Amruthadhaare ; ಮಲ್ಲಿಗೆ ಮಹಾಮೋಸ ಮಾಡಿದ ಜೈದೇವ್ ; ದಿಯಾ ಜೊತೆ ನಡೆಯುತ್ತಾ ಮದುವೆ..?
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಮನೆಗೆ ತಡವಾಗಿ ಬಂದಾಗ ಕಾದು ಕುಳಿತಿದ್ದ ಸದಾಶಿವ ಬುದ್ಧಿವಾದ ಹೇಳುತ್ತಾನೆ. ಆದರೆ, ಜೀವನ್ ತನ್ನ ತಂದೆಗೇ ಬುದ್ಧಿಯನ್ನು ಹೇಳಿದ್ದಾನೆ.ಇತ್ತ ಶಕುಂತಲಾ ಮತ್ತು ಲಕ್ಷ್ಮೀಕಾಂತ ತಮ್ಮ ಮೈಕ್ ವಿಚಾರವನ್ನು ಗೌತಮ್ ಗೆ ತಿಳಿಯದಂತೆ ಹೇಗೆ ನೋಡಿಕೊಳ್ಳುವುದು. ತಾವು ಸಿಕ್ಕಿ ಬಿದ್ದರೆ ಮುಂದೇನು ಗತಿ ಎಂಬ ಬಗ್ಗೆ ಆಲೋಚಿಸುವುದರಲ್ಲಿ ಮುಳುಗಿ ಹೋಗಿದ್ದಾರೆ.ಭೂಮಿಕಾ ಸದ್ಯ ಸೃಜನ್ ಬಳಿ ತಮ್ಮನ್ನು ಕೊಲ್ಲಲು ಹಿಂದೆ ಬಂದಿದ್ದ ರೌಡಿಗಳ ಫೋಟೋ ಕಳಿಸಿ. ಅವರ ಬಗ್ಗೆ ಮಾಹಿತಿ ನೀಡಿ ಎಂದು ಕೇಳಿಕೊಂಡಿದ್ದಾಳೆ.
ಅಪೇಕ್ಷಾ ಕೆನ್ನೆಗೆ ಭಾಗ್ಯ ಹೊಡೆದಿದ್ದೇಕೆ..?
ಇತ್ತ ಭಾಗ್ಯ ಇದ್ದಕ್ಕಿದ್ದ ಹಾಗೆಯೇ ವಿಚಿತ್ರವಾಗಿ ರಿಯಾಕ್ಟ್ ಮಾಡಿದ್ದಾಳೆ. ರೂಮಿನಲ್ಲಿ ಯಾರೂ ಇಲ್ಲದಾಗ ಭಾಗ್ಯ ಕುಳಿತ ಜಾಗದಿಂದ ಎದ್ದು ಒದ್ದಾಡಿದ್ದಾಳೆ. ಅಲ್ಲದೇ, ಸುಧಾ ತಾಯಿಯನ್ನು ಹಿಡಿಯಲು ಯತ್ನಿಸಿದ್ದು, ಕೂಗಿಕೊಂಡಿದ್ದಾಳೆ. ಏನಾಯ್ತು ಎಂದು ನೋಡಲು ಬಂದ ಅಪೇಕ್ಷಾಳಿಗೆ ಭಾಗ್ಯ ಕಪಾಳಕ್ಕೆ ಭಾರಿಸಿದ್ದಾಳೆ. ಇದ್ದಕ್ಕಿದ್ದ ಹಾಗೆಯೇ ಭಾಗ್ಯ ಯಾಕೆ ಹೀಗೆ ನಡೆದುಕೊಂಡಲು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಭಾಗಶಃ ಶಕುಂತಲಾ ಬದಲಾಯಿಸಿದ ಮಾತ್ರೆಯಿಂದಲೇ ಹೀಗಾಗಿರಬೇಕು ಎಂಬ ಸತ್ಯ ಗೌತಮ್ ಗೆ ಭಾಗ್ಯ ನಡವಳಿಕೆಯಿಂದ ಗೊತ್ತಾಗುತ್ತಾ. ಅಮ್ಮನ ಮಾತ್ರೆಯನ್ನು ಬದಲಾಯಿಸಿದ್ದು ಯಾರು ಎಂದು ಪತ್ತೆ ಮಾಡುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

ಮದುವೆಯಾಗಲು ಹೊರಟ ಜೈದೇವ್-ದಿಯಾ
ಇತ್ತ ದಿಯಾಳಿಗೆ ದನ ದಿನಕ್ಕೂ ತನ್ನ ಬದುಕು ಕಳೆದು ಹೋಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಇದ್ದಕ್ಕಿದ್ದ ಹಾಗೆಯೇ ಜೈದೇವ್ ಜೊತೆಗೆ ಜಗಳ ಮಾಡುತ್ತಲೇ ಇರುತ್ತಾಳೆ. ಈಗ ಮಲ್ಲಿ ಬೇರೆ ತವರು ಮನೆಯೀಮದ ವಾಪಸ್ ಬಂದಿದ್ದಾಳೆ. ಇದರಿಂದ ದಿಯಾಳ ಆತಂಕ ಹೆಚ್ಚಾಗಿದೆ. ಹಾಗಾಗಿ ದಿಯಾ ಜೈದೇವ್ ಜೊತೆಗೆ ಜಗಳ ಮಾಡಿಕೊಂಡಿದ್ದಾಳೆ. ಈಗಲೇ ನನ್ನನ್ನು ಮದುವೆಯಾಗು ಎಂದು ಕೂಗಾಡಿದ್ದಾಳೆ. ದಿಯಾಳ ನಡವಳಿಕೆ ಜೈದೇವ್ ನಲ್ಲಿ ಆತಂಕವನ್ನು ತಂದಿದ್ದು. ಮದುವೆಗೆ ಒಪ್ಪಿಕೊಂಡಿದ್ದಾನೆ. ಆದಷ್ಟು ಬೇಗ ಮದುವೆಯಾಗೋಣ ಎಂದು ಕೂಡ ಹೇಳಿದ್ದಾನೆ.ದಿಯಾ ಆಸೆಯಂತೆ ಜೈದೇವ್ ಪ್ಲಾನ್ ಮಾಡಿ ದೇವಸ್ಥಾನದಲ್ಲಿ ಮದುವೆಯಾಗಲು ಹೊರಟಿದ್ದಾನೆ.
ಹಸೆಮಣೆ ಮೇಲೆ ಪತಿಯನ್ನು ಕಂಡ ಮಲ್ಲಿ
ದಿಯಾಳನ್ನು ಜೈದೇವ್ ಸಮಾಧಾನ ಮಾಡುವ ಸಲುವಾಗಿ ದೇವಸ್ಥಾನ ಒಂದರಲ್ಲಿ ಸಿಂಪಲ್ ಆಗಿ ಮದುವೆಯಾಗಲು ತಯಾರಿ ನಡೆಸಿದ್ದಾನೆ. ಮಲ್ಲಿಯೂ ಕೂಡ ಭೂಮಿಕಾ ಜೊತೆಗೆ ಅದೇ ದೇವಸ್ಥಾನಕ್ಕೆ ಬಂದಿದ್ದಾರೆ. ಮಧುಮಗನ ಅವತಾರದಲ್ಲಿ ಜೈದೇವ್ ಹಸೆ ಮಣೆ ಏರಿದ್ದು, ತಾಳಿ ಕಟ್ಟಲು ಮುಂದಾಗಿದ್ದಾನೆ. ಅಷ್ಟರಲ್ಲಿ ಮಲ್ಲಿಯ ಕಣ್ಣಿಗೆ ಜೈದೇವ್ ಮತ್ತು ದಿಯಾ ಕಾಣಿಸಿಕೊಂಡಿದ್ದು, ಶಾಕ್ ಆಗಿದ್ದಾಳೆ. ಪತಿಯನ್ನು ಹಸೆಮಣೆ ಮೇಲೆ ಕಂಡ ಮಲ್ಲಿಗೆ ದಿಕ್ಕು ತೋಚದಂತಾಗಿದೆ. ಈಗ ಮಲ್ಲಿ ಭೂಮಿಕಾಳ ಸಹಾಯ ಪಡೆದು ಮದುವೆ ನಿಲ್ಲಿಸಲು ಮುಂದಾಗಿದ್ದಾಳೆ.
ಕೊನೆಯಾಗುತ್ತಾ ದಿಯಾ-ಜೈದೇವ್ ಆಟ..?
ಮಲ್ಲಿ ಈ ಬಾರಿ ಯಾವುದಕ್ಕೂ ಜಗ್ಗದೇ ಗಂಡನನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಬುದ್ಧಿವಂತೆಯಾಗಿರುವ ಮಲ್ಲಿ, ದಿಯಾ ಮತ್ತು ಜೈದೇವ್ ಆಟಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗಿದ್ದಾಳೆ. ಜೈದೇವ್ ನ ಎಲ್ಲಾ ಸ್ವಾತಂತ್ರ್ಯವನ್ನು ಈ ಮೂಲಕ ಮಲ್ಲಿ ಕಿತ್ತುಕೊಳ್ಳಲಿದ್ದು, ಜೈದೇವ್ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಂತಾಗಿದೆ. ಈ ಘಟನೆಯಿಂದಾಗಿ ಜೈದೇವ್ ನಾಟಕ ಮಾಡಿಕೊಂಡು ಗಳಿಸಿದ್ದ ವಿಶ್ವಾಸ ಸಂಪೂರ್ಣವಾಗಿ ನಾಶವಾಗಿದೆ. ಗೌತಮ್ ಈ ಬಾರಿ ಜೈದೇವ್ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾನೆ. ಈಗ ಮಲ್ಲಿ ಜೈದೇವ್ ನನ್ನು ಒಪ್ಪಿಕೊಳ್ಳುತ್ತಾಳಾ, ಇಲ್ಲ ಪಶ್ಚಾತಾಪ ಪಡುವಂತೆ ಮಾಡುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











