Amruthadhaare: ಭೂಮಿಕಾ-ಗೌತಮ್ ಮದುವೆ: ಜಗಳ ಮಾಡಿದ ಮಂದಾಕಿನಿ
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಹಾಗೂ ಜೀವನ್ ಮದುವೆಯಾದ ಮೇಲೆ, ಗೌತಮ್ ಭಾವುಕನಾಗುತ್ತಾನೆ. ನನ್ನ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಅವಳಿಗೆ ಏನೂ ಕೊರತೆ ಆಗದಿರಲಿ ಎಂದು ಹೇಳುತ್ತಾನೆ.
ಮಹಿಮಾಳನ್ನು ಕಳಿಸುವಾಗ ಗೌತಮ್ ಭಾವುಕನಾಗಿದ್ದನ್ನು ಕಂಡು ಭೂಮಿಕಾ ಕೂಡ ತನ್ನನ್ನು ಕಳಿಸುವಾಗಲೂ ಹೀಗೆ ಕಳಿಸಿಕೊಡುತ್ತಾರಾ ಎಂದು ಆಲೋಚಿಸುತ್ತಾ ಕಣ್ಣು ತುಂಬಿಕೊಳ್ಳುತ್ತಾಳೆ.

ಮದುವೆ ಮುಗಿದ ಮೇಲೆ ಮಹಿಮಾ ಹಾಗೂ ಜೀವನ್ ಫೋಟೋಶೂಟ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಆಗ ಜೀವನ್ ಅಜ್ಜಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರದ ಬಗ್ಗೆ ನೆನಪಿಸುತ್ತಾಳೆ. ಆಗ ಮಹಿಮಾ ಇದ್ಯಾವ ಶಾಸ್ತ್ರ ಎಂದು ಪ್ರಶ್ನೆ ಮಾಡುತ್ತಾಳೆ. ಮಹಿಮಾಳ ಪ್ರಶ್ನೆಗೆ ಎಲ್ಲರೂ ಶಾಕ್ ಆಗುತ್ತಾರೆ. ಬಳಿಕ ನಿಮ್ಮ ಮನೆಗೆ ಬರಬೇಕಾ. ಅದು ಸಾಧ್ಯವಿಲ್ಲ. ಮದುವೆಯಾದ ಮೇಲೆ ನನ್ನದೇ ಪ್ಲ್ಯಾನ್‌ಗಳಿವೆ. ನನ್ನ ಸ್ನೇಹಿತರೆಲ್ಲಾ ಸೇರಿ, ಹನಿಮೂನ್ ಪ್ಲಾನ್ ಮಾಡಿದ್ದಾರೆ. ಅದೂ ಕೂಡ ಕಾಸ್ಟ್ಲಿ ರೆಸಾರ್ಟ್. ನಾವು ಈಗ ಸೀದಾ ಏರ್ ಪೋರ್ಟ್ ಗೆ ಹೋಗಬೇಕು ಎಂದು ಹೇಳುತ್ತಾಳೆ.
ಮಹಿಮಾ ಮೇಲೆ ಜೀವನ್ ಕೆಂಡ
ಮಹಿಮಾ ಮಾತು ಎಲ್ಲರಿಗೂ ಶಾಕ್ ಆಗುವಂತೆ ಮಾಡುತ್ತದೆ. ಇದೇನಿದು ನಿಮ್ಮ ಅಣ್ಣನ ಮದುವೆಗೆ ಇರುವುದಿಲ್ವಾ? ಎಂದು ಪ್ರಶ್ನಿಸುತ್ತಾರೆ. ಜೀವನ್ ಕೂಡ ಕೋಪ ಮಾಡಿಕೊಳ್ಳುತ್ತಾನೆ. ನಾನು ನನ್ನ ಅಕ್ಕನ ಮದುವೆಗೆ ಇರಬೇಕು. ನನ್ನ ಒಂದು ಮಾತೂ ಕೇಳದೆಯೇ ಹೀಗೆಲ್ಲಾ ಮಾಡಿದ್ದೀಯಾ? ನೀನು ಒಬ್ಬಳೇ ಹೋಗು ಎಂದು ಹೇಳುತ್ತಾನೆ.
ಮದುವೆ ಬೇಡ ಎಂದ ಗೌತಮ್
ಆಗ ಭೂಮಿಕಾ, ಜೀವನ್‌ನನ್ನು ಕರೆಯುತ್ತಾಳೆ. ಹಾಗೆಲ್ಲಾ ಮಾಡಬೇಡ. ನೀನು ಮೊದಲು ಮಹಿಮಾಳನ್ನು ಚೆನ್ನಾಗಿ ನೋಡಿಕೋ. ಅವಳು ನಿನ್ನನ್ನು ನಂಬಿ ಬರುತ್ತಿದ್ದಾಳೆ ಎಂದು ಬುದ್ಧಿ ಹೇಳುತ್ತಾಳೆ. ಗೌತಮ್ ಕೂಡ ಇಷ್ಟವಿಲ್ಲದಿದ್ದರೂ ಮಹಿಮಾಳನ್ನು ಹನಿಮೂನ್‌ಗೆ ಹೋಗಲು ಒಪ್ಪಿಗೆ ಕೊಡುತ್ತಾನೆ. ಮಹಿಮಾ ಜೀವನ್ ನನ್ನು ಕರೆದುಕೊಂಡು ಹೋಗುತ್ತಾಳೆ. ಇದರಿಂದ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ. ಇನ್ನು ಗೌತಮ್ ತನ್ನ ಮದುವೆಗೆ ಸಿದ್ಧವಾಗುವುದರ ಬದಲು ಕೊರಗುತ್ತಿರುತ್ತಾನೆ. ತನ್ನ ತಂಗಿ ಇಲ್ಲ ಎಂಬ ಕಾರಣಕ್ಕೆ ಮದುವೆಯೇ ಬೇಡ ಎನ್ನುತ್ತಾನೆ. ಆನಂದ್ ಮತ್ತು ಅಪರ್ಣಾ ಇಬ್ಬರೂ ಬಲವಂತ ಮಾಡಿ ಗೌತಮ್‌ನ ರೆಡಿ ಮಾಡುತ್ತಾರೆ.
ಕಣ್ಣೀರು ಹಾಕುತ್ತಾ ಸಿದ್ಧವಾದ ಭೂಮಿಕಾ
ಇತ್ತ ಭೂಮಿಕಾ ಮನೆಯಲ್ಲಿ ಮದುವೆಗೆ ಸಿದ್ಧವಾಗುತ್ತಿರುತ್ತಾಳೆ. ಮೇಕಪ್ ಬೇಡ, ಒಡವೆ ಭಾರವಿದೆ ಎಂದೆಲ್ಲಾ ಹೇಳುತ್ತಿರುತ್ತಾಳೆ. ಆದರೆ, ಅವರ ತಾಯಿ ಮಂದಾಕಿನಿ ಮಗಳಿಗೆ ಇದೆಲ್ಲಾ ಇರಲಿ, ನೀನು ಈಗ ಗೌತಮ್ ದಿವಾನ್ ಮನೆಗೆ ಹೋಗುತ್ತಿದ್ದೀಯಾ ಎಂದೆಲ್ಲಾ ಹೇಳುತ್ತಿರುತ್ತಾರೆ. ಭೂಮಿಕಾ ಇನ್ಮುಂದೆ ಈ ಮನೆ ತನಗೆ ತವರು ಎಂದು ನೆನೆದು ಕಣ್ಣೀರು ಹಾಕುತ್ತಾಳೆ. ಬಳಿಕ ಮನೆಯಿಂದ ಎಲ್ಲರೂ ಮದುವೆ ಮನೆಗೆ ಹೊರಡುತ್ತಾರೆ.
ಕಿರಣ್‌ಗೆ ಬೈದ ಮಂದಾಕಿನಿ
ಇನ್ನು ಗೌತಮ್ ಎಲ್ಲರೂ ಮನೆಯಲ್ಲಿ ಭೂಮಿಕಾ ಮನೆಯವರು ಯಾವ ಚೌಟ್ರಿ ಅನ್ನು ಬುಕ್ ಮಾಡಿದ್ದಾರೋ ಗೊತ್ತಿಲ್ಲ. ಮದುವೆ ಹೇಗೆ ನಡೆಯುತ್ತಾ. ಬರುವ ನೆಂಟರು, ಸ್ನೇಹಿತರಿಗೆ ಎಷ್ಟು ಕಷ್ಟವಾಗುತ್ತೋ ಎಂದು ಆತಂಕವನ್ನು ಪಡುತ್ತಾರೆ. ಮಂದಾಕಿನಿ ಮನೆಯಿಂದ ಹೊರಡುವ ಮುನ್ನ ಶೃತಿ ಪತ್ನಿ ಎದುರಾಗುತ್ತಾನೆ. ಹೂ ಬೊಕ್ಕೆ ಹಿಡಿದು ಭೂಮಿಕಾ ಮದುವೆಗೆ ಹೊರಟಿರುವುದಾಗಿ ಹೇಳುತ್ತಾನೆ. ಇದರಿಂದ ಮಂದಾಕಿನಿ, ಕಿರಣ್ ನೀನು ಮದುವೆಗೆ ಬಂದು ಮತ್ತೆ ಸಮಸ್ಯೆ ಉಂಟು ಮಾಡಬೇಡ. ಈಗಾಗಲೇ ಭೂಮಿಕಾ ಬದುಕಲ್ಲಿ ಒಮ್ಮೆ ಬಂದು ದೊಡ್ಡ ಸಮಸ್ಯೆ ಆಗಿದೆ ಎಂದು ಬೈಯುತ್ತಾಳೆ.


Click it and Unblock the Notifications











