Amruthadhaare ; ಜೈದೇವ್ ಬಗ್ಗೆ ಸತ್ಯ ತಿಳಿದಿರುವ ಮಲ್ಲಿ ಮುಂದೇನು ಮಾಡಬಹುದು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪ್ರಾಣಾಪಾಯದಿಂದ ಪಾರಾಗಿ ಮನೆಗೆ ಬಂದಿದ್ದಾಗಿದೆ. ಶಕುಂತಲಾ, ಜೈದೇವ್ ಗೆ ಬೇಸರ ತಂದಿದ್ದರೂ ಕೂಡ ಉಳಿದರು ಮಲ್ಲಿಗೆ ಏನೂ ಆಗಿಲ್ಲ ಎಂಬ ಕಾರಣಕ್ಕೆ ಸಮಾಧಾನ ಪಟ್ಟುಕೊಂಡಿದ್ದಾರೆ. ಅಪೇಕ್ಷಾ ಮತ್ತು ಭೂಮಿಕಾ ಇಬ್ಬರೂ ಆರತಿ ಮಾಡಿ ಮಲ್ಲಿಯನ್ನು ಮನೆಯೊಳಗೆ ಕರೆದು ಕೊಂಡಿದ್ದಾರೆ. ಅಪೇಕ್ಷಾ ಮಲ್ಲಿ ಮನೆಗೆ ಬಂದ ಬಳಿಕವೂ ಒಮ್ಮೆಯೂ ಮಾತನಾಡಿಸಿಲ್ಲ. ತನ್ನ ಪಾಡಿಗೆ ತಾನು ರೂಮಿನಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದಾಳೆ. ಪಾರ್ಥ ಅತ್ತಿಗೆಯನ್ನು ಮಾತನಾಡಿಸಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಅಪೇಕ್ಷಾಳಿಗೆ ಇದು ಇಷ್ಟವಾಗುವುದಿಲ್ಲ.

ಭೂಮಿಕಾ ಬಳಿ ಕ್ಷಮೆ ಕೇಳಿದ ಮಲ್ಲಿ

ಭೂಮಿಕಾ ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದಾಳೆ. ದೇವರು ತನಗೇ ಯಾಕೆ ಈ ಶಿಕ್ಷೆಯನ್ನು ಕೊಟ್ಟರು ಎಂದು ಬೇಸರ ಮಾಡಿಕೊಂಡು ಅಳುತ್ತಿರುತ್ತಾಳೆ. ಜೈದೇವ್ ಕೊಟ್ಟು ಗೊಂವೆಯನ್ನು ಕೈಯಲ್ಲಿಡಿದುಕೊಂಡು ದುಃಖಿಸುತ್ತಿರುವ ಮಲ್ಲಿಯನ್ನು ಭೂಮಿಕಾ ನೋಡಿ ಬೇಸರ ಮಾಡಿಕೊಳ್ಳುತ್ತಾಳೆ. ಮಲ್ಲಿಗೆ ಕುಡಿಯಲು ಹಾಲು ಕೊಟ್ಟು ಸಮಾಧಾನ ಮಾಡುತ್ತಾಳೆ. ಮಲ್ಲಿ ನನ್ನನ್ನು ಕ್ಷಮಿಸಿ ಬಿಡಿ, ನಾನು ಆವತ್ತು ನಿಮ್ಮ ಜೊತೆಗೆ ಕೆಟ್ಟದಾಗಿ ನಡೆದುಕೊಂಡೆ ಎಂದು ಹೇಳಿದಾಗ ಭೂಮಿ, ನೀನು ನನ್ನ ತಂಗಿ ಅದೆಲ್ಲಾ ನನಗೆ ನೆನಪೇ ಇಲ್ಲ ಎಂದು ಹೇಳುತ್ತಾಳೆ. ನೀನು ಯಾಕೆ ಕಾರಿನಿಂದ ಇಳಿದೆ. ನೀನು ಕಾರಿನಲ್ಲೇ ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ. ನೀನು ಕಾರಿನಿಂದ ಇಳಿದಿದ್ದಕ್ಕೆ ಹೀಗೆಲ್ಲಾ ಆಯ್ತು ಎಂದು ಭೂಮಿಕಾ ಸಮಾಧಾನ ಮಾಡುತ್ತಿರುತ್ತಾಳೆ. ಆಗ ಜೈದೇವ್ ಬಂದು ಮಲ್ಲಿ ಏನೂ ಮಾತನಾಡದಂತೆ ನೋಡಿಕೊಳ್ಳುತ್ತಾನೆ.

Amruthadhaare Serial 28 September episode written update

ಬೇಸರ ಮಾಡಿಕೊಂಡಿರುವ ಗೌತಮ್-ಭೂಮಿಕಾ

ಭೂಮಿಕಾ ಮತ್ತು ಗೌತಮ್ ಇಬ್ಬರೇ ಇದ್ದಾಗ ಮಲ್ಲಿಯನ್ನು ನೆನೆದು ಬೇಸರ ಮಾಡಿಕೊಳ್ಳುತ್ತಾರೆ. ಮಲ್ಲಿಗೆ ಹೀಗಾಗಬಾರದಿತ್ತು. ಮಗು ಬದುಕುಳಿಯಬೇಕಿತ್ತು. ಮಲ್ಲಿಯನ್ನು ಹುಷಾರಾಗಿ ನೋಡಿಕೊಳ್ಳಬೇಕು. ಎಂದೆಲ್ಲಾ ಮಾತನಾಡುವಾಗ, ಭೂಮಿಕಾ ಈ ಮಗು ಮೇಲೆ ನೀವು ತುಂಬಾ ಆಸೆ ಇಟ್ಟುಕೊಂಡಿದ್ದೀರಿ. ನಿಮ್ಮ ತಂದೆಯೇ ಹುಟ್ಟಿ ಬರುತ್ತಾರೆ ಎಂದು ಅಂದುಕೊಂಡಿದ್ರಿ. ಈಗ ನಿಮಗೂ ನಿರಾಸೆಯಾಗಿದೆ ಎಂದು ಹೇಳುತ್ತಾಳೆ. ಅದಕ್ಕೆ ಗೌತಮ್ ಮುಂದೆಯೂ ಮಲ್ಲಿಗೆ ಮಗುವಾಗುತ್ತೆ. ಆಗ ನನ್ನ ತಂದೆ ಹುಟ್ಟಿ ಬರುತ್ತಾರೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆ.


ಮಲ್ಲಿಗೆ ಏನೂ ಗೊತ್ತಿಲ್ಲ ಎಂದುಕೊಂಡಿರುವ ಜೈ

ಇತ್ತ ಜೈದೇವ್ ಮಲ್ಲಿಗೆ ನಾನು ನೀರು ತರಲು ಹೋದಾಗ ನೀನು ಕೂಡ ಕಾರಿನಿಂದ ಇಳಿದು ಬಂದೆ ಆಗ ಅಪಾಘಾತವಾಯ್ತು ಅಂತ ಹೇಳಿದ್ದೇನೆ. ಇಲ್ಲದೇ ಹೋದರೆ ನಿನ್ನ ಒಬ್ಬಳನ್ನೇ ಊರಿಗೆ ಕಳಿಸುತ್ತಿದ್ದ ವಿಚಾರ ಗೊತ್ತಾಗುತ್ತೆ. ಹಾಗಾಗಿ ಈ ಸುಳ್ಳನ್ನು ಕಾಪಾಡು ಎಂದು ಮಲ್ಲಿ ಬಳಿ ಜೈದೇವ್ ಕೇಳಿಕೊಳ್ಳುತ್ತಾನೆ. ಮಲ್ಲಿ ಕೂಡ ಸರಿ ಎಂದು ಹೇಳಿದ್ದಕ್ಕೆ ಜೈದೇವ್ ಅವಳಿಗೆ ದಿಯಾ ಬಗ್ಗೆ ಗೊತ್ತಿಲ್ಲ ಎಂದು ಭಾವಿಸಿದ್ದಾನೆ. ದಿಯಾಳನ್ನು ಭೇಟಿ ಮಾಡಿ ಅವಳೊಂದಿಗೆ ಜಾಲಿಯಾಗಿ ಕಾಲ ಕಳೆಯುತ್ತಾನೆ. ಮಲ್ಲಿಗೆ ನಮ್ಮಿಬ್ಬರ ಬಗ್ಗೆ ಗೊತ್ತಾಗಿಲ್ಲ. ಹಾಗಾಗಿ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾನೆ. ಆದರೆ, ಮಲ್ಲಿಗೆ ಸತ್ಯ ಗೊತ್ತಿದ್ದು, ಅದನ್ನು ಭೂಮಿಕಾ ಬಳಿ ಹೇಳಲು ಪ್ರಯತ್ನಿಸುತ್ತಿದ್ದಾಳೆ.


ಗಂಡನಿಂದ ದೂರ ಉಳಿಯಲು ಮಲ್ಲಿ ಚಿಂತನೆ

ಇನ್ನು ಜೈದೇವ್ ಮತ್ತೆ ಮೊದಲಿನಂತೆಯೇ ಮಲ್ಲಿ ಜೊತೆಗೆ ನಡೆದುಕೊಳ್ಳುತ್ತಿದ್ದಾನೆ. ಮಲ್ಲಿಯನ್ನು ಮತ್ತಷ್ಟು ಬಕ್ರ ಮಾಡಬಹುದು ಎಂದು ಭಾವಿಸಿದ್ದಾನೆ. ಆದರೆ, ಮಲ್ಲಿಗೆ ಸತ್ಯ ಗೊತ್ತಿದ್ದು, ಜೈದೇವ್ ನಿಂದ ದೂರ ಉಳಿಯಲು ಪ್ರಯತ್ನಿಸುತ್ತಿದ್ದಾಳೆ. ಜೈದೇವ್ ಮತ್ತು ದಿಯಾ ಬಗ್ಗೆ ಮಲ್ಲಿ ಭೂಮಿಕಾ ಬಳಿ ಹೇಳಿದರೆ ಸರಿ ಇಲ್ಲದೇ ಹೋದರೆ ಜೈದೇವ್ ಮಲ್ಲಿ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X