Amruthadhaare:ಶಕುಂತಲಾ ದೇವಿ ಸಂಚು ಭೂಮಿಕಾ ಎದುರು ಬಹಿರಂಗ; ಗುರುಗಳ ಮಾತಿಗೆ ಗೌತಮ್ ನಿರಾಳ

By ಪೂರ್ವ

ಗುರುಗಳು ಭೂಮಿಕಾ ಹಾಗೂ ಗೌತಮ್ ಜಾತಕದ ಬಗ್ಗೆ ಅದ್ಭುತ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ಗೌತಮ್‌ಗೆ ಬಹಳ ಸಂತಸ ಆಗಿದೆ. ಮನಸ್ಸಿನಲ್ಲಿ ತುಂಬಿದ್ದ ದುಗುಡ ದೂರ ಆಗಿ ಪ್ರೀತಿ ನೆಲೆಸಿರುವುದಂತು ಸತ್ಯ. ಶಕುಂತಲಾ ದೇವಿಗೆ ಮಾತ್ರ ನಡುಕ ಶುರು ಆಗಿರುವುದು ಸತ್ಯ. ಗುರುಗಳ ಮಾತಲ್ಲಿ ಸತ್ಯ ಅಡಗಿರುವುದನ್ನು ಕಂಡು ಶಕುಂತಲಾ ದೇವಿಗೆ ಬಹಳ ಭಯವಾಗುತ್ತದೆ.

ಗೌತಮ್ ಮನಸ್ಸಿನಲ್ಲಿ ನೂರಾರು ಪ್ರಶ್ನೆ ಇದೀಗ ಮೂಡಿದೆ. ಆದರೆ, ಇದಕ್ಕೆಲ್ಲ ಗುರುಗಳು ಪರಿಹಾರವನ್ನು ನೀಡಿದ್ದಾರೆ, ಗೌತಮ್‌ಗೆ ಹಣದಲ್ಲಿ ಕೊರತೆ ಇರಲಿಲ್ಲ. ಆದರೆ, ಪ್ರೀತಿಯಲ್ಲಿ ಗೌತಮ್‌ಗೆ ಕೊರತೆ ಇತ್ತು. ಆದರೆ, ಇದೀಗ ಪ್ರೀತಿಯಲ್ಲಿ ಕೂಡ ಗೌತಮ್ ಗೆದ್ದಿದ್ದಾರೆ. ಗೌತಮ್‌ಗೆ ಭೂಮಿಕಾ ಎಂದರೆ ಬಹಳ ಅಚ್ಚು ಮೆಚ್ಚು. ಆಕೆಯ ಜೊತೆ ಬಹಳ ಆತ್ಮೀಯತೆಯಿಂದ ಇತ್ತೀಚಿಗೆ ನಡೆದುಕೊಳ್ಳುತ್ತಿದ್ದಾರೆ

Amruthadhaare serial April 15th episode Update

ಗುರುಗಳು ಹೇಳಿದ ಪ್ರಕಾರ ಭೂಮಿಕಾ ಹಾಗೂ ಗೌತಮ್ ಬಹಳ ಒಳ್ಳೆಯ ಜೋಡಿ. ಹೀಗಾಗಿ ಶಕುಂತಲಾ ದೇವಿ ಮಾಡಿದ ಮಸಲತ್ತು ಆಕೆಗೆ ತಿರುಗುಬಾಣ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಶಕುಂತಲಾ ದೇವಿಗೆ ತನ್ನ ಮಕ್ಕಳ ಮಾತ್ರ ಚೆನ್ನಾಗಿರಬೇಕು. ಗೌತಮ್ ಹೇಗಿದ್ದರೂ ನಡೆಯುತ್ತದೆ. ಆತನ ಆಸ್ತಿಯೆಲ್ಲ ನನ್ನ ಮಕ್ಕಳಿಗೆ ಸೇರಬೇಕು ಎನ್ನುವುದು ಆಕೆಯ ದುರಾಸೆ. ಆದರೆ ಅದಕ್ಕೆಲ್ಲ ಭೂಮಿಕಾ ಬ್ರೇಕ್ ಹಾಕುತ್ತಿದ್ದಾಳೆ. ಗೌತಮ್ ಜೊತೆ ಯಾವತ್ತೂ ಭೂಮಿಕಾ ಇದ್ದೇ ಇರುತ್ತಾಳೆ.

ಗುರುಗಳ ಮಾತಿಗೆ ಅನುಮಾನ

ಆಕೆಯ ಕಣ್ಣು ತಪ್ಪಿಸಿ ಶಕುಂತಲಾ ದೇವಿಗೆ ಬೇರೆ ಏನು ಮಾಡಲು ಸಾಧ್ಯವಿಲ್ಲ. ಗುರುಗಳು ಹೇಳಿದ ಮಾತುಗಳನ್ನು ಕೇಳಿದ ಶಕುಂತಲಾ ದೇವಿ ಕೊಂಚ ಅನುಮಾನವನ್ನ ವ್ಯಕ್ತಪಡಿಸುತ್ತಾಳೆ. ಗೌತಮ್ ಹಿಂದಿನ ಜೀವನದ ಬಗ್ಗೆ ಕೂಡ ನಮಗೆ ತಿಳಿಸಿಕೊಡಬೇಕು ಎಂದು ಹೇಳುತ್ತಾಳೆ. ಅದಕ್ಕೆ ಗೌತಮ್ ಕೂಡ ಒಪ್ಪಿಗೆಯನ್ನು ನೀಡುತ್ತಾನೆ. ಗುರುಗಳು ಆ ಕೂಡಲೇ ಗೌತಮ್ ಹಿಂದಿನ ದಿನದ ಕಹಿ ಘಟನೆಯನ್ನು ಹೇಳುತ್ತಾರೆ. ಗೌತಮ್‌ಗೆ 24ನೇ ವಯಸ್ಸಿರಬೇಕಾದರೆ ಅವರ ತಂದೆ ತೀರಿಕೊಂಡು ಬಿಡುತ್ತಾರೆ. ಆ ಬಳಿಕ ಸಂಸಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಗೌತಮ್. 45 ವರ್ಷ ಆದ ಬಳಿಕ ಮದುವೆಯಾಗುವ ಯೋಗವಿತ್ತು ಎಂದು ಹೇಳುತ್ತಾರೆ.

Amruthadhaare serial April 15th episode Update

ಗೌತಮ್ ಬಾಳಿನ ಕಹಿ ಘಟನೆ ವಿವರಿಸಿದ ಗುರುಗಳು

ಆ ಪ್ರಕಾರವಾಗಿ ಭೂಮಿಕಾ ಜೊತೆ 45 ವರ್ಷವಾದಾಗ ಮದ್ವೆ ಕೂಡ ನಡೆದು ಹೋಗಿದೆ. "ಭೂಮಿಕಾಳನ್ನು ಮದುವೆಯಾದ ಬಳಿಕ ನಿಮ್ಮ ಕೊರತೆ ನೀಗಿದೆ. ನಿಮಗೆ ತಾಯಿಯ ಕೊರತೆ ಇತ್ತು ತಾಯಿಯ ಪ್ರೀತಿಯ ಕೊರತೆ ಇತ್ತು. ಆದರೆ ಇದೀಗ ಹೆಂಡತಿ ಬಂದ ಮೇಲೆ ಅದೆಲ್ಲ ನೀಗಿದೆ. ಆ ಪ್ರೀತಿಯ ನೆಲೆ ನಿಮಗೆ ಹೆಂಡತಿ ದಾರಿಯಲ್ಲಿದ್ದು ನೀಡುತ್ತಿದ್ದಾಳೆ" ಎಂದು ಗುರುಗಳು ಹೇಳಿದ ಮಾತುಗಳನ್ನು ಕೇಳಿದ ಗೌತಮ್‌ಗೆ ಶಾಕ್ ಆಗುತ್ತದೆ. ಹಾಗೆ ಗುರುಗಳ ಮಾತು ಕೇಳಿ ಬಹಳ ಖುಷಿ ಪಡುತ್ತಾರೆ.

ಶಕುಂತಲಾ ದೇವಿಗೆ ವಾರ್ನಿಂಗ್

ಗುರುಗಳು ಮನೆಯಿಂದ ಹೋದ ಬಳಿಕ ಶಕುಂತಲಾ ದೇವಿ ಒಬ್ಬಳೇ ಯೋಚನೆ ಮಾಡುತ್ತಿರುತ್ತಾಳೆ. ಹೇಗಾದರೂ ಮಾಡಿ ಭೂಮಿಕಾ ಹಾಗೂ ಗೌತಮ್‌ನನ್ನ ದೂರ ಮಾಡಬೇಕು ಎಂದು.. ಆದರೆ ಇದಕ್ಕೆ ಭೂಮಿಕಾ ಪದೇ ಪದೆ ಅಡ್ಡಿಪಡಿಸುತ್ತಿದ್ದಾಳೆ. ಇದೀಗ ಕೂಡ ನನ್ನ ಎಲ್ಲಾ ಪ್ಲಾನ್ ಅನ್ನ ಪ್ಲಾಪ್ ಮಾಡಿದ್ದಾಳೆ. ಇನ್ನು ಹೇಗಪ್ಪ ಇವರನ್ನು ಬೇರ್ಪಡಿಸುವುದು ಎಂದು ಯೋಚನೆ ಮಾಡುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ಭೂಮಿಕಾ ತನ್ನ ಅತ್ತೆಯ ಬಳಿ ಮಾತನಾಡುತ್ತಾಳೆ. "ಅತ್ತೆ ಏನು ಯೋಚನೆ ಮಾಡುತ್ತಿದ್ದೀರಿ? ನೀವು ಮಾಡಿದ ಎಲ್ಲಾ ಕುತಂತ್ರ ಕೆಲಸಗಳು ನನಗೆ ಗೊತ್ತಿದೆ. ನನ್ನ ಹಾಗೂ ಗೌತಮ್ ಅವರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಅತ್ತೆಗೆ ಖಡಕ್ಕಾಗಿ ವಾರ್ನಿಂಗ್ ಮಾಡುತ್ತಾಳೆ. ಆ ಬಳಿಕ ರೂಂಗೆ ಬಂದು ಗೌತಮನ ಮೊಗದಲ್ಲಿರುವ ಖುಷಿಯನ್ನು ನೋಡುತ್ತಾಳೆ. ಭೂಮಿಕಾ ಆಕೆಗೆ ಬಹಳ ಖುಷಿಯಾಗುತ್ತದೆ. ಗೌತಮ್ ಮನಸ್ಸು ನಿರಳವಾಗಿರುವುದನ್ನು ಕಂಡು ಎರಡು ಪಟ ಪಟ ಮಾತನಾಡಿದ ಭೂಮಿಕಾ, ಗೌತಮ್‌ಗೆ ಕಿಚಾಯಿಸುತ್ತಾಳೆ.

More from Filmibeat

English summary
Amruthadhaare serial April 15th episode Update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X