Amruthadhaare:ಹೆಂಡತಿಯ ಜೀವಕ್ಕೆ ರಕ್ಷಾ ಕವಚವಾದ ಗೌತಮ್; ಅಸಲಿ ವಿಚಾರ ಗೊತ್ತಾದ್ರೆ ಏನು ಗತಿ?

By ಪೂರ್ವ

ವಯಸ್ಸು 45 ಮೀರಿದ ಬಳಿಕ ಗೌತಮ್ ದಿವಾನ್, ಭೂಮಿಕಾಳನ್ನು ಮದುವೆ ಆಗುತ್ತಾರೆ. ಮನೆ ಮಂದಿಯ ಒತ್ತಾಯಕ್ಕೆ ಮದುವೆ ಆದರೂ ಇಬ್ಬರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ. ಒಬ್ಬರನ್ನೊಬ್ಬರು ಬಹಳ ಗಾಢವಾದ ಪ್ರೀತಿ ಮಾಡುತ್ತಾರೆ. ಈ ವಿಚಾರ ಶಕುಂತಲಾ ದೇವಿಗೆ ಯಾವಾಗ ತಿಳಿಯಿತೋ ಆ ದಿನದಿಂದ ಗೌತಮ್‌ಗೆ ಬರೀ ನೋವೇ. ಇಬ್ಬರ ಪ್ರೀತಿಯನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿ ಶಕುಂತಲಾ ದೇವಿ ತನ್ನ ಡ್ರಾಮಾ ಶುರು ಮಾಡುತ್ತಾಳೆ. ಜ್ಯೋತಿಷ್ಯರನ್ನು ಕರೆಯಿಸುತ್ತಾಳೆ. ಸುಳ್ಳು ಜ್ಯೋತಿಷ್ಯ ಹೇಳಿ ಗೌತಮ್ ದಿವಾನ್‌ನನ್ನು ನಂಬಿಸುವ ಕೆಲಸ ಮಾಡುತ್ತಾಳೆ.

ಗೌತಮ್‌ಗೆ ತನ್ನ ಮಲ ತಾಯಿ ಶಕುಂತಲಾ ದೇವಿ ಅಂದರೆ ಬಹಳ ಪ್ರೀತಿ. ಅವರು ಏನೇ ಹೇಳಿದರೂ ನನ್ನ ಒಳ್ಳೆಯದಕ್ಕಾಗಿ ಹೇಳುತ್ತಿದ್ದಾರೆ ಎನ್ನುವ ಭರವಸೆ. ಆದರೆ, ಶಕುಂತಲಾ ದೇವಿ ಮನಸ್ಸು ತುಂಬಾ ವಿಷ. ಆಕೆಗೆ ಮಗ ಚೆನ್ನಾಗಿ ಇರಬೇಕು ಎನ್ನುವ ಆಸೆ ಏನಿಲ್ಲ. ಆಕೆಗೆ ತನ್ನ ಮಕ್ಕಳು ಚೆನ್ನಾಗಿ ಇರಬೇಕು. ಗೌತಮ್ ಆಸ್ತಿ ಮೇಲೆ ಬೇರೆ ಯಾರ ಕೆಟ್ಟ ಕಣ್ಣು ಬೀಳಬಾರದು. ಗೌತಮ್‌ಗೆ ಹೊಸ ಜೀವನ ಕಟ್ಟಿಕೊಳ್ಳಲು ಬಿಟ್ಟರೆ ತಾನೇ ಇದೆಲ್ಲ ಪ್ರಾಬ್ಲಂ. ಅದಕ್ಕೆ ಹೊಸ ಜೀವನ ಕಟ್ಟಿಕೊಳ್ಳಲು ಬಿಡದೆ ಇದ್ದರೆ ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ಹೊಂಚು ಹಾಕುತ್ತಿರುತ್ತಾಳೆ.

Amruthadhaare serial April 8th episode update

ಶಕುಂತಲಾ ದೇವಿ ಅದಕ್ಕಾಗಿ ಸರಿಯಾಗಿ ಪ್ಲಾನ್ ಮಾಡುತ್ತಾಳೆ. ಜ್ಯೋತಿಷ್ಯರು ಗೌತಮ್ ಬಳಿ "ನೀನು ಹಾಗೂ ನಿನ್ನ ಹೆಂಡತಿ ಒಂದಾದರೆ, ನಿನ್ನ ಹೆಂಡತಿಯ ಜೀವಕ್ಕೆ ತೊಂದರೆ ಆಗುತ್ತದೆ" ಎಂದು ಸುಳ್ಳು ಹೇಳಿದಾಗ ಗೌತಮ್‌ಗೆ ಶಾಕ್ ಆಗುತ್ತೆ. ಹಾಗೆಯೇ ಭಯ ಕೂಡ ಆಗುತ್ತೆ. ಮಾತು ಮುಂದುವರೆಸಿದ ಜ್ಯೋತಿಷ್ಯರು, ನೀವು ಇಬ್ಬರು ಮದುವೆ ಆಗಲೇ ಬಾರದಿತ್ತು. ಆದರೆ, ಇಬ್ಬರು ಮದುವೆ ಆಗಿದ್ದಿರಾ? ಆದರೆ, ನೀವಿಬ್ಬರೂ ಒಂದಾದರೆ ನಿಮ್ಮ ಮಡದಿಗೆ ಕಂಟಕ ಇದೆ ಎನ್ನುತ್ತಾರೆ.

ಹೆಂಡತಿ ಜೊತೆ ದೇವಸ್ಥಾನಕ್ಕೆ ಹೊರಟ ಗೌತಮ್

ಇದನ್ನೆಲ್ಲ ಜ್ಯೋತಿಷ್ಯರು ಹೇಳಿದಾಗ ಭೂಮಿಕಾ ಇರುವುದಿಲ್ಲ. ಭೂಮಿಕಾ ಇದೆಲ್ಲ ತಿಳಿದಿಲ್ಲ. ಗೌತಮ್ ತನ್ನ ಹೆಂಡತಿಯನ್ನು ಕರೆದುಕೊಂಡು ದೇವಾಲಯಕ್ಕೆ ಹೋಗುತ್ತಾನೆ. ಅಲ್ಲಿ ವೃತವನ್ನು ಆಚರಣೆ ಮಾಡುತ್ತಾರೆ. ಇದೆಲ್ಲವನ್ನೂ ನೋಡಿದ ಭೂಮಿಕಾಗೆ "ಅರೆರೆ ಇದೇನು ಮಾಡುತ್ತಿದ್ದಾರೆ. ಅಷ್ಟಕ್ಕೂ ಏನಾಯಿತು ಅಂತ ಇಷ್ಟೆಲ್ಲ ವೃತ ಆಚರಣೆ ಮಾಡುತ್ತಿದ್ದಾರೆ" ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಗೌತಮ್ ಬಳಿ "ಇದೆಲ್ಲ ಯಾಕೆ ಮಾಡುತ್ತಿದ್ದೀರಾ ನೀವು" ಎಂದು ಕೇಳಿದಾಗ "ಮನೆಯವರ ಒಳ್ಳೆಯದಕ್ಕೆ ನಾನು ಇದೆಲ್ಲವನ್ನೂ ಮಾಡುತ್ತಿದ್ದೇನೆ. ಮನೆಯವರು ಚೆನ್ನಾಗಿ ಇದ್ದರೆ, ನಾನು ಕೂಡ ಚೆನ್ನಾಗಿ ಇರುತ್ತೇನೆ" ಎಂದು ಹೇಳುತ್ತಾರೆ.

Amruthadhaare serial April 8th episode update

ಗೌತಮ್ ಸ್ಥಿತಿ ಕಂಡು ಅತ್ತ ಭೂಮಿಕಾ

ಇದನ್ನು ಕೇಳಿದ ಭೂಮಿಕಾಗೆ ಅಳು ಬರುತ್ತದೆ. ಗೌತಮ್ ಮನೆಯವರಿಗೆ ಎಷ್ಟೆಲ್ಲ ಕಷ್ಟ ಪಡುತ್ತಾರೆ. ಆದರೆ ಅವರಿಗೆ ಒಳ್ಳೆಯದು ಬಯಸುವ ಯಾವ ಜೀವವೂ ನನಗೆ ಅಲ್ಲಿ ಕಾಣುತ್ತಿಲ್ಲ ಎಂದು ಮನದಲ್ಲಿ ನೋವು ಅನುಭವಿಸುತ್ತಾಳೆ. ಉರುಳು ಸೇವೆ ಹಾಗೆಯೇ ನೆಲದಲ್ಲಿ ಊಟ ಸೇವಿಸುವುದು ಇದೆಲ್ಲ ಗೌತಮ್ ತನ್ನ ಹೆಂಡತಿಗೆ ಏನೂ ಆಗಬಾರದು ಎಂದು ಹೆಂಡತಿಗೆ ತಿಳಿಯದ ಹಾಗೆ ಮಾಡುತ್ತಿರುತ್ತಾನೆ. ನನ್ನ ಹೆಂಡತಿ ಸುಖ ಸಂತೋಷದಿಂದ ಇರಬೇಕು. ಆಕೆಯ ಜೀವಕ್ಕೆ ಯಾವುದೇ ಹಾನಿ ಆಗಬಾರದು ಎಂದು ಗೌತಮ್ ದೇವರಲ್ಲಿ ಪ್ರಾರ್ಥನೆ ಮಾಡುತ್ತಾನೆ. ಇನ್ನೂ ಆನಂದ್‌ಗೆ ನಿಜ ವಿಚಾರ ಭೂಮಿಕಾ ತಿಳಿಸುವುದು ಎಂದು ಅನ್ನಿಸಿ ಬಿಡುತ್ತದೆ.

ಗೌತಮ್ ಕಷ್ಟ ನೋಡಲಾಗುತ್ತಿಲ್ಲ

ಆದರೆ, ಈ ವಿಚಾರ ಭೂಮಿಕಾಗೆ ತಿಳಿದರೆ ಶಕುಂತಲಾ ದೇವಿ ಕಥೆಯೇ ಬೇರೆ ಆಗುವ ಲಕ್ಷಣ ಕಾಣಿಸುತ್ತಿದೆ. ಗೌತಮ್ ಯಾವಾಗಲೂ ಚೆನ್ನಾಗಿ ಇರಬೇಕು ಎಂದು ಭೂಮಿಕಾ ಬಯಸುತ್ತಾಳೆ. ಇದೀಗ ಗೌತಮ್ ಸ್ಥಿತಿ ಕಂಡು ಭೂಮಿಕಾ ಬೇಸರಗೊಂಡಿದ್ದಾರೆ. ಶಕುಂತಲಾ ದೇವಿ ಇದೀಗ ಗೌತಮ್ ಸ್ಥಿತಿ ನೋಡಿ ನಗುತ್ತಿದ್ದಾಳೆ.

More from Filmibeat

English summary
Amruthadhaare serial April 8th episode update
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X