Amruthadhaare: ಗ್ರಹಚಾರ ಕೆಡಿಸಿಕೊಂಡ ಮಹಿಮಾ: ಭಾವಿ ಪತ್ನಿ ಮೇಲೆ ಕೈ ಮಾಡಿದ ಜೀವನ್!
ಅಪರ್ಣಾ ಭೂಮಿಕಾಳನ್ನು ಗೌತಮ್ ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಹಿಂದೆಯೇ ಗೌತಮ್ ಕೂಡ ಗಾಬರಿಯಿಂದ ಹೋಗುತ್ತಾನೆ. ಗೌತಮ್ ಗೆ ಇದೆಲ್ಲಾ ಇಷ್ಟವಿರುವುದಿಲ್ಲ.
ಭೂಮಿಕಾ ಗೌತಮ್ ರೂಮ್ ನಲ್ಲಿ ಫ್ಯಾಮಿಲಿ ಫೋಟೋ ನೋಡಿ, ಇದು ಯಾರು ಎಂದು ಕೇಳುತ್ತಾಳೆ. ಅಪರ್ಣಾ ಅದು ಗೌತಮ್ ತಮ್ಮ ಎಂದು ಹೇಳಿ ಗೌತಮ್ ಗೆ ಫ್ಯಾಮಿಲಿನ ಪರಿಚಯ ಮಾಡಿಸಿಕೊಡಲಿಲ್ವಾ ಎಂದು ಪ್ರಶ್ನಿಸುತ್ತಾಳೆ.
ಅಲ್ಲೇ ಪಕ್ಕದಲ್ಲಿದ್ದ ಪುಸ್ತಗಳನ್ನು ನೋಡಿ ಭೂಮಿಕಾ ಖೂಷಿ ಪಡುತ್ತಾಳೆ. ನಿಮಗೆ ಪುಸ್ತಕಗಳನ್ನು ಓದುವ ಅಭ್ಯಾಸ ಇದ್ಯಾ ಎಂದು ಖುಷಿಯಿಂದ ಪುಸ್ತಕಗಳನ್ನು ತೆಗೆದುಕೊಳ್ಳುತ್ತಾಳೆ.

ತಕ್ಷಣವೇ ಆನಂದ್ ಗೌತಮ್ ಗೆ ಅಷ್ಟೆಲ್ಲಾ ಒಳ್ಳೆಯ ಬುದ್ಧಿ ಇಲ್ಲ. ಈ ಮನೆ ಇಂಟಿರಿಯರ್ ಡಿಸೈನ್ ಮಾಡಿದಾಗ ಇಟ್ಟ ಪುಸ್ಕಗಳು ಅವು. ಶೋ ಗೆಂದು ಇಡಲಾಗಿದೆ. ಕೆಲಸದವರು ಆಗಾಗ ಒರೆಸುತ್ತಿರುತ್ತಾರೆ ಅಷ್ಟೇ ಎಂದು ಹೇಳುತ್ತಾನೆ. ಇದು ಗೌತಮ್ ಗೆ ಮುಜುಗರವನ್ನುಂಟು ಮಾಡುತ್ತದೆ. ಆಗ ಗೌತಮ್ ಮ್ಯಾನೇಜ್ ಮಾಡಲು ಯತ್ನಿಸುತ್ತಾನೆ. ಇನ್ನು ಅಪರ್ಣಾ ವಾಡ್ರೂಬ್ ತೋರಿಸುತ್ತಾ ತಮಾಷೆಯಾಗಿ ಮದುವೆಯಾದ ಮೇಲೆ ಬಟ್ಟೆ ಇಡಲು ಜಾಗ ಕೊಡಲ್ಲ ಎಂದು ಮಾತನಾಡುತ್ತಾಳೆ. ಈ ಮಾತನ್ನು ಕೇಳಿಸಿಕೊಂಡಾಗ ಗೌತಮ್ ಹಾಗೂ ಭೂಮಿಕಾ ಇಬ್ಬರಿಗೂ ಆತಂಕವಾಗುತ್ತದೆ. ನಮ್ಮಿಬ್ಬರಿಗೂ ಒಬ್ಬರನ್ನೊಬ್ಬರಿಗೆ ಆಗುವುದಿಲ್ಲ. ಹಾಗಿರುವಾಗ ಇದೆಲ್ಲವನ್ನು ಹೇಗೆ ಹಂಚಿಕೊಳ್ಳುವುದು ಎಂದು ಮನದೊಳಗೆ ಯೋಚಿಸುತ್ತಾರೆ. ಆದರೆ, ಈಗಾಗಲೇ ಇಬ್ಬರೂ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾಗಿದೆ.
ಇತ್ತ ಮಹಿಮಾಳಿಗೆ ಯಾವಾಗ ಯಾವ ವಿಚಾರಕ್ಕೆ ಹರ್ಟ್ ಆಗುತ್ತೆ..? ಯಾರ ಬಳಿ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಜೀವನ್ ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದರೂ ಕೂಡ ಕೆಲವೊಮ್ಮೆ ಹುಚ್ಚಿಯಂತೆ ನಡೆದುಕೊಳ್ಳುತ್ತಾಳೆ. ಮತ್ತೂ ಕೆಲವೊಮ್ಮೇ ತನ್ನದೇ ನಡೆಯಬೇಕು ಎಂಬಂತೆ ಆಡುತ್ತಾಳೆ. ಗೌಥಮ್ ಬೇರೆ ಮಹಿಮಾಳನ್ನು ಬಹಳ ಮುದ್ದಿನಿಂದ ಸಾಕಿದ್ದಾನೆ. ಇದು ಮಹಿಮಾಳಿಗೆ ಯಾವ ಕಷ್ಟ-ಸಖದ ಬಗ್ಗೆಯೂ ಅರಿವಾಗದಂತೆ ಮಾಡಿದೆ. ಜೀವನ್ ಇವತ್ತು ಪಾರ್ಟಿ ಹೋಗುವುದು ಬೇಡ ಎಂದರೂ ಕೂಡ ಹಠ ಮಾಡಿ ಅವಳೊಬ್ಬಳೇ ಪಾರ್ಟಿಗೆ ಹೋಗಿದ್ದಾಳೆ.
ಪಾರ್ಟಿಯಲ್ಲಿ ಮಹಿಮಾ ಸ್ನೇಹಿತರು ಆಕೆಯ ನಿಶ್ಚಿತಾರ್ಥದ ಬಗ್ಗೆ ಕೇಳಿದ್ದು, ಅದರ ಜೊತೆಗೆ ಭಾವಿ ಪತಿಯ ಬಗ್ಗೆ ವಿಚಾರಿಸಿದ್ದಾರೆ. ಕೆಲವರು ಮಿಡಲ್ ಕ್ಲಾಸ್ ಹುಡುಗ ಎಂದು ಆಡಿಕೊಂಡಿದ್ದಾರೆ. ಜೀವನ್ ಬಗ್ಗೆ ಮಹಿಮಾ ನೀವಂದುಕೊಂಡ ಹಾಗಲ್ಲ ಎಂದು ಹೊಗಳುತ್ತಾಳೆ. ಅವರೆಲ್ಲರಿಗೂ ಜೀವನ್ ನನ್ನು ಪರಿಚಯ ಮಾಡಿಸಬೇಕು ಎಂದುಕೊಂಡ ಮಹಿಮಾ ಬಾಬಿಗೆ ವಾರ್ನಿಂಗ್ ಕೊಟ್ಟಿದ್ದಾಳೆ. ಜೀವನ್ ಇಲ್ಲಿಗೆ ಬರದಿದ್ದರೆ ನಿನ್ನ ಕೆಲಸ ಹೋಗುತ್ತೆ ಎಂದು ಹೆದರಿಸಿದ್ದಾಳೆ. ಬಾಬಿ ಬೇರೆ ದಾರಿ ಇಲ್ಲದೇ ಮಹಿಮಾಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಜೀವನ್ ನನ್ನು ಕರೆಸಿಕೊಂಡಿದ್ದಾನೆ. ಇದರಿಂದ ಕೋಪಗೊಂದ ಜೀವನ್ ಮಹಿಮಾಳನ್ನು ಬೈಯುತ್ತಾನೆ. ಮನೆಗೆ ಹೋಗೋಣ ಬಾ ಎಂದು ಕರೆಯುತ್ತಾನೆ. ಇದರಿಂದ ಮಹಿಮಾ ಕೋಪ ಮಾಡಿಕೊಳ್ಳುತ್ತಾಳೆ.
ನೀನ್ಯಾರು ನನಗೆ ಆರ್ಡರ್ ಮಾಡಲು. ನನ್ನಿಂದ ನಿನಗೆ ಸ್ಥಾ-ಮಾನ ಸಿಕ್ಕಿದೆ. ನಿನ್ನ ಸ್ಟೇಟಸ್ ಹೆಚ್ಚಿಗೆ ಆಗಿದೆ. ಮನೆಯಲ್ಲೇ ಮದುವೆಯಾಗದೇ ಬಿದ್ದಿದ್ದ ನಿನ್ನಕ್ಕನಿಗೆ ಈಗ ಮದುವೆಯಾಗುತ್ತದೆ. ಅವಳನ್ನು ನನ್ನ ಅಣ್ಣ ಮದುವೆಯಾಗಿ ಬಾಳು ಕೊಡುತ್ತಿದ್ದಾನೆ. ನಿನಗೆ ನನ್ನಿಂದ ಎಲ್ಲವೂ ಸಿಕ್ಕಿದೆ. ನಾನು ಹೇಳಿದಂತೆ ಇರಬೇಕು. ನನ್ನ ಅಣ್ಣ ನಾನು ಕೇಳಿದ್ದನ್ನೆಲ್ಲಾ ತಂದುಕೊಡುತ್ತಾನೆ ಎಂದು ಮಾತನಾಡುತ್ತಾಳೆ. ಮಹಿಮಾ ಗ್ರಹಚಾರ ಕೆಟ್ಟ ಕಾರಣ ಜೀವನ್ ಕೋಪ ಬಂದು ಕಪಾಳಕ್ಕೆ ಹೊಡೆದು ಅಲ್ಲಿಂದ ಹೊರಟು ಹೋಗುತ್ತಾನೆ.


Click it and Unblock the Notifications











