Amruthadhaare ; ಪ್ರಪೋಸ್ ಮಾಡಿದ ಭೂಮಿಕಾ : ಬದುಕಿ ಮನೆಗೆ ಬಂದ ಮಲ್ಲಿ..!
ಅಮೃತಧಾರೆ ಧಾರಾವಾಹಿಯಲ್ಲಿ ದೊಡ್ಡ ಕಂಟಕದಿಂದ ಮಲ್ಲಿ ಮತ್ತು ಭೂಮಿಕಾ ಪಾರಾಗಿದ್ದಾರೆ. ಇಬ್ಬರ ಜೀವವೂ ಒಂದೇ ದಿನದಲ್ಲಿ ಅಪಾಯದಲ್ಲಿ ಸಿಲುಕಿತ್ತು. ಅದೃಷ್ಟವಶಾತ್ ಇಬ್ಬರೂ ಬದುಕುಳಿದಿದ್ದಾರೆ. ಇನ್ನು ಮಹಿಮಾಳಿಗೆ ಮನೆಯವರ ಮೇಲೆಯೇ ಅನುಮಾನ ಬಂದಿದೆ. ಮಲ್ಲಿ ಜೀವಕ್ಕೆ ಯಾಕೆ ಅಪಾಯ ಮಾಡುತ್ತಿದ್ದಾರೆ ಎಂಬ ಸತ್ಯ ತಿಳಿಯಲು ಮುಂದಾಗಿದ್ದಾಳೆ.ಮಲ್ಲಿಯನ್ನು ಕೊಲ್ಲಲು ಬಂದ ವಿಚಾರವನ್ನು ಜೀವನ್ ಮತ್ತು ಮಹಿಮಾ ಇಬ್ಬರೂ ಬಚ್ಚಿಟ್ಟಿದ್ದಾರೆ. ಸೈಲೆಂಟ್ ಆಗಿ ಮನೆಯವರ ನಡವಳಿಕೆಯನ್ನು ಮಹಿಮಾ ಗಮನಿಸುತ್ತಿದ್ದಾಳೆ.
ಮನದಾಳದ ಮಾತುಗಳನ್ನಾಡಿದ ಜೋಡಿಗಳು
ದೊಡ್ಡ ಕಂಟಕದಿಂದ ಪಾರಾಗಿ ಬಂದ ಭೂಮಿಕಾಳಿಗಾಗಿ ಗೌತಮ್ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿದ್ದಾನೆ. ನಿಮ್ಮನ್ನು ಬಹಳ ಹಚ್ಚಿಕೊಂಡಿದ್ದೇನೆ ಭೂಮಿಕಾ, ನೀವಿಲ್ಲದಿದ್ದರೆ, ನನ್ನ ಕೈಯಲ್ಲಿ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂದು ಭೂಮಿಕಾ ಮುಂದೆ ಗೌತಮ್ ಕಣ್ಣೀರು ಹಾಕುತ್ತಾನೆ. ಭೂಮಿಕಾ ಮೇಲಿರುವ ತನ್ನ ಪ್ರೀತಿಯನ್ನು ಮುಕ್ತವಾಗಿ ಹೇಳಿಕೊಳ್ಳುತ್ತಾನೆ. ಭೂಮಿಕಾ ಕೂಡ ನಾನು ಅರೆ ಪ್ರಜ್ಞೆಯಲ್ಲಿ ಇದ್ದಾಗಳು ನೀವು ನಿಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದೀರಾ. ಆ ಪ್ರೀತಿಯೇ ನನ್ನನ್ನು ಬದುಕಿಸಿದ್ದು. ಮದುವೆಯೇ ಆಗೊಲ್ಲ ಎಂದುಕೊಂಡಿದ್ದ ನನ್ನ ಬಾಳಲ್ಲಿ ಬಂದು ನನಗೆ ಸರ್ವಸ್ವವೂ ನೀವೇ ಆಗಿದ್ದೀರಾ. ಐ ಲವ್ ಯೂ ಗೌತಮ್ ಎಂದು ಭೂಮಿಕಾ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾಳೆ. ಇಬ್ಬರೂ ಅಪ್ಪಿಕೊಂಡು ಒಂದಾಗುತ್ತಾರೆ.

ಮನೆಗೆ ವಾಪಸ್ ಬಂದ ಮಲ್ಲಿ
ಇತ್ತ ಮಲ್ಲಿ ಮೇಲೆ ಅಟ್ಯಾಕ್ ಆದ ವಿಚಾರವನ್ನು ಮಹಿಮಾ, ಜೈದೇವ್ ಗೆ ಹೇಳಿಲ್ಲ. ಈಗ ಜೈದೇವ ಇದರ ಬಗ್ಗೆ ಅನುಮಾನಗೊಂಡಿದ್ದಾನೆ. ಅಟ್ಯಾಕ್ ಬಗ್ಗೆ ಯಾರೂ ಯಾಕೆ ಮಾತನಾಡುತ್ತಿಲ್ಲ ಎಂದುಕೊಳ್ಳುತ್ತಾನೆ. ವೈದ್ಯರು ಮಲ್ಲಿಗೆ ಫುಡ್ ಪಾಯಿಜನ್ ಆಗಿತ್ತು. ಈಗ ಹುಷಾರಾಗಿದ್ದಾರೆ ಮನೆಗೆ ಕರೆದುಕೊಂಡು ಹೋಗಬಹುದು ಎಂದಿದ್ದಾರೆ. ಇದರಿಂದ ಜೈದೇವನಿಗೆ ಮಲ್ಲಿಯನ್ನು ಮನೆಗೆ ಕರೆದುಕೊಂಡು ಹೋಗಬೇಕೆ ಎಂದು ಬೇಸರವಾಗಿದೆ. ಮನೆಗೆ ಕರೆದುಕೊಂಡು ಹೋದಾಗ ಶಕುಂತಲಾ ಕಾಟಾರಕ್ಕ ಎರಡು ಮಾನಾಡುತ್ತಾಳೆ.
ಶಕುಂತಲಾ ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ಬೇಸರ
ತನ್ನ ಈ ಪ್ಲಾನ್ ಕೂಡ ಫ್ಲಾಪ್ ಆಗಿದ್ದಕ್ಕೆ ಬೇಸರ ಮಾಡಿಕೊಳ್ಳುತ್ತಾಳೆ. ಅದರಲ್ಲೂ ಅನಾಹುತವನ್ನು ತಪ್ಪಿಸಿದ್ದು ಮಹಿಮಾ ಎಂದು ತಿಳಿದು ಇನ್ನಷ್ಟು ಕೋಪ ಮಾಡಿಕೊಳ್ಳುತ್ತಾಳೆ. ತಾನು ಅಂದುಕೊಂಡಿದ್ದೆಲ್ಲವೂ ಯಾಕೆ ಹೀಗೆ ಉಲ್ಟಾ ಆಗುತ್ತಿದೆ. ಗೌತಮ್ ಮತ್ತು ಭೂಮಿಕಾ ಇಬ್ಬರೂ ಒಟ್ಟಿಗೆ ಸೇರಬಾರದು ಎಂದು ಎಷ್ಟೇ ಪ್ಲಾನ್ ಮಾಡಿದರೂ ನಮ್ಮ ಕಾರ್ಯ ಆಗುತ್ತಿಲ್ಲ ಎಂದು ಟೆಂಷನ್ ನಲ್ಲಿ ಇರುತ್ತಾಳೆ. ಅಷ್ಟರಲ್ಲಿ ಶಕುಂತಲಾಳಿಗೆ ಮತ್ತೊಂದು ಶಾಕಿಂಗ್ ವಿಚಾರ ಗೊತ್ತಾಗುತ್ತದೆ.

ಗೆಳೆಯನ ಫಸ್ಟ್ ನೈಟ್ ಗೆ ತಯಾರಿ
ಭೂಮಿಕಾ ಮತ್ತು ಗೌತಮ್ ಪ್ರಪೋಸ್ ಮಾಡಿ ಒಂದಾಗಿದ್ದು ಆನಂದ್ ಗೆ ಖುಷಿಯಾಗಿದೆ. ಹೀಗಾಗಿ ಆನಂದ್ ಈಗ ಗೆಳೆಯನ ಫಸ್ಟ್ ನೈಟ್ ಗೆ ಅರೇಂಜ್ ಮಾಡಲು ಮುಂದಾಗಿದ್ದಾನೆ. ಇನ್ನಷ್ಟು ದಿನ ನೀವಿಬ್ಬರೂ ಇಲ್ಲೇ ಇರಿ, ಆಫೀಸ್ ಕೆಲಸಗಳನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ ಎಂದು ಆನಂದ್ ಹೇಳಿದ್ದಾನೆ. ಇದಕ್ಕೆ ಗೌತಮ್ ಕೂಡ ಒಪ್ಪಿಕೊಂಡಿದ್ದಾನೆ. ಇದೇ ಸಮಯಕ್ಕೆ ಇಲ್ಲೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಆನಂದ್ ಗೆ ಲಕ್ಷ್ಮೀಕಾಂತಫೋನ್ ಮಾಡಿದ್ದಾನೆ. ಆನಂದ್ ಸುಮ್ಮನಿರದೇ ಗೌತಮ್ ಫಸ್ಟ್ ನೈಟ್ ಬಗ್ಗೆ ಹೇಳಿದ್ದು, ಶಕುಂತಲಾಳಿಗೆ ಇದು ಡಬಲ್ ಶಾಕ್ ತಂದುಕೊಟ್ಟಿದೆ. ಈಗ ಶಕುಂತಲಾ ತನ್ನ ಕೆಲಸವನ್ನು ಸಾಧಿಸಿಕೊಳ್ಳಲು ಏನು ಮಾಡುತ್ತಾಳೆ. ಗೌತಮ್ ಮತ್ತು ಭೂಮಿಕಾಳನ್ನು ವಾಪಸ್ ಕರೆಸಿಕೊಳ್ಳುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











