Amruthadhaare: ಆನಂದ್‌ಗೆ ಸಮಯ ಕೊಟ್ಟು ಕಳಿಸಿದ ಗೌತಮ್: ಸ್ನೇಹಕ್ಕೆ ಕೊನೆಯಾಡುತ್ತಾ ಹಾರ?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ದೊಡ್ಡ ಅನಾಹುತವೊಂದು ನಡೆದು ಹೋಗಿದೆ. ಆನಂದ್ ಅನ್ನು ಮನೆಯಿಂದ ಹೇಗಾದರೂ ಮಾಡಿ ಹೊರಗೆ ಕಳಿಸಬೇಕು ಎಂದು ಯೋಚಿಸುತ್ತಿದ್ದರು. ಇದೇ ಸಂದರ್ಭದಲ್ಲಿ ವಂಶಪಾರಂಪರ್ಯವಾಗಿ ಬಂದ ಹಾರ ಭೂಮಿಕಾ ಕೈ ಸೇರುತ್ತಿರುವುದನ್ನು ಶಕುಂತಲಾ ಕೈಯಲ್ಲಿ ಸಹಿಸಲಾಗುತ್ತಿಲ್ಲ. ಹೀಗಾಗಿ ಜೈದೇವ, ಲಕ್ಷ್ಮೀಕಾಂತ ಹಾಗೂ ಶಕುಂತಲಾ ಪ್ಲಾನ್ ಮಾಡಿದ್ದಾರೆ.

ಆನಂದ್ ಅನ್ನು ಮನೆಯಿಂದ ಹೊರಗೆ ಕಳಿಸಲು ಇದೇ ಸರಿಯಾದ ಸಮಯ ಎಂದು ಆತನ ಮೇಲೆ ಕಳ್ಳತನದ ಗೂಬೆ ಕೂರಿಸಲು ಯತ್ನಿಸಿದ್ದಾರೆ. ಹಾರ ಕಾಣುತ್ತಿಲ್ಲ ಎಂದು ಮನೆಯವರೆಲ್ಲಾ ಗಾಬರಿಯಾಗಿ ಹುಡುಕಾಡುತ್ತಿದ್ದಾರೆ.

Amruthadhaare Serial 30th October episode written update

ಡುಪ್ಲಿಕೇಟ್ ಹಾರ ತಂದ ಶಕುಂತಲಾ

ಎಷ್ಟು ಹುಡುಕಿದರೂ ಹಾರ ಸಿಗಲಿಲ್ಲ ಎಂದು ಗೌತಮ್, ಶಕುಂತಲಾ ಬಳಿ ಯಾವುದಾದರೂ ಒಂದು ಒಡವೆಯನ್ನು ತಂದು ಎಲ್ಲರ ಮುಂದೆ ನೀಡುವಂತೆ ಕೇಳಿದ್ದಾನೆ. ಶಕುಂತಲಾ ಎಲ್ಲರ ಎದುರು ಮನೆಯ ಮರ್ಯಾದೆ ಹಾಳಾಗಬಾರದು ಎಂದು ನೆಕ್ಲೇಸ್ ಒಂದನ್ನು ತಂದು ಭೂಮಿಕಾ ಕೊರಳಿಗೆ ಹಾಕಿದ್ದಾಳೆ. ಸೆಲಬ್ರೇಷನ್ ಮುಗಿದ ಬಳಿಕ ಎಲ್ಲರೂ ಮನೆಯಿಂದ ಹೊರಟಿದ್ದಾರೆ. ಅಜ್ಜಿಗೆ ತನ್ನ ಪತಿ ಹಲವು ವರ್ಷದಿಂದ ಕಾಪಾಡಿಕೊಂಡು ಬಂದಿದ್ದ ಹಾರ ಕಳುವಾಗಿದೆ ಎಂದು ಬೇಸರ ಮಾಡಿಕೊಂಡಿದ್ದಾರೆ.

ಅಶ್ವಿನಿ ಬೇಸರ ಮಾಡಿಕೊಂಡ ಮಹಿಮಾ

ಇತ್ತ ಅಶ್ವಿನಿ ಮತ್ತು ಮಹಿಮಾ ಜಗಳ ಮಾಡಿಕೊಂಡಿದ್ದಾರೆ. ಅಶ್ವಿನಿ ಶ್ರೀಮಂತರ ಮನೆಯ ಹುಡುಗನನ್ನು ಮದುವೆಯಾಗಿದ್ದಾಳೆ. ಆದರೆ, ಮಹಿಮಾ ಜೀವನ್‌ನನ್ನು ಪ್ರೀತಿಸಿ, ಮಿಡಲ್ ಕ್ಲಾಸ್ ಮನೆಗೆ ಮದುವೆಯಾಗಿ ಹೋಗಿದ್ದಾಳೆ ಎಂದು ಹೀಯಾಳಿಸುತ್ತಿರುತ್ತಾಳೆ. ಮಹಿಮಾ ಅತ್ತೆ ಕೂಡ ಫ್ಯಾಷನ್ ಫೀಲ್ಡ್‌ನಲ್ಲೇ ಇದ್ದವರು ಎಂದು ಹೇಳುತ್ತಾಳೆ. ಇದರಿಂದ ಬೇಸರಗೊಂಡ ಮಹಿಮಾ, ಅಶ್ವಿನಿಗೆ ಬೈಯುತ್ತಾಳೆ. ನಿನ್ನ ರೀತಿ ಬೇರೆಯವರ ದುಡ್ಡಲ್ಲಿ ಮಜಾ ಮಾಡುತ್ತಿಲ್ಲ. ನನ್ನ ಗಂಡ ಇನ್ನೊಬ್ಬರ ಮೇಲೆ ಡಿಪೆಂಡ್ ಆಗದಂತೆ ನೋಡಿಕೊಳ್ಳುತ್ತಿದ್ದಾನೆ. ಸುಮ್ಮನೆ ಎಲ್ಲರ ಮುಂದೆ ನನ್ನನ್ನು ಹೀಯಾಳಿಸಬೇಡ. ನಿನ್ನ ಬಗ್ಗೆ ಮಾತನಾಡಿದರೆ, ಬಹಳ ದೊಡ್ಡ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಹೇಳುತ್ತಾಳೆ.

Amruthadhaare Serial 30th October episode written update

ಆನಂದ್ ಮೇಲೆ ಗೂಬೆ ಕೂರಿಸಿದ ಜೈದೇವ

ಇನ್ನು ಕಾರ್ಯಕ್ರಮ ಮುಗಿದ ಮೇಲೆ ಗೌತಮ್ ಮನೆಯವರ ಎದುರು ಆನಂದ್ ಅನ್ನು ಪ್ರಶ್ನೆ ಮಾಡುತ್ತಾನೆ. ಆಗ ಆನಂದ್ ಹಾರ ನನ್ನ ಬಳಿಯೇ ಇತ್ತು ಗೌತಮ್. ನಾನೇ ಲಾಕರ್‌ನಿಂದ ತೆಗೆದುಕೊಂಡು ಬಂದೆ ಆದರೆ, ನಂತರ ಅದು ಕಳೆದು ಹೋಯ್ತು ಎಂದು ಹೇಳುತ್ತಾನೆ. ಆಗ ಜೈದೇವ ನೀವೇ ಬಚ್ಚಿಟ್ಟು ಮೋಸ ಮಾಡುತ್ತಿದ್ದೀರಾ..? ಅಣ್ಣ ನಿಮ್ಮನ್ನು ಎಷ್ಟು ನಂಬಿದ್ದಾರೆ. ಅವರ ನಂಬಿಕೆಗೆ ಮೋಸ ಮಾಡುತ್ತಿದ್ದೀರಾ. ನಿಮ್ಮ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸುಮ್ಮನೆ ಇರುತ್ತಿರಲಿಲ್ಲ ಎಂದು ಕೂಗಾಡುತ್ತಾನೆ. ಶಕುಂತಲಾ ಕೂಡ ಮನೆತನದ ಹಾರ ಅದು. ಅದರ ಮೇಲೆ ಯಾಕೆ ಆಸೆ ಪಡುತ್ತೀಯಾ. ನನ್ನ ಮಗ ನಿನ್ನನ್ನು ನಂಬಿದ್ದಕ್ಕೆ ಹೀಗಾ ಮಾಡುವುದು ಎಂದು ಪ್ರಶ್ನಿಸುತ್ತಾಳೆ.

ಆನಂದ್‌ಗೆ ಸಮಯ ಕೊಟ್ಟು ಕಳಿಸಿದ ಗೌತಮ್

ಆನಂದ್ ಇದು ಬೇಕಂತಲೇ ನನ್ನನ್ನು ಟ್ರಾಪ್ ಮಾಡಿರುವುದು. ಈ ಹಾರಕ್ಕೋಸ್ಕರ ನನ್ನ ಸ್ನೇಹ ದೂರ ಮಾಡಬೇಡ ಎಂದು ಆನಂದ್ ಪರಿ ಪರಿಯಾಗಿ ತನ್ನದೇನೂ ತಪ್ಪಿಲ್ಲ ಎಂದು ಹೇಳುತ್ತಾನೆ. ಆದರೆ, ಗೌತಮ್, ಆನಂದ್ ಅನ್ನು ಸಪರೇಟ್ ಆಗಿ ಕರೆದು ಸಿಸಿಟಿವಿಯಲ್ಲಿ ನೀನು ಹಾರ ತೆಗೆದುಕೊಂಡಿರುವುದು ನೋಡಿದ್ದೇನೆ. ಇನ್ನೆರಡು ದಿನ ಟೈಂ ಕೊಡ್ತೀನಿ ಅಷ್ಟರಲ್ಲಿ ಹಾರ ತಂದು ಕೊಡು. ಇಲ್ಲದಿದ್ದರೆ, ನಮ್ಮ ಸ್ನೇಹವನ್ನು ಮರೆತು ಬಿಡು ಎಂದು ಹೇಳಿ ಕಳಿಸುತ್ತಾನೆ.

More from Filmibeat

English summary
Amruthadhaare Kannada Serial today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X