Amruthadhaare: ಗೌತಮ್-ಭೂಮಿಕಾ ಮದುವೆಗೆ ಗ್ರೀನ್ ಸಿಗ್ನಲ್: ಮನೆಯವರಲ್ಲಿ ತುಂಬಿದ ಸಂಭ್ರಮ
ಗೌತಮ್ ಹಾಗೂ ಭೂಮಿಕಾ ಇಬ್ಬರೂ ತಮ್ಮ ಮದುವೆಯ ಪ್ರಸ್ತಾಪವನ್ನು ಕ್ಯಾನ್ಸಲ್ ಮಾಡಬೇಕು ಎಂದು ಭೇಟಿಯಾಗಿರುತ್ತಾರೆ. ದುರಾದೃಷ್ಟವಶಾತ್ ಅಲ್ಲಿ ನಡೆಯುವುದೇ ಬೇರೆ. ಶಕುಂತಲಾ ಮಾಡಿದ ಪ್ಲ್ಯಾನ್ ಇಲ್ಲಿ ಸಂಪೂರ್ಣವಾಗಿ ಸಕ್ಸಸ್ ಆಗಿದೆ. ಮೀಡಿಯಾದವರು ಬಂದು ಸರಿಯಾದ ಸಮಯದಲ್ಲಿ ಭೂಮಿಕಾ ಹಾಗೂ ಗೌತಮ್‌ನನ್ನು ತಗಲಾಕಿದ್ದಾರೆ. ಮೀಡಿಯಾದವರು ಫೋಟೋ ತೆಗೆದರೂ ಕೂಡ ಅದರ ಬಗ್ಗೆ ಇಬ್ಬರು ಯೋಚಿಸುತ್ತಿಲ್ಲ.
ಮನೆಯಲ್ಲಿ ಏನು ಉತ್ತರ ಕೊಡುವುದು ಎಂಬುದು ತಿಳಿಯದೇ ಮೌನವಾಗಿದ್ದರು. ಆದರೆ, ಬೆಳಗೆದ್ದ ಕೂಡಲೇ ಎಲ್ಲರ ಮನೆಯಲ್ಲಿನ ಸುದ್ದಿ ಪತ್ರಿಕೆಗಳು ಗೌತಮ್ ಮತ್ತು ಭೂಮಿಕಾರ ಭವಿಷ್ಯವನ್ನು ನಿರ್ಧರಿಸಿರುತ್ತಾರೆ. ಎಲ್ಲಾ ಪೇಪರ್ ಹಾಗೂ ಮೀಡಿಯಾಗಳಲ್ಲಿ ಗೌತಮ್ ಮಂಡಿಯೂರಿ ಭೂಮಿಕಾಳಿಗೆ ಉಂಗುರ ಕೊಡುತ್ತಿದ್ದ ದೃಶ್ಯವೇ ಹರಿದಾಡುತ್ತಿರುತ್ತದೆ. ಗೌತಮ್ ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡುತ್ತಿದ್ದಾರೆ ಎಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ನೋಡಿದ ಸಂಬಂಧಿಕರು, ಸ್ನೇಹಿತರೆಲ್ಲರೂ ಖುಷಿ ಪಟ್ಟಿದ್ದಾರೆ.

ಮಂದಾಕಿನಿ ಪೇಪರ್ ನೋಡಿ ಬಹಳ ಖುಷಿ ಪಡುತ್ತಾಳೆ. ಮಗಳಿಗೆ ಪೇಪರ್ ತೋರಿಸಿ ಸಂತಸದಿಂದ ಕುಣಿದಾಡುತ್ತಾಳೆ. ಭೂಮಿಕಾ ಅಲ್ಲಿ ನಡೆದಿದ್ದೇನು ಎಂಬುದನ್ನು ಹೇಳಲೂ ಕೂಡ ಅವಕಾಶ ಮಾಡಿಕೊಡುವುದಿಲ್ಲ. ಇತ್ತ ಗೌತಮ್ ಪರಿಸ್ಥಿತಿಯೂ ಇದೇ ಆಗಿರುತ್ತದೆ. ಗೌತಮ್‌ಗೆ ತನ್ನ ಬಿಸಿನೆಸ್ ಗೆಳೆಯರು, ಆಫೀಸ್‌ನವರು ಪ್ರತಿಯೊಬ್ಬರೂ ಬಂದು ವಿಶ್ ಮಾಡಿ ಹೋಗುತ್ತಾರೆ.
ಯಾರೂ ಮಾತು ಹೇಳುತ್ತಿಲ್ಲ
ಶಕುಂತಲಾ, ಮಹಿಮಾ ಯಾರೂ ಕೂಡ ಗೌತಮ್ ಮಾತನ್ನು ಕೇಳುವುದಿಲ್ಲ. ಗೆಳೆಯ ಆನಂದ್ ಕೂಡ ಸ್ನೇಹಿತ ಮದುವೆಗೆ ಒಪ್ಪಿಕೊಂಡ ಎಂಬ ಖುಷಿಯಲ್ಲಿರುತ್ತಾನೆ. ಇದೆಲ್ಲವನ್ನೂ ನೋಡಿದ ಗೌತಮ್‌ಗೆ ಮಾತು ಬಾರದಂತಾಗಿರುತ್ತದೆ. ಮಂದಾಕಿನಿ ಇಡೀ ಅಪಾರ್ಟ್‌ಮೆಂಟ್‌ಗೆ ಸಿಹಿ ಅನ್ನು ಹಂಚುತ್ತಿರುತ್ತಾಳೆ.

ಮದುವೆಯಾಗಲು ಭೂಮಿಕಾ-ಗೌತಮ್ ಸಿದ್ಧ
ಗೌತಮ್, ಭೂಮಿಕಾಳಿಗೆ ಫೋನ್ ಮಾಡುತ್ತಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಆದರೆ, ಅಲ್ಲಿ ನಡೆದಿದ್ದೇನು ಎಂಬುದು ನಮ್ಮಿಬ್ಬರಿಗಷ್ಟೇ ಗೊತ್ತು. ಆದರೆ, ನಾವೀಗ ಆ ವಿಚಾರವನ್ನು ಹೇಳಿ ಮನೆಯವರ ಖುಷಿಯನ್ನು ಹಾಳು ಮಾಡಬೇಕಾ ಅಥವಾ ನಾವಿಬ್ಬರು ಮದುವೆಯ ಬಗ್ಗೆ ನಿರ್ಧಾರ ಮಾಡುವುದಾ ಎಂದು ಮಾತನಾಡುತ್ತಾನೆ. ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಭೂಮಿಕಾ ಬಳಿ ಭಯದಿಂದಲೇ ಕೇಳುತ್ತಾನೆ. ಭೂಮಿಕಾಳಿಗೆ ಏನು ಉತ್ತರ ಕೊಡಬೇಕು ಎಂಬುದು ತಿಳಿಯದೇ ಮೌನಕ್ಕೆ ಜಾರುತ್ತಾಳೆ. ಕೊನೆಗೆ ಗೌತಮ್ ಮಾತಿಗೆ ಓಕೆ ಮಾಡುತ್ತಾಳೆ. ಮುಂದೆ ಏನು ಎಂಬ ಯೋಚನೆ ಇಬ್ಬರಿಗೂ ಶುರುವಾಗುತ್ತದೆ.
ಎಂಗೇಜ್‌ಮೆಂಟ್‌ಗೂ ಸೈ ಎಂದ ಜೋಡಿ
ಮತ್ತದೇ ಭಯದಿಂದಲೇ ಗೌತಮ್ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಾನೆ. ಭೂಮಿಕಾ ಅದಕ್ಕೂ ಸರಿ ಎನ್ನುತ್ತಾಳೆ. ನಾಳೆ ನಮ್ಮ ಮನೆಯಲ್ಲೇ ಎಂಗೇಜ್‌ಮೆಂಟ್ ಮಾಡಿಕೊಳ್ಳೋಣ ಎಂದು ಗೌತಮ್ ಹೇಳುತ್ತಾನೆ. ಅದೂ ಕೂಡ ರಾತ್ರಿ ಹತ್ತು ಗಂಟೆಗೆ. ಇದಕ್ಕೂ ಭೂಮಿಕಾ ಓಕೆ ಎನ್ನುತ್ತಾಳೆ. ಭೂಮಿಕಾ ಈ ವಿಚಾರವನ್ನು ಮನೆಯವರಿಗೆ ತಿಳಿಸುತ್ತಾಳೆ. ಮಂದಾಕಿನಿ ಈಗ ಅಂತೂ ಆಕಾಶದಲ್ಲೇ ತೇಲಾಡುತ್ತಿದ್ದಾಳೆ.
ಮನೆಯವರ ಖುಷಿಗೆ ಒಪ್ಪಿಗೆ
ಸದಾಶಿವ ಭೂಮಿಕಾಳನ್ನು ಪ್ರೀತಿಯಿಂದ ನಿನಗೆ ಈ ಮದುವೆ ಇಷ್ಟ ಅಲ್ವಾ ಎಂದು ಕೇಳುತ್ತಾನೆ. ಮನೆಯವರ ಖುಷಿಗಾಗಿ ಭೂಮಿಕಾ ಹು ಎಂದು ತಲೆಯಾಡಿಸುತ್ತಾಳೆ. ಆದರೆ, ಈಗ ಭೂಮಿಕಾ ಮತ್ತು ಗೌತಮ್ ತಮಗೆ ಇಷ್ಟವಿಲ್ಲದಿದ್ದರೂ ಮನೆಯವರ ಖುಷಿಗಾಗಿ ಈ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇಬ್ಬರ ಮದುವೆಯೂ ಸರಾಗವಾಗಿ ನಡೆಯುತ್ತದೆಯೋ ಅಥವಾ ಮತ್ತೇನಾದರೂ ಸಮಸ್ಯೆ ಎದುರಾಗುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











