Amruthadhaare ; ಗೌತಮ್‌ಗೆ ಅವಮಾನ ಮಾಡಿದ ದಿಯಾ, ಭಾಗ್ಯಮ್ಮ ಎದುರು ಕಣ್ಣೀರು ಹಾಕಿದ ಭೂಮಿಕಾ..!

ಅಮೃತಧಾರೆ ಧಾರಾವಾಹಿಯಲ್ಲಿ ಬಹಳ ದಿನಗಳ ನಂತರ ಅಜ್ಜಿಯ ದರ್ಶನವಾಗಿದೆ. ಅಮ್ಮ ಮತ್ತು ಪತ್ನಿ ಇಬ್ಬರಲ್ಲಿ ಯಾರ ಪರ ವಹಿಸಬೇಕು ಎನ್ನುವ ಗೊಂದಲದಲ್ಲಿರುವ ಗೌತಮ್ ನಡೆದ ವಿಚಾರವನ್ನು ಅಜ್ಜಿಯ ಬಳಿ ಹೇಳುತ್ತಾನೆ. ಅಜ್ಜಿ ಈ ರಾಮಾಯಣ ಎಲ್ಲರ ಮನೆಯಲ್ಲಿ ಇರುವುದೇ. ಯಾರದ್ದು ಸರಿ.. ಯಾರದ್ದು ತಪ್ಪು ಎಂದು ಹೇಳಲು ಆಗುವುದೇ ಇಲ್ಲ ಎನ್ನುತ್ತಾಳೆ.

ಒಬ್ಬರ ಕಡೆ ವಾಲಿದರೆ ಮತ್ತೊಬ್ಬರಿಗೆ ಬೇಜಾರು ಎಂದು ಹೇಳುವ ಅಜ್ಜಿ ಮೊದಲು ಹೋಗಿ ಶಕುಂತಲಾನ ಕರ್ಕೊಂಡು ಬಾ ಎಂದು ಹೇಳುತ್ತಾಳೆ. ಇದಕ್ಕೆ ಗೌತಮ್ ಇಷ್ಟೆಲ್ಲಾ ಆದ ಮೇಲೂ ನಾನು ಹೋಗಿ ಕರ್ಕೊಂಡ ಬರಬೇಕಾ ಎಂದು ಕೇಳಿದ್ದು ಶಕುಂತಲಾ ವಿಚಾರದಲ್ಲಿ ನನಗೂ ಕೆಲ ವಿಚಾರಗಳಲ್ಲಿ ಅಸಮಾಧಾನ ಇದೆ ಆದರೆ ಇಲ್ಲಿ ಯಾರು ಒಳ್ಳೆಯವರಲ್ಲ, ಕೆಟ್ಟವರಲ್ಲ, ಕೆಲ ವಿಷಯಗಳಲ್ಲಿ ಅವರ ಪಾತ್ರನೇ ದೊಡ್ಡದಿರುತ್ತೆ ಎಂದು ಹೇಳುತ್ತಾಳೆ. ಈ ಮನೆಯ ಬೆಳವಣಿಗೆಯಲ್ಲಿ ಶಕುಂತಲಾ ಪಾತ್ರ ಕೂಡ ದೊಡ್ಡದಿದೆ ಎಂದು ಹೇಳುತ್ತಾಳೆ.

amruthadhaare-serial-august-15-episode-written-update

ಗೌತಮ್‌ಗೆ ಅವಮಾನ ಮಾಡುವ ದಿಯಾ

ಅಜ್ಜಿ ಮಾತು ಕೇಳಿ ಗೌತಮ್ ಮನಸು ಮಾಡಿದ್ದು ಜೈದೇವ್ ಮನೆಗೆ ಬಂದಿದ್ದಾನೆ. ಗೌತಮ್‌ನ ಕಂಡು ಜೈದೇವ್ ಶಾಕ್ ಆಗಿದ್ದು ಮನೆಯೊಳಗೆ ಕರೆಯುತ್ತಾನೆ. ಆದರೆ ಇದೇ ಸಮಯದಲ್ಲಿ ಬರುವ ದಿಯಾ ನೀವು ಮನೆಯೊಳಗೆ ಬರುವಂತೆ ಇಲ್ಲ ಎನ್ನುತ್ತಾಳೆ. ಇದಕ್ಕೆ ಕೋಪಗೊಳ್ಳುವ ಜೈದೇವ್ ಏನ್ ಹೇಳ್ತಿದ್ದೀಯಾ ಅವನು ನಮ್ಮ ಅಣ್ಣ ಎಂದಾಗ ನಿಮ್ಮನ್ನು ಹೊರಗೆ ಹಾಕಿದಾರೆ ತಾನೆ ಹಾಗಿದ್ದ ಮೇಲೆ ನಾವ್ಯಾಕೇ ಇವರನ್ನು ಮನೆಯೊಳಗೆ ಸೇರಿಸಬೇಕು ಎನ್ನುತ್ತಾಳೆ.


ಒಳಗೊಳಗೆ ಖುಷಿ ಪಡುವ ಜೈದೇವ್

ಗೌತಮ್ ಆಗ್ತಿರುವ ಮುಜುಗರ ಕಸಿವಿಸಿಯನ್ನು ಗಮನಿಸುವ ಜೈದೇವ್ ಬೇಬಿ ಸಖತ್ತಾಗಿಯೇ ಕೌಂಟರ್ ಕೊಡ್ತಿದ್ದಾಳೆ ಎಂದು ಮನದಲ್ಲಿಯೇ ಖುಷಿ ಪಡುತ್ತಾನೆ. ಆದರೂ ಕೂಡ ಬಾಯ್ಮುಚ್ಚು ಗೌತಮ್ ದಿವಾನ್‌ ಎದುರು ನಿಂತು ಮಾತನಾಡುವಷ್ಟು ಧೈರ್ಯನಾ ನಿನಗೆ ನಮ್ಮ ನಮ್ಮ ನಡುವೆ ಸಾವಿರ ಆಗಿರಬಹುದು ಆದರೆ ಅವರು ಯಾವತ್ತಿದ್ದರು ನಮ್ಮ ಅಣ್ಣನೇ ಆ ಸಂಬಂಧ ಬದಲಾಗಲ್ಲ ಎಂದು ನಾಟಕವಾಡಿ ಮನೆಯೊಳಗೆ ಕರೆದುಕೊಂಡು ಹೋಗುತ್ತಾನೆ

ಕಣ್ಣೀರು ಹಾಕುವ ಭೂಮಿಕಾ

ಭಾಗ್ಯಮ್ಮನ ಎದುರು ಭೂಮಿಕಾ ತನ್ನ ನೋವನ್ನು ಹಂಚಿಕೊಂಡಿದ್ದಾಳೆ. ತಪ್ಪೆಲ್ಲಾ ಅವರದ್ದೇ ಇದ್ದರೂ ನಾನೇ ಸರಿ ಇಲ್ಲ ಎನ್ನುವಂತಾಯ್ತು. ನನ್ನ ಕಾಳಜಿಯನ್ನು ಯಾರು ಅರ್ಥನೇ ಮಾಡಿಕೊಳ್ಳಲಿಲ್ಲ. ನಾನು ಮಾಡಿದ್ದೆಲ್ಲಾ ಮನೆಯ ಒಳ್ಳೆಯದಕ್ಕೆ ಅಲ್ಲವಾ ಎಂದು ಹೇಳುತ್ತಾಳೆ. ಶಕುಂತಲಾ ಅತ್ತೆನೆ ಗೆದ್ದು ಬಿಟ್ಟರು ಗೌತಮ್ ಅವರು ನನ್ನನ್ನು ಅರ್ಥನೇ ಮಾಡಿಕೊಳ್ಳಲಿಲ್ಲ ಎಂದು ಕಣ್ಣೀರು ಹಾಕುತ್ತಾಳೆ. ಭಾಗ್ಯಮ್ಮ ಎದ್ದು ಬಂದು ಭೂಮಿಕಾಗೆ ಸಮಾಧಾನ ಮಾಡುತ್ತಾಳೆ.

ಶಕುಂತಲಾ ಬಳಿ ಕ್ಷಮೆ ಕೇಳಿದ ಗೌತಮ್

ನಿಮ್ಮನ್ನು ನಾನು ಪ್ರಶ್ನೆ ಮಾಡಬಾರದಿತ್ತು. ಹಾಗೆಲ್ಲಾ ಮಾತನಾಡಬಾರದಿತ್ತು. ಕೆಟ್ಟ ಘಳಿಗೆ ಏನೋ ಆಗೋಯ್ತು ದಯವಿಟ್ಟು ಮನೆಗೆ ಬನ್ನಿ ಎಂದು ಹೇಳಿ ಶಕುಂತಲಾ ಬಳಿ ಗೌತಮ್ ಕ್ಷಮೆಯನ್ನು ಕೇಳುತ್ತಾನೆ. ಇದಕ್ಕೆ ಎಲ್ಲರಲ್ಲಿಯೂ ನಿನ್ನ ತರಹದ ಒಳ್ಳೆಯ ಭಾವನೆ ಇರಬೇಕಲ್ಲಾ ? ನೀನೆ ನೋಡಿದಿಯಾ ನಿನ್ನ ಹೆಂಡತಿಗೆ ನನ್ನ ಕಂಡರೆ ಆಗಲ್ಲ ನನ್ನ ಬಗ್ಗೆ ಒಳ್ಳೆಯ ಭಾವನೆ ಇಲ್ಲ, ನಾನಂದ್ರೆ ಯಾಕಷ್ಟು ದ್ವೇಷ ಅಂತ ನನಗೆ ಅರ್ಥ ಆಗ್ತಿಲ್ಲ ಎಂದು ಹೇಳುತ್ತಾಳೆ.

amruthadhaare-serial-august-15-episode-written-update

ಗೌತಮ್ ತಲೆ ಕೆಡಿಸುವ ಶಕುಂತಲಾ

ಭೂಮಿಕಾ ತಲೆಯನ್ನು ಯಾರೋ ಕೆಡಿಸುತ್ತಿದ್ದಾರೆ ಈ ಮೂಲಕ ನಮ್ಮ ಮನೆ ಮುರಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಶಕುಂತಲಾ ಹೇಳಿದ್ದಾಳೆ. ಆದರೆ ಗೌತಮ್ ಯಾರು ಏನೇ ಹೇಳೀದರು ಮನೆ ಮುರಿಯುವ ಮನಸ್ಥಿತಿ ಭೂಮಿಕಾ ಅವರದ್ದಲ್ಲ ಎಂದು ಹೇಳಿದ್ದು ನೀನೆ ಯೋಚನೆ ಮಾಡು ಅವಳು ನಮ್ಮ ಮನೆಗೆ ಸೊಸೆಯಾಗಿ ಬಂದ ಮೇಲೆ ತಾನೇ ಸಮಸ್ಯೆಗಳು ಶುರುವಾಗಿದ್ದು ಎನ್ನುತ್ತಾಳೆ. ಮನೆ ಸೊಸೆಯಾದವಳು ಮನೆ ಮರ್ಯಾಧೆ ಉಳಿಸುವ ಪ್ರಯತ್ನ ಮಾಡಬೇಕು ತೆಗೆಯುವ ಪ್ರಯತ್ನ ಮಾಡಬಾರದು ಇಷ್ಟು ದಿನ ಅವಳು ಅದನ್ನೇ ತಾನೇ ಮಾಡಿದ್ದು ಎನ್ನುತ್ತಾಳೆ. ಮನೆಯಲ್ಲಿಯೇ ಬಗೆ ಹರಿಯಬಹುದಾದ ವಿಚಾರಗಳಿಗೆಲ್ಲ ಪೊಲೀಸ್ ಅಂತ ಹೋಗಿದ್ದಾಳೆ ಬೀದಿ ರಂಪ ಮಾಡಿದ್ದಾಳೆ ಎನ್ನುತ್ತಾಳೆ.

ಸೃಜನ್ ಜೊತೆ ಭೂಮಿಕಾ ಚರ್ಚೆ

ಇಷ್ಟೆಲಾ ಆದ ಮೇಲೂ ಶಕುಂತಲಾ ಅತ್ತೆಯನ್ನು ಗೌತಮ್ ಕರೆದುಕೊಂಡು ಬರಲು ಹೋಗಿರುವುದೇ ವಿಪರ್ಯಾಸ, ಅವರು ಮತ್ತೆ ಬಂದರೆ ಮನೆಯಲ್ಲಿ ಯಾರಿಗೂ ರಕ್ಷಣೆ ಇರಲ್ಲ. ಯಾವಾಹ ಏನಾಗುತ್ತೆ ಎಂದು ಭಯದಲ್ಲಿಯೇ ಕಾಳ ಕಳೆಯಬೇಕಾಗುತ್ತೆ ಎಂದು ಸೃಜನ್ ಜೊತೆ ಭೂಮಿಕಾ ಚರ್ಚೆ ಮಾಡಿದ್ದಾಳೆ.

ಇಂದು ಹೈವೋಲ್ಟೇಜ್ ಎಪಿಸೋಡ್

ಇಂದು [ ಆಗಸ್ಟ್ 16 ] ಶಕುಂತಲಾ ಮರಳಿ ಮನೆಗೆ ಬರಲಿದ್ದು, ಭೂಮಿಕಾ ರೌದ್ರಾವತಾರ ಎತ್ತಲಿದ್ದಾಳೆ. ಶಕುಂತಲಾ ಕೆನ್ನೆಗೆ ಹೊಡೆದು ಗೌತಮ್‌ಗೆ ಹೇಳಿಹೋಗಿ ಎಂದು ಸವಾಲು ಹಾಕುತ್ತಾಳೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X