Amruthadhaare: ಒಂದೇ ಮನಸ್ಥಿತಿಯ ಗೌತಮ್ ಹಾಗೂ ಭೂಮಿಕಾ: ಇಬ್ಬರಿಗೂ ಅದೇ ಸಮಸ್ಯೆ
ಅಮೃತಧಾರೆ ಕತೆ ಆರಂಭವಾಗುತ್ತಿದೆ. ಗೌತಮ್‌ನನ್ನು ಮನೆಯಲ್ಲಿ ಸದಾ ನೆಗಲೆಕ್ಟ್ ಮಾಡುತ್ತಿರುತ್ತಾರೆ. ಇದನ್ನೆಲ್ಲಾ ಗಮನಿಸುವ ಆನಂದ್‌ಗೆ ಗೌತಮ್ ಮದುವೆಯಾಗುವುದೇ ಸರಿ ಎನಿಸುತ್ತದೆ. ಹೀಗಾಗಿ ಆನಂದ್ ನಿನಗೆ ಅಂತ ಒಂದು ಬದುಕು ಬೇಕು. ನಿನ್ನದೊಂದು ಸಂಸಾರವನ್ನು ಕಟ್ಟಿಕೊ ಎಂದು ಬುದ್ಧಿ ಹೇಳುತ್ತಾನೆ. ನಿನಗೆ ಅಂತ ಒಂದು ಫ್ಯಾಮಿಲಿ ಇದ್ದರೆ ಚೆಂದ ಎಂದು ಸಲಹೆ ನೀಡುತ್ತಾನೆ.
ನಿನ್ನ ಜೀವನದಲ್ಲೂ ಒಬ್ಬಳು ಹುಡುಗಿ ಬಂದರೆ ಆಗ ನಾನು ಹೇಳುವ ಮಾತುಗಳು ನಿನಗೆ ಅರ್ಥವಾಗುತ್ತದೆ ಎಂದು ಹೇಳುತ್ತಾನೆ. ಆದರೆ ಗೌತಮ್ ನನಗೆ ಮದುವೆ ಎಲ್ಲಾ ಆಗಿಬರಲ್ಲ ಎನ್ನುತ್ತಾನೆ. ಗೌತಮ್ ದಿವಾನ್ ಮನೆಯಲ್ಲಿ ತಂಗಿಯ ಮದುವೆ ಆಗುತ್ತಿದೆ. ಎಲ್ಲರೂ ಗೌತಮ್ ಮದುವೆ ಯಾವಾಗ ಎಂದು ಕೇಳುತ್ತಾರೆ. ಶಕುಂತಲಾ ಅವನಿಗೆ ಇಷ್ಟವಿಲ್ಲದ ಮದುವೆ ಹೇಗೆ ಮಾಡಲಿ ಎಂದು ಹೇಳುತ್ತಾಳೆ. ಶಕುಂತಲಾ, ಗೌತಮ್ ದಿವಾನ್‌ಗೆ ಮಲತಾಯಿ ಆಗಬೇಕು.

ಯಾವುದೇ ಕಾರಣಕ್ಕೂ ಶಕುಂತಲಾ, ಗೌತಮ್ ಮದುವೆ ಮಾಡಲು ತಯಾರಿಲ್ಲ. ಹಾಗೊಂದು ವೇಳೆ ಗೌತಮ್ ಗೆ ಮದುವೆಯನ್ನು ಮಾಡಿದರೆ, ತಮಗೆ ಸಿಕ್ಕಿರುವ ಈ ಶ್ರೀಮಂತಿಕೆಯ ಬದುಕು ಕಳೆದು ಹೋಗುತ್ತದೆ ಎಂಬುದು ಶಕುಂತಲಾಳಿಗೆ ಗೊತ್ತಿದೆ. ಹಾಗಾಗಿ ಅವರು ಗೌತಮ್‌ಗೆ ಮದುವೆ ಮಾಡಲು ತಯಾರಿಲ್ಲ. ಆತನಿಗೆ ಮದುವೆ ಎಂದರೆ ಬೇಸರವಾಗುವಂತೆ ಪದೇ ಪದೇ ಶಕುಂತಲಾ ನೆನಪಿಸುತ್ತಿರುತ್ತಾಳೆ.
ಇತ್ತ ಭೂಮಿಕಾಳಿಗೆ ಅಪೇಕ್ಷಾ ಸ್ನೇಹಿತರು ತಮಾಷೆ ಮಾಡುತ್ತಾರೆ. 35 ವರ್ಷ ವಯಸ್ಸಾದರೂ ನಿಮ್ಮ ಅಕ್ಕನಿಗೆ ಮದುವೆ ಆಗಿಲ್ಲ ಅಲ್ವಾ..? ಆಗಲೇ ಒಪ್ಪದವರು ಈಗ ಈ ವಯಸ್ಸಿನಲ್ಲಿ ನಿಮ್ಮಕ್ಕನನ್ನು ಯಾರೂ ಮೆಚ್ಚಿಕೊಳ್ಳುವುದಿಲ್ಲ ಎಂದು ತಮಾಷೆ ಮಾಡುತ್ತಾರೆ. ಇದರಿಂದ ಭೂಮಿಕಾಳಿಗೆ ಬೇಸರವಾಗುತ್ತದೆ. ಭೂಮಿಕಾ ತಂದೆ ಸದಾಶಿವ ಮಗಳಿಗೆ ತನ್ನದೊಂದು ಬದುಕನ್ನು ಕಟ್ಟಿಕೊಳ್ಳುವಂತೆ ಬುದ್ಧಿ ಹೇಳುತ್ತಾರೆ.

ಮಗಳ ಬಗ್ಗೆ ಮಾತನಾಡಿದ್ದಕ್ಕೆ ಸದಾಶಿವ ಹಾಗೂ ಅವರ ಪತ್ನಿ ಕೂಡ ಜಗಳ ಆಡುತ್ತಾರೆ. ಇದನ್ನು ಕೇಳಿಸಿಕೊಲ್ಳುವ ಭೂಮಿಕಾಳಿಗೆ ಬೇಸರವಾಗುತ್ತದೆ. ಸದಾಶಿವ ಪತ್ನಿಗೆ ತನ್ನ ಎರಡನೇ ಮಗಳು ಅಪೇಕ್ಷಾಳನ್ನು ಸಿನಿಮಾದಲ್ಲಿ ನೋಡುವ ಆಸೆ. ಈ ಮಿಡಲ್ ಕ್ಲಾಸ್ ಬದುಕು ಸಾಕಾಗಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಳ್ಳುವ ಭೂಮಿಕಾ ಬೇಸರ ಮಾಡಿಕೊಳ್ಳುತ್ತಾಳೆ.
ಹುಡುಗನನ್ನು ತೋರಿಸಲು ಮುಂದಾದ ಶೃತಿ
ಭೂಮಿಕಾ ಹಾಗೂ ಸದಾಶಿವ ಯೋಗ ಮುಗಿಸಿಕೊಂಡು ಬರುವಾಗ ಅವಳ ಸ್ನೇಹಿತೆ ಶೃತಿ ಎದುರಾಗುತ್ತಾಳೆ. ಶೃತಿ ಪತಿ ಹಾಗೂ ಭೂಮಿಕಾ ಮೊದಲು ಪ್ರೀತಿಸುತ್ತಿದ್ದು, ಆತ ಈಗ ಭೂಮಿಕಾ ಸ್ನೇಹಿತೆಯನ್ನೇ ಮದುವೆಯಾಗಿದ್ದಾನೆ. ಈ ವಿಚಾರಕ್ಕೆ ಭೂಮಿಕಾ ತನ್ನ ಪತಿಯನ್ನು ನೀನು ಭೂಮಿಕಾ ಪ್ರೀತಿಸುತ್ತಿರುವ ವಿಚಾರ ಹೇಳದೇ, ಈಗಲೂ ನಾನು ಪಶ್ಚಾತಾಪಡುವಂತೆ ಮಾಡಿದೆ ಎಂದು ಹೇಳುತ್ತಾಳೆ. ಶೃತಿ, ಭೂಮಿಕಾಳಿಗೆ ಹುಡುಗನನ್ನು ನೋಡಿದ್ದು, ಅವನನ್ನು ಭೇಟಿ ಮಾಡಿಸಲು ಹೋಟೆಲ್‌ಗೆ ಕರೆದುಕೊಂಡು ಬಂದಿದ್ದಾಳೆ.

ಡಿನ್ನರ್ ಪ್ಲಾನ್ ಮಾಡಿದ ಆನಂದ್
ಇತ್ತ ಆನಂದ್ ತನ್ನ ಪತ್ನಿ ಜೊತೆಗೆ ಗೌತಮ್ ದಿವಾನ್‌ನನ್ನು ಭೇಟಿ ಮಾಡಿದ್ದಾನೆ. ಮತ್ತೆ ಮತ್ತೆ ಗೌತಮ್‌ಗೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾನೆ. ಇದರಿಂದ ಗೌತಮ್ ಒತ್ತಾಯ ಮಾಡಬೇಡ. ನನ್ನ ಬದುಕು ಇಷ್ಟೇ ಎಂದು ಹೇಳಿದ್ದಾನೆ. ಆದರೂ ಅಪರ್ಣಾ ಮತ್ತು ಆನಂದ್ ಡಿನ್ನರ್ ಪ್ಲಾನ್ ಮಾಡಿದ್ದು, ಹುಡುಗಿ ನೋಡುವುದಕ್ಕೆ ಗೌತಮ್‌ನ ಕರೆದುಕೊಂಡು ಬಂದಿದ್ದಾರೆ. ಒಟ್ನಲ್ಲಿ ಗೌತಮ್ ಹಾಗೂ ಭೂಮಿಕಾ ಮನಸ್ಥಿತಿ ಒಂದೇ ಇದ್ದು, ಇಬ್ಬರೂ ಯಾವಾಗ ಭೇಟಿ ಮಾಡುತ್ತಾರೋ. ಇಬ್ಬರು ಯಾವಾಗ ಒಂದಾಗುತ್ತಾರೋ ಗೊತ್ತಿಲ್ಲ.


Click it and Unblock the Notifications











