Amruthadhaare: ಪಾರ್ಥ-ಅಪ್ಪಿ ಜೋಡಿಯ ಮೇಲೆ ಜೈ ದೇವ್ ಕೆಟ್ಟ ಕಣ್ಣು; ವಿರಾಮವಿಟ್ಟ ಗೌತಮ್
ಭೂಮಿಕಾಗೆ ತನ್ನ ತಂಗಿಯ ಪ್ರೀತಿಗಿಂತ ಆಕೆಗೆ ತನ್ನ ತಂದೆಯ ಪ್ರೀತಿ ಮುಖ್ಯವಾಗಿದೆ. ತಂದೆ ಹೇಳಿದ ಒಂದೇ ಒಂದು ಮಾತಿಗಾಗಿ ಪಾರ್ಥ ಹಾಗೂ ಆಕೆಯ ತಂಗಿಯ ಮದುವೆಗೆ ವಿರುದ್ಧವಾಗಿ ನಿಂತಿದ್ದಾಳೆ. ತನ್ನ ತಂದೆಗೆ ಈ ಮದುವೆ ಇಷ್ಟವಿಲ್ಲದ ಕಾರಣ ಅಪ್ಪಿಗೆ ಬೇರೆ ಮದುವೆ ಮಾಡಬೇಕು ಎಂದು ಭೂಮಿಕಾಗಿ ಆಲೋಚನೆ ಮೂಡುವುದು ಸಹಜ. ಆದರೆ, ಜೀವ ತನ್ನ ತಂಗಿ ಅಪ್ಪಿ ಹಾಗೂ ಪಾರ್ಥನ ಮದುವೆ ಮಾಡಬೇಕೆಂದು ರಿಜಿಸ್ಟರ್ ಆಫೀಸ್‌ಗೆ ಬರುತ್ತಾನೆ. ಅಲ್ಲಿಗೆ ಬಂದ ಭೂಮಿಕಾ, ಜೀವಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಾಳೆ.
ಹಾಗೆಯೇ "ಈ ರೀತಿ ಎಲ್ಲಾದರೂ ಇವರಿಬ್ಬರ ಮದುವೆ ನಡೆದರೆ ಕೊನೆಗೆ ತಂದೆಗೆ ಅದೆಷ್ಟು ನೋವಾಗಬಹುದು ಎನ್ನುವುದನ್ನು ಯೋಚನೆ ಮಾಡು ಜೀವ. ಈಗ ಪ್ರೀತಿ ಪ್ರೇಮ ಎಂದು ಮನೆ ಬಿಟ್ಟು ಹೋಗುತ್ತಾರೆ. ಆದರೆ, ಚಿಕ್ಕ ವಯಸ್ಸಿನಿಂದಲೂ ನಮ್ಮನ್ನು ಕಾಪಾಡಿಕೊಂಡು ಬಂದ ತಂದೆಯ ಒಂದು ಮಾತನ್ನು ನಾವು ಪಾಲಿಸಲು ಆಗುವುದಿಲ್ಲವೇ. ಅವರ ಪ್ರೀತಿಗೆ ಕೊಟ್ಟ ಮರ್ಯಾದೆ ಇಷ್ಟೇನಾ" ಎಂದು ಭೂಮಿಕಾ ಹೇಳುತ್ತಾಳೆ.

ಜೀವಗೆ ವಿವರವಾಗಿ ಹೇಳಿ, ಕೊನೆಗೆ ಅಲ್ಲಿಂದ ಹೊರಟು ಹೋಗುತ್ತಾಳೆ. ಜೀವ, ಅಪ್ಪಿ ಹಾಗೂ ಪಾರ್ಥ ಮದ್ವೆ ಮಾಡಿಸಲು ಸಾಧ್ಯವಿಲ್ಲ ಎಂದು ಅಲ್ಲಿಂದ ಹೊರಟು ಹೋಗುತ್ತಾನೆ. ಇಲ್ಲಿಂದ ಪಾರ್ಥ ಬಹಳ ಟೆನ್ಶನ್ ಮಾಡಿಕೊಳ್ಳುತ್ತಾನೆ. ಏನು ಮಾಡುವುದು? ಅಪ್ಪಿಯನ್ನು ಮದುವೆಯಾಗದೆ ಇದ್ದರೆ ತನಗೆ ಅಪ್ಪಿ ಇನ್ನು ಮುಂದೆ ಸಿಗುತ್ತಾಳೋ? ಅಥವಾ ಇಲ್ಲವೋ. ಆಕೆ ಸಿಗದೇ ಹೋದರೆ ಖಂಡಿತವಾಗಲೂ ನನಗೆ ಬದುಕಲು ಸಾಧ್ಯವಿಲ್ಲ ಎಂದು ಯೋಚನೆ ಮಾಡುತ್ತಾನೆ. ಹಾಗೆಯೇ ತಕ್ಷಣ ತಾಯಿಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳುತ್ತಾನೆ.
ಮಗನಿಗೆ ಸಮಾಧಾನ ಹೇಳಿದ ಶಕುಂತಲಾ ದೇವಿ
ಆಗ ಶಕುಂತಲಾ ದೇವಿ ಮಗನಿಗೆ ಸಾಂತ್ವಾನ ಹೇಳಿ "ಅಲ್ಲಿ ಹತ್ತಿರದಲ್ಲಿದ್ದ ದೇವಸ್ಥಾನಕ್ಕೆ ನೀನು ಮತ್ತು ಅಪ್ಪಿ ಹೋಗಿ. ಅಲ್ಲಿನ ಪುರೋಹಿತರು ನನಗೆ ಪರಿಚಯ ಇದ್ದಾರೆ. ನೀವು ಅಲ್ಲಿ ಹೋಗಿ ಮದುವೆಯಾಗಿ ನಾನು ಪುರೋಹಿತರ ಬಳಿ ಮಾತನಾಡಿರುತ್ತೇನೆ" ಎಂದು ಹೇಳುತ್ತಾಳೆ. ಅಮ್ಮನ ಮಾತಿನ ಪ್ರಕಾರವೇ ಪಾರ್ಥ, ಅಪ್ಪಿಗೆ ಹೇಳುತ್ತಾನೆ. "ಅಪ್ಪಿ ನಾವಿಬ್ಬರು ಮದುವೆಯಾಗೋಣ. ಅಮ್ಮ ಇಲ್ಲೇ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿ ಎಂದು ಹೇಳಿದ್ದಾರೆ. ಆದ ಕಾರಣ ಅಲ್ಲಿ ಹೋಗಿ ನಾವು ಮದುವೆಯಾಗೋಣ" ಎಂದು ಹೇಳಿದಾಗ ಅಪ್ಪಿ ಕೊಂಚ ಸುಮ್ಮನಾಗುತ್ತಾಳೆ.

ಅಪ್ಪಿ ಮನವೊಲಿಸಿದ ಪಾರ್ಥ
ನಮ್ಮ ಮದುವೆಗೆ ಅತ್ತೆ ಬರುತ್ತಾರಾ? ಎಂದು ಅಪ್ಪಿ ಕೇಳುತ್ತಾಳೆ. ಆಗ ಪಾರ್ಥ, "ಅಮ್ಮ ಬರುವುದಿಲ್ಲ. ಆದರೆ, ಅಲ್ಲೇ ಇದ್ದು ನಮ್ಮೆಲ್ಲರನ್ನ ಆಶೀರ್ವಾದ ಮಾಡುತ್ತಾರೆ" ಎಂದು ಹೇಳುತ್ತಾನೆ. ಇದನ್ನು ಕೇಳಿದ ಅಪ್ಪಿ ಯೋಚನೆ ಮಾಡುತ್ತಾಳೆ. ಹಾಗೆಯೇ ಪಾರ್ಥನ ಮಾತು ಸರಿಯಾಗಿದೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇನ್ನು ಜೈದೇವ್, ಪಾರ್ಥ ಹಾಗೂ ಅಪ್ಪಿಯನ್ನು ದೂರ ಮಾಡಬೇಕು. ಅವರಿಬ್ಬರು ಒಂದಾಗಿದ್ದರೆ ನಮಗೆ ಅವರನ್ನು ಏನು ಮಾಡಲು ಸಾಧ್ಯವಿಲ್ಲ. ಆದ ಕಾರಣ ಪಾರ್ಥ ಅಪ್ಪಿಯನ್ನು ಮದುವೆಯಾಗಬಾರದು ಎಂದು ಹೇಳಿ ಗೂಂಡಾಗಳಿಗೆ ಸುಫಾರಿ ನೀಡಿ ಅವರನ್ನು ಕೊಲ್ಲಿಸಲು ನೋಡುತ್ತಾನೆ.
ತಮ್ಮನನ್ನು ಸಾಯಿಸಲು ಮುಂದಾದ ಜೈ ದೇವ್
ಆದರೆ ಸರಿಯಾದ ಸಮಯಕ್ಕೆ ಗೌತಮ್ ಬಂದ ಕಾರಣ ಇಬ್ಬರ ಪ್ರಾಣ ಉಳಿಯುತ್ತದೆ. ಇನ್ನೂ ಜೈ ದೇವ್ ಮಾಡಿದ ಹುನ್ನಾರಕ್ಕೆ ಆತ ಸಿಕ್ಕಿ ಬೀಳುವ ಎಲ್ಲಾ ಲಕ್ಷಣ ಕಾಣುತ್ತಿದೆ.


Click it and Unblock the Notifications











