Amruthadhaare ; ಜೈದೇವ್ ಕೆನ್ನೆಗೂ ಬಾರಿಸಿದ ಭೂಮಿಕಾ, ಶಕುಂತಲಾ ಗ್ರಹಚಾರ ಬಿಡಿಸಿದ ಭಾಗ್ಯಮ್ಮ !

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹೊಡೆತಕ್ಕೆ ನಡುಗಿರುವ ಶಕುಂತಲಾ ಜೈದೇವ್‌ ಮೇಲೆ ರೇಗಾಡಿದ್ದಾಳೆ. ಊಟಕ್ಕೆ ಕರೆಯಲು ಬಂದ ಮಲ್ಲಿಯನ್ನು ಕೂಡ ಬೈದು ಕಳುಹಿಸಿದ್ದಾಳೆ. ಹೀಗಾಗಿ ಅಮ್ಮನ ಮನವೊಲಿಸಲು ಶಕುಂತಲಾ ರೂಮ್‌ಗೆ ಖುದ್ದು ಗೌತಮ್ ಬಂದಿದ್ದಾನೆ. ಗೌತಮ್ ಹಿಂದೆಯೇ ಭೂಮಿಕಾ ಕೂಡ ಬಂದಿದ್ದು ಅತ್ತೆ ನೀವು ಮನೆಗೆ ಬರುತ್ತಿದ್ದಂತೆಯೇ ನಾನು ಕ್ಷಮೆ ಕೇಳಿದೆ ಅಲ್ವಾ ಮತ್ತೆ ಕೇಳಬೇಕಾ ಎನ್ನುತ್ತಾಳೆ.

ನೀವು ಆರಾಮಾಗಿದ್ದರೆ ನಾವೆಲ್ಲರೂ ಆರಾಮ ಆಗಿರಬಹುದು ಈ ಮನೆ ಚೆನ್ನಾಗಿರಲು ಸಾಧ್ಯ ಎನ್ನುವ, ನೀವು ಈ ಮನೆಗೆ ಎಷ್ಟು ಮುಖ್ಯ ಅಂತ ನನಗೆ ಈಗ ಗೊತ್ತಾಯ್ತು ಆಗಲೇ ನಾನು ನಿಮಗೆ ಸಾರಿ ಕೇಳಿದೆಯಲ್ಲ ಅದೇ ತರ ಮತ್ತೆ ಬೇಕಿದ್ದರೆ ಕೇಳ್ತೀನಿ ನನಗೆ ಯಾವ ಮುಜುಗರ ಇಲ್ಲ ಎಂದು ಹೇಳುತ್ತಾಳೆ. ಇದೇ ಸಮಯದಲ್ಲಿ ಶಕುಂತಲಾ ಕೆನ್ನೆ ಊದಿಕೊಂಡಿರುವುದನ್ನು ಮತ್ತು ಅದರ ಮೇಲೆ ಆದ ಗಾಯ ಗಮನಿಸುವ ಗೌತಮ್ ಇದೇನಾಯ್ತು ಕೆನ್ನೆ ಊದಿಕೊಂಡಿದೆ ಅಲ್ಲ ಎಂದು ಕೇಳುತ್ತಾನೆ. ಆಗ ಭೂಮಿಕಾ ನಾನು ಗಮನನೇ ಕೊಡಲಿಲ್ಲ ಎಕ್ಸ್ಫೈರ್ ಆಗಿರುವ ಮೇಕಪ್ ಉಪಯೋಗ ಮಾಡಿದ್ರಾ ಅಲರ್ಜಿ ಆಗಿದೆಯಾ ಎನ್ನುತ್ತಾಳೆ.

amruthadhaare-serial-august-18-episode-written-update

ಶಕುಂತಲಾಗೆ ಭೂಮಿಕಾ ಮಾತಿನ ಪೆಟ್ಟು

ಹಲ್ಲು ನೋವು ಇರಬೇಕು ಊಟ ಮಾಡಿ ಮಾತ್ರೆ ತೆಗೆದುಕೊಳ್ಳಿ ಎಂದು ಭೂಮಿಕಾ ಹೇಳಿದ್ದು, ಶಕುಂತಲಾ ನನಗೆ ಹಸಿವು ಇಲ್ಲ ಎನ್ನುತ್ತಾಳೆ. ಇದಕ್ಕೆ ಗೌತಮ್ ಈ ವಯಸ್ಸಿನಲ್ಲಿ ಊಟ ಬಿಡಬಾರದು ನಮಗೂ ಕೂಡ ಅನ್ನ ಗಂಟಲಿಗೆ ಇಳಿಯಲ್ಲ ಬನ್ನಿ ಊಟ ಮಾಡಿ ಎನ್ನುತ್ತಾನೆ.

ಆಗ ಮತ್ತೆ ಶಕುಂತಲಾ ಬೇಡ ಎಂದಿದ್ದು ಏನು ಗೌತಮ್ ಅವರೇ ಇದೆ ಚಿಕ್ಕ ಮಕ್ಕಳು ಹಠ ಮಾಡಿದರೆ ಒಂದು ಏಟು ಹೊಡೆದು ತಿನ್ನಿಸಬಹುದು ಆದರೆ ಎಂದು ರಾಗ ಎಳೆದು ಬಲವಂತ ಮಾಡಿದರೆ ತಿನ್ತಾರೆ ಅನ್ಸುತ್ತೆ ಎನ್ನುತ್ತಾಳೆ. ಆಗ ಗೌತಮ್ ಊಟ ಇಲ್ಲಿಯೇ ಇರ್ತಿನಿ ಎಂದು ಹೋಗುತ್ತಾನೆ.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

ಗೌತಮ್ ಅತ್ತ ಹೋಗುತ್ತಿದ್ದಂತೆಯೇ ಊಟ ಎಲ್ಲ ಬಿಟ್ಟರೆ ನಿಮಗೆ ನನ್ನ ಜೊತೆ ಫೈಟ್ ಮಾಡೋಕೆ ಶಕ್ತಿ ಎಲ್ಲಿಂದ ಬರುತ್ತೆ ಎಂದು ಭೂಮಿಕಾ ಕೇಳಿದ್ದು ಏನೇ ಎಷ್ಟು ನಾಟಕ ಮಾಡ್ತಿದ್ದೀಯಾ, ನನ್ನನ್ನೇ ಮೀರಿಸುವಂತೆ ಮಾಡ್ತಿದ್ದೀಯಾ ನನಗೂ ಟೈಮ್ ಬರುತ್ತೆ ಎನ್ನುತ್ತಾಳೆ. ಅದಕ್ಕೆ ನಿಮ್ಮ ಕಾಲ ಮುಗಿದು ಹೋಯ್ತು ಕೇಡುಗಾಲ ಶುರುವಾಯ್ತು ಅದಕ್ಕೆ ಹೇಳೋದು ಅತ್ತೆಗೊಂದು ಗಾಲ ಸೊಸೆಗೊಂದು ಕಾಲ ಎಂದು ಹೇಳುತ್ತಾಳೆ.

ಇದರಿಂದ ಕೆರಳುವ ಶಕುಂತಲಾ, ಭೂಮಿಕಾ ಕತ್ತು ಹಿಸುಕಲು ಮುಂದಾದಾಗ ಗೌತಮ್ ಬಂದು ಊಟ ಕೊಡುತ್ತಾನೆ. ಭೂಮಿಕಾ ನಾನೇ ಊಟ ಮಾಡಿಸ್ತೀನಿ ಎಂದು ಊಟ ಮಾಡಿಸುತ್ತಾಳೆ. ಮಾಡಿಸುತ್ತಾ ಮಾಡಿಸುತ್ತಾ ಮಾಡು ಇಲ್ಲವೇ ಮಡಿ ಆ ರೇಂಜಿಗೆ ಹೋರಾಡ್ತೀನಿ ಅದು ಮಾತ್ರ ಸತ್ಯ ಎನ್ನುತ್ತಾಳೆ.

amruthadhaare-serial-august-18-episode-written-update


ಜೈದೇವ್‌ಗೆ ಕಪಾಳಮೋಕ್ಷದ ಕಥೆ ಹೇಳುವ ಶಕುಂತಲಾ

ಜೈದೇವ್ ಮನೆಗೆ ಶಕುಂತಲಾ ಬಂದಿದ್ದು ನಡೆದಿರುವುದನ್ನೆಲ್ಲಾ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಜೈದೇವ್ ಹೂಕುಂಡ ಹೊಡೆದು ಹಾಕಿದ್ದು ಎಷ್ಟು ಧೈರ್ಯ ಅವಳಿಗೆ, ಅವಳನನ್ಉ ಇಷ್ಟು ದಿನ ಬದುಕೋಕೆ ಬಿಟ್ಟಿದ್ದೇ ತಪ್ಪು ಇವತ್ತೇ ಒಂದು ಗತಿ ಕಾಣಿಸ್ತೀನಿ ಎನ್ನುತ್ತಾನೆ.

ಆಗ ಶಕುಂತಲಾ ತಡೆದಿದ್ದು ನಾನು ಅದನ್ನು ಮರೆಯೋಕೆ ಪ್ರಯತ್ನ ಮಾಡ್ತಿದ್ದೀನಿ ಪದೇ ಪದೇ ಅದನ್ನೇ ಹೇಳಿ ನೆನಪು ಮಾಡಬೇಡ ಎನ್ನುತ್ತಾಳೆ. ಅವಳು ನನ್ನ ಬೇಟೆ ಅವಳನ್ನು ನಾನು ನೋಡಿಕೊಳ್ತೀನಿ, ನನ್ನ ಮೇಲೆ ಕೈ ಮಾಡಿ ತುಂಬಾ ದೊಡ್ಡ ತಪ್ಪು ಮಾಡಿದ್ಳು ಎನ್ನುತ್ತಾಳೆ. ಯಾರಿಗೂ ಬದುಕೋಕೆ ಬಿಡಲ್ಲ ಎಂದು ಹೇಳುತ್ತಾಳೆ.

ಗೌತಮ್‌ಗೆ ನಿರಾಸೆ, ಮ್ಯಾಚ್ ಆಗದ ಡಿಎನ್‌ಎ

ಅನಾಥಾಶ್ರಮಕ್ಕೆ ಆನಂದ್‌ನ ಜೊತೆ ಗೌತಮ್ ಬಂದಿದ್ದು, ಮಗುನ ಮನೆಗೆ ಕರೆದುಕೊಂಡು ಹೋಗಲು ಉತ್ಸುಕನಾಗಿರುತ್ತಾನೆ. ಆದರೆ ಪೊಲೀಸ್‌ನವರು ಕ್ಷಮಿಸಿ ಸರ್ ಡಿಎನ್‌ಎ ಮ್ಯಾಚ್ ಆಗುತ್ತಿಲ್ಲ ಎಂದು ಹೇಳುತ್ತಾರೆ. ಇದರಿಂದ ಗೌತಮ್‌ಗೆ ನಿಂತ ನೆಲ ಕುಸಿದಂತಾಗಿದ್ದು ಈ ಮಗು ನಿಮ್ಮದಲ್ಲ ನಾವು ಮೊದಲೇ ಅಂದುಕೊಂಡಂತೆ ಈ ಮಗುನ ಯಾರೋ ಬಿಟ್ಟು ಹೋಗಿದಾರೆ ಎಂದು ಪೊಲೀಸರು ಹೇಳುತ್ತಾರೆ.

ಭೂಮಿಕಾ ಎದುರು ಕಳಚಿಬಿತ್ತು ಜೈದೇವ್ ಮುಖವಾಡ

ಸೃಜನ್ ಸಿಸಿಟಿವಿ ಕ್ಯಾಮರಾದಲ್ಲಿ ಜೈದೇವ್ ಮಗುನ ಕಿಡ್ನ್ಯಾಪ್ ಮಾಡಲು ಬಂದಾಗಿನ ಫುಟೇಜ್ ತೆಗೆದಿದ್ದು, ಅವತ್ತು ಬಂದಿದ್ದ ಮಾಸ್ಕ್ ಮ್ಯಾನ್ ಮತ್ತು ಜೈದೇವ್ ಇಬ್ಬರು ಒಬ್ಬರೇ ಎಂದು ಭೂಮಿಕಾ ಮತ್ತು ಮಲ್ಲಿಗೆ ಹೇಳಿದ್ದಾನೆ. ಇದೇ ವೇಳೆ ಕಿಡ್ನ್ಯಾಪ್ ಮಾಡಲು ಬಂದ ವಿಚಾರ ಗೊತ್ತಾಗಿ ಭೂಮಿಕಾ ಶಾಕ್ ಆಗಿದ್ದು ಮಲ್ಲಿ ಅವತ್ತು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸೃಜನ್ ಫೋಟೊವನ್ನು ಗೌತಮ್ ಅವರಿಗೆ ತೋರಿಸೋಣ ಎಂದು ಹೇಳಿದಾಗ ಭೂಮಿಕಾ ಬೇಡ ಎನ್ನುತ್ತಾಳೆ.

amruthadhaare-serial-august-18-episode-written-update

ಜೈದೇವ್‌ಗೆ ಕಪಾಳಮೋಕ್ಷ ಮಾಡಿದ ಭೂಮಿಕಾ

ಇಂದು (ಆಗಸ್ಟ್ 19) ಜೈದೇವ್ ಮನೆಗೆ ಮಲ್ಲಿ ಜೊತೆ ಭೂಮಿಕಾ ಬಂದಿದ್ದು, ಸಿಸಿಟಿವಿ ದೃಶ್ಯಗಳನ್ನು ಜೈದೇವ್‌ಗೆ ತೋರಿಸಿದ್ದಾಳೆ. ಇದನ್ನ ನಾನು ಇನ್ನೂ ನಿಮ್ಮ ಅಣ್ಣನಿಗೆ ತೋರಿಸಿಲ್ಲ ಎನ್ನುತ್ತಾಳೆ. ಅದಕ್ಕೆ ಯಾಕೆ ತೋರಿಸಿಲ್ಲ ದಡ್ಡ ಅವನು ನನ್ನ ಹತ್ರ ಏನೂ ಕಿತ್ಕೋಳ್ಳೋಕೆ ಆಗಲ್ಲ ಎಂದು ಜೈದೇವ್ ಹೇಳಿದ್ದು ಭೂಮಿಕಾ ಕೆನ್ನೆಗೆ ಬಾರಿಸಿದ್ದಾಳೆ. ಮತ್ತೊಂದು ಕಡೆ ಭಾಗ್ಯಮ್ಮಳನ್ನು ಬೆದರಿಸಲು ಶಕುಂತಲಾ ಬಂದಿದ್ದು ಭಾಗ್ಯಮ್ಮ ಶಕುಂತಲಾ ಗ್ರಹಚಾರ ಬಿಡಿಸಿದ್ದಾಳೆ. ಇಂದಿನ ಎಪಿಸೋಡ್ ಕುತೂಹಲ ಕೆರಳಿಸಿದೆ. ಮುಂದೇನಾಗುತ್ತೆ ಎನ್ನುವುದನ್ನು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X