Amruthadhaare ; ಮೊಮ್ಮಗನ ನಿದ್ದೆಗೆ ಅಜ್ಜಿಯ ಕಾಟ : ತಂಗಿ ಮದುವೆಗೆ ಬ್ರೇಕ್ ಹಾಕಿದ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಿಗೆ ಇನ್ನೂ ಜೈದೇವನ ಮೇಲೆ ನಂಬಿಕೆ ಬಂದಿಲ್ಲ. ಹಾಗಾಗಿ ಜೈದೇವ ಭೂಮಿಕಾ ಎದುರು ನಾಟಕ ಮಾಡುತ್ತಿರುತ್ತಾನೆ. ಮಲ್ಲಿಯ ಜೊತೆಗೆ ಪ್ರೀತಿಯಿಂದ ಮಾತನಾಡುತ್ತಾ, ಅದನ್ನು ಭೂಮಿಕಾ ಗಮನಿಸಲಿ ಎಂದೇ ನಾಟಕ ಮಾಡುತ್ತಿರುತ್ತಾನೆ.ಇದನ್ನೆಲ್ಲಾ ನೋಡಿದರೂ ಭೂಮಿಕಾ ಕೇರ್ ಮಾಡುವುದೇ ಇಲ್ಲ. ಇನ್ನು ಮಲ್ಲಿ ಬಹಳ ಬೇಸರವಾಗಿದ್ದು, ಆಸ್ಪತ್ರೆಗೆ ಹೋಗಿ ಮತ್ತೆ ಟೆಸ್ಟ್ ಮಾಡಿಸೋಣ. ನನಗ್ಯಾಕೋ ಮಗುವಿನ ಆರೋಗ್ಯದ ಬಗ್ಗೆ ಆತಂಕವಿದೆ ಎನ್ನುತ್ತಾಳೆ. ಜೈದೇವ ಕೂಡ ವಿಧಿ ಇಲ್ಲದೇ ಒಪ್ಪಿಕೊಳ್ಳುತ್ತಾನೆ.

ಆಸ್ಪತ್ರೆಯಲ್ಲಿ ಒದ್ದಾಡುತ್ತಿರುವ ಶಕುಂತಲಾ

ಭೂಮಿಕಾಳನ್ನು ಗೌತಮ್ ಆಸ್ಪತ್ರೆಗೆ ಸೇರಿಸಿದ್ದಾಗಿದೆ. ಆರೋಗ್ಯವಾಗಿದ್ದರೂ ಕೂಡ ಶಕುಂತಲಾ ಎಲ್ಲೂ ಹೋಗದಂತಾಗಿದ್ದು, ಒದ್ದಾಡುತ್ತಿದ್ದಾಳೆ. ಇದರ ನಡುವೆ ಲಕ್ಷ್ಮೀಕಾಂತ ಬೇರೆ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ಗೂಢಾಚರ್ಯೆ ಮೂಲಕ ತಿಳಿದುಕೊಳ್ಳುತ್ತಿದ್ದಾನೆ. ಭೂಮಿಕಾ ಹಾಗೂ ಗೌತಮ್ ಒಂದೇ ರೂಮಿನಲ್ಲಿ ಇದ್ದರೂ ಇಬ್ಬರೂ ಗಂಡ ಹೆಂಡತಿಯಂತೆ ಇಲ್ಲ. ಇಬ್ಬರೂ ಕೂಡ ಬೇರೆ ಬೇರೆಯಾಗಿ ಮಲಗುತ್ತಿದ್ದಾರೆ ಎಂಬ ಸತ್ಯ ತಿಳಿದು ಶಕುಂತಲಾಳಿಗೆ ಹೇಳುತ್ತಾನೆ. ಶಕುಂತಲಾ ಅವರಿಬ್ಬರೂ ಹಾಗೆ ದೂರ ಇರುವಂತೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾಳೆ. ಇಲ್ಲದೇ ಹೋದರೆ ತನಗೆ ಉಳಿಗಾಲವಿಲ್ಲ ಎಂಬ ಅರಿವಿದೆ.

amruthadhaare-serial-31-may-episode-written-update

ಅಜ್ಜಿಗೆ ಗೆಳೆಯನ ಬಗ್ಗೆ ಸತ್ಯ ಹೇಳಿದ ಆನಂದ್

ಇನ್ನು ಅಜ್ಜಿಯನ್ನು ಭೇಟಿ ಮಾಡಿದ ಆನಂದ್ ಬಾಯಿ ತಪ್ಪಿ ಗೌತಮ್ ಮತ್ತು ಭೂಮಿಕಾ ಮೇಲ್ನೋಟಕ್ಕೆ ಗಂಡ-ಹೆಂಡತಿ ರೀತಿ ಇದ್ದಾರೆ. ಭೂಮಿಕಾ ಅತ್ತಿಗೆ ನೆಲದ ಮೇಲೆ ಮಲಗುತ್ತಾರೆ. ಗೌತಮ್ ಹಾಸಿಗೆ ಮೇಲೆ ಮಲಗುತ್ತಾನೆ. ಅವರಿಬ್ಬರೂ ಈಗಷ್ಟೇ ಒಬ್ಬರಿಗೊಬ್ಬರು ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಪ್ರತಿ ಸಲವೂ ಇಬ್ಬರೂ ಒಂದಾಗಬೇಕು ಎಂದು ಕೊಂಡಾಗಲೆಲ್ಲಾ ಏನಾದರೂ ಸಮಸ್ಯೆ ಆಗುತ್ತದೆ ಎಂದು ಹೇಳುತ್ತಾನೆ. ಅಜ್ಜಿಗೆ ಈ ಮಾತುಗಳನ್ನು ಕೇಳಿ ಬೇಸರವಾಗುತ್ತದೆ. ಅದಕ್ಕೆ, ಅವರಿಬ್ಬರ ಬದುಕನ್ನು ನಾನು ಸರಿ ಮಾಡುತ್ತೇನೆ ಎಂದು ಆನಂದ್ ಗೆ ಹೇಳುತ್ತಾರೆ. ಇದೆಲ್ಲವನ್ನು ಮನೆ ಕೆಲಸದಾಕೆ ಕೇಳಿಸಿಕೊಂಡು ಲಕ್ಷ್ಮೀಕಾಂತನಿಗೆ ತಿಳಿಸುತ್ತಾಳೆ.

ಅಪೇಕ್ಷಾ ಮದುವೆ ಕಾರ್ಯಕ್ಕೆ ಭೂಮಿಕಾ ಬ್ರೇಕ್

ಭೂಮಿಕಾ ತಾಯಿ ಮನೆಗೆ ಹೊರಡುತ್ತಾಳೆ. ಮಂದಾಕಿನಿ ಭೂಮಿಕಾ ಬಂದಿದ್ದಕ್ಕೆ ಖುಷಿ ಪಡುತ್ತಾಳೆ. ಅಲ್ಲದೇ, ಅಪೇಕ್ಷಾಳಿಗೆ ಹುಡುಗನನ್ನು ನೋಡಿದ್ದು, ಮದುವೆ ಮಾಡಿ ಅಮೆರಿಕಾಗೆ ಕಳಿಸಬೇಕು ಎಂದು ಹೇಳುತ್ತಾಳೆ. ಭೂಮಿಕಾ ಅದಕ್ಕೆ ಈಗಷ್ಟೇ ಅಪ್ಪಿ ಮದುವೆ ಕ್ಯಾನ್ಸಲ್ ಆಗಿದೆ. ಅವಳ ಮನಸ್ಸಿಗೂ ಬೇಸರವಾಗಿರುತ್ತದೆ. ಅಲ್ಲದೇ, ಮಾಡೆಲಿಂಗ್ ಫೀಲ್ಡ್ ನಲ್ಲಿ ಸಾಧಿಸಬೇಕು ಎಂದುಕೊಂಡಿದ್ದಾಳೆ. ಅಷ್ಟು ಬೇಗ ಅವಳಿಗೆ ಮದುವೆ ಮಾಡಿ ಅಷ್ಟು ದೂರ ಯಾಕೆ ಕಳಿಸಬೇಕು. ನಮ್ಮ ಹತ್ತಿರದಲ್ಲೇ ಇರುವ ಹುಡುಗನನ್ನು ನೋಡಿ ಮದುವೆ ಮಾಡಬಾರದೇಕೆ ಎಂದು ಬುದ್ಧಿ ಹೇಳುತ್ತಾಳೆ. ಆಗ ಮನೆಯವರೆಲ್ಲರಿಗೂ ಭೂಮಿಕಾ ಹೇಳುತ್ತಿರುವುದರಲ್ಲಿ ಅರ್ಥವಿದೆ ಎಂದೆನಿಸಿ, ಮದುವೆ ಬೇಡ ಎಂದು ಹೇಳುತ್ತಾರೆ. ಇದರಿಂದ ಅಪೇಕ್ಷಾಳಿಗೆ ಬಹಳ ಖುಷಿಯಾಗುತ್ತದೆ.

amruthadhaare-serial-31-may-episode-written-update

ಮೊಮ್ಮಗನ ಬಗ್ಗೆ ಅಜ್ಜಿಯ ಕಾಳಜಿ

ಭೂಮಿಕಾ ಮತ್ತು ಗೌತಮ್ ಎಂದಿನಂತೆ ಮಾತು ಮುಗಿಸಿ ಮಲಗಲು ಮುಂದಾಗುತ್ತಾರೆ. ಭೂಮಿಕಾ ಹಾಸಿಗೆ ಹಾಸಿಕೊಂಡ ಬಳಿಕ ಅಜ್ಜಿ ಬಂದು ರೂಮ್ ಬಾಗಿಲನ್ನು ತಟ್ಟುತ್ತಾರೆ. ಹಾಸಿಗೆಯನ್ನು ಮಡಚಿಟ್ಟು ಬಾಗಿಲು ತೆಗೆದರೆ ಅಜ್ಜಿ, ಮಾತನಾಡಿಸುವ ನೆಪದಲ್ಲಿ ಬಂದಿರುತ್ತಾರೆ. ಮತ್ತೆ ಹಾಸಿಗೆ ಹಾಸಿದ ಕೂಡಲೇ ರೂಮ್ ಬಾಗಿಲನ್ನು ಅಜ್ಜಿ ತಟ್ಟುತ್ತಾರೆ. ಮತ್ತೆ ಇಬ್ಬರು ಹಾಸಿಗೆಯನ್ನು ಎತ್ತಿಟ್ಟು ಅಜ್ಜಿಯನ್ನು ಮಾತನಾಡಿಸಿ ಕಳಿಸುತ್ತಾರೆ. ಹೀಗೆ ಆದರೆ, ರಾತ್ರಿಯೆಲ್ಲಾ ಮಲಗಲು ಆಗುವುದಿಲ್ಲ ಎಂದು ಗೌತಮ್ ಭೂಮಿಕಾಳಿಗೆ ಹಾಸಿಗೆ ಮೇಲೆ ಮಲಗಲು ಹೇಳುತ್ತಾನೆ. ಈ ಮಾತನ್ನು ಕೇಳಿದ ಭೂಮಿಕಾಳಿಗೆ ಶಾಕ್ ಆಗುತ್ತದೆ.

More from Filmibeat

English summary
bhoomika stops apeksha marriage and helps for partha’s love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X