Amruthadhaare ; ಅತ್ತೆಗೆ ಮಾತಿನೇಟು, ಜೈದೇವ್ ವ್ಯವಹಾರಕ್ಕೆ ಭೂಮಿಕಾ ಬ್ರೇಕು..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ರೂಮಿನಲ್ಲಿ ಒಬ್ಬಳೇ ಕಣ್ಣಿರು ಹಾಕುತ್ತಿರುವುದನ್ನು ಅಶ್ವಿನಿ ಮತ್ತು ಶಕುಂತಲಾ ನೋಡಿದ್ದಾರೆ. ಭೂಮಿಕಾಳ ದುಃಖವನ್ನು ಕಂಡು ಅಮ್ಮ-ಮಗಳು ಇಬ್ಬರೂ ಖುಷಿಪಟ್ಟಿದ್ದಾರೆ. ಅಶ್ವಿನಿ ಹೇಗಿತ್ತು ನನ್ನ ನಾಟಕ ಎಂದು ತನ್ನನ್ನು ತಾನೇ ಹೆಮ್ಮೆ ಪಡುವಂತೆ ಕೊಚ್ಚಿಕೊಂಡಿದ್ದಾಳೆ.ಶಕುಂತಲಾ ತಮ್ಮ ರೂಮಿಗೆ ಹೋಗಿ ಅಶ್ವಿನಿ ಜೊತೆಗೆ ಮಾತನಾಡುತ್ತಿರುತ್ತಾಳೆ. ಇನ್ಮುಂದೆ ಎಲ್ಲವೂ ನಾವು ಹೇಳಿದ್ದೇ ನಡೆಯುವುದು. ಭೂಮಿಕಾದ್ದೇನು ನಡೆಯುವುದಿಲ್ಲ ಎಂದು ಹೇಳುತ್ತಿರುತ್ತಾಳೆ.
ಇದೇ ಸಮಯಕ್ಕೆ ಶಕುಂತಲಾ ರೂಮಿಗೆ ಭೂಮಿಕಾ ಕಣ್ಣಿರು ಹಾಕುತ್ತಾ ಬರುತ್ತಾಳೆ. ಅತ್ತೆ ನನಗೆ ತುಂಬಾ ಬೇಜಾರು ಆಯ್ತು. ಹೀಗೆಲ್ಲಾ ಆಗುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ ಎಂದು ಹೇಳುತ್ತಾಳೆ. ಶಕುಂತಲಾ ಸಿಕ್ಕಿದ್ದೇ ಚಾನ್ಸ್ ಎನ್ನುತ್ತಾ ಭೂಮಿಕಾಳಿಗೆ ಬುದ್ಧಿ ಹೇಳಲು ಮುಂದಾಗುತ್ತಾಳೆ. ನೋಡು ಭೂಮಿಕಾ ಈ ಮನೆಯಲ್ಲಿ ಹೀಗೆ ನಡೆಯುವುದು. ಅದನ್ನೇ ನಾನು ಮೊದಲು ಹೇಳಿದ್ದು. ನಾನು ಹೇಳಿದ್ದನ್ನು ಕೇಳಿದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಹೇಳುತ್ತಾಳೆ. ಆಗ ಭೂಮಿಕಾ ನನಗೆ ಬೇಜಾರು ಆಗಿದ್ದು ಗೌತಮ್ ಬೈದಿದ್ದಕ್ಕಲ್ಲ ಅತ್ತೆ. ನೀವಿಬ್ಬರೂ ರೂಮಿನ ಬಳಿ ಬಂದು ನಾನು ಅಳುತ್ತಿರುವುದನ್ನು ನೋಡಿದ್ದಕ್ಕೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಶಕುಂತಲಾಳಿಗೂ ಅಶ್ವಿನಿಗೂ ಶಾಕ್ ಆಗುತ್ತದೆ.

ಶಕುಂತಲಾಳಿಗೆ ವಾರ್ನಿಂಗ್ ಕೊಟ್ಟ ಸೊಸೆ
ಆಗ ಭೂಮಿಕಾ ನೀವು ನನ್ನ ರೂಮಿನ ಬಳಿ ಬಂದಿದ್ದು, ನಾನು ಅಳುತ್ತಿರುವುದನ್ನು ನೋಡಿ ನೀವು ಸಂಭ್ರಮಿಸಿದ್ದು ನನಗೆ ಗೊತ್ತಿದೆ. ನಿಮಗೆ ಖುಷಿಯಾಗುತ್ತೆ ಎಂದರೆ ಖಂಡಿತವಾಗಿಯೂ ಅಳುತ್ತೇನೆ. ಆದರೆ ಎಚ್ಚರವಾಗಿರಿ. ನಾವು ಮಿಡಲ್ ಕ್ಲಾಸ್ ನವರು ಕ್ಲಾಸ್ ಗೂ ಸರಿ ಮಾಸ್ ಗೂ ಸರಿ. ಹಾಗಾಗಿ ನನ್ನ ಬಗ್ಗೆ ಸ್ವಲ್ಪ ಎಚ್ಚರವಾಗಿರಿ ಎಂದು ಹೇಳುತ್ತಾಳೆ. ಅಲ್ಲದೇ ತಾನು ಕಣ್ಣೀರು ಹಾಕಿದ್ದು ಗ್ಲಿಸರಿನ್ ಬಳಸಿಯೇ ಹೊರತು ನಿಜವಾಗಿಯೂ ಅಳಲಿಲ್ಲ ಎಂದು ತೋರಿಸುತ್ತಾಳೆ. ಇದು ಅಶ್ವಿನಿ ಮತ್ತು ಶಕುಂತಲಾಳನ್ನು ಶಾಕ್ ಆಗುವಂತೆ ಮಾಡುತ್ತದೆ.
ಭೂಮಿಕಾಳಿಗೆ ಅಜ್ಜಿ ಸಪೋರ್ಟ್
ಇನ್ನು ಅಜ್ಜಿ ಭೂಮಿಕಾ ರೂಮಿಗೆ ಬರುತ್ತಾರೆ. ಗೌತಮ್ ಎಲ್ಲರ ಎದುರು ನಿನ್ನನ್ನು ಬೈದಿದ್ದು ತಪ್ಪು. ಆದರೆ, ಅವನು ಮುಂಗೋಪಿ. ನೀನು ಅವನ ಮಾತಿಗೆ ಬೇಸರ ಮಾಡಿಕೊಳ್ಳಬೇಡ. ಭೂಮಿಕಾ ನಿನ್ನ ಕೈಯಲ್ಲಿ ಈ ಮನೆಯನ್ನು ನಿಭಾಯಿಸಲು ಸಾಧ್ಯವಿದೆ ಎಂಬುದು ಗೊತ್ತಿರುವುದಕ್ಕೇ ನಾನು ನಿನ್ನ ಕೈಗೆ ಜವಾಬ್ದಾರಿಯನ್ನು ಕೊಟ್ಟಿದ್ದು ಎಂದು ಹೇಳುತ್ತಾರೆ. ಅಲ್ಲದೇ, ಭೂಮಿಕಾಳಿಗೆ ಕಿವಿ ಮಾತನ್ನೂ ಹೇಳುತ್ತಾರೆ. ಈ ಮನೆಯಲ್ಲಿ ಎಲ್ಲರೂ ಕೂತು ತಿಂದು ಅಹಂಕಾರ ಬೆಳೆಸಿಕೊಂಡಿದ್ದಾರೆ. ದುಡ್ಡಿನಿಂದ ಸೊಕ್ಕು ಬೆಳೆಸಿಕೊಂಡಿದ್ದು, ಈಗ ಅವರಿಗೆ ಬ್ರೇಕ್ ಹಾಕಬೇಕಿದೆ. ಅದಕ್ಕೆ ನೀನೇ ಸರಿ. ಗೌತಮ್ ಏನಾದರೂ ಹೇಳಿದರೆ ನಿನ್ನ ಜೊತೆಗೆ ನಾನಿದ್ದೀನಿ ಎಂದು ಹೇಳುತ್ತಾರೆ. ಅಜ್ಜಿ ಮಾತಿಗೆ ಭೂಮಿಕಾ ಕೂಡ ಒಪ್ಪಿಕೊಳ್ಳುತ್ತಾಳೆ.

ಎಲ್ಲಾ ವ್ಯವಹಾರಕ್ಕೂ ಬ್ರೇಕ್ ಹಾಕಿದ ಅತ್ತಿಗೆ
ಆಗ ಭೂಮಿಕಾ ಬೇಕಂತಲೇ ಆನಂದ್ ಗೆ ಫೋನ್ ಮಾಡುತ್ತಾಳೆ. ಆನಂದ್ ಅತ್ತಿಗೆಗೆ ಬೇಸರ ಆಗಿ ಫೋನ್ ಮಾಡಿದ್ದಾರೆ ಎಂದು ಟೆಂಷನ್ ಮಾಡಿಕೊಳ್ಳುತ್ತಾನೆ. ಆದರೆ ಭೂಮಿಕಾ ಎಲ್ಲರ ಕಾರ್ಡ್ ಗಳನ್ನೂ ಬ್ಲಾಕ್ ಮಾಡಲು ಹೇಳುತ್ತಾಳೆ. ನಾನಿದ್ದೀನಿ ನೀವು ಹೆದರಬೇಡಿ ಎಂದು ಹೇಳುತ್ತಾಳೆ. ಆನಂದ್ ಎಲ್ಲರ ಅಕೌಂಟ್ ಟ್ರ್ಯಾನ್ಸ್ಯಾಕ್ಷನ್ ಗಳನ್ನು ಬ್ಲಾಕ್ ಮಾಡಿ ಬಿಡುತ್ತಾನೆ.
ಎಲ್ಲರನ್ನು ಸೆಳೆದ ಮಲ್ಲಿ ನಡವಳಿಕೆ
ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಿರುವ ಜೈದೇವ್ ಗೆ ಮಲ್ಲಿ ಟಕ್ಕರ್ ಕೊಡುತ್ತಾಳೆ. ಕರೆಂಟ್ ಹೋದಾಗ ಮಲ್ಲಿ ತುಂತುರು ಅಲ್ಲಿ ನೀರ ಹಾಡು ಎಂದು ಹಾಡಿ ಎಲ್ಲರನ್ನು ರಂಜಿಸುತ್ತಾಳೆ. ಜೈದೇವ್ ಬಿಲ್ ಕಟ್ಟಲು ಯತ್ನಿಸಿದಾಗ ಕಾರ್ಡ್ ಗಳು ವರ್ಕ್ ಆಗುವುದಿಲ್ಲ. ಆಗ ಮಲ್ಲಿ 67 ಸಾವಿರ ಹಣವನ್ನು ಕ್ಯಾಶ್ ಮೂಲಕ ನೀಡುತ್ತಾಳೆ. ಇದರಿಂದ ಮಲ್ಲಿ ಹೈ ಲೈಟ್ ಆಗುತ್ತಾಳೆ. ಇದು ಜೈದೇವ್ ಗೆ ಹರ್ಟ್ ಆಗುವಂತೆ ಮಾಡುತ್ತದೆ.


Click it and Unblock the Notifications











