Amruthadhaare: ಗೌತಮ್-ಭೂಮಿಕಾ ಭೇಟಿ ಸಕ್ಸಸ್ ಆಯ್ತಾ..?

By ಪ್ರಿಯಾ ದೊರೆ

ಮನೆಯವರ ಒತ್ತಾಯಕ್ಕೆ ಮಣಿದು ಗೌತಮ್ ಹಾಗೂ ಭೂಮಿಕಾ ಇಬ್ಬರೂ ಭೇಟಿಯಾಗಲು ಮುಂದಾಗಿದ್ದಾರೆ. ಈ ಭೇಟಿಯನ್ನೇ ಕೊನೆ ಮಾಡಬೇಕು ಎಂದು ಇಬ್ಬರೂ ತೀರ್ಮಾನಿಸಿದ್ದಾರೆ. ಹೇಗಾದರೂ ಮಾಡಿ ಭೂಮಿಕಾ, ಗೌತಮ್‌ನನ್ನು ಹಾಗೂ ಗೌತಮ್, ಭೂಮಿಕಾಳನ್ನು ರಿಜೆಕ್ಟ್ ಮಾಡಿ ಈ ಮದುವೆ ಟಾಪಿಕ್ ಮುಗಿಸಬೇಕು. ಮನೆಯವರು ಮತ್ತೆ ತಮ್ಮಿಬ್ಬರ ಬಗ್ಗೆ ಮಾತನಾಡದ ಹಾಗೆ ಮಾಡಬೇಕು ಎಂದು ಅಂದುಕೊಂಡಿದ್ದಾರೆ.

ಶಕುಂತಲಾ ಬೇಕಂತಲೇ ಪೇಪರ್‌ನವರಿಗೆ ಫೋನ್ ಮಾಡಿ ಗೌತಮ್ ಹಾಗೂ ಭೂಮಿಕಾ ಇಬ್ಬರೂ ಭಾವಿ ಪತಿ-ಪತ್ನಿಯಾಗಲಿದ್ದು, ಹೋಟೆಲ್‌ನಲ್ಲಿ ಭೇಟಿಯಾಗುವ ವಿಚಾರದ ಬಗ್ಗೆ ಸುದ್ದಿ ಲೀಕ್ ಮಾಡುತ್ತಾಳೆ. ಈ ಬಾರಿ ಭೂಮಿಕಾ ಸರಿಯಾದ ಸಮಯಕ್ಕೆ ಹೋಟೆಲ್‌ಗೆ ಬಂದಿದ್ದಾಳೆ. ಆದರೆ, ಗೌತಮ್ ಇನ್ನೂ ಬಂದಿಲ್ಲ. ದೊಡ್ಡವರೆಲ್ಲಾ ಇಷ್ಟೇ ತಾವು ಯಾರನ್ನ ಬೇಕಿದ್ದರೂ ಕಾಯಿಸಬಹುದು. ಆದರೆ, ತಮ್ಮನ್ನು ಯಾರೂ ಕಾಯಿಸಬಾರದು ಎಂದು ಕೋಪ ಮಾಡಿಕೊಂಡು ಗೌತಮ್‌ನನ್ನು ಬೈಯುತ್ತಿರುತ್ತಾಳೆ.

Amruthadhaare Serial 29th June episode written update

ಭೂಮಿಕಾ ಮೇಲೆ ಕೂಗಾಡಿದ ಗೌತಮ್

ತಡವಾಗಿ ಬಂದ ಗೌತಮ್ ಕ್ಷಮೆ ಕೇಳುತ್ತಾನೆ. ಆಗ ಭೂಮಿಕಾ ಬೇಕಂತಲೇ ಜಗಳ ಮಾಡುತ್ತಾಳೆ. ಪ್ರತಿಯೊಂದು ಮಾತನ್ನು ಸರ್ಕಾಸ್ಟಿಕ್ ಆಗಿ ಮಾತನಾಡಿ, ಗೌತಮ್‌ಗೆ ಇರಿಟೇಟ್ ಆಗುವಂತೆ ಮಾಡುತ್ತಾಳೆ. ಗೌತಮ್‌ಗೆ ಹೆಚ್ಚು ಮಾತನಾಡಲು ಬಿಡುವುದಿಲ್ಲ. ಇದರಿಂದ ಗೌತಮ್ ಕೋಪ ತಾಳಲಾರದೇ ಒಂದೆರಡು ಬಾರಿ ಭೂಮಿಕಾ ಮೇಲೆ ಜೋರಾಗಿ ಮಾತನಾಡುತ್ತಾನೆ. ಕೊನೆಗೆ ಇದೆಲ್ಲಾ ಸಾಕು ನಾವು ಮದುವೆಯ ಬಗ್ಗೆ ಮಾತನಾಡೋಣ ಎಂದಾಗ, ಭೂಮಿಕಾ ತನ್ನ ಪ್ಲಾನ್ ಹೇಳುತ್ತಾಳೆ.

ನನ್ನ ಮನೆಯಲ್ಲಿ ನೀವು ನನ್ನನ್ನು ರಿಜೆಕ್ಟ್ ಮಾಡಿದೀರಾ ಎಂದು ಹಾಗೂ ನಿಮ್ಮ ಮನೆಯಲ್ಲಿ ನಾನು ನಿಮ್ಮನ್ನು ರಿಜೆಕ್ಟ್ ಮಾಡಿದೆ ಎಂದು ಹೇಳೋಣ. ಆಗ ಪ್ರಾಬ್ಲಂ ಸಾಲ್ವ್ ಆಗುತ್ತೆ ಎಂದು ಹೇಳುತ್ತಾಳೆ. ಇದಕ್ಕೆ ಗೌತಮ್ ಓಕೆ ಮಾಡುತ್ತಾನೆ. ಇನ್ನು ಶಕುಂತಲಾ, ಸುಶ್ಮಿತಾಳಿಗೆ ಭೂಮಿಕಾ ಹಾಗೂ ಗೌತಮ್ ಭೇಟಿ ಬಗ್ಗೆ ಹೇಳಿದ್ದರ ಕಾರಣ, ಸುಶ್ಮಿತಾ ಮೀಡಿಯಾದವರನ್ನು ಕರೆದುಕೊಂಡು ಹೋಟೆಲ್‌ಗೆ ಬಂದಿರುತ್ತಾಳೆ.

ಭೂಮಿಕಾ- ಗೌತಮ್‌ಗೆ ಮಾಧ್ಯಮದವರ ಪ್ರಶ್ನೆ

ಗೌತಮ್ ಮತ್ತು ಭೂಮಿಕಾ ಮಾತನಾಡುವಾಗ ಭೂಮಿಕಾ ಕೈನಲ್ಲಿದ್ದ ಉಂಗುರ ಪದೇ ಪದೇ ಬೀಳುತ್ತಿರುತ್ತದೆ. ಅದನ್ನು ಪಕ್ಕದಲ್ಲಿ ಇಟ್ಟಿರುತ್ತಾಳೆ. ಹೊರಡುವಾಗ ರಿಂಗ್ ಅನ್ನು ಮರೆತು ಹೊರಡುತ್ತಾಳೆ. ಭೂಮಿಕಾ ಬ್ಯಾಗ್ ತಗುಲಿ ಉಂಗುರ ಕೆಳಗೆ ಬೀಳುತ್ತದೆ. ಅದನ್ನು ಭೂಮಿಕಾ ತೆಗೆದುಕೊಳ್ಳಲು ಬಂದಾಗ ಗೌತಮ್ ಮಂಡಿ ಊರಿ ತೆಗೆದುಕೊಡುತ್ತಾನೆ. ಈ ದೃಶ್ಯವನ್ನು ಮೀಡಿಯಾದವರು ಸೆರೆ ಹಿಡಿಯುತ್ತಾರೆ. ಗೌತಮ್, ಭೂಮಿಕಾಳಿಗೆ ಪ್ರಪೋಸ್ ಮಾಡುತ್ತಿದ್ದಂತೆ ಫೋಟೋ ತೆಗೆಯುತ್ತಾರೆ. ಗೌತಮ್ ಬಳಿ ಬಂದು ಈ ಬಗ್ಗೆ ಮೀಡಿಯಾದವರು ಪ್ರಶ್ನೆ ಮಾಡಲು ಶುರು ಮಾಡುತ್ತಾರೆ. ತಕ್ಷಣವೇ ಇಬ್ಬರೂ ಅಲ್ಲಿಂದ ಹೊರಟು ಬಿಡುತ್ತಾರೆ.

Amruthadhaare Serial 29th June episode written update

ಮಗಳ ಮೇಲೆ ಕೂಗಾಡಿದ ಮಂದಾಕಿನಿ

ಮನೆಗೆ ಬಂದ ಭೂಮಿಕಾಳನ್ನು ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೋದ ಕೆಲಸ ಏನಾಯ್ತು. ಗೌತಮ್ ಏನು ಹೇಳಿದ. ಈ ಮದುವೆಗೆ ಒಪ್ಪಿಗೇನಾ ಎಂದು ಕೇಳುತ್ತಾರೆ. ಆದರೆ, ಭೂಮಿಕಾ ಬೇಸರಗೊಳ್ಳುತ್ತಾಳೆ. ಇದನ್ನು ನೋಡಿದ ಮಂದಾಕಿನಿ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ನಿನ್ನಿಂದ ನಮಗೆ ಯಾರಿಗೂ ನೆಮ್ಮದಿ ಇಲ್ಲ. ಇಲ್ಲಿಂದ ತೊಲಗು ಎಂದೆಲ್ಲಾ ಬೈದು ಬಳಿಕ ತನ್ನನ್ನು ತಾನು ಸಮಾಧಾನ ಮಾಡಿಕೊಂಡು ಬಂದು ಭೂಮಿಕಾಳಿಗೂ ಸಮಾಧಾನ ಮಾಡುತ್ತಾಳೆ. ಭೂಮಿಕಾ ನನಗೆ ಯಾರೂ ಬೇಡ. ಹೀಗೆ ಇರುತ್ತೇನೆ. ನೀವುಗಳೇ ನನ್ನ ಪ್ರಪಂಚ ಎಂದು ಅಳುತ್ತಾಳೆ.

ಮತ್ತೆ ಯೋಚನೆ ತಂದ ಗೌತಮ್

ಇತ್ತ ಗೌತಮ್ ಮನೆಗೆ ಬರುವುದನ್ನೇ ಕಾದುಕೊಂಡಿರುವ ಶಕುಂತಲಾ ಖುಷಿಯಾಗಿರುತ್ತಾಳೆ. ಆದರೆ, ಗೌತಮ್ ಬಹಳ ಕೂಡ ಬೇಸರಕೊಂಡು ಬಂದಿರುತ್ತಾನೆ. ಯಾರ ಬಳಿಯೂ ಮಾತನಾಡದೇ ರೂಮಿಗೆ ಹೋಗುತ್ತಾನೆ. ಈ ಪರಿಸ್ಥಿತಿಯನ್ನು ನೋಡಿದ ಶಕುಂತಲಾಳಿಗೆ ಮತ್ತಷ್ಟು ಯೋಚನೆ ಶುರುವಾಗುತ್ತದೆ.

More from Filmibeat

English summary
Amruthadhaare Serial 29th June episode written update. Here is Detials about Bhoomika and Gautham Diwan meets and again they fight each other. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X