Amruthadhaare: ಶಕುಂತಲಾ ದೇವಿ ಪ್ಲಾನ್ ಭೂಮಿಕಾಗೆ ತಿಳೀತು; ಪ್ರತಿತಂತ್ರ ಹೂಡುತ್ತಾಳಾ ಭೂಮಿಕಾ?
ಸದಾಶಿವ ಅಪ್ಪಿ ಮದುವೆ ಆದಾಗಿನಿಂದ ಬಹಳ ತಲೆ ಕೆಡಿಸಿಕೊಂಡಿರುತ್ತಾನೆ. ಆತನಿಗೆ ಅಪ್ಪಿ ಮಾಡಿದ ಕೆಲಸದಿಂದಾಗಿ ಸಮಾಜದಲ್ಲಿ ನಾನು ಹೇಗೆ ತಲೆ ಎತ್ತಿ ಓಡಾಡಲಿ ಎಂದು ಆತನಿಗೆ ತಲೆಬಿಸಿ ಆಗುತ್ತದೆ. ನಾನು ಏನು ಮಾಡಬೇಕು ಎಂದು ದಿಕ್ಕು ಯೋಚದಂತೆ ಆಗುತ್ತದೆ. ಇನ್ನೂ ಸದಾಶಿವನ ಹೆಂಡತಿಗೆ ಮಾತ್ರ ಸಿಕ್ಕಾಪಟ್ಟೆ ಬೇಸರ ಆಗಿದೆ. ಇನ್ನೂ ಗೌತಮ್ ಅಜ್ಜಿಗೆ ಇನ್ನು ಬಹಳ ಬೇಸರ ಆಗಿರುತ್ತೆ.
ನನ್ನ ಮನೆಯಲ್ಲಿ ಗೌತಮ್‌ನದ್ದು ಬಿಟ್ಟರೆ ಬೇರೆ ಯಾರದ್ದು ಕೂಡ ಶುಭ ಕಾರ್ಯ ನಡೆದಿಲ್ಲ. ಅಜ್ಜಿ ಗೌತಮ್‌ನನ್ನು ಬಿಟ್ಟರೆ ಮನೆಯಲ್ಲಿ ಹೆಚ್ಚಾಗಿ ನಂಬಿದ್ದು ಪಾರ್ಥನನ್ನು. ಆದರೆ, ಪಾರ್ಥ ಮಾಡಿದ ಕೆಲಸಕ್ಕೆ ಅಜ್ಜಿಗೆ ಬಹಳ ಬೇಸರ ಆಗುತ್ತದೆ. ಏನೇ ಮಾಡಿದರೂ ಈ ಮನೆ ಕ್ಷಮಿಸುತ್ತೆ ಎಂದುಕೊಂಡು ಈ ರೀತಿ ನಡೆದುಕೊಂಡರೆ ಈ ಮನೆಯಲ್ಲಿ ನಾನು ಸುಮ್ಮನೆ ಇರುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿ ಬಿಡುತ್ತಾರೆ. ಇನ್ನೂ ಅಪೇಕ್ಷ ಳನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಮಾಡಿ ಮುಗಿಸುತ್ತಾರೆ. ಪಾರ್ಥ ಅಪ್ಪಿ ಮದುವೆ ಆಗಲು ನಾನೇ ಕಾರಣ ಎಂದು ಗೌತಮ್ ಎಲ್ಲರ ಜೊತೆ ಹೇಳುತ್ತಾನೆ. ಆದರೆ ಯಾರೆ ನಂಬಿದರು ಕೂಡ ಭೂಮಿಕಾ ಮಾತ್ರ ಆತನ ಮಾತನ್ನು ನಂಬಲು ರೆಡಿ ಆಗಿಲ್ಲ.

ಭೂಮಿಕಾ ಗೌತಮ್ ಬಳಿ ಅದೆಷ್ಟೇ ಹೇಳಿದರು ಗೌತಮ್ ಒಪ್ಪಲೇ ಇಲ್ಲ. ಇನ್ನೂ ಅಪ್ಪಿಯನ್ನು ಅಡುಗೆ ರೂಮ್ ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಹಾಲು ಉಕ್ಕಿಸುವ ಶಾಸ್ತ್ರ ನಡೆಯುತ್ತದೆ. ಶಕುಂತಲಾ ದೇವಿ ತನ್ನ ಚಿಕ್ಕ ಸೊಸೆಯ ಜೊತೆಯೇ ಇರುತ್ತಾಳೆ. ಆಕೆಗೆ ಭೂಮಿಕಾ ಬಗ್ಗೆ ಯಾವಾಗ ಹೇಳಿ ಈ ಅಪೇಕ್ಷ ತಲೆ ಕೆಡಿಸಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಾರೆ. ಹಾಲು ಉಕ್ಕಿಸುವ ಶಾಸ್ತ್ರ ನಡೆಯುತ್ತದೆ. ಆದರೆ ಉಕ್ಕಿ ಬಂದ ಹಾಲು ಒಡೆದು ಹೋಗಿತ್ತು. ಇದನ್ನು ನೋಡಿದ ಅಪ್ಪಿಗೆ ಆತಂಕ ಆಗುತ್ತದೆ.
ಅಪ್ಪಿಗೆ ಸಮಾಧಾನ ಹೇಳಿದ ಶಕುಂತಲಾ ದೇವಿ
ಅಪ್ಪಿ ಮುಖ ನೋಡಿದ ಶಕುಂತಲಾ ದೇವಿ ಹೇಳುತ್ತಾಳೆ. "ಆಗ ಹಾಲು ಹಾಳಾಗಿತ್ತು ಅನ್ನಿಸುತ್ತದೆ. ಅದಕ್ಕೆಲ್ಲ ಆತಂಕ ಪಡುವ ಅಗತ್ಯ ಇಲ್ಲ. ಏನೂ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ" ಎಂದಾಗ ಅಜ್ಜಿ "ನನಗೆ ಇದು ಅಪಶಕುನ ಎಂದು ನನಗೆ ಅನ್ನಿಸುತ್ತಿದೆ. ಈ ರೀತಿ ಹಾಲು ಒಡೆದು ಹೋಗಬಾರದಿತ್ತು. ಏನೋ ಕಂಟಕ ಕಾದಿದೆ ಎನ್ನಿಸುತ್ತದೆ" ಎಂದು ಹೇಳುತ್ತಾರೆ.

ಅಕ್ಕನನ್ನು ಮಾತನಾಡಿಸಲು ಬಾರದ ಅಪ್ಪಿ
ಇನ್ನೂ ಭೂಮಿಕಾಗೆ ಮಾತ್ರ ತನ್ನ ತಂಗಿ ಅಪ್ಪಿ ದುಡುಕಿ ತಪ್ಪು ಮಾಡಿಬಿಟ್ಟಳು. ಆಕೆ ಪ್ರೀತಿಯನ್ನು ನಂಬಿಕೊಂಡು ಬಂದಿದ್ದಾಳೆ. ಆದರೆ ಆಕೆಯನ್ನೇ ನಂಬಿದ್ದ ಅಪ್ಪ ಅಮ್ಮನಿಗೆ ಮೋಸ ಮಾಡಿದ್ದಾಳೆ ಎಂದು ಮನದಲ್ಲಿ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಇನ್ನೂ ನೇರವಾಗಿ ಬಂದ ಭೂಮಿಕಾ ತನ್ನ ಗಂಡನ ಬಳಿ ಪ್ರಶ್ನೆ ಮಾಡುತ್ತಾಳೆ. ಮೊದಲೇ ಗೌತಮ್ ಮನೆಯಲ್ಲಿ ನಡೆದ ಘಟನೆಗಳನ್ನು ನೆನೆದುಕೊಂಡು ಬಹಳಷ್ಟು ಬೇಸರ ಮಾಡಿಕೊಂಡು ಇರುತ್ತಾನೆ.
ಬೇಸರದಲ್ಲಿರುವ ಗೌತಮ್
ಗೌತಮ್ ತಪ್ಪುಗಳನ್ನು ಆತ ಒಪ್ಪಿಕೊಳ್ಳಲು ಒಂದೇ ಒಂದು ಕಾರಣ ಅದು ಅಮ್ಮ. ಅಮ್ಮ ಪಾರ್ಥ ಹಾಗೂ ಅಪ್ಪಿ ಮದುವೆ ಆಗುವುದೇ ಸರಿ. ಅವರಿಬ್ಬರ ಪ್ರೀತಿ ದೂರ ಮಾಡಲು ನನ್ನಿಂದ ಆಗುವುದಿಲ್ಲ ಎಂದು ಹೇಳುತ್ತಾಳೆ. ಇನ್ನೂ ಪಾರ್ಥ, ಅಪ್ಪಿ ಮದುವೆಗೆ ಅಮ್ಮ ಕಾರಣ ಎಂದರೆ ಎಲ್ಲರ ಕೆಂಗಣ್ಣಿಗೆ ಅಮ್ಮ ಗುರಿ ಆಗಬೇಕಾಗುತ್ತದೆ ಎಂದು ಹೇಳಿ ಅದೆಲ್ಲವನ್ನೂ ತನ್ನ ಮೇಲೆ ಹಾಕಿಕೊಂಡು ಬಿಡುತ್ತಾನೆ. ಈ ವಿಚಾರ ಇದೀಗ ಭೂಮಿಕಾಗೆ ಕೂಡ ಅರ್ಥ ಆಗಿದೆ.


Click it and Unblock the Notifications











