Amruthadhaare:ಅಪ್ಪಿ ಪಾರ್ಥನನ್ನು ಸೇರಿಸಲು ಹೊರಟ ಜೀವ; ಭೂಮಿಕಾ ನೋಡಿ ಶಾಕ್
ಒಂದು ಕಡೆ ಜೀವ ತನ್ನ ತಂಗಿ ಹಾಗೂ ಆಕೆ ಪ್ರೀತಿ ಮಾಡುತ್ತಿರುವ ಪಾರ್ಥ ಜೊತೆ ಮದುವೆ ಮಾಡಬೇಕೆಂದು ಆಲೋಚನೆ ಮಾಡುತ್ತಾರೆ. ಅಪೇಕ್ಷ ಬಳಿಗೆ ಬಂದ ಜೀವ ಮೆತ್ತಗೆ ತನ್ನ ತಂಗಿಯ ನೋವು ನೋಡಲಾಗದೆ ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ. ಯಾಕೆ ಹೀಗೆಲ್ಲ ಆಗುತ್ತಿದೆ. ಅಪ್ಪಿ ಮೊದಲು ನನ್ನ ಬಳಿ ಪ್ರೀತಿ ಹೇಳಿಕೊಂಡರೆ ಒಳ್ಳೆಯದಿತ್ತು ಅವರಿಬ್ಬರನ್ನು ನಾನು ಒಂದು ಮಾಡುತ್ತಿದೆ.
ಆದರೆ ಇದೀಗ ಆಕೆಯ ಪ್ರೀತಿಗೆ ಯಾರು ಸಪೋರ್ಟ್ ಮಾಡುತ್ತಿಲ್ಲ. ಆಕೆಗೆ ಅದೆಷ್ಟು ನೋವು ಆಗುತ್ತಿರಬಹುದು ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಏನು ಮಾಡುವುದು ಎಂದು ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಕೊನೆಗೆ ಅಪೇಕ್ಷಾ ಬಳಿ ನಾನು ನಿನ್ನ ಪ್ರೀತಿಗೆ ಸಪೋರ್ಟ್ ಮಾಡುತ್ತೇನೆ ಎಂದು ಹೇಳುತ್ತಾನೆ. ಪಾರ್ಥಗೆ ಕರೆ ಮಾಡಿ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ ಜೀವ ರಿಜಿಸ್ಟರ್ ಮ್ಯಾರೇಜ್ ಮಾಡಿಸಲು ಮುಂದಾಗುತ್ತಾನೆ.

ಈ ವಿಚಾರ ಯಾರಿಗೂ ಗೊತ್ತಿರುವುದಿಲ್ಲ. ಆದರೆ, ಜೀವ ನಡವಳಿಕೆಯಿಂದ ಮಹಿಮಾಗೆ ಬಹಳ ಸಂಶಯ ಬರುತ್ತೆ. ಇದೇನಿದು ಯಾವತ್ತೂ ಜೀವ ಈ ರೀತಿ ನಡೆದುಕೊಂಡವನು ಅಲ್ಲ. ಆದರೆ, ಇದೀಗ ಇದ್ದಕ್ಕಿದ್ದ ಹಾಗೆ ಹೀಗೆಲ್ಲ ನಡೆದುಕೊಳ್ಳುತ್ತಿದ್ದಾನಲ್ಲ ಎಂದು ಮಹಿಮಾಗೆ ಅನುಮಾನ ಬರುತ್ತದೆ. ಜೀವ ಮನೆಯಿಂದ ಹೋದ ಬಳಿಕ ಕೊಂಚ ಸಮಯ ಆದ ಬಳಿಕ ಅಪ್ಪಿ ಕೂಡ ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗುತ್ತಾಳೆ. ಇದನ್ನೆಲ್ಲ ನೋಡಿ ಮಹಿಮಾಗೆ ಅನುಮಾನ ಮೂಡುತ್ತದೆ.
ಮಹಿ ಮಾತಿಗೆ ಆತಂಕಗೊಂಡ ಭೂಮಿಕಾ
ಹಾಗೆಯೇ ಭೂಮಿಕಾಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳುತ್ತಾಳೆ. ಆಗ ಆತಂಕಗೊಂಡ ಭೂಮಿಕಾ, ಮಹಿಮಾ ಬಳಿ ಹೇಳುತ್ತಾರೆ. ಈ ವಿಚಾರವನ್ನು ನೀನು ನನ್ನ ಜೊತೆ ಇಷ್ಟು ಲೇಟ್ ಆಗಿ ಹೇಳುವುದಾ ಮಹಿಮಾ ಎಂದಾಗ ಮಹಿಮಾ ಅನುಮಾನದಿಂದ "ಪಾರ್ಥ ಅಣ್ಣ ಅಲ್ಲಿಯೇ ಇದ್ದಾನೆ ಅಲ್ವಾ?" ಎಂದು ಕೇಳುತ್ತಾಳೆ. ಆಗ ಭೂಮಿಕಾ "ಪಾರ್ಥ ಈಗಷ್ಟೇ ಮನೆಯಿಂದ ಹೊರಗೆ ಹೋದರು" ಎಂದಾಗ ಮಹಿಮಾಗೆ ಇನ್ನೂ ಅನುಮಾನ ಬಲ ಆಗುತ್ತದೆ.
ಇದನ್ನೆಲ್ಲ ಕೇಳಿದ ಭೂಮಿಕಾಗೆ ಪಾರ್ಥ ನಡವಳಿಕೆಯಲ್ಲಿ ಕೊಂಚ ಬದಲಾವಣೆ ಆಗಿತ್ತು. ಆದರೆ ಈ ಬದಲಾವಣೆಗೆ ಏನು ಕಾರಣ ಎನ್ನುವುದು ನಮಗೆ ತಿಳಿಯಿತು. ಹಾಗೆಯೇ ಗೌತಮ್ ಜೊತೆ ನಾನು ಮನೆಗೆ ಹೋಗಿ ಬರುತ್ತೇನೆ. ಅಪ್ಪ ಅಮ್ಮನ ಜೊತೆ ಮಾತನಾಡಿ ಬರುತ್ತೇನೆ ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ ಎಂದು ಹೇಳಿ ಜೀವನನ್ನು ಹುಡುಕುತ್ತಾ ಹೊರಟ ಭೂಮಿಕಾಗೆ ಜೀವ ಸಿಕ್ಕಿದ್ದು ರಿಜಿಸ್ಟರ್ ಆಫೀಸ್ ಬಳಿ. ಇತ್ತ ಜೀವ ಪಾರ್ಥಗೆ ಕರೆ ಮಾಡಿ "ಪಾರ್ಥ ಅವರೇ ನೀವು ಎಲ್ಲಿದ್ದೀರಾ?" ಎಂದು ಕೇಳಿದಾಗ ಪಾರ್ಥ "ನಾನು ಬರುತ್ತಿದ್ದೇನೆ ಒಂದು ಐದು ನಿಮಿಷ" ಎಂದು ಹೇಳುತ್ತಾನೆ

ಭೂಮಿಕಾ ಕೋಪಕ್ಕೆ ಗುರಿ ಆಗುತ್ತಾನ ಜೀವ ?
ಈ ವೇಳೆ ಜೀವನನ್ನೂ ಯಾರೋ ಹಿಂದಿನಿಂದ ಕರೆದ ಹಾಗೆ ಅನುಭವ ಆಗುತ್ತದೆ. ಆದರೆ, ಹಿಂದೆ ತಿರುಗಿದ ಜೀವಗೆ ಭೂಮಿಕಾ ಕಾಣಿಸುತ್ತಾಳೆ. ಅಕ್ಕನನ್ನು ನೋಡಿದ ಜೀವಗೆ ಬಹಳ ಆತಂಕ ಆಗುತ್ತದೆ. ಇನ್ನೂ ಸದಾಶಿವ ಮಾತ್ರ ಅಪ್ಪಿ, ಪಾರ್ಥ ಮದುವೆ ನಡೆಯುವುದೇ ಬೇಡ ಎನ್ನುವ ಹಾಗೆ ಕಡ್ಡಿ ಮುರಿದ ಹಾಗೆ ಹೇಳುತ್ತಾನೆ. ತನ್ನ ಮಗಳನ್ನು ನಾನು ಮೆಚ್ಚಿದ ಹುಡುಗನಿಗೆ ಮದುವೆ ಮಾಡಿಕೊಡಬೇಕು ಎನ್ನುವ ಆಸೆ. ನಾವು ಮಿಡಲ್ ಕ್ಲಾಸ್ ಜನ. ನಮ್ಮ ಹಾಗೆಯೇ ಜೀವಿಸುವಂತಹವನನ್ನು ನಾನು ನನ್ನ ಮಗಳಿಗೆ ತಂದುಕೊಳ್ಳಬೇಕು ಎನ್ನುವ ಬಯಕೆ ಆತನಿಗೆ.
ಊರಿನ ಜನರ ಮಾತಿಗೆ ಬಹಳ ಬೇಸರ ಮಾಡಿಕೊಂಡಿದ್ದ ಸದಾಶಿವ ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಸದಾಶಿವ ಮಗಳು ಭೂಮಿಕಾ ಜೊತೆ ಮಾತು ತೆಗೆದುಕೊಳ್ಳುತ್ತಾರೆ. ತನ್ನ ದೊಡ್ಡ ಮಗಳು ನನ್ನ ಮನಸನ್ನು ಬದಲಾವಣೆ ಮಾಡಿ ಬಿಡುತ್ತಾಳೆ ಎನ್ನುವ ಸಣ್ಣ ಆಲೋಚನೆಯಿಂದ ಈ ರೀತಿ ಮಾಡಿರುತ್ತಾರೆ . ಆದರೆ ಇದೆಲ್ಲವನ್ನೂ ನೋಡಿ ಭೂಮಿಕಾಗೆ ಮಾತ್ರ ಬಹಳ ಬೇಸರ ಆಗುತ್ತದೆ.


Click it and Unblock the Notifications











