Amruthadhaare ; ಭೂಮಿಕಾ ಹೆಜ್ಜೆಯನ್ನು ಹಿಂಬಾಲಿಸಲು ಲಕ್ಷ್ಮೀಕಾಂತ ಮಾಸ್ಟರ್ ಪ್ಲಾನ್..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಆಟಗಳು ಸದ್ಯ ಕಡಿಮೆಯಾಗಿದ್ದು, ಈ ಸಂದರ್ಭದಲ್ಲಿ ಹೊಸ ಟ್ವಿಸ್ಟ್ ಶುರುವಾಗಿದೆ. ಧಾರಾವಾಹಿಯ ಆರಂಭದಲ್ಲೇ ಕಾಣಿಸಿಕೊಂಡಿದ್ದ ಮಾನ್ಯ ನಂತರ ಕಾಣೆಯಾಗಿದ್ದಳು. ಇದೀಗ ಅವಳ ಸಹೋದರಿ ಧನ್ಯಾ ಕಾಣಿಸಿಕೊಂಡಿದ್ದು, ಅಕ್ಕ ಮಾನ್ಯಳನ್ನು ಶಕುಂತಲಾ ಕೊಂದಿದ್ದಾಳೆ ಎಂದು ದೂರಿದ್ದಾಳೆ. ಅಷ್ಟೇ ಅಲ್ಲದೇ, ಶಕುಂತಲಾಳ ಬಣ್ಣ ಬಯಲು ಮಾಡಲು ಮುಂದಾಗಿದ್ದಾಳೆ. ಈ ನಡುವೆ ಇತ್ತ ಆನಂದ್ ಮನೆಯಲ್ಲಿ ಹೊಸ ಕೆಲಸದವಳು ಕಾಣಿಸಿಕೊಂಡಿದ್ದಾಳೆ. ಸುಧಾ ತನ್ನ ತಾಯಿ ಭಾಗ್ಯಮ್ಮ ಹಾಗೂ ಮಗಳೊಂದಿಗೆ ಜೀವನ ನಡೆಸುತ್ತಿದ್ದಾಳೆ.
ಸುಧಾ ಯಾಕೆ ಗೌತಮ್ ನನ್ನು ಭೇಟಿ ಮಾಡಬೇಕು..?
ಆನಂದ್ ಮನೆಯಲ್ಲಿ ಮನೆ ಕೆಲಸ ಹಾಗೂ ಅಡುಗೆ ಕೆಲಸಕ್ಕೆ ಸುಧಾ ಸೇರಿಕೊಂಡಿದ್ದಾಳೆ. ಮೊದಮೊದಲು ಎಲ್ಲರೂ ಸುಧಾ ಗೌತಮ್ ಸಹೋದರಿ ಎಂದು ಭಾವಿಸಿದ್ದರು. ಆದರೆ, ಸುಧಾಳಿಗೆ ಆಗಾಗ ಒಂದು ಫೋನ್ ಕರೆ ಬರುತ್ತಿದೆ. ಅದರ ಪ್ರಕಾರ ಗೌತಮ್ ನನ್ನು ಸುಧಾ ಭೇಟಿ ಂಆಡಬೇಕಿದೆ. ಅವಳು ಆನಂದ್ ಮನೆಗೆ ಕೆಲಸಕ್ಕೆ ಸೇರಿರುವುದು ಕೂಡ ಉದ್ದೇಶ ಪೂರ್ವಕವಾಗಿಯೇ. ಯಾರೋ ಅನಾಮಿಕನೊಬ್ಬ ಬಂದು ಸುಧಾಳಿಗೆ ಕೈ ತುಂಬಾ ಹಣ ಕೊಟ್ಟಿದ್ದಾನೆ. ನೀನು ಆದಷ್ಟು ಬೇಗ ಗೌತಮ್ ನನ್ನು ಭೇಟಿ ಮಾಡು, ನಮ್ಮ ಗುರಿಯನ್ನು ಮುಟ್ಟಲು ಆಗಲೇ ಸಾಧ್ಯವಾಗುವುದು ಎಂದಿದ್ದಾನೆ. ಹಾಗಾಗಿ ಸುಧಾ ಹೇಗಾದರೂ ಮಾಡಿ ಗೌತಮ್ ನ ಭೇಟಿಯಾಗ ಬೇಕು ಎಂದು ತೀರ್ಮಾನಿಸಿದ್ದಾಳೆ. ಇತ್ತ ಆನಂದ್ ಕೂಡ ಸುಧಾ ಕೈ ರುಚಿಗೆ ಮನಸೋತಿದ್ದು, ಗೆಳೆಯ ಗೌತಮ್ ಗೂ ಆಕೆಯ ಕೈ ರುಚಿಯನ್ನು ತಿನ್ನಿಸಬೇಕು ಎಂದಿದ್ದಾನೆ.

ಲಕ್ಷ್ಮೀಕಾಂತನ ಮಾಸ್ಟರ್ ಪ್ಲಾನ್
ಇತ್ತ ಲಕ್ಷ್ಮೀಕಾಂತ ಮತ್ತು ಶಕುಂತಲಾ ಪ್ಲಾನ್ ಮಾಡಿ ಧನ್ಯಾಳನ್ನು ಭೇಟಿ ಮಾಡುತ್ತಾರೆ. ಆದರೆ, ಭಾಗ್ಯ ಇನ್ನು ಬದುಕೇ ಇದ್ದಾಳೆ ಎಂಬ ಸತ್ಯವನ್ನು ಧನ್ಯಾ ಹೇಳಿದ್ದು, ಮಿಕ್ಕ ವಿಚಾರಗಳನ್ನು ಹೇಳದೆಯೇ ಮುಚ್ಚಿಟ್ಟಿದ್ದಾಳೆ. ಧನ್ಯಾಳನ್ನು ಹಿಡಿದು, ಸತ್ಯ ಬಾಯಿ ಬಿಡಿಸಬೇಕು. ಬಳಿಕ ಅವಳ ಕಥೆಯನ್ನು ಕೂಡ ಮಾನ್ಯಾಳಂತೆ ಮುಗಿಸಬೇಕು ಎಂದುಕೊಂಡಿದ್ದಾರೆ. ಆದರೆ, ಶಕುಂತಲಾ ಕೈಗೆ ಸಿಗದಂತೆ ಧನ್ಯಾ ತಪ್ಪಿಸಿಕೊಂಡು ಹೋಗಿದ್ದಾಳೆ. ಧನ್ಯಾಳನ್ನು ಶಕುಂತಲಾ ಕಡೆಯ ರೌಡಿಗಳು ಹುಡುಕಾಡುತ್ತಿದ್ದು, ಸತ್ಯವನ್ನು ಗೌತಮ್ ಗೆ ತಿಳಿಸಲು ಧನ್ಯಾ ಪ್ರಯತ್ನ ಪಡುತ್ತಾಳೆ. ಆದರೆ, ಅದು ಸಾಧ್ಯವಾಗದಿದ್ದಾಗ ಭೂಮಿಕಾಳನ್ನು ಸಂಪರ್ಕ ಮಾಡುತ್ತಾಳೆ. ಇದರಿಂದ ಶಕುಂತಲಾ ಹೆದರಿದ್ದು, ಲಕ್ಷ್ಮೀಕಾಂತ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.
ಭೂಮಿಕಾಳಿಗೆ ಚಿನ್ನದ ಸರ ಕೊಟ್ಟ ಶಕುಂತಲಾ
ಅದರ ಪ್ರಕಾರ, ಚಿನ್ನದ ಸರವೊಂದನ್ನು ತಂದಿದ್ದು. ಅದರಲ್ಲಿರುವ ಪೆಂಡೆಂಟ್ ನಲ್ಲಿ ರೆಕಾರ್ಡರ್ ಅನ್ನು ಫಿಕ್ಸ್ ಮಾಡಿಸಿದ್ದಾನೆ. ಆ ಸರವನ್ನು ಭೂಮಿಕಾ ಧರಿಸಿದರೆ, ಅವಳು ಎಲ್ಲೇ ಹೋದರೂ ಯಾರ ಜೊತೆಗೆ ಏನೇ ಮಾತನಾಡಿದರೂ ಗೊತ್ತಾಗುತ್ತದೆ ಎಂದು ಹೇಳಿದ್ದಾನೆ. ಹೀಗಾಗಿ ಶಕುಂತಲಾ ಆ ಸರವನ್ನು ನಿಮ್ಮ ತಂದೆ ಮನೆಯ ಹಿರಿ ಸೊಸೆಗೆ ಮಾಡಿಸಿದ್ದು ಎಂದು ಹೇಳಿ ಗೌತಮ್ ಗೆ ನೀಡಿದ್ದಾಳೆ. ಶಕುಂತಲಾ ಮಾತನ್ನು ಗೌತಮ್ ನಂಬಿದ್ದು, ಭೂಮಿಕಾ ಕೊರಳಿಗೆ ಹಾಕಿದ್ದಾನೆ. ಏನೂ ಅರಿಯದ ಭೂಮಿಕಾ ಸರವನ್ನು ಧರಿಸಿದ್ದು, ಲಕ್ಷ್ಮೀಕಾಂತ್ ಮತ್ತು ಶಕುಂತಲಾ ಅವಳ ಎಲ್ಲಾ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ಧನ್ಯಾಳನ್ನು ಭೇಟಿ ಮಾಡುತ್ತಾಳಾ ಭೂಮಿಕಾ ?
ಈಗ ಧನ್ಯ ಮತ್ತೆ ಭೂಮಿಕಾಳಿಗೆ ಫೋನ್ ಮಾಡಿದ್ದಾಳೆ. ತನ್ನ ಹಿಂದೆ ರೌಡಿಗಳಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಸಾಯಬಹುದು. ಅದಕ್ಕೂ ಮುನ್ನ ನಾನು ನಿಮಗೆ ಸತ್ಯವನ್ನು ಹೇಳಬೇಕು ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾಳೆ. ಭೂಮಿಕಾಳಿಗೆ ಇಂಟರೆಸ್ಟ್ ಇಲ್ಲ. ಆದರೂ ಕೂಡ ಗೌತಮ್ ತಾಯಿ ಬಗ್ಗೆ ಎಂಬ ಸತ್ಯವನ್ನು ತಿಳಿದು ಭೇಟಿ ಮಾಡಲು ಒಪ್ಪಿದ್ದಾಳೆ. ಈ ವಿಚಾರ ಈಗ ಶಕುಂತಲಾಳಿಗೆ ಗೊತ್ತಾಗಿದ್ದು, ಈ ಭೇಟಿಗೆ ಅವಕಾಶ ಮಾಡಿಕೊಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











