Amruthadhaare ; ಕಣ್ಮುಂದೆ ಸಾಕ್ಷಿ ಇದ್ದರೂ, ಶಕುಂತಲಾ ಮಾತಿಗೆ ಮರುಳಾದ ಗೌತಮ್. ಕೆರಳಿದ ಭೂಮಿಕಾ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಎದುರು ಶಕುಂತಲಾ ಮುಕವಾಡ ಕಳಚಿ ಬೀಳಿಸುವ ಶಪಥ ಮಾಡಿರುವ ಭೂಮಿಕಾ, ಗೌತಮ್‌ಗೆ ಆಡಿಯೋ ಕೇಳಿಸಿದ್ದಾಳೆ. ಶಕುಂತಲಾ ಅತ್ತೆ ನಾವು ನೀವು ಅಂದುಕೊಂಡಂತೆ ಇಲ್ಲ ಎಂದು ಹೇಳಿದ್ದಾಳೆ. ಜೈದೇವ್ ಮತ್ತು ಶಕುಂತಲಾ ನಡುವೆ ನಡೆದ ಸಂಭಾಷಣೆಯನ್ನು ಕೇಳಿ ಕೆರಳಿ ಕೆಂಡವಾದ ಗೌತಮ್, ನಡುರಾತ್ರಿಯೇ ಸೀದಾ ಶಕುಂತಲಾ ರೂಮ್‌ಗೆ ತೆರಳಿ ಬಾಗಿಲು ಬಡೆದಿದ್ದಾನೆ.

ಶಕುಂತಲಾ ಬಾಗಿಲು ತೆರೆದಿದ್ದು ಗೌತಮ್ ಆ ಆಡಿಯೋವನ್ನು ಪ್ಲೇ ಮಾಡಿ ಏನಿದೆಲ್ಲಾ ? ಏನು ಮಾಡಬೇಕು ಅಂದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಕಕ್ಕಾಬಿಕ್ಕಿಯಾದ ಶಕುಂತಲಾ ಏನು ಮಾತಾಡ್ತಿದ್ದೀಯಾ ಗೌತಮ್ ಇದೆಲ್ಲಾ ನಾನು ಮಾಡಿಸಿದ್ದು ಅಂತ ನಿನಗೆ ಅನ್ಸುತ್ತಾ ಎಂದು ಕೇಳುತ್ತಾಳೆ.

amruthadhaare-serial-august-14-episode-written-update

ಭೂಮಿಕಾ ಮೇಲೆ ಗೂಬೆ ಕೂರಿಸಿದ ಶಕುಂತಲಾ

ಆಗ ಗೌತಮ್ ಕಾಲ್ ರೆಕಾರ್ಡಿಂಗ್ ಇದೆಯಲ್ಲ ಇದಕ್ಕೆ ಏನ್ ಹೇಳ್ತೀರಾ ಎಂದು ಕೇಳಿದಾಗ ಸುಳ್ಳು ಅಂತ ಹೇಳ್ತೀನಿ ಎನ್ನುವ ಶಕುಂತಲಾ ನನ್ನ ವಾಯ್ಸ್ ತರ ಇದೆ ಆದರೆ ನಾನು ಮಾತನಾಡಿಲ್ಲ ಎನ್ನುತ್ತಾಳೆ. ಎಐ ತಂತ್ರಜ್ಞಾನ ಬಂದ ಮೇಲೆ ಏನು ಬೇಕಾದರೂ ಮಾಡಬಹುದು ನೀನು ನನ್ನ ಧ್ವನಿ ಕೇಳಿದಿಯಾ ಅಷ್ಟೇ ನಾನು ಮಾತನಾಡಿರುವುದನ್ನು ಕಣ್ಣಾರೆ ಕಂಡಿದೀಯಾ ಎಂದು ಕೇಳುತ್ತಾಳೆ. ಭೂಮಿಕಾ ಮೇಲೆಯೇ ಶಕುಂತಲಾ ಗೂಬೆ ಕೂರಿಸುತ್ತಾಳೆ.

ಮನೆಯಿಂದ ಹೋಗುವ ಶಕುಂತಲಾ

ಮದುವೆಯಾಗಿ ಬಂದ ದಿನದಿಂದನೇ ಅವಳಿಗೆ ನನ್ನ ಕಂಡರೆ ಆಗಲ್ಲ, ಯಾಕೆ ಎನ್ನುವುದು ನನಗೂ ಗೊತ್ತಿಲ್ಲ ನಿನಗೆ ಈ ಎಲ್ಲಾ ವಿಚಾರ ಹೇಳೋದು ಬೇಡ ಎಂದು ಸುಮ್ಮನಿದ್ದೆ ಎನ್ನುತ್ತಾಳೆ. ನನ್ನ ಮೇಲೆ ಕೋಪ ಇದೆ ಎನ್ನುವುದು ಗೊತ್ತಿತ್ತು ಆದರೆ ಈ ಮಟ್ಟಿಗೆ ಇದೆ ಎನ್ನುವುದು ಗೊತ್ತಿರಲಿಲ್ಲ ಎಂದು ನಾಟಕವಾಡುತ್ತಾಳೆ. ನಿಮ್ಮ ಇಬ್ಬರ ನಡುವೆ ಮನಸ್ತಾಪ ಆಗಬಾರದು ನೀವು ಇಬ್ಬರು ಚೆನ್ನಾಗಿರಬೇಕು ಆ ದೇವರು ನಿಮ್ಮಿಬ್ಬರನ್ನು ಚೆನ್ನಾಗಿ ಇಟ್ಟಿರಲಿ ಎಂದು ಹೊರಟು ಹೋಗುತ್ತಾಳೆ.

ಪಾಪಪ್ರಜ್ಞೆ ಕಾಡುತ್ತಿದೆ ಎಂದ ಗೌತಮ್

ಎಂದಿನಂತೆ ಶಕುಂತಲಾ ಮಾತನ್ನು ನಂಬಿರುವ ಗೌತಮ್ ಅಮ್ಮನ ಮನಸಿಗೆ ತುಂಬಾನೇ ಬೇಜಾರಾಗಿದೆ, ನಾನು ಆ ರೀತಿ ಮಾತನಾಡಬಾರದಿತ್ತು ಎಂದು ಭೂಮಿಕಾಗೆ ಹೇಳಿದ್ದಾನೆ. ನನಗೆ ಪಾಪಪ್ರಜ್ಞೆ ಕಾಡುತ್ತಿದೆ ಎನ್ನುತ್ತಾನೆ. ಇದಕ್ಕೆ ತಪ್ಪನ್ನು ಪ್ರಶ್ನೆ ಮಾಡುವುದು ತಪ್ಪಾ ಎಂದು ಭೂಮಿಕಾ ಕೇಳಿದ್ದು ಸಂಬಂಧ ಅಂದ ತಕ್ಷಣ ಯಾರು ಏನೇ ಅಂದರು ಮಾಡಿದರು ನೋಡ್ಕೊಂಡು ಸುಮ್ಮನೆ ಇರಬೇಕಾ ಎಂದು ಪ್ರಶ್ನೆ ಮಾಡುತ್ತಾಳೆ.


ಭೂಮಿಕಾ ಮಾತುಗಳಿಗೆ ಕೋಪ ಮಾಡಿಕೊಂಡ ಗೌತಮ್

ಭೂಮಿಕಾ ಪ್ರಶ್ನೆ ಕೇಳಿದ್ದಕ್ಕೆ ಕೋಪ ಮಾಡಿಕೊಳ್ಳುವ ಗೌತಮ್ ಹಳೆಯದನ್ನೆಲ್ಲಾ ಬಿಡಿ ನನಗೆ ನೀವು ಮುಖ್ಯ ಅಮ್ಮನೂ ಮುಖ್ಯ ಎಲ್ಲರು ಚೆನ್ನಾಗಿರಬೇಕು ಅಷ್ಟೇ ಎಂದು ಹೇಳುತ್ತಾನೆ. ನನ್ನ ಮೇಲೆ ನಂಬಿಕೆ ಇದೆ ಅಲ್ವಾ ? ನೀವು ನಿಮ್ಮ ಆರೋಗ್ಯದ ಕಡ ಗಮನ ಕೊಡಿ ಮಗುಗೆ ಯಾವುದೇ ಅಪಾಯ ಆಗಲ್ಲ ನಾನು ನೋಡ್ಕೋಳ್ತೀನಿ ಬಿಟ್ಟು ಬಿಡಿ ಎಂದು ಹೇಳುತ್ತಾನೆ.

amruthadhaare-serial-august-14-episode-written-update


ಜೈದೇವ್ ಮನೆಗೆ ಬಂದ ಶಕುಂತಲಾ

ಮತ್ತೊಂದು ಕಡೆ ನಿದ್ದೆ ಬಾರದೇ ಜೈದೇವ್ ಚಡಪಡಿಸುತ್ತಿದ್ದು, ಗೌತಮ್ ಮನೆಯಿಂದ ನೇರವಾಗಿ ಬೆಳ್ಳಂ ಬೆಳಿಗ್ಗೆಯೇ ಜೈದೇವ್ ಮನೆಗೆ ಶಕುಂತಲಾ ಹೋಗಿದ್ದಾಳೆ. ಶಕುಂತಲಾಳನ್ನು ಕಂಡು ಆಶ್ಚರ್ಯಗೊಳ್ಳುವ ಜೈದೇವ್ ಇಷ್ಟೊತ್ತಲ್ಲಿ ಬಂದಿದೀಯಾ ಎಂದು ಕೇಳುತ್ತಾನೆ. ಆಗ ನಾನು ಮನೆ ಬಿಟ್ಟು ಬಂದಿದೀನಿ ಎಂದು ಹೇಳುವ ಶಕುಂತಲಾ ಮನೆಯಲ್ಲಿ ನಡೆದ ವಿಚಾರವನ್ನೆಲ್ಲ ಹೇಳುತ್ತಾಳೆ. ತಾನು ಹೇಗೆ ನಾಟಕವಾಡಿದೆ ಎನ್ನುವುದನ್ನು ಕೂಡ ಹೇಳುತ್ತಾಳೆ.


ಚಿನ್ನದ ಮೊಟ್ಟೆ ಇಡುವ ಕೋಳಿ

ಶಕುಂತಲಾ ಮಾತುಗಳನ್ನು ಕೇಳಿ ಜೈದೇವ್ ಶಹಬ್ಬಾಸಗಿರಿಯನ್ನು ಕೊಟ್ಟಿದ್ದು ಅಮ್ಮ ಇಷ್ಟೆಲ್ಲ ಮಾಡಿದರೂ ನಾನು ಹೀಗೆ ಮಾಡಿದನಲ್ಲ ಅಂತ ಗೌತಮ್ ಈಗ ಕೊರಗುತ್ತಾ ಇರುತ್ತಾನೆ, ಅವನು ನನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದ್ದ ಅದಕ್ಕೆ ನಾನು ಇಷ್ಟು ವರ್ಷ ಎಲ್ಲ ಸಹಿಸಿಕೊಂಡೆ, ನೀವೆಲ್ಲ ಚಿಕ್ಕವರಾಗಿದ್ರೀ ನಿಮ್ಮನ್ನೆಲ್ಲ ದಡ ಸೇರಸಬೇಕು ಅಂತ ಸುಮ್ಮನೆ ಇದ್ದೇ ಎನ್ನುತ್ತಾಳೆ. ಸ್ವಾರ್ಥಿಯಾಗಿದ್ದವಳು ತ್ಯಾಗಮಯಿ ಎನ್ನುವಂತೆ ಬಿಲ್ಡಪ್ ಕೊಟ್ಟೆ ಎನ್ನುತ್ತಾಳೆ.

ಶಕುಂತಲಾ ಕೆನ್ನೆಗೆ ಹೊಡೆದ ಭೂಮಿಕಾ

ಸದ್ಯ ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ನಿನ್ನ ಗಂಡ ಗೌತಮ್​ನಾನು ಸಾಕಿರೋ ನಾಯಿ, ಅವನಿಗೆ ನನ್ನ ವಿಷ್ಯ ನೀನು ಏನೇ ಹೇಳಿದ್ರೂ ನಂಬಲ್ಲ ಎಂದು ಶಕುಂತಲಾ ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುವ ಭೂಮಿಕಾ ಅತ್ತೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಭೂಮಿಕಾ ರೌದ್ರಾವತಾರಕ್ಕೆ ಶಕುಂತಲಾ ಬೆಚ್ಚಿ ಬಿದ್ದಿದ್ದು ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದು ಭೂಮಿಕಾ ಗುಡುಗಿದ್ದಾಳೆ. ಮುಂದೆ ಈ ಕಥೆ ಯಾವ ರೋಚಕ ತಿರುವು ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X