Amruthadhaare ; ಮನೆಗೆ ವಾಪಸ್ ಬಂದ ಭೂಮಿಕಾ : ಅಪೇಕ್ಷಾಳಿಗೆ ಭವಿಷ್ಯದ ಚಿಂತೆ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್ ಇಬ್ಬರೇ ಚಿಕ್ಕಮಗಳೂರಿನ ಎಸ್ಟೇಟ್ ನಲ್ಲಿ ಇರುತ್ತಾರೆ. ಏಕಾಂತದಲ್ಲಿ ಇಬ್ಬರೇ ಕಾಲ ಕಳೆಯುತ್ತಿರುತ್ತಾರೆ. ಮೊದಲ ಬಾರಿ ಭೇಟಿಯಾದಾಗಿನಿಂದಲೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ನಾವು ಈಗ ಪ್ರಪೋಸ್ ಮಾಡಿಕೊಳ್ಳುವಷ್ಟು ಹತ್ತಿರವಾಗಿದ್ದೀವಿ ಎಂದು ಖುಷಿ ಪಡುತ್ತಾರೆ. ಈಗಾಗಲೇ ಮಲ್ಲಿಗೆ ಯಾವುದೇ ಅಪಾಯ ತಂದರೂ ಬಚಾವ್ ಆಗಿದ್ದು, ಇದರ ಜೊತೆಗೆ ಭೂಮಿಕಾ ಹಾಗೂ ಗೌತಮ್ ಒಂದಾಗುತ್ತಿದ್ದಾರೆ. ಇಬ್ಬರಿಗೂ ಫಸ್ಟ್ ನೈಟ್ ಎಂಬುದನ್ನು ಕೇಳಿ ಶಾಕ್ ಆಗಿದ್ದಾರೆ.
ಮಲ್ಲಿ ಬಳಿ ವಿಚಾರಿಸಿದ ಭೂಮಿಕಾ
ಇಬ್ಬರ ಫಸ್ಟ್ ನೈಟ್ ಹಾಳು ಮಾಡಿಕೊಳ್ಳಬೇಕು ಎಂದುಕೊಂಡ ಶಕುಂತಲಾ ತಲೆ ತಿರುಗಿದಂತೆ ನಟಿಸುತ್ತಾಳೆ. ಆಗ ಲಕ್ಷ್ಮೀಕಾಂತ ಬೇಕಂತಲೇ ಗೌತಮ್ ಗೆ ಫೋನ್ ಮಾಡುತ್ತಾನೆ. ನಿಮ್ಮ ಅಮ್ಮನಿಗೆ ಹುಷಾರಿಲ್ಲ. ತಲೆ ತಿರುಗಿ ಬಿದ್ದಿದ್ದಾಳೆ. ಆದಷ್ಟು ಬೇಗನೆ ಹೊರಟು ಬಾ ಎಂದು ಕೇಳಿಕೊಳ್ಳುತ್ತಾನೆ. ಗೌತಮ್ ಕೂಡ ಗಾಬರಿಯಾಗಿ ಅಮ್ಮನಿಗೆ ಹುಷಾರಿಲ್ಲ ನಾವು ಹೊರಡಬೇಕು ಎಂದು ಹೇಳುತ್ತಾನೆ. ಭೂಮಿಕಾಳಿಗೆ ಬೇಸರವಾಗುತ್ತದೆ. ಮಲ್ಲಿಗೆ ಫೋನ್ ಮಾಡಿ ಏನಾಗಿದೆ ಎಂದು ಕೇಳುತ್ತಾಳೆ. ಅತ್ತೆ ಅರಾಮಾಗಿ ಓಡಾಡಿಕೊಂಡಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಮಲ್ಲಿ ಬೇಕಂತಲೇ ನೀವಿಬ್ಬರು ಒಟ್ಟಿಗೆ ಇರಬಾರದು ಎಂದೇ ನಾಟಕ ಮಾಡಿ ಫೋನ್ ಮಾಡಿದ್ದಾರೆ ಅನಿಸುತ್ತೆ ಎಂದು ಭೂಮಿಕಾ ಬಳಿ ಹೇಳುತ್ತಾಳೆ. ಭೂಮಿಕಾಳಿಗೂ ಅದೇ ಸತ್ಯ ಎಂದು ಅನಿಸುತ್ತದೆ.

ಶಕುಂತಲಾಳಿಗೆ ವೈದ್ಯರಿಂದ ಚಿಕಿತ್ಸೆ
ಇತ್ತ ಭೂಮಿಕಾ ಹಾಗೂ ಗೌತಮ್ ವೈದ್ಯರನ್ನು ಮನೆಗೆ ಕಳುಹಿಸಿರುತ್ತಾರೆ. ಅವರು ಬಂದು ಶಕುಂತಲಾಳನ್ನು ಪರೀಕ್ಷೆ ಮಾಡಿ ಇಂಜೆಕ್ಷನ್ ಕೂಡ ಕೊಡುತ್ತಾರೆ. ಪದೇ ಪದೇ ಹೀಗಾಗುತ್ತಿದೆ ಎಂದರೆ ಬ್ಲಡ್ ಟೆಸ್ಟ್ ಮಾಡಿಸುವುದು ಸೂಕ್ತ. ಮೇಲ್ನೋಟಕ್ಕೆ ಚೆನ್ನಾಗಿದ್ದೀರಾ ಆದರೆ, ಬೇರೆ ಏನಾದರೂ ತೊಂದರೆ ಇದ್ದರೆ ಬ್ಲಡ್ ಟೆಸ್ಟ್ ನಲ್ಲಿ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಶಕುಂತಲಾಳಿಗೆ ಏನೋ ಮಾಡಲು ಹೋಗಿ ಈಗ ತಾನೇ ಸಿಕ್ಕಿ ಬಿದ್ದಂತಾಗಿರುತ್ತದೆ. ಅಷ್ಟರಲ್ಲಿ ಭೂಮಿಕಾ ಮತ್ತು ಗೌತಮ್ ಕೂಡ ಚಿಕ್ಕಮಗಳೂರಿನಿಂದ ವಾಪಸ್ ಬರುತ್ತಾರೆ.
ವಾಪಸ್ ಬಂದ ಗೌತಮ್-ಭೂಮಿಕಾ
ಭೂಮಿಕಾ ಬೇಕಂತಲೇ ಅಮ್ಮನಿಗೆ ವಯ್ಯಸ್ಸಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಲ್ಲಾ ಟೆಸ್ಟ್ ಮಾಡಿಸುವುದು ಸೂಕ್ತ ಎಂದು ಹೇಳುತ್ತಾಳೆ. ಗೌತಮ್ ಕೂಡ ಅದೇ ಸರಿ ಎಂದು ಹೇಳುತ್ತಾನೆ. ಶಕುಂತಲಾ ಅದೆಲ್ಲಾ ಬೇಡ ಎಂದು ಎಷ್ಟು ಹೇಳಿದರೂ ಗೌತಮ್ ಕೇಳುವುದಿಲ್ಲ. ಇನ್ನು ಗೌತಮ್ ತಾಯಿಗೆ ಹೀಗಾಯ್ತಲ್ಲ ಎಂದು ಬೇಸರ ಮಾಡಿಕೊಂಡಿರುತ್ತಾನೆ. ಆನಂದ್ ಗೂ ಕೂಡ ಗೌತಮ್ ವಿಚಾರವನ್ನು ತಿಳಿಸಿ, ಬೇಸರವನ್ನು ವ್ಯಕ್ತಪಡಿಸುತ್ತಾನೆ.

ಅಪೇಕ್ಷಾಳಿಗೆ ಭವಿಷ್ಯದ ಚಿಂತೆ
ಇತ್ತ ಅಪೇಕ್ಷಾಳಿಗೆ ಮದುವೆ ಮಾಡಬೇಕು ಎಂದು ಮಂದಾಕಿನಿ ಹುಡುಗನನ್ನು ನೋಡುತ್ತಿರುತ್ತಾಳೆ. ಒಬ್ಬ ಹುಡುಗನನ್ನು ನೋಡಿ ಅಪೇಕ್ಷಾಳ ಬಳಿ ಮದುವೆ ಬಗ್ಗೆ ಅಭಿಪ್ರಾಯವನ್ನು ಕೇಳುತ್ತಾಳೆ. ಅಪೇಕ್ಷಾ ಹುಡುಗಾ ಓದಿರಬೇಕು. ನೋಡುವುದಕ್ಕೆ ಚೆನ್ನಾಗಿರಬೇಕು ಎಂದ ಕೂಡಲೇ ಫೋಟೋ ತೋರಿಸುತ್ತಾಳೆ. ಮಹಿಮಾ ಮತ್ತು ಜೀವನ್ ಅದೇ ಸಮಯಕ್ಕೆ ಮನೆಗೆ ಬರುತ್ತಾರೆ. ಅವರಿಗೂ ಫೋಟೋ ತೋರಿಸಿ, ಇವತ್ತೇ ಜಾತಕ ಕೇಳುತ್ತೇನೆ. ಎಲ್ಲಾ ಕೂಡಿ ಬಂದರೆ ಮುಂದುವರೆಯೋಣ ಎಂದು ಹೇಳುತ್ತಾಳೆ. ಅಪ್ಪಿ ಪಾರ್ಥನನ್ನು ಭೇಟಿ ಮಾಡಿ ಮನೆಯಲ್ಲಿ ಮದುವೆಗೆ ಹುಡುಗನನ್ನು ನೋಡುತ್ತಿದ್ದಾರೆ. ಆದಷ್ಟು ಬೇಗ ಏನಾದರೂ ಮಾಡು ಎಂದು ಕೇಳಿಕೊಲ್ಳುತ್ತಾಳೆ. ಅಪೇಕ್ಷಾಳಿಗೆ ಎಲ್ಲಿ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿ ಬರುತ್ತದೋ ಎಂದು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾಳೆ.


Click it and Unblock the Notifications











