಲ್ಲಿ
ನೀನು ಈ ಮನೆಯ ಕೆಲಸದವಳಲ್ಲ. ಈ ಮನೆ ಸೊಸೆ ಎಂದು ಧೈರ್ಯವಾಗಿ ಮಾತನಾಡು. ಅವರಿಗೆ ಎದುರು ಮಾತನಾಡು ಎಂದು ಹೇಳಿ ಕಳಿಸುತ್ತಾಳೆ. ಭೂಮಿಕಾ ಮಾತನ್ನು ಕೇಳಿ ವಾಪಸ್ ಬರುವ ಮಲ್ಲಿ ಎಲ್ಲರ ಎದುರಿಗೂ ಜೋರಾಗಿ ಮಾತನಾಡುತ್ತಾಳೆ. ತಾನು ಈ ಮನೆಯ ಸೊಸೆ ಎಂಬುದನ್ನು ತಿಳಿಸಿಕೊಡುತ್ತಾಳೆ. ಈ ಮಾತನ್ನು ಕೇಳಿದ ಎಲ್ಲರೂ ಒಂದು ಘಳಿಗೆ ಶಾಕ್ ಆಗುತ್ತಾರೆ.


Click it and Unblock the Notifications











