Amruthadhaare ; ಜೀವನ ಹೇಳಿದ ಮಾತು ಕೇಳಿ ಕೆರಳಿದ ಭೂಮಿಕಾ, ಮರಳಿ ಗಂಡನ ಮನೆಗೆ ಬರ್ತಾಳಾ ?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಮತ್ತು ಜೀವನ್ ಚಿಕ್ಕ ವಿಚಾರಕ್ಕೆ ಜಗಳ ಮಾಡಿಕೊಂಡು ಇಬ್ಬರೂ ಬೇರೆಯಾಗದ್ದಾರೆ. ಮಹಿಮಾ ತವರು ಮನೆ ಸೇರಿದ್ದಾಳೆ. ಇವರಿಬ್ಬರಿಗೂ ಬುದ್ಧಿ ಕಲಿಸಬೇಕು ಎಂದು ಗೌತಮ್ ಮತ್ತು ಭೂಮಿಕಾ ಜಗಳ ಆಡಿರುವಂತೆ ನಟಿಸುತ್ತಿದ್ದಾರೆ. ಅಲ್ಲದೇ, ಭೂಮಿಕಾ ಕೂಡ ತವರು ಮನೆಗೆ ಹೋಗಿದ್ದಾಳೆ. ಗೌತಮ್ ಮತ್ತು ಭೂಮಿಕಾ ಮಾತನಾಡಿಕೊಂಡು ಜಗಳ ಮಾಡಿರುವುದರಿಂದ ಬೇಕಂತಲೇ ಒಬ್ಬರ ಫೋನ್ ಅನ್ನು ಮತ್ತೊಬ್ಬರು ರಿಸೀವ್ ಮಾಡುತ್ತಿಲ್ಲ.

ಜೀವನ್ ಗೆ ಬೈದು ಬುದ್ಧಿವಾದ ಹೇಳಿದ ಭೂಮಿಕಾ

ಮನೆಗೆ ಬಂದಿರುವ ಭೂಮಿಕಾಳನ್ನು ಕಂಡು ಮಂದಾಕಿನಿ ಗಾಬರಿಯಾಗಿದ್ದಾಳೆ. ಮಗಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಾಳೆ. ಎಲ್ಲಾ ಜೀವನ್ ಮಾಡಿದ್ದರಿಂದಲೇ ನನ್ನ ಸಂಸಾರವೂ ಹೀಗೆ ಆಗಿದೆ ಎಂದು ಹೇಳುತ್ತಾಳೆ. ಮಹಿಮಾ ಬಗ್ಗೆ ಜೀವನ್ ನಿಷ್ಠೂರವಾಗಿ ಮಾತನಾಡುತ್ತಾನೆ. ಆಗ ಕೋಪ ಮಾಡಿಕೊಳ್ಳುವ ಭೂಮಿಕಾ ವಾಪಸ್ ಬೈಯ್ಯಲು ಶುರು ಮಾಡುತ್ತಾಳೆ. ನೀನು ನಿನ್ನೆ ಮೊನ್ನೆಯಿಂದ ಹಣವನ್ನು ನೋಡುತ್ತಿದ್ದೀಯಾ. ಆದರೆ, ಮಹಿಮಾಳಿಗೆ ಇದೆಲ್ಲಾ ಹುಟ್ಟಿನಿಂದಲೇ ಇದೆ. ಅವಳು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳು. ಆದರೂ ತಾನೂ ಪ್ರೀತಿಸಿದ ಕಾರಣಕ್ಕಾಗಿ ನಿನ್ನ ಸ್ಟೇಟಸ್ ಗೆ ಅಡ್ಜಸ್ಟ್ ಆಗಿದ್ದಾಳೆ. ತನಗಿದ್ದ ಎಲ್ಲಾ ಸೌಕರ್ಯವನ್ನು ಬಿಟ್ಟು ಬಂದಿದ್ದಾಳೆ. ಅವಳ ಜೊತೆಗೆ ಜಗಳ ಮಾಡಿದ್ದೀಯಾ. ನೀನು ಏನೇ ಸಂಪಾದಿಸಿದರೂ, ಎಷ್ಟೇ ಹೆಸರು ಮಾಡಿದರೂ ಕೂಡ ಮನೆಯಲ್ಲಿ ಮಗ, ಗಂಡ ಆಗೇ ಇರುತ್ತೀಯಾ ಅದನ್ನು ನೆನಪಿಟ್ಟುಕೊ ಎಂದು ಬೈದು ಬುದ್ಧಿ ಹೇಳುತ್ತಾಳೆ.

Amruthadhaare Serial 30 January episode written update

ಭೂಮಿಕಾಳನ್ನು ಹುಡುಕಾಡುತ್ತಿರುವ ಭಾಗ್ಯ

ಇತ್ತ ಭೂಮಿಕಾ ಎರಡು ದಿನಗಳಿಂದ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಭಾಗ್ಯ ಅವಳನ್ನು ಮನೆಯಲ್ಲೆಲ್ಲಾ ಹುಡುಕಾಡುತ್ತಿದ್ದಾಳೆ. ಇದನ್ನು ಅರಿಯದ ಗೌತಮ್, ಅಮ್ಮನನ್ನು ಹೊರಗೆ ಕರೆದುಕೊಂಡು ಬಂದು ಮಾತನಾಡಿಸುತ್ತಾ ಕೂರುತ್ತಾನೆ. ಆಗ ಸುಧಾ ಅಮ್ಮ ಭೂಮಿಕಾಳನ್ನು ಹಚ್ಚಿಕೊಂಡಿದ್ದಾರೆ. ಅವರನ್ನೇ ಹುಡುಕುತ್ತಿದ್ದಾರೆ. ನೀವ್ಯಾಕೆ ಜಗಳ ಮಾಡಿದ್ದು, ಹೋಗಿ ಅವರನ್ನು ಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಅದೇ ಸಮಯಕ್ಕೆ ಅಲ್ಲಿಗೆ ಮಹಿಮಾ ಬಂದಿದ್ದನ್ನು ನೋಡಿದ ಗೌತಮ್ ಏನು ಮಾಡಲಿ ಸುಧಾ ಏನೋ ಕೋಪದಲ್ಲಿ ಒಂದು ಮಾತು ಹೇಳಿದಕ್ಕೆ ಭೂಮಿಕಾ ಮನೆ ಬಿಟ್ಟು ಹೋಗಿದ್ದಾಳೆ. ಈಗ ನಾನು ಏನು ಮಾಡಲಿ ಎಂದು ಬೇಸರ ಮಾಡಿಕೊಂಡವನಂತೆ ನಟಿಸುತ್ತಾನೆ.


ಮಗಳಿಗೆ ಬುದ್ಧಿ ಹೇಳಿದ ಶಕುಂತಲಾ

ಇನ್ನು ಮಹಿಮಾಳಿಗೆ ಪಾರ್ಥ ಬುದ್ಧಿ ಮಾತನ್ನು ಹೇಳುತ್ತಾನೆ. ನೀವಿಬ್ಬರು ಬೇರೆ ಆಗಿದ್ದಲ್ಲದೇ ಅಣ್ಣ ಮತ್ತು ಅತ್ತಿಗೆ ಸಂಸಾರದಲ್ಲೂ ಒಡಕು ಮೂಡಿದೆ ಎಂದು ಹೇಳುತ್ತಿರುತ್ತಾನೆ. ಇದೇ ವೇಳೆಗೆ ಅಪೇಕ್ಷಾ ಬಂದು ಗಂಡಸರೇ ಹೀಗೆ ಪ್ರೀತಿ ಮಾಡುವಾಗ ಇರುವುದಕ್ಕೂ, ಮದುವೆಯಾದ ಮೇಲೆ ನಡೆದುಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ಲಕ್ಷ್ಮೀಕಾಂತ ಎಲ್ಲಿ ಮಹಿಮಾ ವಾಪಸ್ ತನ್ನ ಮನೆಗೆ ಹೋಗುತ್ತಾಳೋ ಎಂದು ಶಕುಂತಲಾಳಿಗೆ ಹೇಳುತ್ತಾನೆ. ಆಗ ಶಕುಂತಲಾ ಬಂದು ಮಹಿಮಾಳ ಮನಸ್ಸನ್ನು ಬದಲಾಯಿಸಲು ಯತ್ನಿಸುತ್ತಾಳೆ. ನೀನು ನಿನ್ನ ಮನೆಯಲ್ಲಿ ಇರುವುದೇ ಸರಿ ಎಂದು ಹೇಳುವ ಮೂಲಕ ಮಹಿಮಾಳಿಗೆ ಕೋಪ ಬರುವಂತೆ ಮಾಡುತ್ತಾಳೆ.


ಅಣ್ಣನ ಸಂಸಾರದ ಬಗ್ಗೆ ಮಹಿಮಾ ಚಿಂತೆ

ಈಗ ಮಹಿಮಾಳಿಗೆ ತನ್ನ ಸಂಸಾರಕ್ಕಿಂತಲೂ ತನ್ನ ಅಣ್ಣನ ಬದುಕಿನ ಬಗ್ಗೆ ಆತಂಕ ಸೃಷ್ಟಿಯಾಗಿದೆ. ತನ್ನಿಂದ ಅಣ್ಣ ಮತ್ತು ಅತ್ತಿಗೆ ಬೇರೆಯಾಗುವಂತೆ ಆಗಿದೆ. ಈಗ ಏನು ಮಾಡಿದರೆ ಇದು ಸರಿ ಹೋಗುತ್ತದೆ ಎಂದು ಯೋಚಿಸುತ್ತಿದ್ದಾಳೆ. ಮಹಿಮಾ ಮತ್ತು ಜೀವನ್ ತಮ್ಮ ಬದುಕನ್ನು ಸರಿ ಮಾಡಿಕೊಳ್ಳುವ ಮೂಲಕ ಭೂಮಿಕಾ ಹಾಗೂ ಗೌತಮ್ ನನ್ನು ಒಂದು ಮಾಡುತ್ತಾರಾ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X