Amruthadhaare ; ಮದುವೆಯಾಗುವ ಹುಡುಗಿಯನ್ನು ಭೇಟಿ ಮಾಡಿದ ಪಾರ್ಥ : ಕಂಗಾಲಾಗಿರುವ ಅಪೇಕ್ಷಾ..!

By ಪ್ರಿಯಾ ದೊರೆ

ಇತ್ತ ಭೂಮಿಕಾ ಶಕುಂತಲಾಳಿಗೆ ಹುಡುಗಿಯನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ನೀಡಿದ್ದು, ಶರಣ್ಯ ಎಂಬ ಹುಡುಗಿಯನ್ನು ಆರಿಸಿದ್ದು, ಗೌತಮ್ ಇಂದೇ ಮನೆಗೆ ಕರೆಸಿದ್ದಾನೆ.
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾಳಿಗೆ ಅಶ್ವಿನಿ ಇಬ್ಬರು ಹುಡುಗಿಯರ ಫೋಟೋ ಕಳಿಸಿದ್ದು, ಒಂದನ್ನು ಆಯ್ಕೆ ಮಾಡಲು ಹೇಳಿದ್ದಾಳೆ. ಮಹಿಮಾ ಇದಕ್ಕೆ ತನ್ನ ಮನೆಯವರ ಸಹಾಯ ತೆಗೆದುಕೊಂಡಿದ್ದಾಳೆ.ಅಪೇಕ್ಷಾಳಿಗೆ ಹುಡುಗಿಯರ ಫೋಟೋಗಳನ್ನು ನೋಡಿ ಗಾಬರಿಯಾಗಿದೆ. ಆದರೆ, ಮಹಿಮಾಳಿಗೆ ಸತ್ಯ ಹೇಳಬಾರದು ಎಂದು ಸದಾಶಿವ ವಾರ್ನಿಂಗ್ ಕೊಟ್ಟಿದ್ದಾನೆ.ಇತ್ತ ಭೂಮಿಕಾ ಶಕುಂತಲಾಳಿಗೆ ಹುಡುಗಿಯನ್ನು ಆಯ್ಕೆ ಮಾಡುವ ಸಂಪೂರ್ಣ ಹಕ್ಕು ನೀಡಿದ್ದು, ಶರಣ್ಯ ಎಂಬ ಹುಡುಗಿಯನ್ನು ಆರಿಸಿದ್ದು, ಗೌತಮ್ ಇಂದೇ ಮನೆಗೆ ಕರೆಸಿದ್ದಾನೆ.

ಭೂಮಿಕಾಳಿಗೆ ಮನದೊಳಗೆ ಸಂಕಟ

ಭೂಮಿಕಾಳಿಗೆ ಅಡುಗೆ ಮಾಡುವಂತೆ ಗೌತಮ್ ಸೂಚಿಸಿದ್ದಾನೆ. ಇದೆಲ್ಲವೂ ಭೂಮಿಕಾ ಮನದಲ್ಲಿ ನೋವು ಉಂಟು ಮಾಡಿದ್ದರೂ ಕೂಡ, ಮನೆಯವರಿಗಾಗಿ ಎಲ್ಲಾವುದಕ್ಕೂ ತಯಾರಾಗಿದ್ದಾಳೆ. ಇನ್ನು ಅಪೇಕ್ಷಾ ಹೀಗೆ ಸುಮ್ಮನಿದ್ದರೆ ಆಗದು, ಬೆಳಗಾಗುವುದರೊಳಗೆ ಪಾರ್ಥನ ಮದುವೆ ಮಾಡಿ ಬಿಡುತ್ತಾರೆ ಎಂದು ಗಾಬರಿಗೊಂದ ಅಪೇಕ್ಷಾ ಸೀದಾ ಅಕ್ಕನ ಮನೆಗೆ ಬಂದಿದ್ದಾಳೆ. ಭೂಮಿಕಾ ಬಳಿ ಬಹಳ ಮುಖ್ಯವಾದ ವಿಚಾರವನ್ನು ಮಾತನಾಡಬೇಕು ಐದೇ ಐದು ನಿಮಿಷ ಸಮಯ ಕೊಡು ಎಂದು ಕೇಳಿದ್ದು, ಎಲ್ಲಾ ಸತ್ಯ ತಿಳಿದಿರುವ ಭೂಮಿಕಾ ಬೇಕಂತಲೇ ಅಪೇಕ್ಷಾಳನ್ನು ಅವಾಯ್ಡ್ ಮಾಡುತ್ತಿದ್ದಾಳೆ. ಮನದೊಳಗೆ ಸಂಕಟ ಅನುಭವಿಸುತ್ತಾ ಅಡುಗೆ ಮಾಡುತ್ತಿದ್ದಾಳೆ.

amruthadhaare-serial-28-july-episode-written-update


ಹುಡುಗಿ ಪಾರ್ಥನನ್ನು ಒಪ್ಪಿದ್ದಾಯ್ತು

ಗೌತಮ್ ಮನೆಗೆ ಹುಡುಗಿ ಮತ್ತು ಅವರ ತಂದೆ-ತಾಯಿ ಆಗಮಿಸಿದ್ದಾರೆ. ಹುಡುಗಿ ತಂದೆ ಚಿನ್ನದ ಬಿಸಿನೆಸ್ ಮಾಡುತ್ತಿದ್ದು, ಗೌತಮ್ ತಮ್ಮ ಸ್ಟೇಟಸ್ ಗೆ ತಕ್ಕಂತೆ ಸಂಬಂಧವನ್ನು ನೋಡಿದ್ದಾರೆ. ಪಾರ್ಥನ ಕಡೆಗೆ ನಾಲ್ಕು ಮಕ್ಕಳು ಬಂದಿದ್ದು, ಎಲ್ಲರೂ ಪಾಠ ಕೇಳುವಂತಾಗಿದ್ದಾರೆ. ಚಾಲೇಂಜ್ ನಲ್ಲಿ ಈಗಾಗಲೇ ಅರ್ಧ ಗೆದ್ದಿರುವ ಪಾರ್ಥ, ಪರೀಕ್ಷೆಯಲ್ಲಿ ನಾಲ್ವರು ಪಾಸ್ ಮಾಡಿದರೆ, ಸಂಪೂರ್ಣವಾಗಿ ಗೆದ್ದಂತೆ. ಆದರೆ ಇದೇ ಸಮಯದಲ್ಲಿ ಗೌತಮ್ ಪಾರ್ಥನಿಗೆ ಫೋನ್ ಮಾಡಿ ಎಲ್ಲಿದ್ದರೂ ಮನೆಗೆ ಬಾ ಎಂದು ಹೇಳಿದ್ದು, ಬೇರೆ ದಾರಿ ಇಲ್ಲದೇ ಪಾರ್ಥ ಮನೆ ಕಡೆ ಹೊರಟಿದ್ದಾನೆ. ಹುಡುಗಿ ಮನೆಯವರು ಭೂಮಿಕಾ ಮಾಡಿದ ಅಡುಗೆ ಸವಿದಿದ್ದು, ರುಚಿಯನ್ನು ಒಪ್ಪಿಕೊಂಡಿದ್ದಾರೆ.

ಕಂಗಾಲಾಗಿರುವ ಅಪೇಕ್ಷಾ-ಪಾರ್ಥ

ಪಾರ್ಥ ಮನೆಗೆ ಬರುತ್ತಿದ್ದಂತೆ ಹುಡುಗಿಯನ್ನು ನೋಡಿ ಶಾಕ್ ಆಗಿದ್ದಾನೆ. ಪಾರ್ಥ ಮತ್ತು ಶರಣ್ಯ ಸಪರೇಟ್ ಆಗಿ ಮಾತನಾಡಿ ಬಂದಿದ್ದು, ಹುಡುಗಿ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಪಾರ್ಥ ಏನೂ ಮಾತನಾಡದೇ ಸೈಲೆಂಟ್ ಆಗಿ ಬಿಟ್ಟಿದ್ದಾನೆ. ಅಪೇಕ್ಷಾ ಇನ್ನೆಲ್ಲವೂ ಮುಗಿದು ಹೋಯ್ತು. ತನ್ನ ಕನಸೆಲ್ಲಾ ನುಚ್ಚು ನೂರಾಯ್ತು ಎಂದು ಅಪೇಕ್ಷಾ ನೊಂದುಕೊಂಡಿದ್ದಾಳೆ. ಪಾರ್ಥನಿಗೆ ಈ ಪರೀಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ಅರ್ಥವಾಗುತ್ತಿಲ್ಲ. ಅದು ಬಿಟ್ಟರೆ ಮನೆಯವರೆಲ್ಲರೂ ಹ್ಯಾಪಿ ಆಗಿದ್ದಾರೆ. ಅಂತೂ ಪಾರ್ಥನ ಮದುವೆಯ ದಿನ ಹತ್ತಿರ ಬಂತು ಎಂದು ಸಂಭ್ರಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

amruthadhaare-serial-28-july-episode-written-update


ಹೊಟ್ಟೆ ಉರಿಸುತ್ತಿರುವ ಶಕುಂತಲಾ

ಶಕುಂತಲಾ ಅಪೇಕ್ಷಾ ಇದೇ ಸಮಯದಲ್ಲಿ ತಮ್ಮ ಮನೆಯಲ್ಲಿರುವುದಕ್ಕೆ ಬಹಳ ಖುಷಿ ಪಟ್ಟಿದ್ದಾಳೆ. ಅಪೇಕ್ಷಾಳನ್ನು ಪದೇ ಪದೇ ಕೆಣಕಿದ್ದಾಳೆ.. ಡಲ್ ಆಗಿ ಕಾಣುತ್ತಿದ್ದೀಯಾ. ಏನಾದರೂ ಸಮಸ್ಯೆನಾ. ಹುಡುಗಿ ಚೆನ್ನಾಗಿದ್ದಾಳಲ್ವಾ ಎಂದೆಲ್ಲಾ ಮಾತನಾಡಿಸಿ, ನೋವು ಮಾಡುತ್ತಿದ್ದಾಳೆ. ನಿನಗೆ ಆಡ್ಸ್ ಬೇಕಂದ್ರೆ ನನಗೆ ಹೇಳು, ನನಗೆ ತುಂಬಾ ಕಾಂಟ್ಯಾಕ್ಟ್ಸ್ ಇದೆ ಎಂದು ಚೀಪ್ ಆಗಿ ಮಾತನಾಡಿಸಿದ್ದಾಳೆ. ಅಪೇಕ್ಷಾ ತುಂಬಾ ಲೋಕಲ್ ಹುಡುಗಿ, ಲೋ ಕ್ಲಾಸ್ ಕುಟುಂಬದವಳು ಎಂಬಂತೆ ಮಾತನಾಡಿಸಿದ್ದಾಳೆ. ಇದರಿಂದ ಅಪ್ಪಿ ಮನಸ್ಸಿಗೆ ಇನ್ನಷ್ಟು ಬೇಸರವಾಗಿದ್ದು, ಮುಂದೆ ತನ್ನ ಬದುಕಿನ ಬಗ್ಗೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X