Amruthadhaare ; ಮಲ್ಲಿ ಸಹಾಯಕ್ಕೆ ಬಂದ ಶ್ರಾವಣಿ : ದಿಯಾ-ಜೈದೇವ್ ಮದುವೆ ನಿಂತು ಹೋಗುತ್ತಾ..?
ಅಮೃತಧಾರೆ ಧಾರಾವಾಹಿಯಲ್ಲಿ ಸೃಜನ್ ಮತ್ತು ಸುಧಾಳ ಹಿಮದೆ ಯಾವುದೋ ಒಂದು ರಹಸ್ಯ ಅಡಗಿದ್ದು, ಮುಂದಿನ ದಿನಗಳಲ್ಲಿ ಈ ಸತ್ಯ ಹೊರಬರಬೇಕಿದೆ. ಸದ್ಯ ಸೃಜನ್ ಭೂಮಿಕಾಳಿಗೆ ಹತ್ತಿರವಾಗಿದ್ದಾನೆ. ಭೂಮಿಕಾ ಹೇಳಿದ ಕೆಲಸವನ್ನು ಸೃಜನ್ ಮಾಡುತ್ತಿದ್ದಾನೆ. ಸೃಜನ್ ಭೂಮಿಕಾಳ ಪತ್ತೆದಾರಿ ಕೆಲಸಕ್ಕೆ ಕೈ ಜೋಡಿಸಿದ್ದಾನೆ. ಇದೆಲ್ಲದರ ನಡುವೆ ಅಪೇಕ್ಷಾ ಮತ್ತು ಭಾಗ್ಯ ನಡುವೆ ಮೊದಲ ಬಾರಿಗೆ ಸಮಾಗಮವಾಗಿದ್ದು, ಮೊದಲ ಭೇಟಿಯಲ್ಲೇ ಅಪ್ಪಿ ಕೆನ್ನೆಗೆ ಬಿಸಿ ಬಿಸಿಯಾದ ಕಪಾಳಮೋಕ್ಷ ಸಿಕ್ಕಿದೆ.
ಅಪೇಕ್ಷಾ ಮನದಲ್ಲಿದೆ ಮುಗ್ಧತೆ
ಆದರೂ ಕೂಡ ಕೋಪ ಮಾಡಿಕೊಳ್ಳದ ಭಾಗ್ಯಳನ್ನು ಅಪೇಕ್ಷಾ ಸಮಾಧಾನ ಮಾಡಿ, ಅವಳನ್ನು ಸತ್ಕರಿಸುತ್ತಾಳೆ. ಊಟ ಮಾಡದ ಭಾಗ್ಯಳನ್ನು ಕೂರಿಸಿ ತನ್ನ ಕೈಯ್ಯಾರೆ ಕೈ ತುತ್ತು ನೀಡುತ್ತಾಳೆ. ಭಾಗ್ಯಳನ್ನು ಸಮಾಧಾನ ಮಾಡುತ್ತಾ. ಊಟ ಮಾಡಬೇಕು ಎಂದು ಮಕ್ಕಳಿಗೆ ತಿಳಿ ಹೇಳುವಂತೆ ಹೇಳುತ್ತಾ ಅಪೇಕ್ಷಾ ಊಟ ಮಾಡಿಸುವುದನ್ನು ಪಾರ್ಥ ದೂರದಿಂದಲೇ ಗಮನಿಸಿದ್ದಾನೆ. ಸುಧಾ ಅಪೇಕ್ಷಾ ಬಳಿ ಪದೇ ಪದೇ ಕ್ಷಮೆ ಕೇಳಿದ್ದು, ಅಪೇಕ್ಷಾ ಅವರು ಮಗು ಇದ್ದ ಹಾಗೆ ಇದಕ್ಕೆಲ್ಲಾ ಕೋಪ ಮಾಡಿಕೊಳ್ಳಬಾರದು. ಅವರಿಗೆ ಏನೂ ಅರ್ಥವಾಗೊಲ್ಲ. ನನಗೆ ಯಾಕೆ ಹೊಡೆದರು ಎಂಬುದು ಅವರಿಗೇ ಗೊತ್ತಿರೋದಿಲ್ಲ. ಪರವಾಗಿಲ್ಲ ಎಂದು ಹೇಳುತ್ತಾಳೆ.

ಹೆಂಡತಿಯನ್ನು ಕಂಡು ಪಾರ್ಥ ಹ್ಯಾಪಿ
ಇದೆಲ್ಲವನ್ನೂ ಕೇಳಿಸಿಕೊಂಡ ಪಾರ್ಥನಿಗೆ ಶಾಕ್ ಆಗುತ್ತದೆ. ಅಪೇಕ್ಷಾ ಮನಸ್ಸು ಕೂಡ ಮುಗ್ಧತೆಯಿಂದ ಕೂಡಿದೆ. ಅತ್ತಿಗೆ ಭೂಮಿಕಾ ಮನಸ್ಥಿತಿ ಅಪ್ಪಿಯಲ್ಲೂ ಇದೆ ಎಂಬುದು ಪಾರ್ಥನಲ್ಲಿ ಕನ್ಫರ್ಮ್ ಆಗಿದೆ. ಅಪೇಕ್ಷಾ ಜೊತೆ ಪಾರ್ಥ ಮತ್ತೆ ಮೊದಲಿನಂತೆ ರೊಮ್ಯಾಂಟಿಕ್ ಆಗಿ ನಡೆದುಕೊಂಡಿದ್ದಾನೆ. ಅಲ್ಲದೇ, ಅಪೇಕ್ಷಾಳಿಗೆ ತಾನು ಭಾಗ್ಯ ಬಳಿ ನಡೆದುಕೊಂಡ ರೀತಿಯನ್ನು ಹೇಳಿ, ಅದರಿಂದ ತನಗೆ ಖುಷಿಯಾತು ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾನೆ. ಬಹಳ ದಿನಗಳ ಬಳಿಕ ಅಪೇಕ್ಷಾ ಮತ್ತು ಪಾರ್ಥ ಇಬ್ಬರೂ ಖುಷಿ ಖಷಿಯಾಗಿ ಕಾಲ ಕಳೆದಿದ್ದಾರೆ. ಅತ್ತಿಗೆ ತಂಗಿ, ಭಾವನ ತಮ್ಮ ಎಂದು ಕರೆಯುತ್ತಿದ್ದ ದಿನಗಳ ನಂತರ ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಆಗಿ ಕಂಡಿದ್ದಾರೆ.
ಮೈಕ್ ಬಗ್ಗೆ ಮಾಹಿತಿ ಪಡೆದ ಗೌತಮ್
ಇನ್ನು ಭೂಮಿಕಾ ಸರದಲ್ಲಿದ್ದ ಮೈಕ್ ಬಗ್ಗೆ ಹೇಳಿದಾಗ, ಗೌತಮ್ ಗೂ ಶಾಕ್ ಆಗಿತ್ತು. ಈಗ ಗೌತಮ್ ಆ ಮೈಕ್ ನಲ್ಲಿರುವ ನಂಬರ್ ಮೂಲಕ ಅದನ್ನು ಖರೀದಿ ಮಾಡಿದವರು ಯಾರು.? ಅದರಿಂದ ಏನೆಲ್ಲಾ ಮಾಹಿತಿಯನ್ನು ಪಡೆದಿದ್ದಾರೆ ಎಂಬ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದಾನೆ. ಅಲ್ಲದೇ, ಅದೇ ರೀತಿ ಮನೆಯಲ್ಲಿ ಇನ್ನೆಲ್ಲಾದರೂ ಮೈಕ್ ಇದೆಯಾ..? ಯಾರಾದರೂ ತಮ್ಮ ಮನೆಯವರು ಹಾಗೂ ಮನೆಯವರ ಮಾತುಗಳನ ನು ಕದ್ದು ಆಲಿಸುತ್ತಿದ್ದಾರಾ ಎಂದು ತಿಳಿಯಲು ಎಕ್ಸ್ ಪರ್ಟ್ ಒಬ್ಬರನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾನೆ. ಬಂದಾತ ಶಕುಂತಲಾ ಆಮೀಷಕ್ಕೆ ಒಳಗಾಗದೇ ಕರೆಕ್ಟ್ ಆಗಿ ಕೆಲಸ ಮಾಡಿದರೆ, ಗೌತಮ್ ಗೆ ಎಲ್ಲಾ ಸತ್ಯಗಳು ತಿಳಿಯುವುದು ಪಕ್ಕಾ ಆಗಿದೆ.
ಮಲ್ಲಿ ಸಹಾಯಕ್ಕೆ ಬಂದ ಶ್ರಾವಣಿ
ಇನ್ನು ಮಲ್ಲಿ ಈಗಾಗಲೇ ದಿಯಾ ಮತ್ತು ಜೈದೇವ್ ದೇವಸ್ಥಾನದಲ್ಲಿ ಮದುವೆಯಾಗುತ್ತಿರುವುದನ್ನು ನೋಡಿದ್ದಾಳೆ. ಭೂಮಿಕಾಳನ್ನು ಮುಂದೆ ಕಳಿಸಿದ ಮಲ್ಲಿ, ಅಲ್ಲೇ ಇದ್ದುಕೊಂಡು ಶ್ರಾವಣಿಗೆ ಫೋನ್ ಮಾಡಿ ಸಹಾಯ ಕೇಳಿಕೊಂಡಿದ್ದಾಳೆ. ಶ್ರಾವಣಿ ದೇವಸ್ಥಾನಕ್ಕೆ ಬಂದಿದ್ದು, ಮಲ್ಲಿಯ ಸಹಾಯಕ್ಕೆ ನಿಂತಿದ್ದಾಳೆ. ಶ್ರಾವಣಿ ಒಬ್ಬಳೇ ಜೈದೇವ್ ಮತ್ತು ದಿಯಾ ಮದುವೆಯನ್ನು ನಿಲ್ಲಿಸುತ್ತಾಳಾ..? ಇಲ್ಲವೇ ಸುಬ್ರಹ್ಮಣ್ಯನನ್ನು ಕರೆದುಕೊಂಡು ಬಂದಿದ್ದಾನಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.


Click it and Unblock the Notifications











