Amruthadhaare; ಅಮ್ಮನಿಗೆ ಭಿಕ್ಷೆ ಹಾಕಿದ ಗೌತಮ್, ಲಕ್ಷ್ಮೀಕಾಂತನಿಂದ ಜಸ್ಟ್ ಮಿಸ್ ಆದ ಭಾಗ್ಯ ಸಿಕ್ಕಿದ್ಯಾರಿಗೆ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾಳಿಗೆ ಭೂಮಿಕಾ ಮೇಲೆ ಮೊದಲು ಬೇಸರ ಶುರುವಾಯ್ತು. ಆದರೆ ಆ ಬೇಸರಕ್ಕೆ ಶಕುಂತಲಾ ತುಪ್ಪ ಸುರಿದಿದ್ದಾಳೆ.ಇದರಿಂದ ಈಗ ಅಪೇಕ್ಷಾಳಿಗೆ ಭೂಮಿಕಾ ಏನೇ ಮಾಡಿದರೂ ಅದು ತಪ್ಪಾಗಿಯೇ ಕಾಣಿಸುತ್ತದೆ. ಈಗ ಭೂಮಿಕಾ ಮನೆ ಕೆಲಸದವಳಾದ ಸುಧಾಳ ಜೊತೆಗೆ ಸಲುಗೆಯಿಂದ ಇದ್ದಾಳೆ. ಇದನ್ನು ಸಹಿಸದ ಅಪೇಕ್ಷಾ ಮನೆ ಕೆಲಸದವರನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು. ನೀನು ಮಾಡುತ್ತಿರುವುದು ಸ್ವಲ್ಪವೂ ಸರಿಯಿಲ್ಲ. ನಮಗಿರುವ ಸ್ಟೇಟಸ್ ಗಾದರೂ ಬೆಲೆ ಕೊಡು ಎಂದು ಬುದ್ಧಿ ಹೇಳಲು ಯತ್ನಿಸುತ್ತಾಳೆ.

ಅಪೇಕ್ಷಾಳ ಅಹಂಕಾರ ಕಡಿಮೆಯಾಗಲ್ವಾ..?

ಆದರೆ, ಭೂಮಿಕಾ ಅಪೇಕ್ಷಾಳ ತಪ್ಪನ್ನು ತಿದ್ದಲು ಮುಂದಾಗುತ್ತಾಳೆ. ನಮಗೆ ಸಿಕ್ಕಿರುವ ಈ ಸಿರಿವಂತಿಕೆ ಆಗಲೀ ಸ್ಟೇಟಸ್ ಆಗಲೀ ಯಾವುದೂ ಕಷ್ಟಪಟ್ಟು ಪಡೆದಿದ್ದಲ್ಲ. ಅದೃಷ್ಟದಿಂದ ಬಂದದ್ದು. ನಾವು ಇನ್ನೊಬ್ಬರನ್ನು ಕೀಳಾಗಿ ನೋಡುವುದು ಬಹಳ ತಪ್ಪು ಎಂದು ತಿದ್ದಿ ಹೇಳುತ್ತಾಳೆ. ಇದರಿಂದ ಅಪೇಕ್ಷಾಳಿಗೆ ಇನ್ನಷ್ಟು ಬೇಸರವಾಗುತ್ತದೆ. ಇದೇ ವಿಚಾರಕ್ಕೆ ಪಾರ್ಥನ ಜೊತೆಗೆ ಮತ್ತೆ ಕೋಪ ಮಾಡಿಕೊಳ್ಳುತ್ತಾಳೆ. ಪಾರ್ಥ ಅತ್ತಿಗೆ ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದು, ಅಪೇಕ್ಷಾಳಿಗೆ ಇಷ್ಟವಾಗುವುದಿಲ್ಲ. ಅಪೇಕ್ಷಾಳ ಮನಸ್ಥಿತಿ ಸರಿಯಾಗದೇ, ಪಾರ್ಥ ಮತ್ತು ತನ್ನ ನಡುವಿನ ಸಂಬಂಧ ಇನ್ನಷ್ಟು ಬಿರುಕು ಬೀಳುವುದು ಪಕ್ಕಾ. ಇದರ ಜೊತೆಗೆ ಅಪೇಕ್ಷಾ ತನ್ನ ತಪ್ಪು ಆಲೋಚನೆಗಳನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

Amruthadhaare Serial 28 November episode written update

ಅಮ್ಮನಿಗೆ ಭಿಕ್ಷೆ ಹಾಕಿದ ಗೌತಮ್

ಇತ್ತ ಭಾಗ್ಯ ಗೌತಮ್ ಕನಸಿನಲ್ಲಿ ಬಂದಿರುವುದು ಗೌತಮ್ ಗೆ ದುಃಖ ಬರುವಷ್ಟು ಅಳುತ್ತಾನೆ. ಇನ್ನು ಮನೆಯಲ್ಲಿ ಮೊಮ್ಮಗಳು ಮತ್ತು ಭಾಗ್ಯ ಇಬ್ಬರೇ ಇದ್ದು, ಬೆಳಗ್ಗೆ ಎದ್ದವಳೇ ಮಗ ಗುಂಡು ನೆನಪಿನಲ್ಲಿ ಮನೆಯಿಂದ ಹೊರಗೆ ಹೋಗಿದ್ದಾಳೆ. ತಾನು ಎಲ್ಲಿಗೆ ಹೋಗುತ್ತಿರುವೆ ಎಂಬುದು ತಿಳಿಯದೆಯೇ ರಸ್ತೆ ಮಧ್ಯೆ ಅಲೆಯುತ್ತಿದ್ದಾಳೆ. ಕೆಲವರು ಭಾಗ್ಯ ಭಿಕ್ಷುಕಿ ಎಂದು ತಿಳಿದು ಹಣ ನೀಡುತ್ತಿದ್ದಾರೆ. ಇದರ ನಡುವೆ ಗೌತಮ್ ಕಾರು ಕೂಡ ಅದೇ ರಸ್ತೆಯಲ್ಲಿ ಬಂದಿದೆ. ಗೌತಮ್ ಭಾಗ್ಯಳ ಮುಖವನ್ನು ನೋಡದೆಯೇ ಭಿಕ್ಷುಕರು ಇರಬೇಕು ಎಂದು ಹಣವನ್ನು ನೀಡಿದ್ದಾನೆ.


ಗಾಬರಿಯಾಗಿ ಮನೆಯಿಂದ ಹೋದ ಸುಧಾ

ಇನ್ನು ಸುಧಾಳ ಕೈ ಸುಟ್ಟಿರುವ ಕಾರಣ ಎರಡು ದಿನಗಳಿಂದ ಗೌತಮ್ ಮನೆಯಲ್ಲೇ ಉಳಿದುಕೊಂಡಿರುತ್ತಾಳೆ. ಅವರ ಮನೆಯ ಪಕ್ಕದ ಮನೆಯವರು ಫೋನ್ ಮಾಡಿ ನಿಮ್ಮ ತಾಯಿ ಮನೆಯಲ್ಲಿ ಕಾಣುತ್ತಿಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಗಾಬರಿಯಾದ ಸುಧಾ ಫೊನ್ ಅನ್ನು ಅಲ್ಲೇ ಬಿಟ್ಟು, ತನ್ನ ಮನೆಗೆ ಹೊರಟು ಹೋಗುತ್ತಾಳೆ. ಅಮ್ಮ ಮನೆಯಲ್ಲಿ ಕಾಣದ ಕಾರಣ, ಹುಡುಕುತ್ತಾ ರಸ್ತೆಯತ್ತ ಸಾಗುತ್ತಾಳೆ. ಅಚಾನಕ್ ಆಗಿ ಭಾಗ್ಯ ಅಲ್ಲೆ ಅಲೆದಾಡುತ್ತಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತಾಳೆ. ತನ್ನ ತಾಯಿ ಭಾಗ್ಯಳನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ.


ಜಸ್ಟ್ ಮಿಸ್ ಆದ ಭಾಗ್ಯ

ಇದ್ದಕ್ಕಿದ್ದ ಹಾಗೆಯೇ ಮನೆಯಿಂದ ಹೊರಟಿದ್ದಕ್ಕೆ ಸುಧಾ ಮೇಲೆ ಗೌತಮ್ ಅನುಮಾನ ವ್ಯಕ್ತಪಡಿಸಿದ್ದಾನೆ. ಇನ್ನು ಲಕ್ಷ್ಮೀಕಾಂತನ ಕಣ್ಣಿಗೆ ಭಾಗ್ಯ ಬಿದ್ದಿದ್ದು, ಅವಳನ್ನು ತಾನೇ ಕರೆದುಕೊಂಡು ಹೋಗಬೇಕು. ಭಾಗ್ಯ ಗೌತಮ್ ಕಣ್ಣಿಗೆ ಬೀಳದಂತೆ ಕಾಪಾಡಬೇಕು ಎಂದು ಭಾವಿಸುತ್ತಾನೆ. ಆದರೆ, ಭಾಗ್ಯ ಇನ್ನೇನು ಲಕ್ಷ್ಮೀಕಾಂತನ ಕೈಗೆ ಸಿಗಬೇಕು ಅಷ್ಟರಲ್ಲಿ ಜಸ್ಟ್ ಮಿಸ್ ಆಗಿದ್ದಾಳೆ. ಈಗ ಶಕುಂತಲಾ ಮತ್ತು ಲಕ್ಷ್ಮೀಕಾಂತನಿಗೆ ಭಾಗ್ಯ ಇಲ್ಲೇ ಸುತ್ತಾ-ಮುತ್ತ ಇದ್ದಾಳೆ ಎಂಬುದನ್ನು ತಿಳಿದಿದ್ದು, ಈಗ ಭಾಗ್ಯ ಯಾರಿಗೆ ಮೊದಲು ಸಿಗುತ್ತಾಳೆ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X