Amruthadhaare ; ಸುಧಾಳನ್ನು ಹೊರಗಟ್ಟಿದ ಶಕುಂತಲಾ : ಭಾಗ್ಯಳನ್ನು ನೋಡುತ್ತಾಳಾ ಭೂಮಿಕಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಕಂಪನಿಗೆ ಸಂಬಂಧ ಪಟ್ಟ ಫೈಲ್ ಅವನ ಶತ್ರು ಕೈ ಸೇರಿದ್ದು, ಟೆಂಡರ್ ಕೂಡ ಕೈ ತಪ್ಪಿ ಹೋಗಿದೆ.ಇದರಿಂದ ಅನುಮಾನಗೊಂಡ ಗೌತಮ್ ತನ್ನ ತಮ್ಮಂದಿರಾದ ಪಾರ್ಥ ಮತ್ತು ಜೈದೇವ್ ಮೇಲೆ ಅನುಮಾನ ಪಟ್ಟಿದ್ದಾನೆ. ಇದರಿಂದ ಗೌತಮ್ ಮನಸ್ಸಿಗೆ ಬಹಳ ಘಾಸಿಯಾಗಿದೆ. ಆದರೆ, ಮಾಹಿತಿಯನ್ನು ಸೋರಿಕೆ ಮಾಡಿದ್ದು ಸುಧಾ. ಅಷ್ಟೇ ಅಲ್ಲದೇ, ಗೌತಮ್ ಮನೆಯವರಿಗೆ ತನ್ನಿಂದ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಜಯರಾಂನಿಂದ ದೂರ ಬಂದಿದ್ದೂ ಆಗಿದೆ.

ಅಣ್ಣನ ಶತ್ರು ಜೊತೆಗೆ ಜೈದೇವ್ ಸ್ನೇಹ

ಆದರೆ, ಅಣ್ಣನ ಶತ್ರುವಾಗಿರುವ ಜಯರಾಂ ಈಗ ಜೈದೇವ್ ಮಿತ್ರನಾಗಿದ್ದಾನೆ. ಮನೆಯಲ್ಲಿ ಅಣ್ಣ ಮತ್ತೆ ತನ್ನನ್ನು ಅನುಮಾನಿಸಿದ್ದಕ್ಕೆ ಜೈದೇವ್ ಆತಂಕಗೊಂಡಿದ್ದು, ಮಿತ್ರನ ಬಳಿ ಸಹಾಯ ಕೇಳಿದ್ದಾನೆ. ನಮ್ಮ ಮನೆಯಲ್ಲಿ ನಿಮ್ಮ ಕಡೆಯವರು ಇದ್ದಾರೆ ಎಂದು ಹೇಳಿದ್ದೀರಾ. ಅದು ಯಾರು ಎಂದು ಹೇಳಿದರೆ, ನನ್ನ ಅಣ್ಣನಿಗೆ ಈ ಟೆಂಡರ್ ಕಳ್ಳರು ಯಾರೆಂದು ತೋರಿಸಿ, ನನ್ನ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ, ನನಗೆ ಸಹಾಯ ಮಾಡಿ ಎಂದು ಕೇಳಿದ್ದಾನೆ. ಜಯರಾಂ ಕೂಡ ಸುಧಾಗೆ ಕೈಕೊಟ್ಟಿದ್ದಾಗಿದೆ. ಈಗ ಜೈದೇವ್ ಬಹಳ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದು, ಸಾಕ್ಷಿ ಸಮೇತ ತೋರಿಸುತ್ತೇನೆ ಎಂದು ಮನೆಗೆ ಜೈದೇವ್ ನನ್ನು ಕರೆಸಿಕೊಂಡಿದ್ದಾನೆ.

Amruthadhaare Serial 30 December episode written update

ಗೌತಮ್ ಬಗ್ಗೆ ಸುಧಾಳಿಗೆ ಸತ್ಯ ಗೊತ್ತಾಯ್ತಾ..?

ಜಯರಾಂ ಮತ್ತೆ ಸುಧಾಳಿಗೆ ಫೋನ್ ಮಾಡಿ ಮನೆಗೆ ಕರೆದಿದ್ದು, ಸುಧಾ ಖಡಾಖಂಡಿತವಾಗಿ ಬರುವುದಿಲ್ಲ ಎಂದಿದ್ದಾಳೆ. ಆದರೂ ಹೆದರಿಕೊಂಡು ಜಯರಾಂ ಮನೆಗೆ ಹೋಗಿದ್ದಾಳೆ. ಆಗ ಜಯರಾಂ ಬೇಕಂತಲೇ ಹಣದ ಕಂತೆಯನ್ನು ಸುಧಾ ಕೈಗೆ ಇಟ್ಟಿದ್ದು, ನಿನ್ನಿಂದ ನನಗೆ ಬಹಳ ಉಪಕಾರವಾಯ್ತು. ಹಾಗಾಗಿ ಈ ಹಣವನ್ನು ತೆಗೆದುಕೊ ಎಂದು ಹೇಳುತ್ತಾನೆ. ಆದರೆ, ಸುಧಾ ಹಣವನ್ನು ವಾಪಸ್ ಕೊಟ್ಟು, ಮತ್ತೆ ಯಾವತ್ತೂ ತನಗೆ ತೊಂದರೆ ಕೊಡಬೇಡಿ ಎಂದು ಕೇಳಿಕೊಂಡಿದ್ದಾಳೆ. ಇದರ ಫೋಟೋ ಮತ್ತು ವೀಡಿಯೋ ತೆಗೆದಿದ್ದು, ಗೌತಮ್ ಗೆ ತೋರಿಸಲು ಮುಂದಾಗಿದ್ದಾನೆ.

ಸುಧಾಳನ್ನು ಹೊರಗೆ ಕಳಿಸಿದ ಶಕುಂತಲಾ

ಸಾಕ್ಷಿ ಸಮೇತ ಸುಧಾಳ ಬಂಡವಾಳವನ್ನು ಜೈದೇವ್ ಶಕುಂತಲಾಳಿಗೆ ಹೇಳಿದ್ದಾನೆ. ಶಕುಂತಲಾ ತಡ ಮಾಡದೇ ಸುಧಾಳನ್ನು ಹೊರಗೆ ಹಾಕಲು ಮುಂದಾಗಿದ್ದಳೆ. ಗೌತಮ್ ಗೂ ಜೈದೇವ್ ವೀಡಿಯೋ ಕಳಿಸಿದ್ದಾನೆ. ಮನೆಯವರನ್ನು ಅನುಮಾನಿಸಿ ತಲೆ ಕೆಡಿಸಿಕೊಂಡಿದ್ದ ಗೌತಮ್ ಗೆ ವೀಡಿಯೋ ನೋಡಿ ಶಾಕ್ ಆಗಿದೆ. ಮನೆಗೆ ಬಂದವನೇ ಸುಧಾಳನ್ನು ಬೈದಿದ್ದಾನೆ. ನಿನಗೆ ಏನು ಕಡಿಮೆ ಮಾಡಿದ್ದೆ. ಯಾಕೆ ಹೀಗೆಲ್ಲಾ ಮಾಡಿದೆ ಎಂದು ವೀಡಿಯೋ ತೋರಿಸಿ ಇನ್ಯಾವತ್ತೂ ತನ್ನನ್ನು ಅಣ್ಣ ಎಂದು ಕರೆಯಬಾರದು ಎಂದು ಹೇಳಿದ್ದಾನೆ. ಶಕುಂತಲಾ ಸುಧಾಳನ್ನು ಮನೆಯಿಂದ ಹೊರಗೆ ಹಾಕುತ್ತಾಳೆ.

ಸುಧಾ ಮಾತುಗಳು ಭಾಗ್ಯಾಳಿಗೆ ಅರ್ಥವಾಯ್ತಾ..?

ಆದರೆ, ಸುಧಾಳಿಗೆ ಈಗಾಗಲೇ ತಾನು ಗೌತಮ್ ನಿಜವಾದ ತಂಗಿ. ತನ್ನ ತಾಯಿ ಭಾಗ್ಯ ಗೌತಮ್ ಗೆ ಸ್ವಂತ ಅಮ್ಮ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಈ ವಿಚಾರವನ್ನು ಭಾಗ್ಯ ಬಳಿ ಹೇಳಿದ್ದು, ನಿಮ್ಮ ಗುಂಡ ಮನೆಯಲ್ಲಿದ್ದೇವೆ. ಅಣ್ಣ ಬಂದ ಕೂಡಲೇ ಸತ್ಯ ಹೇಳುತ್ತೇನೆ ಎಂದು ಹೇಳಿದ್ದಳು. ಆದರೆ ಅಷ್ಟರಲ್ಲಿ ಜೈದೇವ್ ತೋರಿಸಿದ ವೀಡಿಯೋದಿಂದ ಸಂಬಂಧವೇ ಹಾಳಾಗಿದೆ. ಎಲ್ಲರೂ ಒಳಗೆ ಹೋದ ಬಳಿಕ ಭೂಮಿಕಾ ಸುಧಾಳನ್ನು ವಿಚಾರಿಸಿದ್ದಾಳೆ. ಸುಧಾ ನಡೆದ ಘಟನೆಯನ್ನೆಲ್ಲಾ ಹೇಳಿದ್ದು, ತಾನೇ ಗೌತಮ್ ಸಹೋದರಿ ಎಂದು ಹೇಳಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಸುಧಾ ಮಾತಗಳನ್ನು ಅರ್ಥ ಮಾಡಿಕೊಂಡಿದ್ದ ಭಾಗ್ಯ ಮನೆಯಿಂದ ಎದ್ದು ಹೊರಟಿದ್ದಾಳೆ. ಈಗ ಭೂಮಿಕಾ ಭಾಗ್ಯಳನ್ನು ನೋಡಿ ಗುರುತು ಹಿಡಿಯುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X