'ಅಮೃತಧಾರೆ' ಹೀರೋ ರಾಜೇಶ್ ನಟರಂಗ ನಿರ್ಮಿಸಿದ ಧಾರಾವಾಹಿ ಯಾವುದು? ನೆನಪಿದೆಯೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಕೂಡಾ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಆಗಿ ಅಭಿನಯಿಸುತ್ತಿರುವ ರಾಜೇಶ್ ನಟರಂಗ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳ ಮೂಲಕ ಬಣ್ಣದ ಲೋಕದಲ್ಲಿ ಮೋಡಿ ಮಾಡಿರುವ ರಾಜೇಶ್ ನಟರಂಗ ಇದೀಗ ಗೌತಮ್ ದಿವಾನ್ ಆಗಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿವೇಣಿ ಸಂಗಮ' ಧಾರಾವಾಹಿಯಲ್ಲಿ ನಾಯಕ ತ್ರಿವಿಕ್ರಮ್ ಆಗಿ ನಟಿಸಿದ್ದರು ರಾಜೇಶ್. ಅಂದ ಹಾಗೇ ಆ ಧಾರಾವಾಹಿಯಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಅನು ಪ್ರಭಾಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ಮೂಲಕ ಅನು ಪ್ರಭಾಕರ್ ಕೂಡಾ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು.

Amruthadhaare serial actor Rajesh Nataranga is also a produced serial

ಅಸಲಿಗೆ ರಾಜೇಶ್ ಅವರು ಕಿರುತೆರೆಗೆ ಕಾಲಿಟ್ಟಿದ್ದು ನಟನಾಗಿ ಅಲ್ಲ! ಬದಲಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ. 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಂಡ ರಾಜೇಶ್ ನಟರಂಗ ನಟನಾಗಿ ಮೊದಲು ಬಣ್ಣ ಹಚ್ಚಿದ್ದು 'ಮಾಯಾಮೃಗ' ಧಾರಾವಾಹಿಯಲ್ಲಿ.

ನಂತರ 'ಮುಕ್ತ', 'ಬದುಕು', 'ಶಕ್ತಿ' ಧಾರಾವಾಹಿಗಳಲ್ಲಿ ರಾಜೇಶ್ ನಟಿಸಿದ್ದರು. ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗುಪ್ತಗಾಮಿನಿ' ಧಾರಾವಾಹಿಯಲ್ಲಿ ನಟಿಸಿರುವ ರಾಜೇಶ್ ನಟರಂಗ ಅವರು ತೇಜಸ್ವಿ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾನೂ ನನ್ನ ಕನಸು' ಧಾರಾವಾಹಿಯಲ್ಲಿಯೂ ಇವರು ಬಣ್ಣ ಹಚ್ಚಿದ್ದರು.

'ನಾಗರಹಾವು' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಾಜೇಶ್ 'ರೌಡಿ ಅಳಿಯ', 'ಮೊಗ್ಗಿನ ಮನಸ್ಸು', 'ಬಳ್ಳಾರಿ ನಾಗ', 'ಜಸ್ಟ್ ಮಾತ್ ಮಾತಲ್ಲಿ', 'ಆಪ್ತ ರಕ್ಷಕ', 'ನಾನು ನನ್ನ ಕನಸು', 'ಸಂಗೊಳ್ಳಿ ರಾಯಣ್ಣ', 'ಕಡ್ಡಿಪುಡಿ', 'ಗಜಕೇಸರಿ', 'ಕೆಂಡಸಂಪಿಗೆ', 'ತಾರಕ್', 'ಆಯುಷ್ಮಾನ್ ಭವ', 'ಲಾ', 'ಯುವರತ್ನ', 'ಕೋಟಿಗೊಬ್ಬ 3', 'ರತ್ನನ್ ಪ್ರಪಂಚ' ಹೀಗೆ ಅರುವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ರಾಜೇಶ್ ನಟರಂಗ.

Amruthadhaare serial actor Rajesh Nataranga is also a produced serial

ಅಷ್ಟೇ ಅಲ್ಲದೇ ಕಳೆದ ವರ್ಷ ತೆರೆ ಕಂಡ 'ತನುಜಾ', 'ಸಿರಿ ಲಂಬೋದರ ವಿವಾಹ', '19.20.21', 'ಗುರುದೇವ್ ಹೊಯ್ಸಳ', 'ನಮ್ ನಾಣಿ ಮದುವೆ ಪ್ರಸಂಗ', 'ಮೆಲೋಡಿ ಡ್ರಾಮ', 'ಫೈಟರ್', 'ಒಂದು ಸರಳ ಪ್ರೇಮ ಕಥೆ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಈ ವರ್ಷದ 'ಹೈಡ್ ಆ್ಯಂಡ್ ಸೀಕ್', 'ಜೋಗ್ 101' ಹಾಗೂ 'ಕಾಲಾಪತ್ಥರ್' ಸಿನಿಮಾಗಳಲ್ಲಿ ಸಿನಿಮಾಗಳಲ್ಲಿ ರಾಜೇಶ್ ನಟಿಸಿದ್ದಾರೆ.

ಸದ್ಯ ಗೌತಮ್ ದಿವಾನ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ರಾಜೇಶ್ ‌ನಟರಂಗ ನಿರ್ಮಾಪಕರಾಗಿಯೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹೌದು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿನ್ನಿಂದಲೇ' ಧಾರಾವಾಹಿಯನ್ನು ರಾಜೇಶ್ ನಟರಂಗ ಅವರು ನಿರ್ಮಿಸಿದ್ದರು.

More from Filmibeat

English summary
Amruthadhaare serial actor Rajesh Nataranga is also a produced serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X