Amruthadhaare ; ತಂಗಿ ಮತ್ತು ತಮ್ಮನಿಗೆ ಬುದ್ಧಿ ಕಲಿಸಲು ಗೌತಮ್ ಹಾಗೂ ಭೂಮಿಕಾ ಹೊಸ ಪ್ಲಾನ್..!
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಈಗ ಮೊದಲಿನಂತಿಲ್ಲ. ರಾಜೇಂದ್ರ ಭೂಪತಿಯ ಸಹವಾಸ ಮಾಡಿ ರಾತ್ರೋರಾತ್ರಿ ಶ್ರೀಮಂತಿಕೆಯಲ್ಲಿ ತೇಲಾಡುತ್ತಿದ್ದಾನೆ. ರಾಜೇಂದ್ರ ಭೂಪತಿ ಜೊತೆಗೆ ಕೈ ಜೋಡಿಸಿರುವ ಜೀವನ್ ಕೋಟಿಗಟ್ಟಲೆ ಬೆಲೆ ಬಾಳುವ ಮನೆಯನ್ನು ಸಾಲವಿಲ್ಲದೇ ಮನೆಷಷ ಕಟ್ಟಿದ್ದು, ಈಗ ಅವನಿಗೆ ಸಿರಿವಂತಿಕೆ ಜೊತೆಗೆ ಅಹಂಕಾರವೂ ಬಂದಿದೆ. ಮನೆಯ ಗೃಹಪ್ರವೇಶದ ದಿನವೇ ಜೀವನ್ ನಡವಳಿಕೆಯನ್ನು ಕಂಡು ಭೂಮಿಕಾ ಮನೆಯವರು ಆಶ್ಚರ್ಯ ಪಟ್ಟಿದ್ದರು. ಅಲ್ಲದೇ, ಜೀವನಲ್ಲಿ ಆಗಿರುವ ಬದಲಾವಣೆ ಮಹಿಮಾಳೀಗೂ ಬೇಸರ ತಂದಿದೆ.
ಮನೆಗೆ ಬಂದ ಮಹಿಮಾ
ಜೀವನ್ ತಾನು ಸಂಪಾದಿಸಿದ ಹಣ ಇದೆ. ನಾನು ಕಷ್ಟಪಟ್ಟು ದುಡಿದಿದ್ದೇನೆ ಎಂಬ ಅಹಂನಲ್ಲಿದ್ದು, ಮಹಿಮಾ ಜೊತೆಗೆ ಜಗಳ ಮಾಡಿದ್ದಾನೆ. ಇದೆಲ್ಲಾ ನನ್ನ ಹಣ. ನೀನು ಮನೆಯಲ್ಲಿ ಕೂತು ನನ್ನ ಸಂಪಾದನೆಯಲ್ಲಿ ಬದುಕುತ್ತಿದ್ದೀಯಾ ಎಂದು ಹೇಳಿದ್ದಾನೆ. ಮಹಿಮಾಳೀಗೆ ಜೀವನ್ ಮಾತುಗಳು ನೋವು ತಂದಿದೆ. ಹೀಗಾಗಿ ಬೇಸರ ಮಾಡಿಕೊಂಡ ಮಹಿಮಾ ಲಗೇಜ್ ಸಮೇತಾ ತನ್ನ ತವರು ಮನೆಗೆ ಬಂದಿದ್ದಾಳೆ. ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಸದಾಶಿವ ಮತ್ತು ಮಂದಾಕಿನಿ ಬೇಸರ ಮಾಡಿಕೊಂಡಿದ್ದಾರೆ. ಜೀವನ್ ಬಳಿ ಮಾತನಾಡಿ ಗಂಡ-ಹೆಂಡತಿಯನ್ನು ಒಂದು ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಜೀವನ್ ಅಹಂಕಾರದಲ್ಲೇ ಉತ್ತರಿಸಿದ್ದು, ಸದಾಶಿವ ಮತ್ತು ಮಂದಾಕಿನಿ ಬೇಸರ ಮಾಡಿಕೊಂಡಿದ್ದಾರೆ.

ಮಹಿಮಾ ಜೀವನ್ ಗೆ ಬುದ್ಧಿ ಕಲಿಸಲು ಪ್ಲಾನ್
ಮಹಿಮಾ ಇದ್ದಕ್ಕಿದ್ದ ಹಾಗೆ ಮನೆಗೆ ಲಗೇಜ್ ಸಮೇತ ಬಂದಿದ್ದನ್ನು ಕಂಡ ಗೌತಮ್ ಮತ್ತು ಭೂಮಿಕಾ ಮನದಲ್ಲಿ ಅನುಮಾನ ಮೂಡಿಸಿದೆ. ಇಬ್ಬರೂ ಜಗಳ ಮಾಡಿಕೊಂಡಿರಬೇಕು ಎಂದು ಗೆಸ್ ಮಾಡಿದ್ದಾರೆ. ಗೌತಮ್ ಮಹಿಮಾಳನ್ನು ನಿಧಾನವಾಗಿ ವಿಚಾರಿಸಿದಾಗ ಮಹಿಮಅ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಜೀವನ್ ನನಗೆ ಬೇಸರ ಮಾಡಿದ್ದಾನೆ. ನಾನು ಅವನನ್ನು ಎಷ್ಟು ಪ್ರೀತಿಸುತ್ತೇನೆ. ಈಗ ಜೀವನ್ ಮೊದಲಿನಂತಿಲ್ಲ ಎಂದು ಹೇಳುತ್ತಾಳೆ. ಅಲ್ಲದೇ ನಾನು ಇನ್ಯಾವತ್ತು ಆ ಮನೆಗೆ ಹೋಗುವುದಿಲ್ಲ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಭೂಮಿಕಾ ಮತ್ತು ಗೌತಮ್ ಹೊಸ ಪ್ಲಾನ್ ಮಾಡುತ್ತಾರೆ. ಮಹಿಮಾ ಮತ್ತು ಜೀವನ್ ಗೆ ಬುದ್ಧಿ ಕಲಿಸಲು ಆಲೋಚಿಸಿದ್ದಾರೆ.
ತವರು ಮನೆಗೆ ಹೊರಟ ಭೂಮಿಕಾ
ಗೌತಮ್ ಮತ್ತು ಭೂಮಿಕಾ ಬೇಕಂತಲೇ ಜೀವನ್ ಹಾಗೂ ಮಹಿಮಾ ವಿಚಾರಕ್ಕೆ ಜೋರು ಜೋರಾಗಿ ಮಾತನಾಡುತ್ತಾರೆ. ಆಗ ಗೌತಮ್ ಭೂಮಿಕಾಳಿಗೆ ನೋವಾಗುವಂತೆ ಮಾತನಾಡಿದ್ದು, ಭೂಮಿಕಾ ಸೂಟ್ ಕೇಸ್ ಅನ್ನು ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರಡುತ್ತಾಳೆ. ಇದನ್ನು ಮಹಿಮಕಾ ನೋಡುತ್ತಾಳೆ. ಮಧ್ಯರಾತ್ರಿ ತವರು ಮನೆಗೆ ಹೋಗುವ ಭೂಮಿಕಾ ಜೀವನ್ ಗೆ ಫೋನ್ ಮಾಡುತ್ತಾಳೆ. ಇಷ್ಟು ರಾತ್ರಿಯಲ್ಲಿ ಯಾಕೆ ಬಂದಿದ್ದು ಎಂದು ಕೇಳಿದ್ದಕ್ಕೆ ಎಲ್ಲವೂ ನಿನ್ನಿಂದಲೇ ಎಂದು ಹೇಳುತ್ತಾನೆ. ಈಗ ಜೀವನ್ ಮತ್ತು ಮಹಿಮಾ ಮನದಲ್ಲಿ ತಮ್ಮಿಂದ ಭೂಮಿಕಾ ಹಾಗೂ ಗೌತಮ್ ಸಂಸಾರಕ್ಕೆ ಸಮಸ್ಯೆ ಆಗಿದೆ ಎಂಬುದನ್ನು ಅರ್ಥ ಮಾಡಿಸಿದೆ.
ಭೂಮಿಕಾ ಕಾಟವಿಲ್ಲ ಎಂದು ಶಕುಂತಲಾಗೆ ಖುಷಿ
ಇತ್ತ ಭೂಮಿಕಾ ತವರು ಮನೆಗೆ ಹೋಗಿರುವುದಕ್ಕೆ ಶಕುಂತಲಾ, ಲಕ್ಷ್ಮೀಕಾಂತ ಮತ್ತು ಜೈದೇವ್ ಖುಷಿ ಪಟ್ಟಿದ್ದಾರೆ. ಭೂಮಿಕಾ ಮನೆಯಲ್ಲಿದ್ದರೆ ಒಂದು ರೀತಿಯಲ್ಲಿ ಹಿಂಸೆಯಾಗುತ್ತಿತ್ತು ಎಂದು ಮಾತನಾಡಿಕೊಂಡಿದ್ದಾರೆ.ಈಗ ಮಹಿಮಾ ಮತ್ತು ಜೀವನ್ ತಮ್ಮ ತಪ್ಪನ್ನು ಅರಿತು ಸರಿ ಮಾಡುಕೊಳ್ಳುತ್ತಾರಾ..? ಇಲ್ಲವೇ ಇನ್ನಷ್ಟು ಸಮಯ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ. ಇನ್ನು ಮಲ್ಲಿ ಮತ್ತು ಜೈದೇವ್ ಸಂಸಾರದ ಗುಟ್ಟು ಯಾವಾಗ ರಟ್ಟಾಗುತ್ತದೋ..? ಜೈದೇವ್ ಬಣ್ಣ ಬಯಲಾದರೆ ಈ ಸಲ ಯಾವ ರೀತಿಯ ಶಿಕ್ಷೆ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











