Amruthadhaare: ಭೂಮಿಕಾ- ಗೌತಮ್‌ಗೆ ಹನಿಮೂನ್ ಫಜೀತಿ: ಮಹಿಮಾಳಿಗೆ ಮಾವನದ್ದೇ ಕಾಟ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಮತ್ತು ಅಪರ್ಣಾ ಗೆಳೆಯ ಗೌತಮ್‌ಗೆ ಹನಿಮೂನ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಲಂಡನ್‌ಗೆ 15 ದಿನಕ್ಕೆ ಎರಡು ಟಿಕೆಟ್ ಬುಕ್ ಮಾಡಿಸಿದ್ದಾರೆ.

ಭೂಮಿಕಾ- ಗೌತಮ್‌ಗೆ ಟಿಕೆಟ್ ಕೊಟ್ಟು ಹನಿಮೂನ್‌ಗೆ ಹೋಗುವಂತೆ ಹೇಳಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಭೂಮಿಕಾ ಹನಿಮೂನ್ ಟಿಕೆಟ್ ಅನ್ನು ಖುಷಿಯಾಗಿ ಪಡೆದಿದ್ದಾಳೆ.

Amruthadhaare Serial 27th November episode written update

ಎಲ್ಲರಿಗೂ ತಾವಿಬ್ಬರೂ 15 ದಿನಗಳ ಕಾಲ ಲಂಡನ್‌ಗೆ ಹನಿಮೂನ್‌ಗಾಗಿ ತೆರಳುವುದಾಗಿ ಹೇಳಿದ್ದಾಳೆ. ಎಲ್ಲರೂ ಈ ವಿಚಾರ ತಿಳಿದು ಖುಷಿ ಕೂಡ ಆಗಿದ್ದಾರೆ.

ಚಿಂತೆಯಲ್ಲಿರುವ ಶಕುಂತಲಾ

ಶಕುಂತಲಾಳಿಗೆ ಮಂದಾಕಿನಿ ಫೋನ್ ಮಾಡಿ ಗೌತಮ್ ಮತ್ತು ಭೂಮಿಕಾ ಲಂಡನ್‌ಗೆ ಹೋಗುತ್ತಿರುವ ವಿಚಾರ ತಿಳಿಸಿದ್ದಾಳೆ. ಇಬ್ಬರೂ ಹನಿಮೂನ್‌ಗೆ ಹೋಗುವಷ್ಟು ದೊಡ್ಡವರಾದರಾ? ಎಂದು ಶಕುಂತಲಾಳಿಗೆ ಚಿಂತೆ ಶುರುವಾಗಿದೆ. ಭೂಮಿಕಾಳನ್ನು ತನ್ನ ಕೈ ವಶದಲ್ಲಿ ಇಟ್ಟುಕೊಳ್ಳಬೇಕು. ಗೌತಮ್ ತನ್ನ ಮಾತನ್ನು ಕೇಳುತ್ತಿರಬೇಕು ಅನ್ನೋದು ಶಕುಂತಲಾ ಆಲೋಚನೆ. ಆದರೆ, ಗೌತಮ್ ಮತ್ತು ಭೂಮಿಕಾ ತನ್ನ ಅಂಕೆ ಮೀರಿ ಹೋದರೆ, ಮುಂದಿನ ತನ್ನ ಹಾಗೂ ತನ್ನ ಮಕ್ಕಳ ಬದುಕು ಕಷ್ಟವಾಗುತ್ತದೆ ಎಂದು ಚಿಂತೆ ಶುರುವಾಗಿದೆ. ಹೀಗಾಗಿ ಗೌತಮ್ ರೂಮಿಗೆ ಹೋಗಿ ಚೆಕ್ ಮಾಡುತ್ತಾಳೆ. ಹನಿಮೂನ್ ಟಿಕೆಟ್ ನೋಡಿ ಬೇಸರ ಮಾಡಿಕೊಳ್ಳುತ್ತಾಳೆ.

Amruthadhaare Serial 27th November episode written update

ಹನಿಮೂನ್ ವಿಚಾರಕ್ಕೆ ಗೌತಮ್‌ ಗಲಾಟೆ

ಇನ್ನು ಇಡೀ ಊರಿಗೆ ತಾವಿಬ್ಬರೂ ಹನಿಮೂನ್‌ಗೆ ಹೋಗುತ್ತಿರುವುದು ಗೊತ್ತಾಗಿದೆ. ಇದು ಗೌತಮ್‌ಗೆ ಕೋಪ ಬರುವಂತೆ ಮಾಡಿದೆ. ಆನಂದ್‌ಗೆ ಟಿಕೆಟ್ ಕ್ಯಾನ್ಸಲ್ ಮಾಡು ಎಂದರೆ ಸುತಾರಾಂ ಒಪ್ಪುತ್ತಿಲ್ಲ. ಹೀಗಾಗಿ ಭೂಮಿಕಾ ಮೇಲೆ ಗೌತಮ್ ಕೂಗಾಡುತ್ತಾನೆ.

ಸೈಲೆಂಟ್ ಆಗಿರುವ ಭೂಮಿಕಾ

ನೀನು ಮಾಡಿದ ಒಂದು ಕೆಲಸದಿಂದ ಈಗ ನಾನು ಅನುಭವಿಸಬೇಕು. 15 ದಿನ ಲಂಡನ್‌ನಲ್ಲಿ ಹನಿಮೂನ್ ಟ್ರಿಪ್ ಎಂದು ಕೂಗಾಡುತ್ತಾನೆ. ಭೂಮಿಕಾ ಕೂಡ ಈಗ ಏನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ, ಎಲ್ಲಾ ಕಡೆಯೂ ತಾನೇ ಹನಿಮೂನ್‌ಗೆ ಹೋಗುತ್ತಿರುವುದಾಗಿ ಹೇಳಿಕೊಂಡು ಬಂದಿದ್ದಾಳೆ. ಈಗ ಇವರಿಬ್ಬರೂ ಮುನಿಸಿಕೊಂಡಿದ್ದು, ಇದು ಯಾವ ಹಂತಕ್ಕೆ ಹೋಗುತ್ತದೆಯೋ ಗೊತ್ತಾಗುತ್ತಿಲ್ಲ.

ಮಹಿಮಾಳಿಗೆ ತೊಂದರೆಯಾದ ಸಂಪ್ರದಾಯ

ಮಹಿಮಾಳಿಗೆ ಪ್ರತಿ ಹೆಜ್ಜೆಯಲ್ಲೂ ಮನೆಯಲ್ಲಿ ಕಿರಿಕಿರಿಯಾಗುತ್ತಿದೆ. ಜೀವನ್ ತಂದೆ ಸದಾಶಿವ ಸಂಪ್ರದಾಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಮೊನ್ನೆಯಷ್ಟೆ ಮಹಿಮಾ ಕಾಲುಂಗುರ ಬಿಚ್ಚಿಟ್ಟಿದ್ದಾಳೆ ಎಂದು ಗಲಾಟೆಯಾಗಿತ್ತು. ಈಗ ಮಹಿಮಾ ಬಾತ್ ರೂಮ್‌ನಲ್ಲಿ ಮಾಂಗಲ್ಯವನ್ನು ಬಿಚ್ಚಿಟ್ಟು ಆಫೀಸಿಗೆ ಹೋಗಿದ್ದಾಳೆ. ಇದನ್ನು ನೋಡಿದ ಸದಾಶಿವ ಆತಂಕಗೊಂಡಿದ್ದಾನೆ. ಎಲ್ಲರನ್ನೂ ಮನೆಗೆ ಬೇಗ ಕರೆಸಿ, ಮತ್ತೆ ಮರುಮಾಂಗಲ್ಯಧಾರಣೆ ಮಾಡಿಸಿದ್ದಾನೆ. ಇದು ಮಹಿಮಾಳಿಗೆ ಇರಿಟೇಟ್ ಆಗುವಂತೆ ಮಾಡಿದೆ. ಅಷ್ಟೇ ಅಲ್ಲದೇ, ಜೀವನ್ ಕೂಡ ಮಹಿಮಾಳನ್ನು ದೂರಿದ್ದಾನೆ. ಈಗ ಮನೆಯಲ್ಲಿ ಮಹಿಮಾ ಮುಂದೆ ಯಾವ ವಿಚಾರಕ್ಕೆ ಜಗಳ ಮಾಡುತ್ತಾಳೋ ಕಾದು ನೋಡಬೇಕಿದೆ.

ಗೌತಮ್- ಭೂಮಿಕಾ ಕ್ಷಮೆ ಕೇಳುತ್ತಾನಾ..?

ಭೂಮಿಕಾ ಹಾಗೂ ಗೌತಮ್ ಮುನಿಸಿಕೊಂಡಿದ್ದಾರೆ. ಆನಂದ್ ಗೌತಮ್‌ಗೆ ಬುದ್ಧಿ ಹೇಳುತ್ತಿದ್ದಾನೆ. ಹೆಂಡತಿಯನ್ನು ಅಷ್ಟು ಸುಲಭವಾಗಿ ತೆಗೆದುಕೊಳ್ಳಬೇಡ. ಮೊದಲು ಹೋಗಿ ಕ್ಷಮೆ ಕೇಳು. ಇಲ್ಲದಿದ್ದರೂ ಹೆಂಡತಿಯರು ನಮ್ಮ ನೆಮ್ಮದಿಗೆ ಕೈ ಹಾಕುತ್ತಾರೆ. ಮನೆಯಲ್ಲಿ ಹೆಂಡತಿಯರು ಎಷ್ಟು ಖುಷಿಯಾಗಿರುತ್ತಾರೋ ಆಗಲೇ, ನಮಗೆ ಎಲ್ಲವೂ ಸರಿ ಇರುತ್ತದೆ. ಮೊದಲು ಕ್ಷಮೆ ಕೇಳು ಎಂದು ಹೇಳಿಕೊಟ್ಟಿದ್ದಾನೆ. ಪಾರ್ಥ ಕೂಡ ಗೌತಮ್‌ಗೆ ಕ್ಷಮೆ ಕೇಳುವಂತೆ ಬಲವಂತ ಮಾಡಿದ್ದಾನೆ. ಗೌತಮ್ ಕ್ಷಮೆ ಕೇಳುತ್ತಾನಾ ಕಾದು ನೋಡಬೇಕಿದೆ.

More from Filmibeat

English summary
Amruthadhaare kannada serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X