Amruthadhaare ; ಜೈದೇವನ್ನು ಪ್ರಶ್ನಿಸಿದ ಭೂಮಿಕಾಳಿಗೆ ಇನ್ನೂ ನಂಬಿಕೆ ಬಂದಿಲ್ಲ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ತಮ್ಮ ಹನಿಮೂನ್‌ನ ಅರ್ಧಕ್ಕೆ ಮೊಟಕುಗೊಳಿಸಿ ಬಂದಿರುವ ಭೂಮಿಕಾ ಮತ್ತು ಗೌತಮ್ ಇಬ್ಬರಿಗೂ ಬೇಸರವಿದೆ. ಆದರೆ, ಭೂಮಿಕಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾಳೆ. ಶಕುಂತಲಾ ಬೇಕಂತಲೇ ಹೀಗೆಲ್ಲಾ ಮಾಡುತ್ತಿದ್ದಾಳೆ ಎಂಬ ಸತ್ಯ ಗೊತ್ತಿದ್ದರೂ ಕೂಡ ಭೂಮಿಕಾ ಏನೂ ಮಾಡಲಾಗುತ್ತಿಲ್ಲ. ಆದರೆ, ಭೂಮಿಕಾ ಮತ್ತು ಗೌತಮ್ ಸಂಬಂಧ ದಿನ ದಿನಕ್ಕೂ ಸುಧಾರಿಸುತ್ತಿದೆ. ಇಬ್ಬರೂ ಒಬ್ಬರನ್ನಿಬ್ಬರು ಅರ್ಥ ಮಾಡಿಕೊಂಡು ಮುಂದೆ ಸಾಗುತ್ತಿದ್ದಾರೆ.

ಗೌತಮ್ ಗೆ ಭೂಮಿಕಾ ಸಮಾಧಾನ

ಭೂಮಿಕಾಳನ್ನು ಚಿಕ್ಕಮಗಳೂರಿನಲ್ಲಿ ಸುತ್ತಾಡಿಸಿಕೊಂಡು, ಹಾಯಾಗಿ ಕೆಲ ದಿನಗಳನ್ನು ಕಳೆಯಬೇಕು ಎಂದುಕೊಂಡಿದ್ದ ಗೌತಮ್ ಆಸೆ ನಿರಾಸೆಯಾಗಿದೆ. ಭೂಮಿಕಾಳಿಗೂ ಇದರಿಂದ ಬೇಸರವಾಗಿರುತ್ತದೆ ಎಂದು ನೊಂದುಕೊಂಡಿರುತ್ತಾನೆ. ಸಪ್ಪೆ ಮುಖ ಹೊಂದಿದ್ದ ಗೌತಮ್ ನನ್ನು ನೋಡಿ ಭೂಮಿಕಾ ಬೇಸರ ಮಾಡಿಕೊಳ್ಳುತ್ತಾಳೆ. ನೀವು ಹೀಗೆಲ್ಲಾ ಇರಬೇಡಿ, ನನಗೂ ನೋವಾಗುತ್ತದೆ. ಈಗ ಏನು ಮಾಡೋದಕ್ಕೆ ಆಗುತ್ತೆ. ಅತ್ತೆಗೆ ಹುಷಾರಿಲ್ಲ ಅಲ್ವಾ ಎಂದು ಸಮಾಧಾನ ಮಾಡುತ್ತಾಳೆ. ಭೂಮಿಕಾ ಮಾತುಗಳನ್ನು ಕೇಳುವ ಗೌತಮ್ ಕೂಡ ಸಮಾಧಾನ ಪಟ್ಟುಕೊಳ್ಳುತ್ತಾನೆ.

amruthadhaare-serial-29-may-episode-written-update

ಶಕುಂತಲಾಗೆ ಇಲ್ಲ ಬೇರೆ ದಾರಿ

ಇನ್ನು ಶಕುಂತಲಾ ಸುಳ್ಳು ಹೇಳಿ ಗೌತಮ್ ನನ್ನು ವಾಪಸ್ ಕರೆಸಿಕೊಂಡಿದ್ದಾಳೆ. ಆದರೆ, ಈಗ ಅದು ತನಗೆ ತೊಂದರೆಯನ್ನು ಮಾಡುತ್ತಿದೆ. ಇನ್ನು ಶಕುಂತಲಾಳನ್ನು ನೋಡಲು ವೈದ್ಯರನ್ನು ಕರೆಸಿರುವುದು ಭೂಮಿಕಾ ಎಂಬ ಸತ್ಯ ಗೊತ್ತಾಗಿದ್ದು, ಈ ಮನೆಯಲ್ಲೇ ಭೂಮಿಕಾ ಕಣ್ಣು ತಪ್ಪಿಸಿ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂಬ ಸತ್ಯ ಅರ್ಥವಾಗಿದೆ. ಶಕುಂತಲಾಳಿಗೆ ಇದ್ದ ದಾರಿಗಳೆಲ್ಲವೂ ಮುಚ್ಚಿ ಹೋಗಿದ್ದು, ಗೌತಮ್ ಮತ್ತು ಭೂಮಿಕಾ ಹೇಳಿದಂತೆ ಕೇಳಬೇಕಾಗಿದೆ. ಈ ಪರಿಸ್ಥಿತಿಯಿಂದ ಹೊರಗೆ ಬರುವುದು ಹೇಗೆ ಎಂದು ಶಕುಂತಲಾ ಒದ್ದಾಡುತ್ತಿದ್ದಾಳೆ.

ಜೈದೇವನನ್ನು ಪ್ರಶ್ನಿಸಿದ ಭೂಮಿಕಾ

ಭೂಮಿಕಾ ಮಲ್ಲಿ ಜೊತೆಗೆ ಮಾತನಾಡುತ್ತಾಳೆ. ಆಗ ಮಲ್ಲಿ ತನಗೆ ಫುಡ್ ಪಾಯಿಸನ್ ಆಗಿದ್ದರ ಬಗ್ಗೆ ಹೇಳುತ್ತಾಳೆ. ಭೂಮಿಕಾ, ಅನುಮಾನದಿಂದ ಎಲ್ಲಾ ರೀತಿಯಲ್ಲೂ ಪ್ರಶ್ನೆ ಮಾಡುತ್ತಾಳೆ. ಜೈದೇವನನ್ನು ಭೇಟಿ ಮಾಡಿ, ಯಾವ ರೌಡಿಗಳು ನಿಮ್ಮನ್ನು ಅಟ್ಯಾಕ್ ಮಾಡಿದ್ದು, ಯಾಕೆ ಹಾಗೆ ಮಾಡಿದರು ಏನಾಯ್ತು ಎಂದು ಪ್ರಶ್ನಿಸುತ್ತಾಳೆ. ಜೈದೇವ ಬಿಸಿನೆಸ್ ವಿಚಾರಕ್ಕೆ ಹೀಗೆಲ್ಲಾ ಆಯ್ತು ಎಂದು ಹೇಳಿ ಜಾರಿಕೊಳ್ಳುತ್ತಾನೆ. ಅಂತಹ ಸಂದರ್ಭದಲ್ಲಿ ಗೌತಮ್ ಗೆ ವಿಷಯ ಹೇಳದೇ, ಮಲ್ಲಿಯನ್ನು ಕರೆಸಿಕೊಂಡಿದ್ದೇಕೆ ಎಂದು ಕೇಳಿದ್ದಕ್ಕೆ, ನಾನಲ್ಲ ರೌಡಿಗಳೇ ಬಲವಂತದಿಂದ ಫೋನ್ ಮಾಡಿಸಿದ್ದು ಎನ್ನುತ್ತಾನೆ. ಈ ವಿಚಾರವನ್ನು ಗೌತಮ್ ಗೆ ಇನ್ನೂ ಯಾಕೆ ಹೇಳಿಲ್ಲ. ನೀವು ಸುಮ್ಮನಿರಬಹುದು ಜೈದೇವ್. ಆದರೆ ನಾನು ಸುಮ್ಮನಿರೊಲ್ಲ. ನಾನು ಗೌತಮ್ ಬಳಿ ಈ ವಿಚಾರವಾಗಿ ಮಾತನಾಡುತ್ತಾನೆ. ಯಾರು ಅವರು ಎಂದು ತಿಳಿದುಕೊಳ್ಳುತ್ತೇನೆ. ನನಗಿನ್ನು ನಿಮ್ಮ ಮೇಲೆ ನಂಬಿಕೆ ಬಂದಿಲ್ಲ ಎಂದು ನೇರವಾಗಿ ಹೇಳುತ್ತಾಳೆ.

amruthadhaare-serial-29-may-episode-written-update

ಅಪೇಕ್ಷಾ-ಪಾರ್ಥನಿಗೆ ಭೂಮಿಕಾ ಸಾರಥಿ

ಮಂದಾಕಿನಿ ತೋರಿಸಿದ ಹುಡುಗನ ಜಾತಕ ಅಪೇಕ್ಷಾ ಜಾತಕದೊಂದಿಗೆ ಹೊಂದಾಣಿಕೆಯಾಗಿದೆ. ಹೀಗಾಗಿ ಮುಂದಿನ ಹೆಜ್ಜೆ ಇಡೋಣ. ಅಪೇಕ್ಷಾಳಿಗೆ ಆದಷ್ಟು ಬೇಗ ಮದುವೆ ಮಾಡೋಣ ಎನ್ನುತ್ತಾಳೆ. ಈ ವಿಚಾರವನ್ನು ಆತಂಕದಿಂದ ಅಪೇಕ್ಷಾ ಪಾರ್ಥನಿಗೆ ತಿಳಿಸುತ್ತಾಳೆ. ಪಾರ್ಥ ಭೂಮಿಕಾ ಅತ್ತಿಗೆಗೆ ವಿಷಯ ಹೇಲಿ ನಮ್ಮಿಬ್ಬರ ಪ್ರೀತಿಯನ್ನು ನೀವೇ ಉಳಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಮೊದಲು ಭೂಮಿಕಾ ಒಪ್ಪುವುದಿಲ್ಲ. ಬಳಿಕ ನಾನು ಏನಾದರೂ ಮಾಡುತ್ತೀನಿ ಹೀಗೆ ಬೇಸರ ಮಾಡಿಕೊಳ್ಳಬೇಡಿ ಪಾರ್ಥ ಎನ್ನುತಾಳೆ. ಜೊತೆಗೆ ತನ್ನ ಸಪೋರ್ಟ್ ಇರುವ ಬಗ್ಗೆ ಯಾವುದೇ ಕಾರಣಕ್ಕೂ ಬೇರೆಯವರಿಗೆ ಗೊತ್ತಾಗಬಾರದು ಎಂದು ಕಂಡೀಷನ್ ಹಾಕುತ್ತಾಳೆ. ಅದಕ್ಕೆ ಪಾರ್ಥ ಕೂಡ ಒಪ್ಪಿಕೊಳ್ಳುತ್ತಾನೆ

More from Filmibeat

English summary
bhoomika questions jaidev about attck and malli hospitalised
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X