Amruthadhaare: ಮನೆಯವರ ಹಿತಕ್ಕಾಗಿ ಭೂಮಿಕಾ ಹಾಗೂ ಗೌತಮ್ ಒಬ್ಬರನ್ನೊಬ್ಬರು ಭೇಟಿಯಾಗುತ್ತಾರಾ..?
ಭೂಮಿಕಾ ಮತ್ತು ಗೌತಮ್ ದಿವಾನ್ ಮೊದಲ ದಿನದಿಂದಲೂ ಕಿತ್ತಾಡಿಕೊಂಡೇ ಬಂದಿದ್ದಾರೆ. ಇಬ್ಬರ ನಡುವೆ ಸದಾ ಒಂದಲ್ಲ ಒಂದು ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡುತ್ತಿದೆ. ಎಲ್ಲಾ ವಿಚಾರಗಳಲ್ಲೂ ಒಬ್ಬರನ್ನೊಬ್ಬರು ಅಪಾರ್ಥ ಮಾಡಿಕೊಂಡ ಕಾರಣ ಇಬ್ಬರೂ ಜಗಳ ಮಾಡುತ್ತಾರೆ. ಆದರೆ ಈಗ ಶಕುಂತಲಾ ತನ್ನ ಪ್ಲ್ಯಾನ್ ಪ್ರಕಾರ ಇಬ್ಬರಿಗೂ ಮದುವೆ ಮಾಡಿಸಲು ಮುಂದಾಗಿದ್ದಾಳೆ.
ಆದರೆ, ಗೌತಮ್ ಹಾಗೂ ಭೂಮಿಕಾ ಇಬ್ಬರೂ ಒಬ್ಬರನ್ನೊಬ್ಬರು ಅನವಶ್ಯಕ ಕಾರಣಗಳೀಂದ ದ್ವೇಷಿಸುತ್ತಿದ್ದಾರೆ. ಇಬ್ಬರೂ ನಾವು ಮದುವೆಯಾಗಿ ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂದು ತೀರ್ಮಾನಿಸಿದ್ದಾರೆ. ಶಕುಂತಲಾ ಹೇಗಾದರೂ ಮಾಡಿ ಭೂಮಿಕಾಳನ್ನು ತಂದು ಗೌತಮ್‌ಗೆ ಗಂಟು ಹಾಕಬೇಕು. ಆಗ, ತನ್ನ ಆಸೆಗಳಿಗೆ ತೊಂದರೆ ಆಗುವುದಿಲ್ಲ. ಗೌತಮ್ ಕೂಡ ತನ್ನ ಕಂಟ್ರೋಲ್‌ನಲ್ಲೇ ಇರುತ್ತಾನೆ ಎಂದು ಆಲೋಚಿಸಿ ಈಗ ಗೌತಮ್ ಬಳಿ ಪುಸಿ ಹೊಡೆಯಲು ಹೋಗಿದ್ದಾಳೆ.

ಗೌತಮ್ ಭೂಮಿಕಾ ತನಗೆ ಈಗಾಗಲೇ ಸಾಕಷ್ಟು ಬಾರಿ ಅವಮಾನ ಮಾಡಿದ್ದು, ಇನ್ನು ಅವಳನ್ನು ಮದುವೆಯಾಗಬೇಕು ಎಂದು ಬಯಸಬೇಡಿ ಎಂದು ಹೇಳುತ್ತಾನೆ. ಆದರೆ, ಶಕುಂತಲಾ ಮಹಿಮಾ ಬಗ್ಗೆ ಯೋಚನೆ ಮಾಡು. ಭೂಮಿಕಾ ಮದುವೆಯಾಗದೇ, ಮಹಿಮಾ ಆ ಮನೆಗೆ ಹೋದರೆ ಅವಳು ಸಂತೋಷವಾಗಿ ಇರುವುದಿಲ್ಲ. ಅಷ್ಟೇ ಅಲ್ಲದೇ, ಮಹಿಮಾ ಸಂತೋಷಕ್ಕಾಗಿ ನೀನು ಇದೊಂದು ಕಾಂಪ್ರಮೈಸ್ ಮಾಡಿಕೊಳ್ಳಲು ಆಗುವುದಿಲ್ವಾ? ಎಂದು ಕಣ್ಣೀರು ಹಾಕುವ ನಾಟಕ ಮಾಡುತ್ತಾಳೆ.
ಭೂಮಿಕಾಳಿಗೆ ಬುದ್ಧಿ ಹೇಳಿದ ಮನೆಯವರು
ಇತ್ತ ಭೂಮಿಕಾಳಿಗೆ ಎಲ್ಲರೂ ಬುದ್ಧಿ ಹೇಳಲು ಶುರು ಮಾಡುತ್ತಾರೆ. ನಿಮ್ಮಬ್ಬರಿಗೂ ವಯಸ್ಸು ಮ್ಯಾಚ್ ಆಗುತ್ತದೆ. ಜೊತೆಗೆ ನಿನಗೆ ಎಲ್ಲಾ ರೀತಿಯಲ್ಲೂ ಗೌತಮ್ ಸರಿಯಾಗಿ ಸೂಟ್ ಆಗುತ್ತಾನೆ ಎಂದು ಹೇಳುತ್ತಾರೆ. ಜೀವನ್, ಮಂದಾಕಿನಿ ಈ ಮಾತುಗಳನ್ನು ಹೇಳಿದ್ದಕ್ಕೆ ಭೂಮಿಕಾ ಕೋಪ ಮಾಡಿಕೊಳ್ಳುತ್ತಾಳೆ.
ಸದಾಶಿವನಿಂದಲೂ ಮಗಳಿಗೆ ಹಿತವಚನ
ಸದಾಶಿವ, ಭೂಮಿಕಾಳಿಗೆ ಇವರೆಲ್ಲಾ ಹೇಳುತ್ತಿರುವುದು ಸರಿ ಇದೆ. ಗೌತಮ್ ಗುಣ ಬಹಳ ಮುಖ್ಯ. ಅವನೂ ಕೂಡ ನಿನ್ನ ಹಾಗೆಯೇ ಕುಟುಂಬಕ್ಕೋಸ್ಕರ ಏನು ಬೇಕಿದ್ದರೂ ಮಾಡುತ್ತಾನೆ. ಗೌತಮ್ ನಿನಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತಾನೆ. ಇಷ್ಟು ದಿನ ನಡೆದಿದ್ದೆಲ್ಲವನ್ನೂ ಮರೆತು ಯೋಚಿಸು ಎಂದು ಹೇಳುತ್ತಾನೆ. ಅಪೇಕ್ಷಾ ಕೂಡ ಇವರೆಲ್ಲಾ ಹೇಳುತ್ತಿರುವುದು ಸರಿಯಾಗಿದೆ ಅಕ್ಕ, ನೀನು ಟೈಮ್ ತೆಗೆದುಕೊಂಡು ಯೋಚಿಸು ಎಂದು ಹೇಳುತ್ತಾಳೆ.

ಮಹಿಮಾ ಹುಚ್ಚಾಟಕ್ಕೆ ಬೇಸತ್ತ ಜೀವನ್
ಗೌತಮ್, ಮಹಿಮಾ ಬಗ್ಗೆ ಯೋಚನೆ ಮಾಡಿ, ಈ ಮದುವೆ ಆಗಬೇಕು ಎಂದು ಯೋಚಿಸುವ ಬದಲು ಭೂಮಿಕಾಳನ್ನು ಭೇಟಿಯಾಗಿ ದೊಡ್ಡ ಜಗಳ ಮಾಡಬೇಕು. ಮತ್ಯಾವತ್ತೂ ಮುಖ ನೋಡದಂತೆ ದೂರಾಗಬೇಕು ಎಂದು ಅಂದುಕೊಳ್ಳುತ್ತಾನೆ. ಭೂಮಿಕಾ ಕೂಡ ಮನೆಯವರ ಒತ್ತಾಯಕ್ಕೆ ಗೌತಮ್‌ನನ್ನು ಒಂದು ಬಾರಿ ಭೇಟಿ ಮಾಡಲು ಒಪ್ಪುತ್ತಾಳೆ. ಇನ್ನು ಜೀವನ್ ಆಫಿಸಿನಲ್ಲಿರುವಾಗ ಪದೇ ಪದೇ ಕಾಲ್ ಮಾಡಿ ಮಹಿಮಾ ತೊಂದರೆ ಕೊಡುತ್ತಾಳೆ. ಇಬ್ಬರೂ ಆಚೆ ಸುತ್ತಲು ಹೋಗೋಣ ಬಾ ಎಂದು ಕರೆಯುತ್ತಾಳೆ. ಜೀವನ್ ಬರೋದಿಲ್ಲ ಎಂದಿದ್ದಕ್ಕೆ ಮಹಿಮಾ ಮತ್ತೆ ಕೋಪ ಮಾಡಿಕೊಳ್ಳುತ್ತಾಳೆ. ಈಗ ಜೀವನ್ ಮಹಿಮಾಳನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತಾನೋ ಗೊತ್ತಿಲ್ಲ.
ಭೇಟಿಯಾದ ಜೋಡಿ ಹಕ್ಕಿಗಳು
ಗೌತಮ್ ಕನಸಿನಲ್ಲಿ ಭೂಮಿಕಾ ಬಂದಿರುತ್ತಾಳೆ. ಈ ವಿಚಾರವನ್ನು ಗೆಳೆಯನ ಬಳಿ ಹೇಳಿಕೊಂಡು ಕೋಪದಿಂದ ಬಿಹೇವ್ ಮಾಡುತ್ತಾನೆ. ಆನಂದ್, ಗೌತಮ್ ಕನಸನ್ನು ಕೇಳಿ ಬಿದ್ದು ಬಿದ್ದು ನಗುತ್ತಿರುತ್ತಾನೆ. ಇತ್ತ ಅಪೇಕ್ಷಾ ಭೂಮಿಕಾ ಬಳಿ ಬಂದು ಕೋಪ ಮಾಡಿಕೊಂಡು ಎಲ್ಲರ ಆಸೆಗೆ ತಣ್ಣಿರು ಎರಚಬೇಡ. ಕೂಲ್ ಆಗಿ ಮಾತನಾಡಿ ಸಿಹಿ ಸುದ್ದಿ ಕೊಡು ಎಂದು ಹೇಳುತ್ತಾಳೆ. ಕೊನೆಗೆ ಗೌತಮ್ ಮತ್ತು ಭೂಮಿಕಾ ಹೋಟೆಲ್ ನಲ್ಲಿ ಭೇಟಿಯಾಗುತ್ತಾರೆ. ಆದರೆ, ಇಬ್ಬರು ಜಗಳ ಮಾಡುತ್ತಾರೋ ಇಲ್ಲ ಒಪ್ಪಂದದ ಮದುವೆ ಆಗುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications











