Amruthadhaare ; ಮುಠ್ಠಾಳತನದ ಕೆಲಸ ಮಾಡಿದ ಗೌತಮ್, ಇನ್ನಾದರೂ ಭೂಮಿಕಾ ಮಾತು ನಂಬ್ತಾನಾ ? ಗೊತ್ತಾಗುತ್ತಾ ಸತ್ಯ ?

'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾ ವಿರುದ್ಧ ಸಾಕ್ಷಿಯ ಆಲೋಚನೆಯನ್ನು ಮಾಡುತ್ತಿರುವ ಭೂಮಿಕಾಗೆ ಸೃಜನ್ ಫೋನ್ ​ಟ್ರ್ಯಾಪ್ ​ಮಾಡುವ ಪ್ಲ್ಯಾನ್​ ಕೊಟ್ಟಿದ್ದಾನೆ. ಆರಂಭದಲ್ಲಿ ಇದನ್ನು ಒಪ್ಪದ ಭೂಮಿಕಾ ಆ ನಂತರ ಒಪ್ಪಿಕೊಂಡು ತುಂಬಾ ಕೇರ್‌ಫುಲ್ ಆಗಿ ಮಾಡಬೇಕು ಸಿಕ್ಕಿ ಹಾಕಿಕೊಳ್ಳುವಂತೆ ಆಗಬಾರದು ಇಲ್ಲಾ ಅಂದರೆ ಕಷ್ಟ ಆಗುತ್ತೆ ಎನ್ನುತ್ತಾಳೆ. ಭೂಮಿಕಾ ಒಪ್ಪಿಗೆಯ ಮೇರೆಗೆ ಶಕುಂತಲಾ ಫೋನ್‌ನ್ನು ಸೃಜನ್ ಟ್ರ್ಯಾಪ್ ಮಾಡಿದ್ದು ಶಕುಂತಲಾ ಮತ್ತು ಜೈದೇವ್ ಮಾತುಗಳನ್ನು ಭೂಮಿಕಾ ಮತ್ತು ಸೃಜನ್ ಕೇಳಿಸಿಕೊಂಡಿದ್ದಾರೆ.

ಶಕುಂತಲಾ ಮತ್ತು ಜೈದೇವ್ ಮಾತುಗಳನ್ನು ಕೇಳಿ ಕೋಪ ಮಾಡಿಕೊಳ್ಳುವ ಸೃಜನ್ ಇಷ್ಟು ಸಾಕಲ್ವಾ ಇಬ್ಬರ ಬಣ್ಣ ಬಯಲಾಗೋಕೆ ಎಂದು ಹೇಳುತ್ತಾನೆ.ಆಗ ನಾವು ಇದನ್ನು ಸಾಕ್ಷಿಯಾಗಿ ತೋರಿಸಿದರೆ ಟೆಕ್ನಾಲಜಿಯನ್ನು ನಾವೇ ದುರುಪಯೋಗ ಮಾಡಿಕೊಂಡು ಸುಳ್ಳು ಹೇಳ್ತೀದೀವಿ ಅಂತ ನಮ್ಮ ಮೇಲೆ ಅಪವಾದ ಹೊರಿಸುತ್ತಾರೆ ಎಂದು ಹೇಳುತ್ತಾಳೆ.

ಭಾಗ್ಯಮ್ಮ ಆಶೀರ್ವಾದ ಪಡೆದ ಭೂಮಿಕಾ

ಅತ್ತೆ ನಮ್ಮ ಒಳ್ಳೆಯ ಟೈಮ್ ಶುರುವಾಗಿದೆ. ಸತ್ಯ ಹೊರಗೆ ಬರುವ ಸಮಯ ಬಂದಿದೆ ಎಂದು ಭಾಗ್ಯಮ್ಮ ಬಳಿ ಭೂಮಿಕಾ ಹೇಳಿದ್ದಾಳೆ. ಇಷ್ಟು ದಿನ ಅವರು ಎಂತಹವರು, ಎಷ್ಟು ಕೆಟ್ಟವರು ಎನ್ನುವುದು ನಮಗೆ ಗೊತ್ತಿತ್ತು ಆದರೆ ಅದನ್ನು ಸಾಬೀತು ಮಾಡಲು ನಮ್ಮ ಹತ್ರ ಸಾಕ್ಷಿ ಇರಲಿಲ್ಲ, ಎಲ್ಲ ಕಣ್ಮುಂದೆ ಇದ್ದರೂ ಸುಮ್ಮನೆ ಇರುವ ಪರಿಸ್ಥಿತಿ ಇತ್ತು.

ಆದರೆ ಈಗ ಅವರ ಬಂಡವಾಳ ಬಯಲು ಮಾಡುವ ಸಮಯ ಬಂದಿದೆ ಎನ್ನುವ ಭೂಮಿಕಾ ಇವತ್ತು ನೋಡ್ತೀರಿ ಏನೆಲ್ಲಾ ಮಾಡ್ತೀನಿ ಅಂತ ಇಷ್ಟು ದಿನ ಮುಖವಾಡ ಹಾಕಿಕೊಂಡು ಬದುಕುತ್ತಿದ್ದರಲ್ಲ ಅದನ್ನು ಕಿತ್ತು ಬಿಸಾಕ್ತೀನಿ ಎನ್ನುತ್ತಾಳೆ. ಇನ್ನೂ ಅವರ ಕಥೆ ಮುಗೀತು ನಾನು ಹೋಗಿ ಬರ್ತಿನಿ ನನಗೆ ಆಶೀರ್ವಾದ ಮಾಡಿ ಎನ್ನುತ್ತಾಳೆ. ಭೂಮಿಕಾ ಮಾತು ಕೇಳಿ ಭಾಗ್ಯಮ್ಮಗೆ ಖುಷಿಯಾಗಿದೆ.

ಜೈದೇವ್ ಬಳಿ ಸಿಕ್ಕಿಹಾಕಿಕೊಂಡ ಭೂಮಿಕಾ

ಸಾಕ್ಷಿಯನ್ನು ಕಲೆ ಹಾಕಲು ಸೃಜನ್‌ನ ಕರೆದುಕೊಂಡು ಭೂಮಿಕಾ ಫ್ಯಾಕ್ಟರಿಗೆ ಹೋಗಿದ್ದಾಳೆ. ಕ್ಯಾಮರಾ ಫಿಕ್ಸ್ ಮಾಡಿ ಆ ನಂತರ ಶಕುಂತಲಾ ಮತ್ತು ಜೈದೇವ್‌ನ ಖೆಡ್ಡಾಗೆ ಬೀಳಿಸುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದು ಫ್ಯಾಕ್ಟರಿಯೊಳಗೆ ಭೂಮಿಕಾ ಮತ್ತು ಸೃಜನ್ ಇದ್ದ ಸಮಯದಲ್ಲಿಯೇ ಜೈದೇವ್ ಬಂದಿದ್ದಾನೆ.

ಜೈದೇವ್‌ನ ನೋಡಿ ಭೂಮಿಕಾ ಅಡುಗಿ ನಿಲ್ಲುವ ಪ್ರಯತ್ನ ಮಾಡಿದರು ಕೂಡ ಜೈದೇವ್ ಕಣ್ಣಿಗೆ ಭೂಮಿಕಾ ಹಾಕಿಕೊಂಡ ಸ್ವೆಟರ್ ಕಂಡಿದೆ. ಇದರಿಂದ ನಮ್ಮನ್ನು ಯಾರೋ ಫಾಲೋ ಮಾಡ್ತಿದ್ದಾರೆ ಎನ್ನುವುದು ಜೈದೇವ್‌ಗೆ ಖಚಿತವಾಗುತ್ತೆ, ಭೂಮಿಕಾ ಕೂಡ ಅನುಮಾನಗೊಂಡು ಅಲ್ಲಿಂದ ಹೊರಡುತ್ತಾಳೆ.

amruthadhaare-serial-august-12-episode-written-update

ಗೌತಮ್ ಮುಠ್ಠಾಳತನದ ಕೆಲಸ

ಗೌತಮ್ ಮನೆಗೆ ಬರುತ್ತಿದ್ದಂತೆಯೇ ಶಕುಂತಲಾ ಕಳೆದುಹೋದ ಮಗು ಬಗ್ಗೆ ವಿಚಾರಿಸಿದ್ದು, ಬದುಕಿಲ್ಲ ಅಂದರೆ ಪ್ರಾಯಶ್ಚಿತ ದರೂ ಮಾಡಬೇಕು ಅದಕ್ಕೆ ಪುರೋಹಿತರನ್ನು ಕೇಳಬೇಕು ಎಂದು ಹೇಳುತ್ತಾಳೆ. ಆಗ ಗೌತಮ್ ಬೇಡಮ್ಮ ಅದರ ಅವಶ್ಯಕತೆ ಇಲ್ಲ ಅಂದಾಗ ನಂಬಿಕೆ ಇರಬೇಕು ಆದರೆ ಅದರ ಬಗ್ಗೆ ಎಷ್ಟು ದಿನ ಅಂತ ಮಗು ಬದುಕಿದೆ ಎನ್ನುವ ನಂಬಿಕೆಯಲ್ಲಿ ಕೊರಗತಾ ಇರ್ತಿಯಾ ಎನ್ನುತ್ತಾಳೆ.

ಆಗ ಮುಠ್ಠಾಳತನದ ಕೆಲಸ ಮಾಡುವ ಗೌತಮ್ ಮಗು ಬದುಕಿರುವ ವಿಚಾರ ಹೇಳುತ್ತಾನೆ. ಇದನ್ನು ಕೇಳಿ ಶಾಕ್ ಆಗುವ ಶಕುಂತಲಾ ಮಗು ಬದುಕಿದೆಯಾ ಎಂದು ಕೇಳುತ್ತಾಳೆ. ಆಗ ಗೌತಮ್ ಎಲ್ಲ ವಿಚಾರವನ್ನು ವಿವರವಾಗಿ ಹೇಳಿ ಬಿಡುತ್ತಾನೆ. ಅನಾಥಾಶ್ರಮದಲ್ಲಿರುವ ವಿಚಾರ ಕೂಡ ಹೇಳುತ್ತಾನೆ.

ಮಗು ಸತ್ಯ ತಿಳಿದು ಒದ್ದಾಡುವ ಶಕುಂತಲಾ

ಮಗು ಸಿಕ್ಕಿರುವ ವಿಚಾರ ತಿಳಿದು ವಿಲ ವಿಲ ಒದ್ದಾಡುವ ಶಕುಂತಲಾ, ಯಾವ ಆಶ್ರಮದಲ್ಲಿದೆ ಎನ್ನುವ ಹೇಳಿಲ್ಲ ಹೇಳಿದ್ದರೆ ಕಿಡ್ನಾಪ್ ಆದರೂ ಮಾಡಬಹುದಿತ್ತು ಎಂದು ಅಂದುಕೊಳ್ಳುತ್ತಾಳೆ. ಮತ್ತೆ ಕೇಳಿದರೆ ಗೌತಮ್ ಗೆ ಅನುಮಾನ ಬರುತ್ತೆ ಎಂದು ಸುಮ್ಮನಾಗುತ್ತಾಳೆ. ಇದೇ ಸಮಯದಲ್ಲಿ ಶಕುಂತಲಾಗೆ ಜೈದೇವ್ ಫೋನ್ ಮಾಡುತ್ತಿದ್ದು ತನ್ನ ಫೋನ್‌ನ್ನು ಶಕುಂತಲಾ ರೂಮ್‌ನಲ್ಲಿ ಬಿಟ್ಟು ಬಂದಿದ್ದಾಳೆ. ಹೀಗಾಗಿ ಕರೆ ಸ್ವೀಕರಿಸಿದೇ ಇದ್ದಾಗ ಬೇಸತ್ತು ಜೈದೇವ್ ಲ್ಯಾಂಡ್‌ ಲೈನ್‌ಗೆ ಕರೆ ಮಾಡುತ್ತಾನೆ.

ನಮ್ಮ ಮಾತುಗಳು ಹೇಗೋ ಲೀಕ್ ಆಗುತ್ತಿವೆ. ನಾನು ಇಲ್ಲಿ ಬರುವ ಮೊದಲೇ ಯಾರೋ ಇಲ್ಲಿ ಬಂದಿದ್ದರು ಎನ್ನುವ ಜೈದೇವ್, ಭೂಮಿಕಾ ಮನೆಯಲ್ಲಿದ್ದಾಳಾ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಶಕುಂತಲಾ ಇಲ್ಲ ಅವಳಿಲ್ಲ ಎಂದಾಗ ಬಟ್ಟೆ ನೋಡಿ ನನಗೆ ಅನುಮಾನ ಬಂದಿತ್ತು ಈಗ ಕನ್ಫರ್ಮ್ ಆಯ್ತು ಎನ್ನುವ ಜೈದೇವ್ ನಾವು ಈ ಪ್ಲಾನ್‌ನ ಇಲ್ಲಿಗೆ ಬಿಡುವುದು ಒಳ್ಳೆಯದು ಎನ್ನುತ್ತಾನೆ. ಆಗ ಶಕುಂತಲಾ ಈ ವಿಚಾರ ಅವಳಿಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನೆ ಮಾಡ್ತಾಳೆ.

ಗೌತಮ್ ಕೈ ಸೇರಿದ ಸಾಕ್ಷಿ

ಸದ್ಯ ಇಂದು [ ಆಗಸ್ಟ್ 13] ಜೈದೇವ್ ಮತ್ತೊಂದು ಪ್ಲಾನ್ ಮಾಡಿದ್ದು ಮಗುನ ಕೊಲ್ಲಲು ಮನೆಗೆ ಆಗುಂತಕನೊಬ್ಬನನ್ನು ಕಳೂಹಿಸಿರುವ ವಿಚಾರ ಶಕುಂತಲಾಗೆ ಹೇಳಿದ್ದಾನೆ. ಈ ಮಾತು ಕೇಳಿ ಭೂಮಿಕಾ ವಿಚಲಿತಗೊಂಡಿದ್ದು ಶಕುಂತಲಾ ಮತ್ತು ಭೂಮಿಕಾ ನಡುವೆ ವಾಗ್ಯುದ್ದ ನಡೆದಿದೆ. ಆ ನಂತರ ಗೌತಮ್ ಬಳಿ ತೆರಳುವ ಭೂಮಿಕಾ ಶಕುಂತಲಾ ಅತ್ತೆ ನಾವು ಅಂದುಕೊಂಡಂತೆ ಇಲ್ಲ ಎಂದು ಫೋನ್ ಕೊಡುತ್ತಾಳೆ. ಗೌತಮ್ ಆಡಿಯೋವನ್ನು ಕೇಳಿಸಿಕೊಳ್ಳುತ್ತಿರುವಂತೆ ಪ್ರೋಮೋ ಎಡಿಟ್ ಮಾಡಲಾಗಿದ್ದು ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X