Amruthadhaare ; ಗೌತಮ್ ಕೈಸೇರಿದ ಮಗು, ಭೂಮಿಕಾಗೆ ಗೊತ್ತಾಯ್ತು ಜೈದೇವ್ -ಶಕುಂತಲಾ ಮುಂದಿನ ನಡೆ
'ಅಮೃತಧಾರೆ' ಧಾರಾವಾಹಿಯಲ್ಲಿ ಅನಾಹುತ ತಪ್ಪಿದೆ.ಸ್ವಲ್ಪದರಲ್ಲಿಯೇ ಬಚಾವಾದ ಭೂಮಿಕಾ ತನ್ನ ಮಗುಗೆ ಎಲ್ಲಿ ಏನಾಯ್ತು ಎಂದುಕೊಂಡು ಕಣ್ಣೀರು ಹಾಕುತ್ತಾಳೆ. ಆಸ್ಪತ್ರೆಗೆ ಹೋಗುವುದು ಬೇಡ ನಾನು ಮನೆಗೆ ಹೋಗಬೇಕೆಂದು ಹಠ ಮಾಡುತ್ತಾಳೆ. ಇತ್ತ ಆಕ್ಸಿಡೆಂಟ್ ತಪ್ಪಿದ್ದರಿಂದ ನಿರಾಳವಾದ ಜೈದೇವ್ ಹೋದ ಜೀವ ಬಂದಗಾಯ್ತು ಎಂದುಕೊಂಡು ಶಕುಂತಲಾಗೆ ಫೋನ್ ಮಾಡುತ್ತಾನೆ. ಪಾರ್ಥನಿಗೆ ಏನೂ ಆಗಿಲ್ಲ ಎನ್ನುವ ವಿಚಾರ ಹೇಳುತ್ತಾನೆ.
ಶಕುಂತಲಾ ಮಾತಲ್ಲೇ ಕಂಡು ಹಿಡಿದ ಭೂಮಿಕಾ
ಭೂಮಿಕಾ ಮಗು ಜೊತೆ ಮನೆಗೆ ಮರಳಿ ಬಂದಿದ್ದು ಪಾರ್ಥನ ವಿಚಾರದಲ್ಲಿ ಆತಂಕಕ್ಕೀಡಾದ ಶಕುಂತಲಾ, ಪಾರ್ಥ ಎಲ್ಲಿ ಎಂದು ಕೇಳುತ್ತಾಳೆ. ಇದರಿಂದ ಭೂಮಿಕಾಗೆ ಅನುಮಾನ ಬಂದಿದ್ದು ಅಂದರೆ ಇದೆಲ್ಲಾ ನೀವೇ ಮಾಡಿಸಿದ್ದಾ ಎನ್ನುತ್ತಾಳೆ. ಮಾಡೋದೆಲ್ಲ ಮಾಡಿ ಅಮಾಯಕರಂತೆ ಆಡ್ತಿದ್ದೀರಾ ಎಂದು ಹೇಳುತ್ತಾಳೆ. ಆಕ್ಸಿಡೆಂಟ್ ಪ್ಲ್ಯಾನ್ ನಿಮ್ಮದೇ ಅಲ್ವಾ ಎಂದು ಹೇಳುತ್ತಾಳೆ.

ಇದಕ್ಕೆ ನಾಟಕವಾಡುವ ಶಕುಂತಲಾ ಏನು ಮಾತಾಡ್ತಿದ್ದೀಯಾ ಎನ್ನುವ ಪರಿಜ್ಞಾನ ಇದೆಯಾ ನಿನಗೆ ಬಾಯಿಗೆ ಬಂದಂತೆ ಮಾತನಾಡ್ತಿದ್ದೀಯಲ್ಲಾ, ಬರ್ತಾ ಬರ್ತಾ ನಿಂದು ಅತಿಯಾಯ್ತು, ಯಾವ ಆಧಾರದ ಮೇಲೆ ನನ್ನ ಮೇಲೆ ಆರೋಪ ಮಾಡ್ತಿದ್ದೀಯಾ ಎಂದು ಕೂಗಾಡುತ್ತಾಳೆ. ಇದಕ್ಕೆ ಕೆರಳುವ ಭೂಮಿಕಾ ಸದ್ಯದಲ್ಲೇ ನಿಮ್ಮ ಬಂಡವಾಳ ಬಯಲು ಮಾಡ್ತೀನಿ ನೋಡ್ತೀರಿ ಎಂದು ಹೇಳಿ ಹೋಗುತ್ತಾಳೆ.
ಭೂಮಿಕಾ ಸಹಾಯಕ್ಕೆ ಬಂದ ಸೃಜನ್
ಸೃಜನ್ ಎದುರು ಭೂಮಿಕಾ ಆಕ್ಸಿಡೆಂಟ್ ವಿಚಾರ ಮಾತನಾಡುತ್ತಾಳೆ. ಶಕುಂತಲಾ ಅತ್ತೆಯ ಕೈವಾಡ ಇದೆ ಎಂದು ಹೇಳುತ್ತಾಳೆ. ಇದಕ್ಕೆ ಸೃಜನ್ ಗಾಬರಿಯಾಗಿದ್ದು ನೀವು ಅವರಿಗೆ ಪ್ರಶ್ನೆ ಮಾಡಬೇಕಿತ್ತು ? ಅವರು ಯಾಕೆ ಹೀಗೆಲ್ಲಾ ಮಾಡ್ತಾರೆ ? ಎಂದೆಲ್ಲಾ ಪ್ರಶ್ನೆ ಮಾಡ್ತಾನೆ. ಅದಕ್ಕೆ ಹಲವಾರು ಕಾರಣಗಳಿವೆ ಎನ್ನುವ ಭೂಮಿಕಾ ನನ್ನದೇನು ಕೈವಾಡ ಇಲ್ಲ ಎನ್ನುವ ವಾದವನ್ನು ಅವರು ಮಾಡ್ತಿದ್ದಾರೆ ಎಂದು ಹೇಳುತ್ತಾಳೆ. ಮನೆಯವರೇ ಮನೆಯವರ ದುಷ್ಮನ್ ಅಂದರೆ ಹೇಗೆ ? ನನಗೆ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಎನ್ನುವ ಸೃಜನ್ ನನ್ನ ಹತ್ರ ಒಂದು ಪರಿಹಾರ ಇದೆ ಎಂದು ಹೇಳುತ್ತಾನೆ.
ಪಾರ್ಥನ ಮೇಲೆ ಕಿಡಿ ಕಾರುವ ಶಕುಂತಲಾ
ಜೈದೇವ್ ಮನೆಗೆ ಬಂದ ಶಕುಂತಲಾ ಮನೆಯಲ್ಲಿ ನಡೆದ ವಿಚಾರ ಹೇಳುತ್ತಾಳೆ. ಪಾರ್ಥ ನನ್ನ ಮಗನೇ ಆದರೆ ಅವನು ನಮ್ಮ ಜೊತೆ ಕೈ ಜೋಡಿಸುವುದೇ ಇಲ್ಲ ನಮ್ಮ ನೆಮ್ಮದಿಯನ್ನು ಹಾಳು ಮಾಡ್ತಿದ್ದಾನೆ ಎನ್ನುತ್ತಾಳೆ. ಜೈದೇವ್ ಅವನು ನಮ್ಮ ಪಾಲಿನ ಬಿಸಿ ತುಪ್ಪ ಎಂದು ಹೇಳುತ್ತಾನೆ.
ಕಾಲ್ ಲಿಸ್ಟ್ ತೆಗೆದುಕೊಂಡು ಬಂದ ಸೃಜನ್
ಶಕುಂತಲಾಳ ಕಾಲ್ ಲಿಸ್ಟ್‌ನ ಸೃಜನ್ ತೆಗೆದುಕೊಂಡು ಬಂದಿದ್ದು ಭೂಮಿಕಾ ಕೈಗೆ ಕೊಟ್ಟಿದ್ದಾನೆ. ಜೈದೇವ್ ಮೇಲಿಂದ ಮೇಲೆ ಫೋನ್ ಮಾಡಿರುವ ವಿಚಾರ ಹೇಳಿದ್ದಾನೆ. ನಿಮ್ಮನ್ನು ಕೊಲ್ಲುವ ಪ್ರಯತ್ನ ಮಾಡುವ ಸಮಯದಲ್ಲಿಯೇ ಇಬ್ಬರ ನಡುವೆ ಹಲವಾರು ಬಾರಿ ಫೋನ್ ಕಾಲ್‌ಗಳಾಗಿವೆ ನಿಮ್ಮ ಅನುಮಾನ ನಿಜಾ ಎಂದು ಹೇಳುತ್ತಾನೆ. ಸಾಕ್ಷಿ ಇದೆಯಲ್ಲಾ ಗೌತಮ್ ಸರ್ ಹತ್ರ ಹೇಳ್ತೀರಾ ಎನ್ನುತ್ತಾನೆ.

ಗೌತಮ್ ಕೈ ಸೇರಿದ ಮಗು
ಗೌತಮ್ ಮತ್ತು ಆನಂದ್ ಪೊಲೀಸರ ಜೊತೆ ಅನಾಥಾಶ್ರಮಕ್ಕೆ ಬಂದಿದ್ದು ಹೆಣ್ಣು ಮಗು ಗೌತಮ್ ಕೈ ಸೇರಿದೆ. ಮಗುನ ತಬ್ಬಿಕೊಂಡು ಗೌತಮ್ ಭಾವುಕನಾಗಿದ್ದು ಆನಂದ್ ಮುಖದಲ್ಲಿ ಆನಂದಭಾಷ್ಪ ಇದೆ. ಇದೇ ಸಮಯದಲ್ಲಿ ಈ ಮಗು ನಿಮ್ಮದೇ ಎನ್ನುವುದಕ್ಕೆ ಯಾವ ಆಧಾರ ಇಲ್ಲದ ಕಾರಣ ಮಗುದು ಮತ್ತು ನಿಮ್ಮದು ಡಿಎನ್ಎ ಟೆಸ್ಟ್ ಮಾಡಿ ಮ್ಯಾಚ್ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ. ನರ್ಸ್ ಬಂದಿದ್ದು ಬ್ಲಡ್ ಸ್ಯಾಂಪಲ್ ತಗೆದುಕೊಳ್ಳಲು ಹೇಳಿದ್ದಾರೆ.
ಫೋನ್ ಟ್ರ್ಯಾಪ್ ಐಡಿಯಾ ಕೊಡುವ ಸೃಜನ್
ಸಾಕ್ಷಿಯ ಆಲೋಚನೆ ಮಾಡುತ್ತಿರುವ ಭೂಮಿಕಾಗೆ ಸೃಜನ್ ಫೋನ್ ಟ್ರ್ಯಾಪ್ ಮಾಡುವ ಪ್ಲ್ಯಾನ್ ಕೊಟ್ಟಿದ್ದಾನೆ. ಆದರೆ ಅದು ತಪ್ಪಲ್ವಾ ಎಂದು ಹೇಳುತ್ತಾಳೆ. ಆಗ ಅಡ್ಡದಾರಿಯಲ್ಲಿ ಹೋಗುತ್ತಿದ್ದವರನ್ನು ಹಿಡಿಬೇಕು ಅಂದರೆ ನಾವು ಅಡ್ಡದಾರಿಯನ್ನೇ ಹಿಡಿಬೇಕು, ನಮಗೆ ಬೇರೆ ದಾರಿ ಇಲ್ಲ ಎಂದು ಸೃಜನ್ ಹೇಳಿದ್ದು ಭೂಮಿಕಾ ಸರಿ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ಏನೇ ಮಾಡಿದರು ತುಂಬಾ ಕೇರ್‌ಫುಲ್ ಆಗಿ ಮಾಡಬೇಕು ಸಿಕ್ಕಿ ಹಾಕಿಕೊಳ್ಳುವಂತೆ ಆಗಬಾರದು ಇಲ್ಲಾ ಅಂದರೆ ಕಷ್ಟ ಆಗುತ್ತೆ ಎಂದು ಹೇಳುತ್ತಾಳೆ.
ಒಂದು ವಾರದಲ್ಲಿ ಏನಾಗುತ್ತೋ ?
ಡಿಎನ್‌ಎ ರಿಪೋರ್ಟ್ ಬರಲು ಒಂದು ವಾರ ಆಗುತ್ತೆ, ಅಲ್ಲಿಯವರೆಗೆ ಕಾಯಬೇಕು ಎಂದು ಪೊಲೀಸರು ಗೌತಮ್‌ಗೆ ಹೇಳುತ್ತಾರೆ. ಆಗ ಆನಂದ್ ಇಷ್ಟು ದಿನನೇ ಕಾದಿದಿಯಾ 7 ದಿನಾ ತಾನೇ ಮಗಳು ಸಿಕ್ಕಿದಾಳಲ್ಲ ಅದಕ್ಕೆ ಖುಷಿ ಪಡು ಎಂದು ಹೇಳುತ್ತಾನೆ. ಸದ್ಯ ಮಗು ಈಗ ಅನಾಥಾಶ್ರಮದಲ್ಲಿಯೇ ಇದ್ದು ಈ 7 ದಿನದಲ್ಲಿ ಜೈದೇವ್ ಮತ್ತು ಶಕುಂತಲಾಗೆ ಈ ವಿಚಾರ ಗೊತ್ತಾಗುತ್ತಾ ಎನ್ನುವುದನ್ನು ನೋಡಬೇಕಿದೆ.
ಭೂಮಿಕಾಗೆ ಗೊತ್ತಾಯ್ತು ಅಮ್ಮ ಮಗನ ಮುಂದಿನ ನಡೆ
ಸೃಜನ್ ತನ್ನ ಕೆಲಸ ಮಾಡಿದ್ದು ಶಕುಂತಲಾ ಮತ್ತು ಜೈದೇವ್ ಫೋನ್ ಟ್ರ್ಯಾಪ್ ಆಗಿದೆ. ಭೂಮಿಕಾ ಮತ್ತು ಸೃಜನ್ ಇಬ್ಬರು ಶಕುಂತಲಾ ಮತ್ತು ಜೈದೇವ್ ಮಾತುಗಳನ್ನು ಕೇಳಿಸಿಕೊಂಡಿದ್ದು, ಟೆಕ್ನಾಲಜಿ ಮೂಲಕ ಭೂಮಿಕಾಗೆ ಗೌತಮ್ ವಾಯ್ಸ್‌ನಲ್ಲಿ ನಾನೇ ಕಾಲ್ ಮಾಡಿ ನಮ್ಮ ಫ್ಯಾಕ್ಟರಿಗೆ ಬೆಂಕಿ ಬಿದ್ದಿದೆ ಎಂದು ವಿಷಯ ಮುಟ್ಟಸ್ತೀನಿ, ಆಗ ಅವಳು ಓಡಿ ಬರುತ್ತಾಳೆ ಅಲ್ಲಿ ಕಥೆ ಮುಗಿಸೋಣ ಎಂದು ಶಕುಂತಲಾಗೆ ಜೈದೇವ್ ಹೇಳಿದ್ದಾನೆ. ಗೌತಮ್ ಬಳಿ ತೋರಿಸಲು ನಮ್ಮ ಬಳಿ ಸಾಕ್ಷಿಗಳಿಲ್ಲ ಹೀಗಾಗಿ ನಾವು ಮುಂಚಿತವಾಗಿ ಹೋಗಿ ಅಲ್ಲಿ ಕ್ಯಾಮರಾ ಸೆಟಪ್ ಮಾಡೋಣ ಎಂದು ಸೃಜನ್ ಜೊತೆ ಭೂಮಿಕಾ ಫ್ಯಾಕ್ಟರಿಗೆ ಹೋಗಿದ್ದಾಳೆ. ಇದೇ ಸಮಯಕ್ಕೆ ಅಲ್ಲಿ ಜೈದೇವ್ ಬಂದಿದ್ದಾನೆ. ಈ ಮೂಲಕ ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ.


Click it and Unblock the Notifications











