Amruthadhaare: ಸತ್ಯ ತಿಳಿದ ಜೈದೇವ ಭೂಮಿಕಾಳನ್ನು ಕೊಲೆ ಮಾಡುತ್ತಾನಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಂದಾಕಿನಿ, ಸದಾಶಿವನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಸಂಪ್ರದಾಯದ ಬಗ್ಗೆ ಮಹಿಮಾ ಮೇಲೆ ಹೆಚ್ಚು ಹೇರ ಬೇಡಿ. ಈಗಿನ ಕಾಲದ ಮಕ್ಕಳಿಗೆ ಅದೆಲ್ಲಾ ಅಷ್ಟು ಹಿಡಿಸೋದಿಲ್ಲ. ಸುಮ್ನೆ ಹಾಗೆಲ್ಲಾ ಮಾತನಾಡಬೇಡಿ ಎಂದು ಬುದ್ಧಿ ಹೇಳಿದರೆ ಸದಾಶಿವ, ಮಂದಾಕಿನಿ ಮೇಲೆ ಕೋಪ ಮಾಡಿಕೊಳ್ಳುತ್ತಾನೆ.

ಮಹಿಮಾ ಮತ್ತೆ ತಾಳಿಯನ್ನು ಬಿಚ್ಚಿಟ್ಟಿರುತ್ತಾಳೆ. ಇದನ್ನು ನೋಡಿದ ಜೀವನ್ ಜಗಳ ಮಾಡುತ್ತಾನೆ. ಮಹಿಮಾ ಅದು ನನಗೆ ಇರಿಟೇಟ್ ಮಾಡುತ್ತೆ. ಮಾವನ ಥರ ನೀನು ಕೂಡ ಸಂಪ್ರದಾಯ ಅಂತ ತಲೆ ತಿನ್ನಬೇಡ ಎನ್ನುತ್ತಾಳೆ.

ಭುಮಿಕಾ ಜೊತೆಗೆ ಗೌತಮ್ ಹನಿಮೂನ್ ವಿಚಾರಕ್ಕೆ ಜಗಳ ಮಾಡಿಕೊಂಡಿರುತ್ತಾನೆ. ಇಬ್ಬರನ್ನು ಒಂದು ಮಾಡಲು ಆನಂದ್ ಮತ್ತು ಪಾರ್ಥ ಒಂದೊಳ್ಳೆ ಐಡಿಯಾ ನೀಡಿರುತ್ತಾರೆ. ಅದರಂತೆ ಗೌತಮ್, ಭುಮಿಕಾಳನ್ನು ಕ್ಷಮೆ ಕೇಳುವ ವೀಡಿಯೋ ಅನ್ನು ರೆಕಾರ್ಡ್ ಮಾಡುತ್ತಾನೆ. ಅದನ್ನ ಟಿವಿಯಲ್ಲಿ ಪ್ಲೇ ಮಾಡಲು ಭೂಮಿಕಾಳನ್ನು ಕರೆದುಕೊಂಡು ಬರುತ್ತಾರೆ.

Amruthadhaare-kannada-serial

ಭೂಮಿಕಾಳನ್ನು ಕ್ಷಮೆ ಕೇಳಿದ ಗೌತಮ್

ಗೌತಮ್ ವೀಡಿಯೋ ಪ್ಲೇ ಮಾಡಿ ಮೆತ್ತಗೆ ಓಡಿ ಹೋಗುತ್ತಾನೆ. ಗೌತಮ್, ಭೂಮಿಕಾಳನ್ನು ತಾನು ಕೋಪ ಮಾಡಿಕೊಂಡಿದ್ದಕ್ಕೆ ಬಹಳ ಮುದ್ದಾಗಿ ಕ್ಷಮೆ ಕೇಳಿರುತ್ತಾನೆ. ನಿಮ್ಮಿಂದಲೇ ನನ್ನ ಆನಂದ್ ಸ್ನೇಹ ಉಳಿದಿದೆ. ಜೈದೇವ ಮಾಡಿದ ತಪ್ಪು ನನಗೆ ಗೊತ್ತಾಗಿದ್ದೇ ನಿಮ್ಮಿಂದ ಎಂದು ಹೇಳಿರುತ್ತಾನೆ. ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಹೇಳಿರುತ್ತಾನೆ.

ಗೌತಮ್ ಮೇಲೆ ಕೋಪಗೊಂಡಿರುವ ಜೈ

ಜೈದೇವನಿಗೆ ಗೌತಮ್ ತನ್ನ ಕೆನ್ನೆಗೆ ಹೊಡೆದು ಅವಮಾನಿಸಿದ್ದಲ್ಲದೇ, ಆಫಿಸಿಗೆ ಬರದಂತೆ ಮಾಡಿದ. ನನ್ನ ಆಸೆ, ಕನಸುಗಳಿಗೆ ಅಡ್ಡಿಯಾದ ಎಂದು ಕೋಪ ಮಾಡಿಕೊಂಡಿರುತ್ತಾನೆ. ಹಗಲು-ರಾತ್ರಿ ಇದೇ ಬೇಸರದಲ್ಲಿ ಕುಡಿದು.. ಕುಡಿದು ತನ್ನ ರೋಷವನ್ನು ಹೆಚ್ಚಿಸಿಕೊಂಡಿರುತ್ತಾನೆ. ಕುಡಿದ ಮತ್ತಿನಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಜೈದೇವ ಒಂದೆರಡು ದಿನಗಳ ಕಾಲ ಮನೆಗೆ ಬಂದಿರಲಿಲ್ಲ. ಲಕ್ಷ್ಮೀಕಾಂತ, ಅಳಿಯನನ್ನು ಬೈಯುತ್ತಿರುತ್ತಾನೆ. ಹೀಗೆಲ್ಲಾ ಮಾಡಿದರೆ ನಿಮ್ಮ ತಾಯಿಗೂ ಆತಂಕ ಆಗುತ್ತದೆ. ಆಗಿದ್ದನ್ನು ಮರೆತು ಬಿಡು. ಮುಂದೆ ಏನಾಗಬೇಕು ಎಂಬುದನ್ನು ನೋಡು ಅಂತ ಸಮಾಧಾನ ಮಾಡುತ್ತಿರುತ್ತಾನೆ.

Amruthadhaare-kannada-serial

ಸತ್ಯ ತಿಳಿದ ಜೈದೇವ

ಜೈದೇವ ಇಲ್ಲ ಮಾವ, ನಾನು ಗೌತಮ್‌ನನ್ನು ಸುಮ್ಮನೆ ಬಿಡುವುದಿಲ್ಲ. ಅವನನ್ನು ಕೊಂದು ಬಿಡುತ್ತೇನೆ ಎಂದು ಚಾಕು ತೆಗೆದುಕೊಂಡು ಹೋಗುತ್ತಾನೆ. ಗೌತಮ್ ಅನ್ನು ಕೊಲೆ ಮಾಡಲೇಬೇಕು ಎಂಬಷ್ಟು ಕೋಪದಲ್ಲಿರುತ್ತಾನೆ. ಇದೇ ವೇಳೆಗೆ ಗೌತಮ್ ವೀಡಿಯೋದಲ್ಲಿ ಮಾತನಾಡಿದ ಮಾತುಗಳನ್ನು ಜೈದೇವ ಕೇಳಿಸಿಕೊಳ್ಳುತ್ತಾನೆ. ತಾನು ಸಿಕ್ಕಿ ಬೀಳಲು ಭೂಮಿಕಾ ಕಾರಣ ಎಂಬ ಸತ್ಯ ಗೊತ್ತಾಗುತ್ತದೆ. ಅಲ್ಲದೇ, ಆನಂದ್ ಮತ್ತೆ ಮನೆಗೆ ಬರುವಂತೆ ಮಾಡಿದ್ದು, ತನ್ನ ವಿರುದ್ಧ ಗೌತಮ್ ಕಠಿಣ ನಿರ್ಧಾರ ಕೈಗೊಳ್ಳಲು ಭೂಮಿಕಾ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಜೈ ದೇವನಿಗೆ ಭೂಮಿಕಾ ಮೇಲೆ ಕೋಪ ಹೆಚ್ಚಾಗುತ್ತದೆ.

ಗೌತಮ್-ಭೂಮಿಕಾ ಸ್ನೇಹಿತರು

ಜೈಯದೇವ ಈ ವಿಚಾರವನ್ನು ಲಕ್ಷ್ಮೀಕಾಂತನ ಬಳಿ ಹೇಳುತ್ತಾನೆ. ಭೂಮಿಕಾಳನ್ನು ಸುಮ್ಮನೆ ಬಿಡಬಾರದು ಎಂದು ಜೈದೇವ ಹಾಗೂ ಲಕ್ಷ್ಮೀಕಾಂತ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಇತ್ತ ಭೂಮಿಕಾ ವೀಡಿಯೋ ನೋಡಿದ ಮೇಲೆ ಗೌತಮ್ ಅನ್ನು ಭೇಟಿಯಾಗಿ ಮಾತನಾಡುತ್ತಾಳೆ. ಇಬ್ಬರೂ ಸದ್ಯಕ್ಕೆ ನಾವಿಬ್ಬರೂ ಫ್ರೆಂಡ್ಸ್ ಆಗಿರೋಣ ಎನ್ನುತ್ತಾಳೆ. ಹನಿಮೂನ್ ವಿಚಾರದಲ್ಲಿ ನಾವಿಬ್ಬರೂ ಸಂಕಷ್ಟದಲ್ಲಿದ್ದು, ಇದಕ್ಕೆ ನಾವಿಬ್ಬರೇ ಸೇರಿ ಪರಿಹಾರ ಹುಡುಕೋಣ ಎನ್ನುತ್ತಾಳೆ. ಇದಕ್ಕೆ ಗೌತಮ್ ಕೂಡ ಓಕೆ ಎನ್ನುತ್ತಾನೆ.

More from Filmibeat

English summary
Amruthadhaare Serial today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X