Amruthadhaare; ಗೌತಮ್ ಕೋಪ ಭೂಮಿಕಾ ಮೇಲೆ: ಜೈದೇವ್ ಕಣ್ಣು ದಿಯಾ ಮೇಲೆ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿಗೆ ಇದ್ದಕ್ಕಿದ್ದ ಹಾಗೆಯೇ ಜ್ವರ ಬಂದಿದೆ. ಅತ್ತೆಗೆ ಹುಷಾರಿಲ್ಲ ಎಂಬ ಕಾರಣಕ್ಕೆ ಮಹಿಮಾ ಕೂಡ ಮನೆಯಲ್ಲೇ ಉಳಿದುಕೊಂಡಿದ್ದಾಳೆ. ಅತ್ತೆಗೆ ಗಂಜಿ ಮಾಡಿ ಕೊಟ್ಟಿದ್ದು, ಮನೆ ಕೆಲಸವನ್ನೆಲ್ಲಾ ನಿಭಾಯಿಸಿದ್ದಾಳೆ. ಮಂದಾಕಿನಿಯ ಸೇವೆಯನ್ನು ಕೊಂಚವೂ ಬೇಸರ ಮಾಡಿಕೊಳ್ಳದೇ ತಾನೊಬ್ಬಳೆ ಮಾಡಿದ್ದಾಳೆ. ಇತ್ತ ಭೂಮಿಕಾ ಹಾಗೂ ಅಶ್ವಿನಿ ನಡುವೆ ಚಿಕ್ಕ ಫೈಟ್ ಶುರುವಾಗಿದೆ. ಇದರಿಂದ ಮನೆಯಲ್ಲಿನ ವಾತಾವರಣವೂ ಹಾಳಾಗಿದೆ. ಈಗ ಗೌತಮ್ ಬಳಿ ಅಶ್ವಿನಿ ನಾಟಕ ಮಾಡಿದ್ದಾಳೆ.

ಸತ್ಯ ಅರಿಯದೆ ಭೂಮಿಕಾಳಿಗೆ ಬೈದ ಗೌತಮ್

ಅಶ್ವಿನಿ ಯಾಕೆ ಬೇಸರದಲ್ಲಿದ್ದಾಳೆ ಎಂದು ಗೌತಮ್ ವಿಚಾರಿಸುತ್ತಾನೆ. ಆಗ ಅಶ್ವಿನಿ ಬೇಕಂತಲೇ ತನ್ನದೇ ತಪ್ಪಿಲ್ಲಾ ಎಂಬಂತೆ ಮಾತನಾಡುತ್ತಾಳೆ. ನಾನು ಹಣ ಕೇಳಿದ್ದು ತಪ್ಪು. ನನಗೆ ಲೆಕ್ಕ ಕೊಟ್ಟು ಅಭ್ಯಾಸವಿಲ್ಲ ಎಂದು ಹೇಳುತ್ತಾಳೆ. ಆ ಮಾತಿಗೆ ತಕ್ಕಂತೆ ಶಕುಂತಲಾ ಕೂಡ ಇದರಲ್ಲಿ ನನ್ನದೂ ತಪ್ಪಿದೆ. ಮಕ್ಕಳಿಗೆ ಹಣದ ಬೆಲೆಯನ್ನು ನಾನು ಕಲಿಸಬೇಕಿತ್ತು. ಕೇಳಿದಾಗ ಬೇಕಿದ್ದಷ್ಟು ಹಣವನ್ನು ಕೊಟ್ಟಿದ್ದೇನೆ. ಒಂದು ದಿನವೂ ಲೆಕ್ಕ ಕೇಳಿಲ್ಲ. ಈ ಹಣ ಯಾಕೆ ಬೇಕು ಎಂದು ಕೇಳಿಲ್ಲ. ಅದೇ ನನ್ನ ತಪ್ಪು ಎಂದು ಶಕುಂತಲಾ ಹೇಳುತ್ತಾಳೆ. ಈ ಎಲ್ಲಾ ಮಾತುಗಳು ಗೌತಮ್ ಗೆ ಕೋಪ ತರಿಸುತ್ತದೆ. ಎಲ್ಲರ ಎದುರು ಭೂಮಿಕಾಳನ್ನು ಕರೆದು ಬೈಯುತ್ತಾನೆ.

Amruthadhaare Serial 28 June episode written update

ಪರಿಸ್ಥಿತಿಯ ಲಾಭ ಪಡೆದ ಶಕುಂತಲಾ

ನನ್ನ ತಂಗಿ ಅಶ್ವಿನಿ ಬಂದು ಹಣ ಕೇಳಿದಾಗ ನೀವ್ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸುತ್ತಾಳೆ. ಆಗ ಭೂಮಿಕಾ ನಾನು ಚೆಕ್ ಕೊಡುವುದಿಲ್ಲ ಅಂತ ಹೇಳಲಿಲ್ಲ ಲೆಕ್ಕ ಕೇಳಿದೆ ಅಷ್ಟೇ ಎನ್ನುತ್ತಾಳೆ. ಆಗ ಗೌತಮ್ ಈ ಮನೆಯಲ್ಲಿ ಯಾವತ್ತೂ ಲೆಕ್ಕ ಕೇಳಿ ಅಭ್ಯಾಸವಿಲ್ಲ. ಮನೆಯವರ ಖರ್ಚಿನ ಬಗ್ಗೆ ನೀವು ಲೆಕ್ಕ ಕೇಳುವ ಅಗತ್ಯವೂ ಇಲ್ಲ. ಅಶ್ವಿಗೆ ಕ್ಷಮೆ ಕೇಳಿ ಎಂದಾಗ ಭೂಮಿಕಾ ಕ್ಷಮೆ ಕೇಳುತ್ತಾಳೆ. ಬಳಿಕ ಚೆಕ್ ತಂದು ಕೊಡಿ ಎನ್ನುತ್ತಾನೆ. ಭೂಮಿಕಾ ದುಃಖದಲ್ಲೇ ಚೆಕ್ ತಂದು ಕೊಡುತ್ತಾಳೆ. ಗೌತಮ್ ಅಲ್ಲಿಂದಹೊರಟ ಬಳಿಕ ಶಕುಂತಲಾ ಅದಕ್ಕೆ ಹೇಳಿದ್ದು, ಲೆಕ್ಕ ಎಲ್ಲಾ ಕೇಳಬೇಡ ಎಂದು ಗೌತಮ್ ಯಾವತ್ತಿದ್ದರೂ ಮನೆಯವರ ಪರ ಇರುತ್ತಾನೆ ಎಂದು ಹೇಳುತ್ತಾಳೆ.

ಪಾರ್ಟಿಗೆ ಬಂದ ಜೈದೇವ್ ಗೆ ಮಲ್ಲಿ ಕಾಟ

ಇನ್ನು ಜೈದೇವ್ ಮಲ್ಲಿಗೆ ಜ್ಯೂಸ್ ಕೊಟ್ಟು ಮನೆಯೊಳಗೆ ಕೂರಿಸಿದ್ದಾನೆ. ತಾನು ಪಾರ್ಟಿಯಲ್ಲಿ ಮದ್ಯಪಾನ ಮಾಡಲು ಪರ್ಮಿಷನ್ ತೆಗೆದುಕೊಂಡು ದಿಯಾ ಬಳಿ ಬಂದಿದ್ದಾನೆ. ದಿಯಾಳಿಗೆ ಬರ್ತ ಡೇ ಉಡುಗೊರೆಯನ್ನು ಕೊಟ್ಟು ಇಂಪ್ರೆಸ್ ಮಾಡಿದ್ದಾನೆ. ಇಬ್ಬರೂ ಮಾತನಾಡುತ್ತಾ ಏಕಾಂತದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದಾರೆ. ಆದರೆ, ದಿಯಾ ಜೀವನ ಪೂರ್ತಿ ನನ್ನ ಜೊತೆಗೆ ಹೀಗೆ ಇರಬೇಕು ಎಂದು ಕಂಡೀಷನ್ ಹಾಕಿದ್ದು, ಈ ಏಕಾಂತಕ್ಕೆ ಮಲ್ಲಿ ಭಂಗ ತಂದಿದ್ದಾಳೆ. ಮಲ್ಲಿ ಒಬ್ಬಳೆ ಇರಲು ಬೇಸರ ಎಂದು ಜೈದೇವ್ ನನ್ನು ಹುಡುಕಿಕೊಂಡು ಬಂದಿದ್ದಾಳೆ. ಇದರಿಂದ ದಿಯಾ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

Amruthadhaare Serial 28 June episode written update

ಬೇಸರದಲ್ಲಿ ಅಳುತ್ತಿರುವ ಭೂಮಿಕಾ

ಗೌತಮ್ ತನ್ನ ಅಭಿಪ್ರಾಯ ಕೇಳದೇ ಬೈದಿದ್ದಕ್ಕೆ ರೂಮಿಗೆ ಹೋಗಿ ಅಳುತ್ತಿದ್ದಾಳೆ. ಲೆಕ್ಕಾಚಾರ ಬೇಡ ಎನ್ನುವುದಾದರೆ ತಾನೇಕೆ ಮನೆಯ ಯಜಮಾನಿ ಆಗಬೇಕು. ಗೌತಮ್ ನನಗೆ ಹಾಗೆಲ್ಲಾ ಬೈಯ್ಯಬಾರದಿತ್ತು ಎಂದು ಅಳುತ್ತಿದ್ದಾಳೆ. ಇದನ್ನು ನೋಡಿದ ಅಶ್ವಿನಿ ಮತ್ತು ಶಕುಂತಲಾ ಖುಷಿಪಟ್ಟಿದ್ದಾರೆ. ಗೌತಮ್ ಆನಂದ್ ಬಳಿ ತನ್ನ ಬೇಸರವನ್ನು ಹಂಚಿಕೊಂಡಿದ್ದಾನೆ. ಭೂಮಿಕಾಳಿಗೆ ಬೈದಿದ್ದಕ್ಕೆ ಆನಂದ್ ಬುದ್ಧಿ ಹೇಳಿದ್ದಾನೆ. ಮೊದಲು ಹೋಗಿ ಕ್ಷಮೆ ಕೇಳು ಎಂದಿದ್ದಾನೆ.

More from Filmibeat

English summary
gautham got complain about bhoomika. He scolds bhoomika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X