Amruthadhaare: ಶಕುಂತಲಾ ದೇವಿ ಮಾಸ್ಟರ್ ಪ್ಲಾನ್‌ಗೆ ಸಿಕ್ಕಿ ಹಾಕಿಕೊಳ್ಳುತ್ತಾಳಾ ಭೂಮಿ?
ಭೂಮಿಕಾ ತಾಯಿ ಮಂದಾಕಿನಿಗೆ ಅಳಿಯಂದಿರು ಗೌತಮ್ ಎಂದರೆ ಬಹಳ ಪ್ರೀತಿ. ಆಕೆಗೆ ಗೌತಮ್‌ಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ಪುಣ್ಯ ಮಾಡಿದ್ದೆ ಎನ್ನುವ ಅನುಭವ ಆಕೆಗೆ ಆಗುತ್ತದೆ. ಯಾಕೆಂದರೆ ಗೌತಮ್ ಆ ರೀತಿ ಮಂದಾಕಿನಿ ಜೊತೆ ನಡೆದುಕೊಳ್ಳುತ್ತಾನೆ. ಮಂದಾಕಿನಿ ರೋಲ್ಡ್ ಗೋಲ್ಡ್ ಚೈನ್ ಕೊಟ್ಟಾಗ, ಅವರ ಮನಸ್ಸಿನಲ್ಲಿರುವ ಪ್ರೀತಿ ಮಾತ್ರ ಅವರಿಗೆ ಕಾಣಿಸಿತೇ ಹೊರತು. ಬದಲಾಗಿ ಆಕೆಯ ಹಣ ಅಥವಾ ಆಕೆ ಕೊಟ್ಟ ಚೈನ್ ಗೌತಮ್‌ಗೆ ಕಾಣಿಸಲಿಲ್ಲ.
ಇದೀಗ ಪಾರ್ಥ ಹಾಗೂ ಭೂಮಿಕಾ ತಂಗಿ ಇಬ್ಬರೂ ಸರಸ ಸಲ್ಲಾಪದಲ್ಲಿ ಇರುವುದನ್ನು ಭೂಮಿಕಾ ನೋಡುತ್ತಾಳೆ. ಆಕೆಗೆ ಮಾತ್ರ ಇದೆಲ್ಲವೂ ಅಸಹ್ಯ ಅನ್ನಿಸಿಬಿಡುತ್ತದೆ. ಅವರಿಬ್ಬರಿಗೂ ಬುದ್ದಿ ಹೇಳಬೇಕು ಇಲ್ಲವಾದರೆ, ಇವರ ಸಲುಗೆ ಬೇರೆಲ್ಲಿಗೋ ತಲುಪುವ ಮುಂಚೆ ನಾವು ಇದನ್ನು ಸರಿ ಪಡಿಸಲೇಬೇಕು ಎಂದುಕೊಳ್ಳುತ್ತಾರೆ. ಇನ್ನೂ ಗೌತಮ್ ಮನೆ ಮಂದಿಯರ ಜೊತೆ ಖುಷಿಯಲ್ಲಿ ಇರುತ್ತಾರೆ.

ಇನ್ನೂ ಮನೆ ಮಂದಿಯೆಲ್ಲ ಭೂಮಿಕಾ ಫ್ಯಾಮಿಲಿಯನ್ನು ಬಹಳ ಖುಷಿಯಿಂದಲೇ ಬೀಳ್ಕೊಡುತ್ತಾರೆ. ಆ ಬಳಿಕ ಶಕುಂತಲಾ ದೇವಿ ಪಾರ್ಥ ಹಾಗೂ ಭೂಮಿಕಾ ತಂಗಿ ಇಬ್ಬರೂ ಮೈ ಮರೆತಿರುವ ವಿಡಿಯೋ ತೆಗೆದು ಇಟ್ಟುಕೊಂಡು ಭೂಮಿಕಾನನ್ನು ತರಾಟೆಗೆ ತೆಗೆದುಕೊಳ್ಳಬೇಕು. ಹಾಗೆಯೇ ಆಕೆ ಏನೆಲ್ಲ ಕೆಲಸ ಮಾಡುತ್ತಾಳೆ, ಅದೆಲ್ಲವನ್ನೂ ಸರಿ ದಾರಿಗೆ ತರುವ ಹಾಗೆ ಮಾಡಬೇಕು ಎನ್ನುವ ಯೋಚನೆಯಲ್ಲಿ ಇರುತ್ತಾಳೆ. ಶಕುಂತಲಾ ದೇವಿಗೆ ಆಕೆ ಒಬ್ಬಳು ನೆಮ್ಮದಿಯಾಗಿ, ಖುಷಿಯಾಗಿ ಇದ್ದರೆ ಸಾಕು. ಬೇರೆ ಯಾರನ್ನೂ ಖುಷಿಯಾಗಿ ಇಟ್ಟುಕೊಳ್ಳಲು ಆಕೆ ಬಿಡುವುದು ಇಲ್ಲ.
ಗೌತಮ್-ಭೂಮಿಕಾ ಮೇಲೆ ಶಕುಂತಲಾ ವಕ್ರದೃಷ್ಠಿ
ಭೂಮಿಕಾ, ಗೌತಮ್‌ನ ಮದುವೆ ಆಗಿ ಬಂದಾಗಿನಿಂದ ಅವರಿಬ್ಬರನ್ನು ದೂರ ಮಾಡಲು ಶಕುಂತಲಾ ದೇವಿ ಹರ ಸಾಹಸ ಪಡುತ್ತಿರುತ್ತಾರೆ. ಭೂಮಿಕಾ ಅದೆಲ್ಲವನ್ನೂ ಮೆಟ್ಟಿ ನಿಲ್ಲುತ್ತಾಳೆ. ಭೂಮಿಕಾ ಮೇಲೆ ಶಕುಂತಲಾ ದೇವಿಗೆ ಬಹಳಷ್ಟು ಸಿಟ್ಟಿದೆ. ಅದನ್ನು ಈ ಮೂಲಕವಾದರೂ ತೀರಿಸಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನೂ ಮನೆಯವರೆಲ್ಲ ಹೋದ ಬಳಿಕ ಭೂಮಿಕಾ, ಪ್ರಾರ್ಥನನ್ನು ಕರೆದು ಬುದ್ಧಿವಾದ ಹೇಳುತ್ತಾಳೆ.
ಪಾರ್ಥ ಬಳಿ ಭೂಮಿಕಾ ಹೇಳಿದ್ದೇನು?
"ಪಾರ್ಥ ನೀನು ಹಾಗೂ ನನ್ನ ತಂಗಿ ಇಬ್ಬರೇ ಮೈಮರೆತು ಇರುವುದನ್ನು ನಾನು ನೋಡಿದೆ. ನೀವಿಬ್ಬರು ಈ ರೀತಿ ಇರುವುದು ಸರಿಯಲ್ಲ. ನಿಮ್ಮಿಬ್ಬರ ನಡುವೆ ಪ್ರೀತಿ ಇರುವುದು ನನಗೆ ಗೊತ್ತಿದೆ. ಆದರೆ, ನೀವು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ನೀವು ಮದುವೆ ಆಗುವ ಅರ್ಹತೆಯನ್ನು ಪಡೆದುಕೊಳ್ಳಿ. ಆ ಬಳಿಕ ಮಾತನಾಡಿ" ಎಂದು ಹೇಳುತ್ತಾಳೆ. ಹಾಗೆಯೇ "ಇನ್ನೂ ಮುಂದೆ ನೀವು ಹೀಗೆಲ್ಲ ಮೈಮರೆತು ವರ್ತನೆ ಮಾಡಿದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ" ಎಂದು ಖಡಕ್ ಆಗಿ ಹೇಳುತ್ತಾರೆ. ಅತ್ತಿಗೆಯ ಮಾತು ಕೇಳಿ ಪಾರ್ಥಗೆ ದಿಗಿಲಾಗುತ್ತದೆ.

ಗಂಡನನ್ನು ಹಾಡಿ ಹೊಗಳಿದ ಮಹಿ
ಇತ್ತ ಮಹಿ ಹಾಗೂ ಜೀವ ಬಹಳ ಖುಷಿಯಲ್ಲಿ ಮಾತನಾಡುತ್ತಿದ್ದಾರೆ. ಜೀವನನ್ನು ಪಡೆದಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಮಹಿ ಹೇಳುತ್ತಿದ್ದಾಳೆ. ಮಹಿಗೆ ತನ್ನ ಗಂಡನ ಮೇಲೆ ಇನ್ನಷ್ಟು ಪ್ರೀತಿ ಹೆಚ್ಚಾಗಿರುವುದಂತೂ ಸತ್ಯ.


Click it and Unblock the Notifications











