Amruthadhaare ;  ಪಾರ್ಥ ಪ್ರಾಣವನ್ನು ಬಲಿ ಪಡೆಯುತ್ತಾ ಯಮಸ್ವರೂಪಿ ಲಾರಿ ?ತಿರುಮಂತ್ರವಾಯ್ತಾ ಶಕುಂತಲಾ ಕುತಂತ್ರ ?

'ಅಮೃತಧಾರೆ' ಧಾರಾವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸದ್ಯ ಭೂಮಿಕಾಳನ್ನು ಮುಗಿಸುವ ಪ್ಲಾನ್‌ನ ಶಕುಂತಲಾ ಮತ್ತು ಜೈದೇವ್ ಮಾಡಿದ್ದಾರೆ. ಜೈದೇವ್ ಮನೆಗೆ ಬಂದಿರುವ ಶಕುಂತಲಾ ಈ ಕುರಿತು ಚರ್ಚೆ ಮಾಡಿದ್ದು ಗೌತಮ್‌ಗೆ ಅನುಮಾನ ಬರದಂತೆ ಹೇಗೆ ಸಾಯಿಸುವುದು ಎಂದು ಕೇಳುತ್ತಾಳೆ. ಇದಕ್ಕೆ ಜೈದೇವ್ ಮನೆಯಲ್ಲಿ ಒಬ್ಬನ ಕೆಲಸಕ್ಕೆ ಬಿಟ್ಟಿದೀನಿ ನೀನು ಅವನ ಸಹಾಯ ತಗೋ ಎಂದು ಹೇಳುತ್ತಾನೆ.

ಭೂಮಿಕಾ ಮನೆಯಿಂದ ಹೊರಗಡೆ ಬಂದರೆ ಅವತ್ತೇ ಮುಹೂರ್ತ ಫಿಕ್ಸ್ ಎನ್ನುತ್ತಾನೆ. ಆಗ ಶಕುಂತಲಾ ಹಾಗಿದ್ದರೆ ತಡ ಯಾಕೆ ಅವಳು ಚೆಕಪ್‌ಗೆ ಇವತ್ತೇ ಆಸ್ಪತ್ರೆಗೆ ಹೋಗ್ತಿದ್ದಾಳೆ ಇವತ್ತೇ ಆ ಕೆಲಸ ಮಾಡಿ ಮುಗಿಸು ಎಂದಾಗ ಒಳ್ಳೆ ಕೆಲಸಕ್ಕೆ ಯಾವತ್ತು ತಡ ಮಾಡಬಾರದು ಇವತ್ತೇ ಮಾಡಿ ಮುಗಿಸೋಣ ಎನ್ನುತ್ತಾನೆ.

amruthadhaare-serial-august-10-episode-written-update

ಬ್ರೇಕ್‌ ಫೇಲ್ ಮಾಡಿಸುವ ಶಕುಂತಲಾ

ಜೈದೇವ್ ಮನೆಯಲ್ಲಿ ಕಳುಹಿಸಿರುವ ಹುಡಗನ ಜೊತೆ ಮಾತನಾಡುವ ಶಕುಂತಲಾ ಅವರ ಹೋಗುವ ಗಾಡಿಯ ಬ್ರೇಕ್ ಫೇಲ್ ಮಾಡು ಎಂದು ಆಜ್ಞೆ ಮಾಡುತ್ತಾಳೆ. ಅದರಂತೆ ಆ ಹುಡುಗ ಕೆಲಸ ಮಾಡಿದ್ದು ನಿನ್ನ ಅಕೌಂಟ್‌ಗೆ ದುಡ್ಡು ಬರುತ್ತೆ ಯಾರ ಕಣ್ಣಿಗೆ ಕಾಣದಂತೆ ಇಲ್ಲಿಂದ ಈಗ ಎಸ್ಕೇಪ್ ಆಗು ಎನ್ನುತ್ತಾಳೆ.

ಮಗು ಹುಡುಕುತ್ತಾ ಹೋದ ಗೌತಮ್

ಮತ್ತೊಂದು ಕಡೆ ಆಫೀಸ್‌ನಲ್ಲಿ ಮುಖ್ಯವಾದ ಮೀಟಿಂಗ್ ಇರುವ ಕಾರಣಕ್ಕೆ ನಿಮ್ಮ ಜೊತೆ ಆಸ್ಪತ್ರೆಗೆ ನಾನು ಬರಲು ಸಾಧ್ಯ ಇಲ್ಲ ಎಂದು ಭೂಮಿಕಾಗೆ ಹೇಳಿರುವ ಗೌತಮ್, ಆನಂದ್ ಜೊತೆ ಹೊರಡುವ ಸಮಯದಲ್ಲಿ ಪೊಲೀಸರ ಕರೆ ಬಂದಿದ್ದು ಮಗು ಬಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿದ್ದಾರೆ. ನಿಮಗೊಂದು ಲೊಕೇಷನ್ ಕಳಿಸ್ತೀನಿ ಈಗಲೇ ಬನ್ನಿ ಎಂದು ಹೇಳಿದ್ದಾರೆ. ಸುದ್ದಿ ಕೇಳಿ ಖುಷಿಯಾಗುವ ಗೌತಮ್ ಪೊಲೀಸರು ಹೇಳಿದ ಜಾಗದತ್ತ ಹೊರಡುತ್ತಾನೆ.

ಡ್ರೈವರ್ ಬದಲು ತಾನೇ ಹೋಗುವ ಪಾರ್ಥ

ಮಗುನ ಕರೆದುಕೊಂಡು ಭೂಮಿಕಾ ಆಸ್ಪತ್ರೆಗೆ ಹೋಗಲು ಕಾರ್ ಹತ್ತಿದ್ದಾಳೆ. ಭೂಮಿಕಾ ಕಾರು ಹತ್ತಿದ್ದನ್ನು ನೋಡುವ ಶಕುಂತಲಾ ಖುಷಿಯಿಂದ ಜೈದೇವ್‌ಗೆ ಫೋನ್ ಮಾಡಿ ಹೊರಟಿರುವ ವಿಚಾರ ಹೇಳುತ್ತಾಳೆ. ಆದರೆ ಇದೇ ಸಮಯದಲ್ಲಿ ಕಾರಿನ ಡ್ರೈವರ್ ಎರಡು ನಿಮಿಷದಲ್ಲಿ ಬರುವುದಾಗಿ ಹೇಳಿ ಹೋಗಿದ್ದು ಅಲ್ಲಿ ಪಾರ್ಥ ಬಂದಿದ್ದಾನೆ. ನಾನೇ ನಿಮ್ಮನ್ನು ಕರೆದುಕೊಂಡು ಹೋಗ್ತೀನಿ ಎಂದು ಹೇಳಿ ಡ್ರೈವರ್ ಬಳಿ ಕೀ ತೆಗೆದುಕೊಂಡು ಹೊರಡುತ್ತಾನೆ.


ಪಾರ್ಥ ಕಾರಲ್ಲಿರುವ ವಿಚಾರ ಅರಿಯದ ಶಕುಂತಲಾ

ಕಾರಿನಲ್ಲಿ ಡ್ರೈವರ್ ಬದಲು ಪಾರ್ಥ ಇರುವ ವಿಚಾರ ಅರಿಯದ ಶಕುಂತಲಾ ಕಾರು ಹೊರಡ್ತು ಬೇಗ ಕೆಲಸ ಮುಗಿಸು ಎನ್ನುತ್ತಾಳೆ. ಮನೆಯವರು ಕಾರಿನಲ್ಲಿ ಯಾರು ಇಲ್ಲಾ ತಾನೇ ಎಂದು ಜೈದೇವ್‌ ಕೇಳಿದಾಗಲೂ ಕೂಡ ಇಲ್ಲ ಡ್ರೈವರ್ ಮಾತ್ರ ಎಂದು ಶಕುಂತಲಾ ಹೇಳುತ್ತಾಳೆ.

amruthadhaare-serial-august-10-episode-written-update

ಪೊಲೀಸರನ್ನು ಭೇಟಿಯಾದ ಗೌತಮ್

ಕಾಡಿನ ಇನ್ನೊಂದು ಬದಿಯಲ್ಲಿ ಮಗು ಸಿಕ್ಕಿದೆ ಎನ್ನುವ ಮಾಹಿತಿ ಅಲ್ಲಿನ ಪೊಲೀಸ್ ಸ್ಟೇಷನ್‌ದಿಂದ ನನಗೆ ಮನೆಗೆ ಬಂದಿದೆ ಎಂದು ಪೊಲೀಸರು ಗೌತಮ್‌ಗೆ ಹೇಳಿದ್ದಾರೆ. ಇದರಿಂದ ಖುಷಿಯಾಗುವ ಗೌತಮ್ ಮತ್ತು ಆನಂದ್ ಪೊಲೀಸರು ಹೇಳಿದಂತೆ ಶಿವನಹಳ್ಳಿ ಪೊಲೀಸ್ ಸ್ಟೇಷನ್‌ ಕಡೆ ಹೊರಡುತ್ತಾರೆ.


ಪ್ರಾಣ ಬಲಿ ಪಡೆಯುತ್ತಾ ಯಮಸ್ವರೂಪಿ ಲಾರಿ ?

ಇತ್ತ ಪಾರ್ಥ ಮತ್ತು ಭೂಮಿಕಾ ಇರುವ ಕಾರಿನತ್ತ ಲಾರಿ ಹೊರಟಿದ್ದು ಮನೆಯಲ್ಲಿ ಡ್ರೈವರ್ ಇರುವುದನ್ನು ಕಂಡು ಶಕುಂತಲಾ ಗಾಬರಿಯಾಗಿದ್ದಾಳೆ. ಭೂಮಿಕಾ ಜೊತೆ ಹೋಗಿದ್ದು ಯಾರು ಎಂದು ಕೇಳಿದ್ದಾಳೆ. ಇದಕ್ಕೆ ಡ್ರೈವರ್ ಪಾರ್ಥ ಸರ್ ಹೋದರು ಎಂದು ಹೇಳಿದ್ದು ಶಕುಂತಲಾ ಗಾಬರಿಯಿಂದ ಜೈದೇವ್‌ಗೆ ಫೋನ್ ಮಾಡಿದ್ದಾಳೆ. ಭೂಮಿಕಾ ಜೊತೆ ಪಾರ್ಥ ಹೋಗಿದಾನೇ ಹೇಗಾದರೂ ಮಾಡಿ ಆಕ್ಸಿಡೆಂಟ್ ನಿಲ್ಲಿಸು ಎಂದು ಹೇಳುತ್ತಾಳೆ.

ಶಕುಂತಲಾ ಮಾತು ಕೇಳಿ ಜೈದೇವ್ ಕೂಡ ಶಾಕ್ ಆಗಿದ್ದು ಲಾರಿ ಬರುತ್ತಿರುವುದನ್ನು ಕಂಡು ಗಾಬರಿಯಾಗುವ ಪಾರ್ಥ ಬೇಕು ಅಂತ ನಮಗೆ ಗುದ್ದೋಕೆ ಅಂತಾನೇ ಬರ್ತಿರುವಂತೆ ಇದೆ ಎಂದು ಹೇಳುತ್ತಾನೆ. ಬ್ರೇಕ್ ಹತ್ತದ ಕಾರಣ ಇನ್ನು ಗಾಬರಿ ಬೀಳುತ್ತಾನೆ. ಭೂಮಿಕಾ ಕೂಡ ಗಾಬರಿಯಾಗಿದ್ದು ಏನಾದರು ಮಾಡಿ ಪಾರ್ಥ ಎಂದು ಹೇಳುತ್ತಾಳೆ.

ಸದ್ಯ ಆಕ್ಸಿಡೆಂಟ್ ಆದಂತೆ ಅಮೃತಧಾರೆಯಲ್ಲಿ ತೋರಿಸಲಾಗಿದ್ದು, ಇಂದಿನ ಪ್ರೋಮೋದಿಂದಾಗಿ ಭೂಮಿಕಾ ಬದುಕುಳಿದ ವಿಚಾರ ಸ್ಪಷ್ಟವಾಗಿದೆ. ಆದರೆ ಪಾರ್ಥನ ಕಥೆ ಏನಾಯ್ತು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹೀಗಾಗಿ ಪಾರ್ಥನ ಪಾತ್ರ ಅಮೃತಧಾರೆಯಲ್ಲಿ ಮುಕ್ತಾಯವಾಯ್ತಾ ? ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ. ಇದಕ್ಕೆ ಪೂರಕವಾಗಿ ಪಾರ್ಥ ಆಗಿ ಜನರ ಮನಸ್ಸು ಗೆದ್ದಿರುವ ನಟ ಕರಣ್‌ ಕೆ ಆರ್‌ ಜೀ ಪವರ್ ಟಿವಿಯಲ್ಲಿ ಪ್ರಸಾರವಾಗಲಿರುವ ''ಗೌರಿ'' ಧಾರಾವಾಹಿಯಲ್ಲಿ ಹೀರೋ ಆಗಿದ್ದು ಈ ಧಾರಾವಾಹಿಯ ಪ್ರೋಮೋ ಕೂಡ ಸದ್ಯ ಬಿಡುಗಡೆಯಾಗಿದೆ. ನಿಜಕ್ಕೂ ಪಾರ್ಥ ಪಾತ್ರ ಅಂತ್ಯವಾಯ್ತಾ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಇಂದು[ಆಗಸ್ಟ್ 11] ರಾತ್ರಿ ಸಿಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X