Amruthadhaare: ಪಾರ್ಥ- ಅಪ್ಪಿ ಮದುವೆ ನಡೆದೇ ಹೋಯ್ತು; ಭೂಮಿಕಾಗೆ ಶಾಕ್?
ಅಂತೂ ಇಂತೂ ಜಗಳ ಗುದ್ದಾಟದಲ್ಲಿ ಪಾರ್ಥ-ಅಪೇಕ್ಷ ಮದುವೆ ನಡೆದು ಹೋಗಿದೆ. ರೌಡಿಗಳ ಜೊತೆ ಗೌತಮ್ ಸೆಣಸಾಡುತ್ತಿರುತ್ತಾರೆ. ಆಗ ದೇವಾಲಯದ ಒಳಗೆ ಓಡಿ ಹೋದ ಪಾರ್ಥ ಹಾಗೂ ಅಪ್ಪಿ ದೇವಾಲಯದಲ್ಲಿ ಮದುವೆ ಆಗುತ್ತಾರೆ. ಗೌತಮ್ ಹಾಗೂ ಆನಂದ್ ದೇವಾಲಯದ ಒಳಗೆ ಬರುವಷ್ಟರಲ್ಲಿ ಅವರಿಬ್ಬರ ಮದುವೆ ನಡೆದು ಹೋಗಿತ್ತು. ಗೌತಮ್‌ಗೆ ಏನು ಮಾಡಬೇಕು ಎಂದು ತಿಳಿಯದೇ ಬಹಳ ಆತಂಕ ಪಡುತ್ತಾನೆ.
"ಹೇಗಪ್ಪಾ ಇದನ್ನು ಮನೆಗೆ ತಿಳಿಸಲಿ. ಯಾಕೆ ನೀವು ತಿಳಿದು ತಿಳಿದು ತಪ್ಪು ಮಾಡಿದಿರಿ. ನಿಮಗೆ ಇದು ಎಷ್ಟು ಸರಿ ಎಂದು ಅನ್ನಿಸುತ್ತದೆ" ಎಂದು ಗೌತಮ್ ತಮಮ್ ಪಾರ್ಥ ಹಾಗೂ ಅಪ್ಪಿಗೆ ಪ್ರಶ್ನೆ ಮಾಡುತ್ತಾರೆ. ಪ್ರೀತಿ ಮಾಡಿದರೆ ಮನೆಯವರನ್ನು ಒಪ್ಪಿಸಿ ಮದುವೆ ಆಗಬೇಕಾಗಿತ್ತು. ಆದರೆ ನೀವು ಈ ರೀತಿ ಮಾಡಿ ಮನೆತನದ ಮಾನ ಮರ್ಯಾದೆ ಘನತೆಯನ್ನು ಹಾಳು ಮಾಡಿರುವುದು ಎಷ್ಟು ಸರಿ ಎಂದು ಹೇಳುತ್ತಾನೆ. ಹಾಗೆಯೇ ತನ್ನ ತಾಯಿ ಶಕುಂತಲಾ ದೇವಿಗೆ ಕರೆ ಮಾಡಿದಾಗ ಆಕೆ ಹೇಳುತ್ತಾಳೆ. ನಾನೇ ಅವರಿಬ್ಬರಿಗೆ ದೇವಾಲಯಕ್ಕೆ ಹೋಗಿ ಮದುವೆ ಆಗಿ ಎಂದು ಹೇಳಿದ್ದೆ. ಆ ಪ್ರಕಾರವಾಗಿ ಅವರು ಮದುವೆ ಆಗಿದ್ದಾರೆ.

"ನಾನು ಅವರು ಮಾಡಿದ ತಪ್ಪಿನ ಹೊಣೆಯನ್ನು ಹೊತ್ತುಕೊಳ್ಳಲು ರೆಡಿ ಆಗಿದ್ದೇನೆ. ಅವರಿಬ್ಬರೂ ಒಂದಾಗಲೀ ಎನ್ನುವುದು ನನ್ನ ಆಸೆ ಆಗಿತ್ತು . ಆ ಪ್ರಕಾರ ಅವರಿಬ್ಬರೂ ಒಂದಾಗಿದ್ದಾರೆ. ಈ ತಪ್ಪಿನ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ" ಎಂದು ಹೇಳಿ ಗೌತಮ್ ಬಾಯಿಯನ್ನು ಶಕುಂತಲಾ ದೇವಿ ಮುಚ್ಚಿಸಿ ಬಿಡುತ್ತಾಳೆ. ಇನ್ನೂ ಜೈ ದೇವ್ ಅದು ಹೇಗೋ ಅಣ್ಣನ ಕೈಯಿಂದ ತಪ್ಪಿಸಿಕೊಂಡು ಬಿಡುತ್ತಾನೆ. ಹೋದ ಜೀವ ಮರಳಿ ಬಂದ ಹಾಗೆ ಆತನಿಗೆ ಆಗುತ್ತದೆ. ಇನ್ನು ಗೌತಮ್ ನೇರವಾಗಿ ಅಪೇಕ್ಷ ಹಾಗೂ ಪಾರ್ಥನನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಇದನ್ನು ನೋಡಿದ ಭೂಮಿಕಾ ಹಾಗೂ ಮನೆಯವರಿಗೆ ಶಾಕ್ ಆಗುತ್ತದೆ. ಇನ್ನೂ ಮಂದಾಕಿನಿ ಹಾಗೂ ಸದಾಶಿವಗೆ ಈ ಬಗ್ಗೆ ಏನು ತಿಳಿದು ಇರುವುದಿಲ್ಲ.
ತಂಗಿಯನ್ನು ನೆನೆದು ಕಣ್ಣೀರು
ಇನ್ನೂ ಅಜ್ಜಿ ಮಾತ್ರ ನವ ಜೋಡಿಯನ್ನು ಮನೆಯೊಳಗೆ ಬರಲು ಬಿಡದೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇನ್ನೂ ಭೂಮಿಕಾಗೆ ಮಾತ್ರ ತನ್ನ ತಂಗಿಯ ಸ್ಥಿತಿಯನ್ನು ನೆನೆದು ಕಣ್ಣೀರು ಬರುತ್ತದೆ. ಯಾಕೆ ಹೀಗೆ ನೀನು ಮಾಡಿದೆ. ನೀನು ಮಾಡಿದ ಕೆಲಸ ನಿನಗೆ ಸರಿ ಎಂದು ಅನ್ನಿಸುತ್ತಿದೆಯಾ? ಎಂದು ಅಪ್ಪಿಯ ಬಳಿ ಕಣ್ಣಿನ ನೋಟದಿಂದಲೇ ಪ್ರಶ್ನೆ ಕೇಳುತ್ತಾಳೆ. ಇದೆಲ್ಲವನ್ನೂ ಗಮನಿಸಿದ ಅಪ್ಪಿ ಮೌನಿ ಆಗಿರುತ್ತಾಳೆ. ಎಲ್ಲಾದರೂ ತಂದೆಗೆ ಈ ವಿಚಾರ ತಿಳಿದರೆ ಎಲ್ಲಿ ಆತ ಎದೆ ಒಡೆದುಕೊಂಡು ಬಿಡುತ್ತಾರೋ ಎನ್ನುವ ಭಯದಲ್ಲಿ ಇರುತ್ತಾಳೆ .

ಅಜ್ಜಿಯ ಕಾಲಿಗೆ ಬಿದ್ದ ಗೌತಮ್
ಇನ್ನೂ ಗೌತಮ್ ಅಜ್ಜಿ ಮಾತ್ರ ಪಾರ್ಥ ಹಾಗೂ ಅಪ್ಪಿ ಮಾಡಿದ ತಪ್ಪಿಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ. "ಯಾಕೆ ಹೀಗೆ ಮಾಡಿದಿರಿ ನೀವು. ನೀವು ಮಾಡಿದ್ದು ಸರಿಯಲ್ಲ. ಮನೆಯವರ ನಂಬಿಕೆಗೆ ಮೋಸ ಮಾಡಿದ್ದೀರಿ. ನಾನು ಯಾವತ್ತೂ ಕ್ಷಮಿಸುವುದು ಇಲ್ಲ" ಎಂದಾಗ ಗೌತಮ್ ಅಜ್ಜಿಯ ಕಾಲಿಗೆ ಬೀಳುತ್ತಾನೆ. ಅಜ್ಜಿ ದಯವಿಟ್ಟು ಆದ ತಪ್ಪನ್ನು ಮನ್ನಿಸಿ ಅವರಿಬ್ಬರನ್ನು ಒಂದು ಮಾಡಿ. ಅವರಿಬ್ಬರನ್ನು ಈ ಮನೆಯೊಳಗೆ ಸೇರಿಸಿಕೊಳ್ಳಿ. ಅವರು ಮಾಡಿದ ತಪ್ಪುನ್ನು ನಾವು ಮಾಡುವುದು ಬೇಡ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಅಜ್ಜಿ ಆಯಿತು ಎಂದು ಹೇಳುತ್ತಾರೆ.
ಶಕುಂತಲಾ ದೇವಿ ಮಾಸ್ಟರ್ ಪ್ಲಾನ್ ಸಕ್ಸಸ್?
ಆಗ ಕೂಡಲೇ ಅಜ್ಜಿ ಆತನ ಮಾತಿಗೆ ಒಪ್ಪಿ ಪಾರ್ಥ ಹಾಗೂ ಅಪ್ಪಿಯನ್ನು ಮನೆ ತುಂಬಿಸಿಕೊಳ್ಳುತ್ತಾರೆ. ಇನ್ನೂ ಶಕುಂತಲಾ ದೇವಿ ನಾನಾ ರೀತಿಯಲ್ಲಿ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದ್ದಾಳೆ. ಅಕ್ಕ ತಂಗಿ ಬೇರೆ ಬೇರೆಯಾಗುವ ಎಲ್ಲಾ ಲಕ್ಷಣ ಎದ್ದು ಕಾಣುತ್ತಿದೆ.


Click it and Unblock the Notifications











