Amruthadhaare ; ಫ್ಲವರ್ ಅಲ್ಲ, ಫೈಯರ್ ಎಂದ ಭೂಮಿಕಾ, ಸೊಸೆಯ ಮಾತಿನ ವರಸೆಗೆ ಶಕುಂತಲಾ ಕಂಗಾಲು !
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮನವೊಲಿಸಿ ಕರೆದುಕೊಂಡು ಹೋಗಲು ಜೈದೇವ್ ಮನೆಗೆ ಗೌತಮ್ ಬಂದಿದ್ದು ಕ್ಷಮೆ ಕೇಳಿದ್ದಾನೆ. ಇದೇ ಸಮಯದಲ್ಲಿ ಶಕುಂತಲಾ ಗೌತಮ್ ತಲೆ ಕೆಡಿಸುವ ಪ್ರಯತ್ನ ಮಾಡಿದ್ದು ಭೂಮಿಕಾ ವಿರುದ್ಧ ಆರೋಪ ಮಾಡಿದ್ದಾಳೆ. ನಮ್ಮ ಮನೆಗೆ ಸೊಸೆಯಾಗಿ ಬಂದ ಮೇಲೆ ತಾನೇ ಸಮಸ್ಯೆಗಳು ಶುರುವಾಗಿದ್ದು ಎನ್ನುವ ಶಕುಂತಲಾ ಮನೆ ಸೊಸೆಯಾದವಳು ಮನೆ ಮರ್ಯಾದೆ ಉಳಿಸುವ ಪ್ರಯತ್ನ ಮಾಡಬೇಕು ತೆಗೆಯುವ ಪ್ರಯತ್ನ ಮಾಡಬಾರದು ಇಷ್ಟು ದಿನ ಅವಳು ಅದನ್ನೇ ತಾನೇ ಮಾಡಿದ್ದು ಎಂದಿದ್ದಾಳೆ
ಮುಂದುವರೆದು ನಾನು ಬಂದರೆ ನಾವೇ ಸರಿ ಇಲ್ಲ ಎನ್ನುವುದನ್ನು ಅವಳು ಸಾಬೀತು ಮಾಡಲು ಮುಂದಾಗುತ್ತಾಳೆ ಎಂದಿರುವ ಶಕುಂತಲಾ ಇದಕ್ಕೆ ಕೊನೆಯೇ ಇಲ್ಲಾ ಗೌತಮ್ ಎಂದು ಹೇಳಿದ್ದಾಳೆ. ಇದಕ್ಕೆ ಗೌತಮ್ ಇನ್ಮುಂದೆ ಆ ರೀತಿ ಏನೂ ಆಗಲ್ಲ ಎಂದು ಭರವಸೆ ನೀಡಿದ್ದು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದು ನಾನು ನನ್ನ ನಿರಾಸೆ ಮಾಡಬೇಡಿ ನನ್ನ ಮನಸಿಗೆ ನೋವಾಗುತ್ತೆ ಎಂದು ಹೇಳುತ್ತಾನೆ. ಗೌತಮ್ ಮಾತುಗಳಿಗೆ ಕೊನೆಗೆ ಒಪ್ಪುವ ಶಕುಂತಲಾ ಮನೆಗೆ ಹೋಗಲು ಒಪ್ಪುತ್ತಾಳೆ.

ನಾನು ರಿಂಗ್ ಮಾಸ್ಟರ್ ಎನ್ನುವ ಶಕುಂತಲಾ
ಶಕುಂತಲಾ ಮನೆಯೊಳಗೆ ಬರುತ್ತಿದ್ದಂತೆಯೇ ಭೂಮಿಕಾ ಎದುರಾಗಿದ್ದು, ನನ್ನ ಆರತಿ ಮಾಡಿ ನೀನು ಮನೆಯೊಳಗೆ ಕರ್ಕೋತಿಯಾ ಎಂದುಕೊಂಡಿದ್ದೇ ಆದರೆ ನೀನು ನನ್ನ ನಿರಾಸೆ ಮಾಡಿದೆ ಎಂದು ಭೂಮಿಕಾಳನ್ನು ಕೆಣಕುವ ಶಕುಂತಲಾ ನಿನ್ನನ್ನು ನೀನು ಏನು ಅಂದ್ಕೊಂಡಿದೀಯಾ ನಾನು ಬೆಳೆಸಿರುವ ಹುಡುಗನ್ನ ನಿನ್ನ ಕಂಟ್ರೋಲ್‌ಗೆ ತಗೋಬಹುದು ಅಂದ್ಕೊಂಡಿದೀಯಾ ಎಂದು ಹೇಳುತ್ತಾಳೆ. ಆ ದೇವರೇ ಬಂದರು ಗೌತಮ್ ನಂಬಲ್ಲ ಯಾಕೆಂದರೆ ಅವನು ನನ್ನ ಮಗ ಅವನೊಂಥರಾ ಸರ್ಕಸ್ ಅಲ್ಲಿರುವ ಪ್ರಾಣಿ ತರ ನಾನು ರಿಂಗ್ ಮಾಸ್ಟರ್ ಎನ್ನುವ ಶಕುಂತಲಾ ನಾನು ಹೇಳಿದಂತೆಯೇ ಅವನು ಮಾಡೋದು ಅದಕ್ಕೆ ಉದಾಹರಣೆ ಸದ್ಯ ಕಣ್ಮುಂದೆಯೇ ಇದೆ ಎನ್ನುತ್ತಾಳೆ.
ನಿನ್ನ ನೋಡಿದರೆ ಅಯ್ಯೋ ಅನ್ಸುತ್ತೆ
ಸೋತೆ ಎಂದು ಒಪ್ಪಿಕೋ ಭೂಮಿಕಾ, ಏನೋ ಸಾಧಿಸೋ ತರ ಮಾತಾಡಿದೆ ಏನು ಸಾಧಿಸಿದೆ ಏನೂ ಇಲ್ಲ ಎನ್ನುವ ಶಕುಂತಲಾ ನಿನ್ನ ನೋಡಿದರೆ ಅಯ್ಯೋ ಅನ್ಸುತ್ತೆ ಅದಕ್ಕೆ ಜಾಸ್ತಿ ಹಾರಾಡಬಾರದು ಯಾರು ಎಲ್ಲಿ ಇರಬೇಕೋ ಅವರು ಅಲ್ಲೇ ಇರಬೇಕು ಅವಾಗಲೇ ಚೆಂದ ಅರ್ಥ ಆಯ್ತಾ ಎಂದು ಹೇಳುತ್ತಾಳೆ. ಇನ್ಮೇಲೆ ಆದರೂ ನೀನಾಯ್ತು ನಿನ್ನ ಕೆಲಸ ಆಯ್ತು ಅಂತ ತೆಪ್ಪಗೆ ಬಿದ್ದಿರು ಕೈಯಲ್ಲಾಗದೇ ಇರುವುದನ್ನೆಲ್ಲಾ ಮಾಡೋಕೆ ಹೋಗಿ ಮೈ ಪರಚಿಕೊಳ್ಳಬೇಡ ಎಂದು ಹೇಳುತ್ತಾಳೆ.
ಶಕುಂತಲಾಳನ್ನು ತಡೆಯುವ ಭೂಮಿಕಾ
ಹೋಗುತ್ತಿದ್ದ ಶಕುಂತಲಾಳನ್ನು ಭೂಮಿಕಾ ಚಿಟಿಕೆ ಹೊಡೆದು ತಡೆದಿದ್ದು, ಇಲ್ಲೇ ಎಲ್ಲಾದರೂ ಸ್ಪೈ ಕ್ಯಾಮರಾ ಇಟ್ಟಿದೀಯಾ ಎಂದು ಶಕುಂತಲಾ ಕೇಳುತ್ತಾಳೆ. ಆಗ ಭೂಮಿಕಾ ನಕ್ಕಿದ್ದು ನಂಬೋಕೆ ಆಗಲ್ಲ ನಿನ್ನ ಏನ್ ಬೇಕಾದರೂ ಮಾಡ್ತೀಯಾ ಆದರೆ ಏನೂ ಪ್ರಯೋಜನ ಇಲ್ಲ ಎಂದು ಶಕುಂತಲಾ ಹೇಳುತ್ತಾಳೆ. ಆದರೂ ನೀನು ಬಿಡಲ್ಲ ಯಾಕೆಂದರೆ ಗೌತಮ್‌ಗೆ ಕೊಡುವುದಕ್ಕೆ ನನ್ನ ವಿರುದ್ದ ನಿನಗೆ ಸಾಕ್ಷಿ ಬೇಕು ಅಂತ ನೀನು ಹುಡುಕ್ತಾನೇ ಇದ್ದೆಯಲ್ಲ ಕೊನೆಗೆ ಏನ್ ಸಿಕ್ತು ಚಿಪ್ಪು ಎಂದು ಹೇಳುತ್ತಾಳೆ.
ನೀವು ಭಿಕ್ಷುಕರು ಎಂದ ಶಕುಂತಲಾ
ನೀನು ಬಂದೆ ನಿನ್ನ ಹಿಂದೆ ನಿನ್ನ ತಂಗಿ ಬಂದ್ಲು ಸಾಲದು ಅಂತ ನನ್ನ ಮಗಳನ್ನು ಕೂಡ ಆ ಮನೆ ಸೊಸೆ ಮಾಡ್ಕೊಂಡ್ರೀ ಅಲ್ಲೂ ಲಾಭನೇ ಹಾಗೇ ನೋಡಿದರೆ ನಮ್ಮ ಋಣದಲ್ಲಿಯೇ ನೀವು ಬದುಕುತ್ತಿರುವುದು ಎನ್ನುವ ಶಕುಂತಲಾ ನಿಮ್ಮದು ಅಂತ ಏನೂ ಇಲ್ಲ ಎಲ್ಲ ನಾವು ಕೊಟ್ಟಿರುವ ಭಿಕ್ಷೆ ಎಂದು ಹೇಳುತ್ತಾಳೆ. ಭಿಕ್ಷುಕರು ನೀವು ನಿನ್ನ ಅಪ್ಪ ಅಮ್ಮ ಹೆಣ್ಣುಮಕ್ಕಳನ್ನು ಮುಂದಿಟ್ಟು ವ್ಯವಹಾರ ಮಾಡ್ತಿದ್ದಾರೆ ಅಂತೇಳಿದರೂ ತಪ್ಪಲ್ಲ ಎನ್ನುತ್ತಾಳೆ. ಆಗ ಕೆರಳುವ ಭೂಮಿಕಾ ನೋಡಿಕೊಂಡು ಮಾತನಾಡುವಂತೆ ಹೇಳುತ್ತಾಳೆ.

ಶಕುಂತಲಾಗೆ ಕಪಾಳಮೋಕ್ಷ ಮಾಡಿದ ಭೂಮಿಕಾ
ಗೌತಮ್ ತಲೆಯಲ್ಲಿ ಮೆದುಳು ಇದೆ ಹೊರತು ಬುದ್ದಿ ಕೆಲಸ ಮಾಡಲ್ಲ, ಕತ್ತೆ ಅಂದರೂ ತಪ್ಪಿಲ್ಲ ಕತ್ತೆನೇ ಅವನು ನಾನು ಸಾಕಿರುವ ನಾಯಿ ಅವನು, ನಾನು ಹಾಕುವ ಬಿಸ್ಕೆಟ್ ತಿನ್ಕೊಂಡು ನನ್ನ ಕಾಲು ನೆಕ್ಕೊಂಡು ಬಿದ್ದಿರಬೇಕು ಎಂದು ಶಕುಂತಲಾ ಹೇಳುತ್ತಾಳೆ. ಆಗ ರೌದ್ರವತಾರ ತಾಳುವ ಭೂಮಿಕಾ ಭೂಮಿಕಾ ಅತ್ತೆಗೆ ಕಪಾಳಮೋಕ್ಷ ಮಾಡಿದ್ದಾಳೆ. ಭೂಮಿಕಾ ರೌದ್ರಾವತಾರಕ್ಕೆ ಶಕುಂತಲಾ ಬೆಚ್ಚಿ ಬಿದ್ದಿದ್ದು ಈಗ ಹೋಗಿ ನಿಮ್ಮ ಮಗನಿಗೆ ನಿನ್ನ ಹೆಂಡತಿ ನನಗೆ ಹೊಡೆದಳು ಎಂದು ಹೋಗಿ ಹೇಳಿ, ನಿಮ್ಮ ಮಾತನ್ನು ನಂಬ್ತಾರಾ ನೋಡಿ ಎಂದು ಭೂಮಿಕಾ ಗುಡುಗಿದ್ದಾಳೆ.
ಸೊಸೆ ಮಾತಿನ ವರಸೆಗೆ ಶಕುಂತಲಾ ಕಂಗಾಲು
ಇಂದು [ ಆಗಸ್ಟ್ 17 ] ಶಕುಂತಲಾ ತನ್ನ ರೂಮ್‌ನಲ್ಲಿ ಕುಂತಿದ್ದು ಗೌತಮ್ ಜೊತೆ ಭೂಮಿಕಾ ಬಂದು ಚಮಕ್ ಕೊಟ್ಟಿದ್ದಾಳೆ. ನೀವು ನನ್ನನ್ನು ಫ್ಲವರ್ ಅಂದ್ಕೊಂಡ್ರೀ ಆದರೆ ನಾನು ಫೈರ್ ಎಂದಿದ್ದಾಳೆ. ಶಕುಂತಲಾಗೆ ಊಟವನ್ನು ಮಾಡಿದಿ ಮಾಡು ಇಲ್ಲವೇ ಮಡಿ ಆ ರೇಂಜಿಗೆ ಗುದ್ದಾಡ್ತೀನಿ ಆಲ್ ದಿ ಬೆಸ್ಟ್ ಹೇಳಿ ಎಂದು ಕೈ ಕುಲುಕಿದ್ದಾಳೆ. ಭೂಮಿಕಾ ಮಾತಿನ ವರಸೆ ಕಂಡು ಶಕುಂತಲಾ ಕಂಗಾಲಾಗಿದ್ದು ಧಾರಾವಾಹಿ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











