Amruthadhaare ; ಗೌತಮ್ ಎದುರು ಕಣ್ಣೀರು ಹಾಕಿ ನಟಿಸಿದ ಶಕುಂತಲಾ ಮುಂದಿನ ಪ್ಲಾನ್ ಏನು..?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಳಿಗೆ ಬಹಳ ಬೇಸರವಾಗಿದೆ. ಏನಾದರೂ ಮಾಡಿ ಮಲ್ಲಿಯನ್ನು ಮನೆಯಿಂದ ದೂರ ಇಡಬೇಕು ಎಂದು ಪ್ಲಾನ್ ಮಾಡುತ್ತಾಳೆ. ಮಲ್ಲಿಗೆ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಮಾಡುವುದಿಲ್ಲ. ಬದಲಿಗೆ ಶಕುಂತಲಾ ಬೈಯುತ್ತಾಳೆ.
ನಿನ್ನಿಂದ ನನ್ನ ಮಾನ ಮರ್ಯಾದೆ ಹೋಯ್ತು. ನಿನಗೆ ನನ್ನ ಮನೆಯಲ್ಲಿ ಜಾಗವಿಲ್ಲ. ಎಲ್ಲರ ಎದುರಿಗೂ ನನ್ನ ಮಗನನ್ನು ಮದುವೆ ಆಗಿರಬಹುದು. ಆದರೆ, ಈ ಮನೆಗೆ ಎಂಟ್ರಿ ಇಲ್ಲ. ನಿನ್ನ ತಾತನ ಮನೆಗೆ ಹೋಗು. ಕೆಲಸದವಳ ಮೊಮ್ಮಗಳು ನನ್ನ ಮನೆ ಸೊಸೆ ಆಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾಳೆ.

ಮಲ್ಲಿಗೆ ಸಮಾಧಾನ ಮಾಡಿದ ಭೂಮಿಕಾ
ಮಲ್ಲಿ ಬೇರೆ ದಾರಿ ಕಾಣದೇ, ತಾತನ ಮನೆಗೆ ಹೋಗಿ ಅಳುತ್ತಾ ಕೂರುತ್ತಾಳೆ. ಮದುವೆ ಮಂಟಪದಿಂದ ಬಂದ ಭೂಮಿಕಾ, ಮಲ್ಲಿ ಬಳಿ ಹೋಗಿ ಏನಾಯ್ತು ಎಂದು ವಿಚಾರಿಸುತ್ತಾಳೆ. ಶಕುಂತಲಾ ಪ್ಲಾನ್ ಉಲ್ಟಾ ಮಾಡುವ ಭೂಮಿಕಾ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
ಮಲ್ಲಿಗೆ ಸಮಾಧಾನ ಮಾಡಿ ಎಲ್ಲರ ಮುಂದೆಯೂ ಖುಷಿಯಿಂದಲೇ ಮನೆ ತುಂಬಿಸಿಕೊಳ್ಳುತ್ತಾಳೆ. ಮಲ್ಲಿಗೆ ಸೊಸೆಯಾಗಿ ಮನೆಗೆ ಬಂದಿರುವುದಕ್ಕೆ ಶಕುಂತಲಾ ಹಾಗೂ ಜೈದೇವನಿಗೆ ಬಹಳ ಕೋಪವಿದೆ. ಆದರೆ, ಮನೆಯವರ ಮುಂದೆ ಯಾವ ಸಂಕಟವನ್ನೂ ತೋರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗ ಮಲ್ಲಿಯನ್ನು ದೂರ ಇಡುವುದು ಹೇಗೆ ಎಂದು ಚಿಂತಿಸುತ್ತಿದ್ದಾರೆ.

ಗೌತಮ್ ಆಯ್ಕೆಗಳು ಬದಲಾಗಿವೆ
ಇನ್ನು ಇತ್ತ ಗೌತಮ್ ಆಲೋಚನೆಗಳು ಬದಲಾಗಿವೆ. ಮಹಿಮಾ ಮದುವೆಯಾಗಿದ್ದು, ಮದುವೆ ಮನೆಯಲ್ಲಿ ಮಲ್ಲಿಗೆ ನ್ಯಾಯ ಸಿಕ್ಕಿದ್ದು, ಭೂಮಿಕಾ ತನ್ನ ಬಾಳಲ್ಲಿ ಎಂಟ್ರಿ ಕೊಟ್ಟಾಗಿನಿಂದ ತನ್ನ ಬದುಕಿನಲ್ಲಾದ ಬದಲಾವಣೆಗಳ ಬಗ್ಗೆ ಯೋಚಿಸುತ್ತಿರುತ್ತಾನೆ.
ಇದೇ ವೇಳೆಗೆ ಬರುವ ಭೂಮಿಕಾ ಏನು ಯೋಚಿಸುತ್ತಿದ್ದೀರಾ ಎಂದು ಕೇಳುತ್ತಾಳೆ. ಗೌತಮ್ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾಳೆ. ಜೊತೆಗೆ ತನ್ನ ಲೈಫ್ ಈಗ ಚಾಕ್ಲೇಟ್ ಫ್ಲೇವರ್ ಆಗಿದ್ದು, ಅದಕ್ಕೇ ಭೂಮಿಕಾಳೇ ಕಾರಣ ಎಂಬುದನ್ನೂ ಕೂಡ ಹೇಳುತ್ತಾನೆ. ಈ ಮಾತನ್ನು ಕೇಳಿದ ಭೂಮಿಕಾಳಿಗೆ ಗೌತಮ್ ಬಾಳಿನಲ್ಲಿ ತಾನು ಸ್ಪೆಷಲ್ ಆಗಿರುವ ಸತ್ಯ ಗೊತ್ತಾಗುತ್ತದೆ. ಇದರಿಂದ ಭೂಮಿಕಾಳಿಗೆ ಖುಷಿಯಾಗುತ್ತದೆ.

ಅಣ್ಣನ ಮಾತು ಕೇಳಿದ ಶಕುಂತಲಾ
ಇತ್ತ ಶಕುಂತಲಾ ತನ್ನ ಮಗ ಜೈದೇವನಿಗೆ ಅನ್ಯಾಯವಾಗಿದ್ದನ್ನು ನೆನಪಿಸಿಕೊಂಡು ಕೊರಗುತ್ತಲೇ ಇರುತ್ತಾಳೆ. ಲಕ್ಷ್ಮೀಕಾಂತ ಬಂದು ತಂಗಿ ಶಕುಂತಲಾಳಿಗೆ ಸಮಾಧಾನ ಮಾಡುತ್ತಾನೆ. ನೀನು ಈಗ ಕೂಲ್ ಆಗಿ ಇರಬೇಕು. ಹೀಗೆ ಕೋಪ ಮಾಡಿಕೊಂಡು ನಿನಗೆ ಬೇಕಾದಂತೆ ನೀನು ನಡೆದುಕೊಂಡರೆ, ಮುಂದೆ ನೀನೇ ಕಷ್ಟಪಡಬೇಕಾಗುತ್ತದೆ. ಗೌತಮ್ ನಿನ್ನ ಕೈ ತಪ್ಪಿ ಹೋದರೆ, ನಿನಗೆ ಏನೂ ಸಿಗುವುದಿಲ್ಲ. ಬದಲಿಗೆ ನೀನು ಈಗ ಗೌತಮ್ ಗೆ ಇಷ್ಟವಾಗುವಂತೆ ನಟಿಸು. ಆಗ ನಿನಗೆ ಬೇಕಾದ ಎಲ್ಲಾ ಕೆಲಸಗಳು ಸುಲಭವಾಗಿ ನಡೆಯುತ್ತದೆ ಎಂದು ಸಮಾಧಾನ ಮಾಡುತ್ತಾನೆ. ಶಕುಂತಲಾಳಿಗೆ ಅಣ್ಣನ ಮಾತು ನಿಜ ಅನಿಸುತ್ತದೆ.
ಕಣ್ಣೀರಿನಿಂದ ಸಂದರ್ಭ ನಿಭಾಯಿಸಿದ ಶಕುಂತಲಾ
ಭೂಮಿಕಾ ಮತ್ತು ಗೌತಮ್ ಮಾತನಾಡುವ ರೂಮಿಗೆ ಶಕುಂತಲಾ ಬರುತ್ತಾಳೆ. ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ಭುಮಿಕಾಳನ್ನು ರೂಮಿನಿಂದ ಹೊರಗೆ ಕಳಿಸುತ್ತಾಳೆ. ಗೌತಮ್ ಬಳಿ ನೀನು ನನ್ನನ್ನು ಮಲತಾಯಿ ಅಂತೆ ನೋಡಿದೆ. ನನಗೆ ನನ್ನ ಸೊಸೆ ಬಗ್ಗೆ ನನ್ನದೇ ಆದ ಕನಸಿತ್ತು.
ಆದರೆ, ನೀನು ಅಪ್ಪನಿಗೆ ಕೊಟ್ಟ ಮಾತನ್ನು ಮರೆತು ನನ್ನನ್ನು ನಿಂದಿಸಿದೆ. ನೀನು ಹೀಗೆ ಮಾಡುತ್ತೀಯಾ ಎಂದು ಯಾವತ್ತು ಭಾವಿಸಿರಲಿಲ್ಲ ಎಂದು ಕಣ್ಣೀರು ಹಾಕುತ್ತಾಳೆ. ಆಗ ಗೌತಮ್ ತಾಯಿಯ ಮಾತಿಗೆ ಕರಗಿ ನನ್ನನ್ನು ಕ್ಷಮಿೊಸಿ, ಆ ಸಂದರ್ಭದಲ್ಲಿ ನನ್ನ ಮನಸ್ಸಿಗೆ ಅನಿಸಿದ್ದನ್ನು ಹೇಳಿದೆ ಅಷ್ಟೇ ಎಂದು ಹೇಳು ಸಮಾಧಾನ ಮಾಡುತ್ತಾನೆ.


Click it and Unblock the Notifications











