Amruthadhaare: ಗೌತಮ್ ಮನೆಯಲ್ಲಿ ಭೂಮಿಕಾ ಗಲಾಟೆ ಮಾಡಲು ಕಾರಣವೇನು..?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮನೆಗೆ ಬಂದು ಭೂಮಿಕಾ ಹಾಗೂ ಗೌತಮ್ ದಿವಾನ್ ಮದುವೆ ಬಗ್ಗೆ ಹೇಳಿದ್ದರೆ, ಮಂದಾಕಿನಿ ಅದನ್ನು ಅಪಾರ್ಥ ಮಾಡಿಕೊಂಡು ಅಪೇಕ್ಷಾಳಿಗೆ ಪ್ರಪೋಸಲ್ ಬಂದಿದೆ ಎಂದು ಅಂದುಕೊಂಡಿದ್ದಾಳೆ. ಇದರಿಂದ ಮನೆಯಲ್ಲಿ ಕೋಲಾಹಲವೇ ಎದ್ದಿದೆ. ಹಣದ ಆಸೆಗೆ ಬಿದ್ದು ಅಪೇಕ್ಷಾ ಭವಿಷ್ಯ ಹಾಳು ಮಾಡುವುದು ಬೇಡ ಎಂದು ಭೂಮಿಕಾ ಈಗ ಹಠ ಮಾಡಿದ್ದಾಳೆ.
ಅಪೇಕ್ಷಾ ಮಾತ್ರ ತನಗೆ ಹಣವೇ ಮುಖ್ಯ. ತನ್ನ ಆಸೆಗಳನ್ನು ನೆರವೇರಿಸಿಕೊಳ್ಳಲು ಇದುವೇ ಸರಿಯಾದ ದಾರಿ ಎಂದು ಹೇಳಿರುವುದು ಭೂಮಿಕಾಳಿಗೆ ಘಾಸಿ ಮಾಡಿದೆ. ಭೂಮಿಕಾ ತನಗೆ ಇಷ್ಟವಿಲ್ಲದಿದ್ದರೂ, ತನ್ನ ಮನೆಯವರಿಗಾಗಿ ಈ ಮದುವೆಗೆ ಒಪ್ಪಿಗೆ ಕೊಡುತ್ತಾಳೆ. ನಾಳೆ ಬೆಳಗ್ಗೆ ಗೌತಮ್ ಅವರ ಮನೆಗೆ ಹೋಗೋಣ ಎಂದು ಭೂಮಿಕಾ ಹೇಳುತ್ತಾಳೆ.

ತಂಗಿ ಆಸೆಗಳಿಗೆ ತಣ್ಣೀರು ಎರಚುವುದು ಬೇಡ ಎಂಬುದು ಭೂಮಿಕಾಳ ಅಭಿಪ್ರಾಯ. ಆದರೆ, ಮನೆಯವರೆಲ್ಲಾ ಈಗ ಭೂಮಿಕಾ ನಿರ್ಧಾರವನ್ನು ಕೇಳಿ ಶಾಕ್ ಆಗಿರುತ್ತಾರೆ. ಬೆಳಗೆದ್ದು ಭೂಮಿಕಾ ಎಲ್ಲರನ್ನು ಹೊರಡಿಸುತ್ತಾಳೆ. ಮನೆಯಲ್ಲಿ ತಿಂಡಿ ಮಾಡಿ, ಮನೆ ಕೆಲಸವನ್ನು ಮುಗಿಸುತ್ತಾಳೆ. ಎಲ್ಲರೂ ರೆಡಿ ಆದರೂ ಭುಮಿಕಾ ರೆಡಿ ಆಗಿರುವುದಿಲ್ಲ.
ಲೇಟ್ ಆಗಿ ಬಂದ ಭೂಮಿಕಾ
ಭೂಮಿಕಾ ಎಲ್ಲರನ್ನೂ ಗೌತಮ್ ಮನೆಗೆ ಹೊರಡಿ, ತಾನೂ ತಡವಾಗಿ ಬರುವುದಾಗಿ ಹೇಳಿ ಕಳಿಸುತ್ತಾಳೆ. ಮದುವೆ ಹುಡುಗಿಯೇ ಕಾಣದ್ದನ್ನು ನೋಡಿ ಗೌತಮ್ ಮನೆಯಲ್ಲಿ ಶಾಕ್ ಆಗುತ್ತಾರೆ. ಶಕುಂತಲಾ, ಭೂಮಿಕಾ ಎಲ್ಲಿ ಎಂದು ಕೇಳಿದ್ದಕ್ಕೆ, ಅವಳು ತಡವಾಗಿ ಬರುತ್ತಾಳೆ. ನೀವು ಶಾಸ್ತ್ರವನ್ನು ಶುರು ಮಾಡಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಮತ್ತೆ ಎಲ್ಲರೂ ಶಾಕ್ ಆಗುತ್ತಾರೆ. ಇನ್ನು ಭೂಮಿಕಾ ಲೇಟ್ ಆಗಿ ಸಿಂಪಲ್ ಡ್ರೆಸ್‌ನಲ್ಲಿ ಬರುತ್ತಾಳೆ. ಎಂಗೇಜ್‌ಮೆಂಟ್ ಹೀಗೆ ಬಂದಿದ್ದಾಳಲ್ಲ ಎಂಬುದನ್ನು ನೋಡಿ, ಎಲ್ಲರೂ ಪಿಸು ಪಿಸು ಎಂದು ಮಾತನಾಡಿಕೊಳ್ಳುತ್ತಾರೆ.
ಮದುವೆ ಬೇಡ ಎಂದ ಭೂಮಿಕಾ
ಭೂಮಿಕಾ ಬಂದ ನಂತರ ಶಕುಂತಲಾ ಸೀರೆಯನ್ನು ಕೊಡಲು ಮುಂದಾಗುತ್ತಾಳೆ. ಭೂಮಿಕಾಳಿಗೆ ಸೀರೆಯನ್ನು ಕೊಟ್ಟಾಗ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಅಪೇಕ್ಷಾ ತಾನೇ ಮದುವೆ ಹುಡುಗಿ ಎಂದು ಮಂದಾಕಿನಿ ಕೇಳುತ್ತಾಳೆ. ಆಗ, ಶಕುಂತಲಾ ಯಾಕೆ ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಾ. ಗೌತಮ್‌ಗೂ ಅಪೇಕ್ಷಾ ವಯಸ್ಸಿನ ಅಂತರವಿದೆ. ನಾನು ಹೇಳಿದ್ದು, ಭೂಮಿಕಾಳ ಬಗ್ಗೆ ಎಂದು ಹೇಳುತ್ತಾಳೆ.

ಗೌತಮ್ ಜೊತೆ ಭೂಮಿಕಾ ಜಗಳ
ಶಕುಂತಲಾ ಮಾತನ್ನು ಕೇಳಿದ ಕೂಡ ಭೂಮಿಕಾಳಿಗೆ ಕೋಪ ಬರುತ್ತದೆ. ಯಾವುದೇ ಕಾರಣಕ್ಕೂ ಈ ಮದುವೆ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಎಲ್ಲರ ಎದುರಿಗೂ ಗೌತಮ್ ಜೊತೆ ಜಗಳ ಮಾಡುತ್ತಾಳೆ. ನನಗೆ ಪ್ರಪೋಸಲ್ ಕೊಟ್ಟಿದ್ದು ಎಂಬುದು ಗೊತ್ತಾಗಿದ್ದರೆ. ಇಲ್ಲಿಯವರೆಗೂ ಬರುತ್ತಿರಲಿಲ್ಲ. ಇವರ ಜೊತೆಗೆ ಯಾವ ಹೆಣ್ಣಿನಿಂದಲೂ ಸಂಸಾರ ಮಾಡಲು ಆಗುವುದಿಲ್ಲ ಎಂದು ಹೇಳುತ್ತಾಳೆ.
ಮತ್ತೆ ಚಿಂತೆಯಲ್ಲಿ ಶಕುಂತಲಾ
ಬಳಿಕ ಎಲ್ಲರ ಬಳಿ ಭೂಮಿಕಾ ಕ್ಷಮೆ ಕೇಳಿ ಅಲ್ಲಿಂದ ಹೊರಟು ಬಿಡುತ್ತಾಳೆ. ಅಪೇಕ್ಷಾಳಿಗೆ ನಿರಾಸೆ ಆಗಿರುತ್ತದೆ. ಶಕುಂತಲಾಗೆ ಈಗ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಶಕುಂತಲಾ ಸಹೋದರ ಈ ಮದುವೆ ಮಾಡಿಸಲೇಬೇಕು. ಗೌತಮ್ ಮತ್ತು ಭೂಮಿಕಾ ಇಬ್ಬರೂ ನಾಯಿ ಕಚ್ಚಾಡಿದ ಹಾಗೆ ಆಡುತ್ತಾರೆ. ಇದೇ ನಮಗೆ ಪ್ಲಸ್ ಪಾಯಿಂಟ್. ಈ ಹುಡುಗಿಯನ್ನು ಬಿಟ್ಟರೆ ಹಣವ್ನು ಕಳೆದುಕೊಳ್ಳುತ್ತೀಯಾ ಎಂದು ಹೇಳುತ್ತಾನೆ.
ಮದುವೆ ಮಾಡಿಸಲು ಶಕುಂತಲಾ ಚಿಂತನೆ
ಅಣ್ಣನ ಮಾತು ಕೇಳಿದ ಶಕುಂತಲಾ, ಈಗ ಹೇಗಾದರೂ ಮಾಡಿ ಭೂಮಿಕಾ ಗೌತಮ್ ಮದುವೆಯನ್ನು ಮಾಡಿಸಬೇಕು ಎಂದು ಯೋಚಿಸುತ್ತಿರುತ್ತಾಳೆ. ಮುಂದೇನು ಆಗುತ್ತದೆ ಎನ್ನುವುದು ಈಗ ಕುತೂಹಲ ಮೂಡಿಸಿದೆ. ಮತ್ತೆ ಗೌತಮ್- ಭೂಮಿಕಾ ನಡುವೆ ಸ್ನೇಹ ಮೂಡುವುದು ಹೇಗೆ ಕಾದುನೋಡಬೇಕಿದೆ.


Click it and Unblock the Notifications











