Amruthadhaare ; ಸೇರಿಗೆ ಸವ್ವಾ ಸೇರು, ಶಕುಂತಲಾಳಿಂದ ಭಾಗ್ಯಮ್ಮನ ಕಾಪಾಡ್ತಾಳಾ ಭೂಮಿಕಾ ?

ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್ ಮತ್ತು ಅಪರ್ಣಾ ಎದುರು ನಡೆದ ಎಲ್ಲಾ ವಿಚಾರವನ್ನು ಕೂಡ ಗೌತಮ್ ಹೇಳಿದ್ದಾನೆ. ಗೌತಮ್ ಮಾತು ಕೇಳಿ ಆನಂದ್ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು ಗೌತಮ್ ಎಷ್ಟು ಅಂತ ತಡ್ಕೋಳ್ಳೋದು ಎಂದು ಹೇಳುತ್ತಾನೆ. ಆನಂದ್ ಮಾತುಗಳಿಗೆ ಗೌತಮ್ ಪ್ರತಿಕ್ರಿಯೆಯನ್ನು ನೀಡಿದ್ದು ಎಲ್ಲ ಇದ್ದು ನಾನು ಭಿಕ್ಷುಕನಂತೆ ಇದ್ದೀನಿ, ನೆಮ್ಮದಿ ಇಲ್ಲ.. ಕಣ್ತುಂಬ ನಿದ್ದೆ ಇಲ್ಲ ಎಂದು ಹೇಳುತ್ತಾನೆ.

ಆ ದೇವರು ಎಲ್ಲ ಕೊಡ್ತಾನೆ ಆದರೆ ಕೊಟ್ಟು ಕಿತ್ಕೊಂಡು ಬಿಡ್ತಾನೆ ಎಂದು ಭಾವುಕನಾಗ್ತಾನೆ. ನನಗೆ ಅಮ್ಮನ ಕುರಿತು ಯೋಚನೆ ಆಗ್ತಿದೆ ಅಮ್ಮ ಸಿಕ್ಕಳು ಅಂತಾ ಖುಷಿ ಪಡುವುದಾ ಅಥವಾ ಅಮ್ಮಂಗೆ ಹೀಗೆ ಆಯ್ತಲ್ಲಾ ಎಂದು ದುಖ ಪಡುವುದಾ ಗೊತ್ತಾಗ್ತಿಲ್ಲ ಎಂದು ಹೇಳ್ತಾನೆ. ಕಣ್ಣೀರಾಕುತ್ತಾ ಆನಂದ್ ಮನೆಯಿಂದ ಹೊರಡ್ತಾನೆ.

amruthadhaare-serial-august-1-episode-written-update

ಕೊತ ಕೊತ ಕುದಿಯುತ್ತಿರುವ ಜೈದೇವ್

ಮತ್ತೊಂದು ಕಡೆ ಜೈದೇವ್‌ಗೆ ಅವಮಾನ ತಡೆದುಕೊಳ್ಳಲು ಆಗುತ್ತಿಲ್ಲ. ಮಲ್ಲಿಯ ಮಾತುಗಳು ಜೈದೇವ್‌ ಕಿವಿಯಲ್ಲಿ ಮಾರ್ದನಿಸುತ್ತಿದ್ದು ದಿಯಾ ಬಂದು ಮಲಗೋದು ಬಿಟ್ಟು ಇಲ್ಲಿ ಕುಳಿತು ಏನು ಯೋಚ್ನೇ ಮಾಡ್ತಿದ್ದೀರಾ ಎನ್ನುತ್ತಾಳೆ. ಇದಕ್ಕೆ ಬೇಬಿ ಈ ಚೇಪೆಕಾಯಿ ಮಲ್ಲಿ ಇಷ್ಟು ಬೇಗ ಡೆವಲಪ್ ಆದ್ಳಾ, ಅವಳು ಮತ್ತೊಂದು ಮದುವೆಯಾಗ್ತಾಳಾ ಎಂದೆಲ್ಲಾ ಪ್ರಶ್ನೆ ಮಾಡ್ತಾನೆ. ಜೈದೇವ್ ಮಾತು ಕೇಳಿ ದಿಯಾ ಕೆರಳಿ ಕೆಂಡವಾಗಿದ್ದು ಅವಳು ಇನ್ನೊಂದು ಮದುವೆಯಾದರೆ ನಿಮಗೇನು ಸಮಸ್ಯೆ ಎಂದು ಕಿಡಿ ಕಾರುತ್ತಾಳೆ.

ಭಾಗ್ಯಮ್ಮನಿಗಾಗಿ ಮಿಡಿದ ಭೂಮಿಕಾ

ಇನ್ನೊಂದು ಕಡೆ ಭಾಗ್ಯಮ್ಮ ಬಳಿ ಭೂಮಿಕಾ ಬಂದಿದ್ದು ಎಲ್ಲರೂ ಸೇರಿ ನಿಮ್ಮನ್ನು ಆಸ್ಪತ್ರೆಗೆ ಸೇರಿಸಬೇಕು ಎಂದುಕೊಂಡಿದ್ದಾರೆ, ಯಾಕೆ ಎನ್ನುವುದು ನನಗೆ ಅರ್ಥ ಆಗ್ತಿಲ್ಲ, ನನ್ನ ಪ್ರಕಾರ ನಿಮಗೇನು ಆಗಿಲ್ಲ. ನೀವು ಹುಷಾರಾಗಿಯೇ ಇದ್ದೀರಾ ಎಂದು ಹೇಳುತ್ತಾಳೆ. ನಿಮ್ಮಿಂದ ಯಾರಿಗೂ ಹಾನಿಯಾಗಲ್ಲ ಎನ್ನುವುದು ನನಗೆ ಗೊತ್ತು ನೀವು ಹುಷಾರಾಗಿದ್ದೀರಾ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳುತ್ತಾಳೆ. ಭೂಮಿಕಾಳ ಈ ಮಾತು ಕೇಳಿ ಭಾಗ್ಯಮ್ಮ ಸಂಜ್ಞೆ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದು ಭಾಗ್ಯಮ್ಮ ಮಾತು ಅರ್ಥವಾಗದೇ ಭೂಮಿಕಾ ಹೈರಾಣಾಗುತ್ತಾಳೆ. ನಿಮ್ಮ ಮಾತು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ ಎನ್ನುವ ಗಿಲ್ಟ್ ನನ್ನನ್ನು ಕಾಡ್ತಾನೇ ಇರುತ್ತೆ ಎನ್ನುತ್ತಾಳೆ.

amruthadhaare-serial-august-1-episode-written-update

ಡೈರಿ ತಗೊಂಡು ಬರುವ ಭೂಮಿಕಾ

ದಿಕ್ಕೆಟ್ಟು ಕುಂತ ಭೂಮಿಕಾ ಆ ನಂತರ ಡೈರಿಯನ್ನು ತಗೊಂಡು ಬಂದಿದ್ದು, ಅವತ್ತು ಸುಧಾ ಗಂಡ ಸರಿ ಇಲ್ಲ ಎಂದು ಫೋಟೊ ಮೂಲಕ ನೀವು ಹೇಳಿದ್ರಲ್ಲಾ ಅದೇ ತರ ನೀವು ನನಗೆ ಏನು ಹೇಳಬೇಕೆಂದುಕೊಂಡಿದ್ದೀರಾ ಅದನ್ನು ಈ ಡೈರಿಯಲ್ಲಿ ಬರೀರಿ ಎಂದು ಹೇಳುತ್ತಾಳೆ. ಆದರೆ ಭಾಗ್ಯಮ್ಮ ಬರಿಯದೇ ಚಿತ್ರ ವಿಚಿತ್ರ ಚಿತ್ರ ಬಿಡಿಸುತ್ತಾಳೆ. ಇದರಿಂದ ಬೇಸರಗೊಂಡು ನೊಂದುಕೊಳ್ಳುವ ಭೂಮಿಕಾ ಸಾರಿ ನೀವು ಏನು ಬರೆದಿದ್ದೀರಾ ಎನ್ನುವುದು ನನಗೆ ಅರ್ಥ ಆಗ್ತಿಲ್ಲ ಎನ್ನುತ್ತಾಳೆ. ಒಂದು ಅಕ್ಷರ ಕೂಡ ಕ್ಲೀಯರ್ ಇಲ್ಲಾ ಎನ್ನುತ್ತಾಳೆ.

ಭಾಗ್ಯಮ್ಮನ ಆಸ್ಪತ್ರೆಗೆ ಕಳುಹಿಸುತ್ತಿರುವ ಗೌತಮ್

ಭಾಗ್ಯಮ್ಮಳನ್ನು ಗೌತಮ್ ಆಸ್ಪತ್ರೆಗೆ ಕಳುಹಿಸಲು ಮುಂದಾಗಿದ್ದು, ಭೂಮಿಕಾ ಬಂದು ತಡೆದಿದ್ದಾಳೆ. ನಿಮ್ಮ ಅತ್ತೆ ಹುಷಾರಾಗುವುದು ನಿನಗೆ ಬೇಡ್ವಾ ಎಂದು ಶಕುಂತಲಾ ಕೇಳಿದ್ದು ಆಸ್ಪತ್ರೆಗೆ ಅವರು ಹೋಗೋದು ಬೇಡ ಅದರ ಅಗತ್ಯ ಇಲ್ಲ ಎಂದು ಭೂಮಿಕಾ ಹೇಳುತ್ತಾಳೆ. ಇದಕ್ಕೆ ನಿನ್ನೆ ಏನಾಯ್ತು ಅಂತ ನೀನೆ ನೋಡಿದೀಯಲ್ಲಾ ಅಷ್ಟಾದ ಮೇಲೂ ನೀನು ಹೀಗೆ ಹೇಳ್ತಿದ್ದೀಯಲ್ಲಾ ಎಂದು ಶಕುಂತಲಾ ಪ್ರಶ್ನೆ ಮಾಡುತ್ತಾಳೆ.

ಶಕುಂತಲಾ ಮಾತುಗಳಿಗೆ ಭೂಮಿಕಾ ಖಡಕ್ ಉತ್ತರ ನೀಡಿದ್ದು ಮೊದಲ ಸಲ ಭಾಗ್ಯ ಅತ್ತೆ ಹೀಗೆ ರಿಯ್ಯಾಕ್ಟ್ ಮಾಡಿದಾರೆ ಹಾಗೆಂದ ಮಾತ್ರಕ್ಕೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದು ಸರಿ ಅಲ್ಲ ಎನ್ನುತ್ತಾಳೆ. ಅತ್ತೆ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ ಅವರು ನಮ್ಮ ಎಲ್ಲ ಮಾತುಗಳಿಗೆ ಪ್ರತಿಕ್ರಿಯೆ ಕೊಡ್ತಿದ್ದಾರೆ ಹೀಗಿದ್ದಾಗ ಅವರನ್ನು ದೂರ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಡುತ್ತಾಳೆ.

ಭೂಮಿಕಾ ಮಾತುಗಳಿಗೆ ಗೌತಮ್ ಮತ್ತು ಸುಧಾ ಕೂಡ ಸಮ್ಮತಿ ಸೂಚಿಸಿದ್ದು, ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆಸೋಣ ಮತ್ತೆ ಅಮ್ಮ ಹೀಗೆ ಮಾಡಿದರೆ ಆಗ ಆಸ್ಪತ್ರೆಯ ಕುರಿತು ಆಲೋಚನೆ ಮಾಡೋಣ ಎನ್ನುತ್ತಾರೆ. ಭಾಗ್ಯ ಕೂಡ ನಾನು ಹೋಗಲಾರೆ ಎಂದು ಸಂಜ್ಞೆ ಮೂಲಕ ಗೌತಮ್‌ಗೆ ಹೇಳಿದ್ದು ಸದ್ಯ ಶಕುಂತಲಾ ಈ ಎಲ್ಲ ಬೆಳವಣಿಗೆಯಿಂದ ಕಂಗಾಲಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X