Amruthadhaare ; ಭೂಮಿಕಾ ಹೊಡೆತಕ್ಕೆ ಪತರುಗುಟ್ಟಿದ ಶಕುಂತಲಾ, ಫಾರಿನ್ ಟ್ರಿಪ್‌ಗೆ ಹೊರಟ ಗೌತಮ್
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾಗೆ ಭೂಮಿಕಾ ಕಪಾಳಮೋಕ್ಷ ಮಾಡಿದ್ದಾಳೆ. ಭೂಮಿಕಾ ರೌದ್ರಾವತಾರಕ್ಕೆ ಶಕುಂತಲಾ ಪತರುಗುಟ್ಟಿದ್ದು ಭಾಗ್ಯಮ್ಮ ಬಳಿ ಭೂಮಿಕಾ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಏಟಿಗೆ ಎದುರೇಟು ಕೊಡ್ತೀನಿ ನೀವು ಆಟ ಆಡಿದರೆ ನಾನು ಆಡ್ತೀನಿ ಎಂದು ಹೇಳಿಯೇ ಬಂದಿದ್ದೀನಿ, ನನ್ನ ಗಂಡನಿಗೆ ಮನೆಯವರಿಗೆ ಏನಾದರೂ ಅದರ ಪರಿಣಾಮ ಸರಿ ಇರಲ್ಲ ಎಂದು ಎಚ್ಚರಿಕೆಯನ್ನು ನೀಡಿಯೇ ಬಂದಿದ್ದೀನಿ ಎಂದು ಹೇಳುತ್ತಾಳೆ.
ಏನೇ ಮಾಡೋ ಹಾಗೇ ಇದ್ದರೂ ಅವರು ಒಮ್ಮೆ ಯೋಚನೆ ಮಾಡಬೇಕು ಹಾಗೇ ವ್ಯವಸ್ಥೆ ಮಾಡಿ ಬಂದಿದ್ದೀನಿ ಎಂದು ಹೇಳುತ್ತಾಳೆ. ಭೂಮಿಕಾ ಮಾತು ಕೇಳಿ ಭಾಗ್ಯಮ್ಮ ಖುಷಿಯಾಗಿದ್ದು ಭೂಮಿಕಾ ಕೆನ್ನೆಗೆ ಹೊಡೆದಿರುವ ವಿಚಾರ ಹೇಳದೇ ಮಾತಿನಲ್ಲಿಯೇ ಚಳಿ ಬಿಡಿಸಿರುವುದಾಗಿ ಹೇಳುತ್ತಾಳೆ.

ಫಾರಿನ್ ಟ್ರಿಪ್‌ಗೆ ಹೋಗ್ತಾನಾ ಗೌತಮ್ ?
ಕಾರಿನಲ್ಲಿ ಆನಂದ್ ಕಂಪನಿಯ ಕುರಿತು ಚರ್ಚೆ ಮಾಡುತ್ತಿದ್ದಾನೆ. ಆದರೆ ಗೌತಮ್ ಚಿಂತಾಕ್ರಾಂತನಾಗಿ ಕುಂತಿದ್ದು ಆನಂದ್ ಕೇಳಿದಾಗ ನನಗೆ ಈ ಬ್ಯುಸಿನೆಸ್ ಟ್ರಿಪ್ ಬರೋಕೆ ಮನಸಿಲ್ಲ ಎಂದು ಹೇಳುತ್ತಾನೆ.
ಇನ್ನೊಂದು ಮಗು ವಿಚಾರಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಟೆಸ್ಟ್ ಕೊಟ್ಟು ಬಂದಿದ್ದೀವಿ, ಆ ರಿಪೋರ್ಟ್ ಬೇಗ ಬರುತ್ತೆ ಅನ್ಸುತ್ತೆ ಈ ಸಮಯದಲ್ಲಿ ನಾನು ಇಲ್ಲಿ ಇರಬೇಕು ಅಂದು ಗೌತಮ್ ಹೇಳಿದ್ದು ಆನಂದ್ ನನಗೆ ಅರ್ಥವಾಗುತ್ತೆ ಆದರೆ ಆ ಮಗು ಎಷ್ಟು ಮುಖ್ಯನೋ ಅಷ್ಟೇ ಕಂಪನಿ ಎಂಬ ಮಗು ಕೂಡ ಮುಖ್ಯ ಅಲ್ವಾ ಅದು ನಿನ್ನ ಕನಸಿನ ಕೂಸು ಎಂದು ಹೇಳುತ್ತಾನೆ. ಈಗ ಹೋಗ್ತಿರುವುದು ಅಂತಿಂಥಾ ಡೀಲ್ ಅಲ್ಲ ಅದು ಆದರೆ ಎಷ್ಟು ಲಾಭ ಆಗುತ್ತೆ ಅಂತಾ ನಿನಗೆ ಗೊತ್ತು ತಾನೇ ಎನ್ನುತ್ತಾನೆ.
ಆನಂದ್ ಮಾತುಗಳಿಗೆ ದುಡ್ಡು ಮಾಡಿದ್ದು ಹೆಸರು ಮಾಡಿದ್ದು ಸಾಕು ಆ ಮಗು ವಿಚಾರ ನಾನು ಮನೆಯಲ್ಲಿ ಹೇಗೆ ಹೇಳಬೇಕು ಅವರನ್ನ ಹೇಗೆ ಕನ್ವಿನ್ಸ್ ಮಾಡಬೇಕು ಎನ್ನೋ ವಿಚಾರನೇ ನನ್ನ ತಲೆಯಲ್ಲಿ ಓಡ್ತಿದೆ ಎಂದು ಗೌತಮ್ ಹೇಳಿದ್ದು ಕಂಪನಿ ಮಾಲೀಕನಾಗಿ ನೀನು ಅಲ್ಲಿರಬೇಕು 5 ದಿನದಲ್ಲಿ ಎಲ್ಲಾ ಮುಗಿದು ಹೋಗುತ್ತೆ ಎಂದು ಆನಂದ್ ಹೇಳುತ್ತಾನೆ.
ಪತರುಗಟ್ಟಿದ ಶಕುಂತಲಾ
ಶಕುಂತಲಾ ಕಿವಿಯಲ್ಲಿ ಭೂಮಿಕಾ ಕೊಟ್ಟಿರುವ ಏಟು ಮತ್ತು ಆಡಿದ ಮಾತುಗಳೇ ಮಾರ್ದನಿಸುತ್ತಿವೆ. ಇದೇ ಸಮಯದಲ್ಲಿ ಜೈದೇವ್ ಫೋನ್ ಮಾಡಿದ್ದು ಶಕುಂತಲಾ ತನ್ನೆಲ್ಲಾ ಕೋಪವನ್ನು ಜೈದೇವ್ ಮೇಲೆ ಹೊರ ಹಾಕುತ್ತಾಳೆ. ಎಲ್ಲ ನಿನ್ನಿಂದನೇ ಆಗಿದ್ದು ಬೇಡ ಬೇಡ ಈಗಲೇ ಮದುವೆಯಾಗಬೇಡ ಅಂತ ಬಡ್ಕೊಂಡ್ರು ಆದೆ ನನ್ನ ಹೊಟ್ಟೆ ಉರಿಸೋಕೆ ಅಂತಾನೇ ಹುಟ್ಟಿದೀಯಾ ನೀನು ಎಂದು ಹೇಳುತ್ತಾಳೆ.

ಶಕುಂತಲಾ ಮಾತುಗಳಿಂದ ಜೈದೇವ್ ಕಕ್ಕಾಬಿಕ್ಕಿಯಾಗಿದ್ದು ಯಾರು ನನ್ನ ಮಾತು ಕೇಳಲ್ಲ, ನನ್ನ ಮೇಲೆ ಯಾರಿಗೂ ಕಾಳಜಿ ಇಲ್ಲ, ನಿಮಗೆ ಏನು ಅನ್ಸುತ್ತೋ ಅದನ್ನೇ ಮಾಡ್ತೀರಾ ಎಂದು ಶಕುಂತಲಾ ಹೇಳುತ್ತಾಳೆ. ಎಲ್ಲರೂ ಸೇರಿ ನನ್ನ ಒಂಟಿ ಮಾಡಿ ಹೋಗಿದೀರಾ ನೀವು ನೆಟ್ಟಗಿದ್ದಿದ್ದರೆ ಇವತ್ತು ನನ್ನ ಶಕ್ತಿ ನನ್ನ ಲೆವಲ್ ಬೇರೆಯಾಗಿರುತ್ತಿತ್ತು ಆದರೆ ಇವತ್ತು ನಾಯಿ ಪಾಡಾಗಿದೆ ಎಂದು ಕೋಪದಲ್ಲಿ ಫೋನ್ ಕಟ್ ಮಾಡಿ ಬಿಸಾಕುತ್ತಾಳೆ.
ಕನಕಾಭಿಷೇಕದ ಸಂಭ್ರಮ
ಭೂಮಿಕಾಗೆ ಕರೆ ಮಾಡುವ ಅವರ ತಾಯಿ ಕನಕಾಭಿಷೇಕ ಮಾಡಿಸುವ ಸಲಹೆಯನ್ನು ಕೊಡ್ತಾಳೆ. ಭೂಮಿಕಾ ಈ ವಿಚಾರವನ್ನು ಗೌತಮ್ ಬಳಿ ಹೇಳಿದ್ದು ಗೌತಮ್ ನಾನು ಮರೆತೇ ಹೋಗಿದ್ದೇ ನೆನಪಿಸಿದ್ದು ಒಳ್ಳೆಯದಾಯ್ತು ಎಂದು ಶಾಸ್ತ್ರಿಗಳಿಗೆ ಫೋನ್ ಮಾಡುತ್ತಾನೆ. ಆ ನಂತರ ಅಜ್ಜಿಯ ಬಳಿ ಬಂದು ಕನಕಾಭಿಷೇಕದ ವಿಚಾರವನ್ನು ಹೇಳುತ್ತಾನೆ. ಗೌತಮ್ ಮಾತು ಕೇಳಿ ಅಜ್ಜಿ ಖುಷಿಯಾಗಿದ್ದಾಳೆ.
ಊಟಕ್ಕೆ ಹೋಗದ ಶಕುಂತಲಾ
ಇಲ್ಲಿಯವರೆಗೆ ನನ್ನ ಎದುರು ಯಾರು ನಿಂತವರೇ ಇಲ್ಲ ಎಂದು ಮನದಲ್ಲಿಯೇ ಶಕುಂತಲಾ ಅಂದುಕೊಳ್ಳುತ್ತಿದ್ದು, ಶಕುಂತಲಾ ರೂಮ್‌ಗೆ ಮಲ್ಲಿ ಬಂದಿದ್ದಾಳೆ. ಶಕುಂತಲಾ ಕುಳಿತ ಭಂಗಿಯನ್ನು ನೋಡಿ ಇವರೇನು ದೆವ್ವ ಮೆಟ್ಟಕೊಂಡವರಂತೆ ಕುಂತಿದ್ದಾರೆ ಎಂದು ಮನದಲ್ಲಿಯೇ ಅಂದುಕೊಂಡು ಶಕುಂತಲಾನ ಊಟಕ್ಕೆ ಕರೆಯುತ್ತಾಳೆ. ಶಕುಂತಲಾ ನನಗೆ ಬೇಡ ಎಂದು ಮಲ್ಲಿಯ ಮೇಲೆ ರೇಗಾಡುತ್ತಾಳೆ. ಮಲ್ಲಿ ಬಂದು ಗೌತಮ್‌ಗೆ ಶಕುಂತಲಾ ಅತ್ತೆಗೆ ಊಟ ಬೇಡ ಅಂತೆ ಎಂದು ಹೇಳಿದ್ದು ಅಜ್ಜಿ ಅದೇನು ಅಂತ ನೀನೆ ನೋಡ್ಕೊಂಡು ಬಾ ಎಂದು ಗೌತಮ್‌ಗೆ ಹೇಳುತ್ತಾಳೆ.


Click it and Unblock the Notifications











