Amruthadhaare ; ಅಮ್ಮ ಮಾಡಿದ ಕುತಂತ್ರ ಕೆಲಸವನ್ನು ಅರಿತ ಜೈದೇವ್ : ಮಗನ ಸಹಾಯ ಪಡೆಯುತ್ತಾಳಾ ಶಕುಂತಲಾ..?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಮೊದಲಿನಂತೆಯೇ ದಿಯಾಳನ್ನು ಪದೇ ಪದೇ ಕದ್ದು ಮುಚ್ಚಿ ಭೇಟಿ ಮಾಡುತ್ತಿದ್ದಾನೆ. ದಿಯಾಳಿಗೂ ಹೀಗೆ ಭೇಟಿ ಮಾಡುವುದು ಸಾಕಾಗಿದೆ.ಆದರೆ, ಇದು ಬಿಟ್ಟರೆ ಜೈದೇವ್ ಗೆ ಬೇರೆ ದಾರಿಯೂ ಇಲ್ಲ. ಮನೆಯವರನ್ನು ನಂಬಿಸಿರುವ ಜೈದೇವ್, ಲಕ್ಷುರಿ ಬದುಕು ಬೇಕು ಎಂದರೆ ಇದನ್ನೆಲ್ಲಾ ಮಾಡಲೇಬೇಕಿದೆ.ಜೈದೇವ್ ಬೇಕಂತಲೇ ನೈಸ್ ಆಗಿ ಮಾತನಾಡುವ ಪ್ರೀತಿಯ ಮಾತುಗಳು ಸತ್ಯ ಎಂದು ನಂಬಿರುವ ಮಲ್ಲಿ, ದಡ್ಡಿ ಎಂದು ಮತ್ತೆ ಮತ್ತೆ ಪ್ರೂವ್ ಮಾಡುತ್ತಿದ್ದಾಳೆ.
ಅಮ್ಮನ ಬಹು ಕಾಲದ ಸಿಕ್ರೇಟ್ ಅರಿತ ಜೈದೇವ್
ಶಕುಂತಲಾಳಿಗೆ ಈಗ ಭಾಗ್ಯ ಬದುಕಿರುವುದು ಕನ್ಫರ್ಮ್ ಆಗಿದೆ. ಆದರೆ, ಅವಳು ಎಲ್ಲಿದ್ದಾಳೆ. ಹೇಗಿದ್ದಾಳೆ. ಮುಂದೆ ಏನು ಮಾಡಬೇಕು ಎಂಬುದು ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಭಾಗ್ಯ ಏನಾದರೂ ಗೌತಮ್ ಕಣ್ಣಿಗೆ ಬಿದ್ದರೆ ಇಷ್ಟು ವರ್ಷಗಳಿಂದ ತಾನು ಕಾಪಾಡಿಕೊಂಡು ಬಂದಿರುವ ರಹಸ್ಯ ಗೊತ್ತಾದರೆ, ತನಗಿನ್ನು ಈ ಮನೆಯಲ್ಲಿ ಜಾಗವಿರುವುದಿಲ್ಲ. ಮತ್ತೆ ತಾನು ಖಾಲಿ ಕೈಯಲ್ಲಿ ಮನೆಯಿಂದ ಹೊರ ನಡೆಯಬೇಕು ಎಂಬ ಆತಂಕ ಹೆಚ್ಚಾಗಿದೆ. ಅದರಲ್ಲೂ ತನ್ನ ಜೊತೆಗೆ ತನ್ನ ಮಕ್ಕಳ ಬಾಳು ಕೂಡ ಬೀದಿಗೆ ಬೀಳುತ್ತದೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಶಕುಂತಲಾ ಮತ್ತು ಲಕ್ಷ್ಮೀಕಾಂತ ರೂಮಿನಲ್ಲಿ ಚರ್ಚೆ ಮಾಡುತ್ತಿರುತ್ತಾರೆ. ಹೇಗಾದರೂ ಮಾಡಿ ಭಾಗ್ಯಳನ್ನು ತಾವೇ ಹಿಡಿಯಬೇಕು ಎಂದು ಮಾತನಾಡುವುದನ್ನು ಜೈದೇವ್ ಕದ್ದು ಕೇಳಿಸಿಕೊಂಡಿದ್ದಾನೆ.

ಭಾಗ್ಯಳನ್ನು ಹುಡುಕಲು ಜೈದೇವ್ ಸಹಾಯ..?
ಆದರೆ, ಯಾವ ವಿಚಾರ ಹಾಗೂ ಯಾರ ಬಗ್ಗೆ ಎಂಬುದು ಜೈದೇವ್ ಗೆ ಗೊತ್ತಾಗುವುದಿಲ್ಲ. ಲಕ್ಷ್ಮೀಕಾಂತನ ಬಳಿ ಮಾತನಾಡಿ ಅಮ್ಮ ಮತ್ತು ನೀವು ಯಾರಿಗೆ ಗುಂಡಿ ತೋಡುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ಲಕ್ಷ್ಮೀಕಾಂತ ಆತಂಕದಲ್ಲಿರುವ ಕಾರಣ ಎಲ್ಲಾ ಸತ್ಯವನ್ನು ಜೈದೇವ್ ಬಳಿ ಹೇಳಿಕೊಳ್ಳುತ್ತಾನೆ. ನೀವೆಲ್ಲಾ ಈ ಅದ್ಧೂರಿ ಬದುಕು ಕಾಣಲು ಭಾಗ್ಯಳನ್ನು ಈ ಮನೆಯಿಂದ ಓಡಿಸಬೇಕಾಯ್ತು ಎಂಬ ಸತ್ಯವನ್ನು ಹೇಳುತ್ತಾನೆ. ಜೈದೇವ್ ಗೆ ಕ್ಲಾರಿಟಿ ಸಿಕ್ಕಿದ್ದು, ತನ್ನ ತಾಯಿ ಖತರ್ನಾಕ್ ಕೆಲಸ ಮಾಡಿಯೇ ಇಷ್ಟೆಲ್ಲಾ ಆಸ್ತಿಗೆ ಒಡತಿಯಾಗಿದ್ದಾಳೆ ಎಂಬ ಸತ್ಯವನ್ನು ತಿಳಿದಿದ್ದಾನೆ. ಇನ್ನು ಲಕ್ಷ್ಮೀಕಾಂತ ಜೈದೇವ್ ಸಹಾಯ ಪಡೆದು ಭಾಗ್ಯಳನ್ನು ಹಿಡಿಯಬೇಕು ಎಂದು ಶಕುಂತಲಾಳಿಗೆ ಐಡಿಯಾ ಕೊಡುತ್ತಿದ್ದಾನೆ. ಈಗ ಇವರಿಬ್ಬರ ಜೊತರಗರ ಜೈದೇವ್ ಕೈ ಜೋಡಿಸು ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಅಪೇಕ್ಷಾಳನ್ನು ಸಮಾಧಾನ ಮಾಡಿದ ಪಾರ್ಥ
ಇನ್ನು ಅಪೇಕ್ಷಾಳಿಗೆ ಪಾರ್ಥ ಪದೇ ಪದೇ ಭೂಮಿಕಾಳನ್ನು ವಹಿಸಿಕೊಂಡು ಮಾತನಾಡುವುದು ಕೊಂಚವೂ ಇಷ್ಟವಾಗುತ್ತಿಲ್ಲ. ಹೀಗಾಗಿ ಇಬ್ಬರೂ ನಿತ್ಯ ಜಗಳ ಮಾಡುವಂತಾಗಿದೆ. ಭೂಮಿಕಾ ಮನಸ್ಸು ಸರಿಯಿಲ್ಲ. ಅವಳು ತಾನು ಒಳ್ಳೆಯ ಹೆಸರನ್ನು ಪಡೆಯಲು ಎಲ್ಲರನ್ನೂ ಕೆಟ್ಟವರನ್ನಾಗಿ ಮಾಡುತ್ತಾಳೆ. ನಿಮಗೆ ಅದೆಲ್ಲಾ ಗೊತ್ತಿಲ್ಲ. ಆದರೆ, ನಿಮಗೆ ಭೂಮಿಕಾನೇ ಹೆಚ್ಚು ಎಂದು ವಾದ ಮಾಡುತ್ತಾಳೆ. ಆಗ ಪಾರ್ಥ ಭೂಮಿಕಾ ಹೇಳಿದ ಮಾತುಗಳನ್ನು ನೆನೆದು ಅಪೇಕ್ಷಾಳನ್ನು ಕ್ಷಮೆ ಕೇಳುತ್ತಾನೆ. ಇನ್ಯಾವತ್ತೂ ಭೂಮಿಕಾ ಅತ್ತಿಗೆ ಬಗ್ಗೆ ಮಾತನಾಡುವುದಿಲ್ಲ ಎಂದು ಸಮಾಧಾನ ಮಾಡುತ್ತಾನೆ.
ಗೌತಮ್ ಬಳಿ ಸತ್ಯ ಹೇಳುತ್ತಾಳಾ ಸುಧಾ..?
ಸುಧಾ ತಾಯಿಯನ್ನು ಹುಡುಕಲು ಹೇಳದೇ ಕೇಳದೇ ಮನೆಗೆ ಹೋಗಿದ್ದಳು. ಇನ್ನೇನು ಪೊಲೀಸ್ ಗೆ ದೂರು ನೀಡಬೇಕು ಎನ್ನುವಷ್ಟರಲ್ಲಿ ಮನೆಗೆ ಬಂದಿದ್ದಾಳೆ. ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದಾಳೆ. ಗೌತಮ್ ಸುಧಾ ಪರೀಸ್ಥಿತಿಯನ್ನು ಅರ್ಥ ಮಾಡಿಕೊಂಡು ಕ್ಷಮಿಸಿದ್ದಾನೆ. ಅಲ್ಲದೇ, ಇನ್ನು ಮುಂದೆ ಇಲ್ಲೇ ಕೆಲಸ ಮಾಡುವಂತೆ ಹೇಳಿದ್ದಾನೆ. ನಲವತ್ತು ಸಾವಿರ ಸಂಬಳ ಕೊಡಲು ನಿರ್ಧರಿಸಿದ್ದಾನೆ. ಇಷ್ಟೆಲ್ಲಾ ಒಳ್ಳೆಯದನ್ನು ಮಾಡು ಗೌತಮ್ ಅವರಿಗೆ ತನ್ನಿಂದ ಕೆಟ್ಟದಾಗಬಾರದು ಎಂದು ಯೋಚಿಸುತ್ತಿರುವ ಸುಧಾ, ಎಲ್ಲಾ ಸತ್ಯವನ್ನು ಹೇಳಲು ಮುಂದಾಗಿದ್ದಾಳೆ.


Click it and Unblock the Notifications











