Amruthadhaare ;ಮಲ್ಲಿ ಮತ್ತೊಂದು ಮದುವೆಗೆ ರೆಡಿ, ಜೈದೇವ್ ಮನೆಯಲ್ಲೇ ನಡೆಯಿತು ಹೆಣ್ಣು ನೋಡುವ ಶಾಸ್ತ್ರ
ಅಮೃತಧಾರೆ ಧಾರಾವಾಹಿಯಲ್ಲಿ ಕಳೆದು ಹೋದ ಹೆಣ್ಣು ಮಗು ಸಿಕ್ಕ ಖುಷಿಯಲ್ಲಿದ್ದ ಗೌತಮ್‌ಗೆ ನಿರಾಸೆಯಾಗಿದೆ. ಅನಾಥಾಶ್ರಮಕ್ಕೆ ಆನಂದ್‌ನ ಜೊತೆ ಗೌತಮ್ ಹೋದಾಗ ಪೊಲೀಸ್‌ನವರು ಕ್ಷಮಿಸಿ ಸರ್ ಡಿಎನ್‌ಎ ಮ್ಯಾಚ್ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಇದರಿಂದ ಗೌತಮ್‌ಗೆ ನಿಂತ ನೆಲ ಕುಸಿದಂತಾಗಿದ್ದು ಈ ಮಗು ನಿಮ್ಮದಲ್ಲ ನಾವು ಮೊದಲೇ ಅಂದುಕೊಂಡಂತೆ ಈ ಮಗುನ ಯಾರೋ ಬಿಟ್ಟು ಹೋಗಿದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ಬೇಸರಗೊಂಡಿರುವ ಗೌತಮ್‌ನನ್ನು ಆನಂದ್ ಕಾರಿನಲ್ಲಿ ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಾನೆ. ಕಳೆದು ಹೋದರ ಬಗ್ಗೆ ಯೋಚನೆ ಮಾಡಬಾರದು, ಇರುವುದರ ಬಗ್ಗೆ ಯೋಚನೆ ಮಾಡು ಇಲ್ಲಾ ಅಂದರೆ ಹೀಗೆ ಕೊರಗುತ್ತಾನೆ ಇರಬೇಕಾಗುತ್ತೆ.ನೀನು ಖುಷಿ ಖುಷಿಯಾಗಿರಬೇಕು ಈಗ ಇರುವುದು ಕೂಡ ನಿನ್ನ ಮಗುನೇ ಅಲ್ವೇನೋ ಎಂದು ಹೇಳುತ್ತಾನೆ. ಆಗ ನನ್ನ ಕೈಲಾದಷ್ಟು ನಾನು ಪ್ರಯತ್ನ ಮಾಡುವುದಾಗಿ ಹೇಳುವ ಗೌತಮ್ ಮಗಳು ಸಿಗುವ ಭರವಸೆ ಇದೆ ಆ ಭರವಸೆಯಲ್ಲಿಯೇ ಬದುಕುವುದಾಗಿ ಹೇಳುತ್ತಾನೆ.

ಜೈದೇವ್‌ಗೆ ಕಪಾಳಮೋಕ್ಷ
ಭೂಮಿಕಾ ಎದುರು ಜೈದೇವ್‌ನ ಮುಖವಾಡ ಕೂಡ ಕಳಚಿ ಬಿದ್ದಿದ್ದು, ಜೈದೇವ್ ಮಗು ಕಿಡ್ನ್ಯಾಪ್ ಮಾಡುವ ಪ್ರಯತ್ನ ಮಾಡಿದ್ದು ಗೊತ್ತಾಗಿದೆ. ಮಲ್ಲಿಯ ಜೊತೆ ನೇರವಾಗಿ ಜೈದೇವ್ ಮನೆಗೆ ಭೂಮಿಕಾ ಬಂದಿದ್ದು ಸಿಸಿಟಿವಿ ದೃಶ್ಯಗಳನ್ನು ಜೈದೇವ್‌ಗೆ ತೋರಿಸಿದ್ದಾಳೆ. ಇದನ್ನ ನಾನು ಇನ್ನೂ ನಿಮ್ಮ ಅಣ್ಣನಿಗೆ ತೋರಿಸಿಲ್ಲ ಎನ್ನುತ್ತಾಳೆ. ಅದಕ್ಕೆ ಯಾಕೆ ತೋರಿಸಿಲ್ಲ ದಡ್ಡ ಅವನು ನನ್ನ ಹತ್ರ ಏನೂ ಕಿತ್ಕೋಳ್ಳೋಕೆ ಆಗಲ್ಲ ಎಂದು ಜೈದೇವ್ ಹೇಳಿದ್ದು ಭೂಮಿಕಾ ಕೆನ್ನೆಗೆ ಬಾರಿಸುತ್ತಾಳೆ.
ಭಾಗ್ಯಮ್ಮನ ಬೆದರಿಸುವ ಶಕುಂತಲಾ
ಭಾಗ್ಯಮ್ಮ ಕೋಣೆಗೆ ಶಕುಂತಲಾ ಬಂದಿದ್ದು ಮಾಡೋದೆಲ್ಲಾ ಮಾಡಿ ಅಮಾಯಕರ ತರ ಫೋಸ್ ಕೊಡ್ತಿದ್ದೀಯಾ, ನನಗೆ ಗೊತ್ತು ಕಣೆ ಇದೆಲ್ಲಾ ನಿನ್ನದೇ ಕೆಲಸ ಎನ್ನುತ್ತಾಳೆ. ನೀನೆ ತಾನೇ ಕಡ್ಡಿ ಅಲ್ಲಾಡಿಸಿದ್ದು ನೀನೆ ಚಾಡಿ ಹೇಳಿದಿಯಾ ಎನ್ನುವುದು ನನಗೆ ಚೆನ್ನಾಗಿ ಗೊತ್ತು ಎಂದು ಹೇಳುವ ಶಕುಂತಲಾ ಮಾತು ಬರಲ್ಲ ಈ ವಯಸ್ಸಿನಲ್ಲಿ ತೊಂದರೆ ಕೊಡುವುದು ಬೇಡ ಅಂತ ನಾನು ಸುಮ್ಮನೆ ಇದ್ದರೆ ನನಗೆ ಗುಂಡಿ ತೋಡೋಕೆ ಬರ್ತಿದ್ದೀಯಾ ಎನ್ನುತ್ತಾಳೆ.
ತಿರುಗಿ ಬಿದ್ದ ಭಾಗ್ಯಮ್ಮ
ನನಗೆ ಎದುರಾಗಿ ನಿಂತವರನ್ನು ನಾನು ಸುಮ್ಮನೆ ಬಿಡಲ್ಲ ಅವರಿಗೇನು ವ್ಯವಸ್ಥೆ ಮಾಡಬೇಕೋ ಆ ವ್ಯವಸ್ಥೆ ಮಾಡಿಯೇ ಮಾಡ್ತೀನಿ ಎನ್ನು ಶಕುಂತಲಾ, ತೆಪ್ಪಗೆ ತಿಂದ್ಕೊಂಡು ಬಿದ್ದಿರುವ ಬದಲು ನನ್ನ ವಿರುದ್ಧನೇ ಚಾಡಿ ಹೇಳಿದೀಯಾ ಎಂದು ಕುತ್ತಿಗೆ ಹಿಸುಕಲು ಮುಂದಾಗುತ್ತಾಳೆ. ಆಗ ಭಾಗ್ಯಮ್ಮ ತಿರುಗಿ ಬಿದ್ದಿದ್ದು ಶಕುಂತಲಾ ಕೈಯನ್ನು ತಿರುವುತ್ತಾಳೆ. ಗ್ಲಾಸ್ ಎತ್ತಿ ಹೊಡೆಯಲು ಮುಂದಾಗಿ ರೂಮ್‌ನಿಂದ ಹೊರ ಹೋಗುವಂತೆ ಹೇಳುತ್ತಾಳೆ.
ನಾಚಿಕೆಯಾಗಬೇಕು ಎಂದ ಭೂಮಿಕಾ
ಕೆನ್ನೆಗೆ ಬಾರಿಸಿದ್ದಕ್ಕೆ ಜೈದೇವ್ ಕೆರಳಿ ಕೆಂಡವಾಗಿದ್ದು ಚೀರೋದು, ಕೂಗೋದು, ಹಾರಾಡೋದು ಇನ್ಮೇಲೆ ನಡೆಯಲ್ಲ ಗೌತಮ್ ಅವರು ನಿಮ್ಮನ್ನ ತಲೆ ಮೇಲೆ ಹೊತ್ತು ಮೆರೆಸಿದರು, ಅಮ್ಮ ತಮ್ಮ ಅಂತ ಎಲ್ಲ ಮಾಡಿದರಲ್ಲಾ ಅವರಿಗೆ ದಡ್ಡ ಅಂತ ಬಿರುದು ಕೊಡ್ತಿದ್ದೀರಾ ಎಂದು ಭೂಮಿಕಾ ಕಿಡಿ ಕಾರುತ್ತಾಳೆ.

ನಿಮ್ಮಂತೆ ಅತೀ ಬುದ್ದಿವಂತರಾಗದಿರುವುದಕ್ಕಿಂತ ದಡ್ಡರಾಗಿರುವುದೇ ಒಳ್ಳೆಯದು ಮನುಷ್ಯನ ಭಾವನೆ ಅರ್ಥ ಮಾಡಿಕೊಳ್ಳದ ನೀವೆಂಥ ಮನುಷ್ಯರು ಎನ್ನುತ್ತಾಳೆ. ಮೋಸ ಮಾಡಿ ಏನೋ ಸಾಧನೆ ಮಾಡಿದಂತೆ ವೀರಾವೇಷ ಬೇರೆ .. ನಾಚಿಕೆಯಾಗಬೇಕು ಈ ತರ ಬದುಕುವುದಕ್ಕೆ ಎಂದು ಹೇಳುತ್ತಾಳೆ. ನೀವೇ ಅಲ್ಲ ನಿಮ್ಮ ತರ ನೂರು ಜೆಡಿ ಕೆಡಿ ಬೀಡಿ ಪಿಡಿ ಬಂದರೂ ಈ ಭೂಮಿಕಾನ ದಾಟಿಕೊಂಡೇ ಮುಂದೆ ಹೋಗಬೇಕು ಎಂದು ಹೇಳುತ್ತಾಳೆ.
ಜೈದೇವ್ ಮನೆಯಲ್ಲಿಯೇ ಹೆಣ್ಣು ನೋಡುವ ಶ್ತಾಸ್ತ್ರ
ಇಂದು (ಆಗಸ್ಟ್ 20 ) ಬಿಡುಗಡೆಯಾದ ಪ್ರೋಮೋದಲ್ಲಿ ಜೈದೇವ್ ಮನೆಯಿಂದ ಹೊರ ಬಂದ ಮಲ್ಲಿ ಮತ್ತು ಭೂಮಿಕಾ ಮತ್ತೆ ಜೈದೇವ್ ಮನೆಗೆ ಬಂದಿದ್ದಾರೆ. ಹೆಣ್ಣು ನೋಡುವ ಶಾಸ್ತ್ರ ಎಲ್ಲೆಂದರಲ್ಲಿ ಆಗಲ್ಲ ಅಲ್ವಾ ಮಲ್ಲಿ ಎಂದು ಭೂಮಿಕಾ ಕೇಳಿದ್ದು ಮಲ್ಲಿ ಈ ಮನೆಯಲ್ಲಾ ಎಂದು ಕೇಳುತ್ತಾಳೆ. ಯಾಕೆ ಆಗಬಾರದು ಎಂದು ಭೂಮಿಕಾ ಕರೆದುಕೊಂಡು ಹೋಗಿದ್ದು, ದಿಯಾ ಮತ್ತೆ ಯಾಕೆ ಬಂದ್ರೀ ಎಂದು ಕೇಳಿದ್ದಾಳೆ. ನನ್ನದೊಂದು ಅರ್ಜೆಂಟ್ ಮೀಟಿಂಗ್ ಇತ್ತು ಎನ್ನುವ ಭೂಮಿಕಾ, ಜೈದೇವ್ ಮನೆಯಲ್ಲಿಯೇ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದಾಳೆ. ಈ ವಿಚಾರ ಜೈದೇವ್ ಗೆ ಫೋನ್ ಮಾಡಿ ದಿಯಾ ತಿಳಿಸಿದ್ದು ಜೈದೇವ್ ಮನೆಗೆ ಬಂದಿದ್ದಾನೆ. ಇಂದು ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











