Amruthadhaare:ಅಕ್ಕ-ತಂಗಿಯ ಮಧ್ಯೆ ತಂದಿಟ್ಟು ಖುಷಿ ನೋಡುತ್ತಿರುವ ಶಕುಂತಲಾ; ನೊಂದಿದ್ದೇಕೆ ಭೂಮಿಕಾ?

By ಪೂರ್ವ

ಪಾರ್ಥ- ಅಪ್ಪಿ ಒಂದಾಗಿರುವುದು ಭೂಮಿಕಾಗೆ ಶಾಕ್ ಆಗಿದ್ದರೂ ಬಹಳ ಖುಷಿ ಆಗಿದೆ. ಪಾರ್ಥ-ಅಪ್ಪಿ ಮದುವೆಯನ್ನು ನೀನು ನಿಂತು ಮಾಡಬಾರದು ಎಂದು ಸದಾಶಿವ, ಭೂಮಿಕಾ ಬಳಿ ಮಾತು ತೆಗೆದುಕೊಂಡಿದ್ದರು. ಆ ಪ್ರಕಾರವಾಗಿ ಭೂಮಿಕಾ ನಡೆದುಕೊಳ್ಳುತ್ತಾಳೆ. ಇದನ್ನೇ ತಪ್ಪು ತಿಳಿದುಕೊಂಡ ಅಪ್ಪಿ, ಅಕ್ಕನ ಬಗ್ಗೆ ಮನದಲ್ಲಿ ದ್ವೇಷ ಮೂಡಿಸಿಕೊಂಡಿದ್ದಾಳೆ. ಅಪ್ಪಿಗೆ ಲಕ್ಷ್ಮೀಕಾಂತ ಒಂದು ವಿಡಿಯೋವನ್ನು ತೋರಿಸುತ್ತಾನೆ. ಶಕುಂತಲಾ ದೇವಿ ಹಾಗೂ ಭೂಮಿಕಾ ಮಾತುಕತೆ ಮಾಡುತ್ತಿರುವುದು.

ಆದರೆ, ಇದರಲ್ಲಿ ಭೂಮಿಕಾ ತನ್ನ ಅತ್ತೆಯ ಬಳಿ ಪಾರ್ಥ ಹಾಗೂ ಅಪ್ಪಿ ಮದುವೆ ನಡೆಯಲು ಸಾಧ್ಯ ಇಲ್ಲ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ ನಿಜ. ಆದರೆ ಇದಕ್ಕೆ ನಾನು ಒಪ್ಪುವುದಿಲ್ಲ ಎನ್ನುವ ಮಾತನ್ನು ಹೇಳಿರುತ್ತಾಳೆ. ಇದನ್ನೇ ವಿಡಿಯೋ ಮಾಡಿಕೊಂಡ ಲಕ್ಷ್ಮೀಕಾಂತ ಭೂಮಿಕಾ ಹಾಗೂ ಅಪ್ಪಿ ನಡುವೆ ವೈ ಮನಸ್ಸು ಮೂಡುವಂತೆ ಮಾಡುತ್ತಾನೆ.

Amruthadhaare serial August 19th episode update

ಅಪ್ಪಿಗೆ ವಿಡಿಯೋ ತೋರಿಸಿ ಲಕ್ಷ್ಮಿಕಾಂತ "ನಿಮ್ಮಿಬ್ಬರ ಮದುವೆಗೆ ಯಾರ ಒಪ್ಪಿಗೆ ಇರಲಿಲ್ಲ. ನಮ್ಮ ಅಕ್ಕ ದೊಡ್ಡ ಮನಸ್ಸು ಮಾಡಿದ ಕಾರಣ ನಿಮ್ಮಿಬ್ಬರ ಮದುವೆ ಆಯಿತು" ಎಂದಾಗ ಅಪ್ಪಿಗೆ ಅಕ್ಕನ ಮೇಲಿರುವ ನಂಬಿಕೆ ಹೋಗುತ್ತದೆ. ಆಕೆಯ ಮೇಲೆ ದ್ವೇಷ ಮೂಡುತ್ತದೆ. ಅಪ್ಪಿ ಅಲ್ಲಿಂದ ನೇರವಾಗಿ ಒಬ್ಬಂಟಿಯಾಗಿ ಕುಳಿತಿರುತ್ತಾಳೆ. ರಾತ್ರಿ ಭೂಮಿಕಾ ಬಂದು ಅಪ್ಪಿ ಊಟಕ್ಕೆ ಬಾ ಎಂದು ಕರೆಯುತ್ತಾಳೆ.

ತಂಗಿಯನ್ನು ಊಟಕ್ಕೆ ಕರೆದ ಭೂಮಿಕಾ

ಆಗ ಅಪ್ಪಿ, "ಅಕ್ಕ ಸ್ವಲ್ಪ ನಿಲ್ಲು ನಿನ್ನ ಜೊತೆ ಮಾತನಾಡಬೇಕಾಗಿದೆ" ಎಂದು ಹೇಳುತ್ತಾಳೆ. "ಅಕ್ಕ ನನ್ನ ಹಾಗೂ ಪಾರ್ಥ ಅವರ ಮದುವೆ ಆಗಿದ್ದು ನಿನಗೆ ಖುಷಿ ಆಯಿತಾ?" ಎಂದಾಗ ಭೂಮಿಕಾ ಹೇಳುತ್ತಾಳೆ. "ಅಪ್ಪಿ ನನಗೆ ನಿನ್ನ ಹಾಗೂ ಪಾರ್ಥ ಪ್ರೀತಿ ಮುಂಚೆನೇ ತಿಳಿದಿತ್ತು. ಹಾಗೆಯೇ ನನಗೆ ಬಹಳ ಖುಷಿ ಕೂಡ ನೀಡಿದೆ. ಆದರೆ ಅಪ್ಪ ಈ ಮದುವೆಗೆ ಒಪ್ಪಿರಲಿಲ್ಲ. ಆಗ ಕಾರಣಕ್ಕೆ ನಾನು ಈ ಮದುವೆ ಆಗಬಾರದು ಎಂದು ಹೇಳುತ್ತಿದ್ದೆ ವಿನಃ ಬೇರೆ ಯಾರ ಕಾರಣ ಕೂಡ ಇರಲಿಲ್ಲ" ಎಂದಾಗ ಅಪ್ಪಿ ಹೇಳುತ್ತಾಳೆ. "ಅಕ್ಕ ನೀನು ಅದೆಷ್ಟು ಸುಳ್ಳು ಹೇಳುತ್ತೀಯಾ? ನಿನಗೆ ಪಾರ್ಥ ಹಾಗೂ ನಾನು ಮದುವೆಯಾಗುವುದು ಇಷ್ಟವೇ ಇರಲಿಲ್ಲ" ಎಂದು ಹೇಳುತ್ತಾಳೆ.

Amruthadhaare serial August 19th episode update

ಅಕ್ಕನ ಮಾತೇ ಕೇಳದ ಅಪ್ಪಿ

"ನೀನು ನಾನು ಈ ಮನೆಗೆ ಸೊಸೆ ಆಗಬಾರದಿತ್ತು ಎಂದು ಅದೆಷ್ಟೆಲ್ಲ ಕಷ್ಟಪಟ್ಟೆ. ಆದರೆ, ನಾನು ಇವರಿಗೆ ಸೊಸೆಯಾಗಿ ಬಂದಿದ್ದೇನೆ. ಇದು ನಿನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ಇದು ನಿಜ ನೀನು ಯಾವತ್ತೂ ನನ್ನ ಒಳಿತನ್ನು ಬಯಸುತ್ತೀಯ ಎಂದು ಅಂದುಕೊಂಡಿದ್ದೆ. ಆದರೆ ನೀನು ಬೆನ್ನ ಹಿಂದೆ ಚೂರಿ ಹಾಕಿ ಬಿಟ್ಟಿಯಲ್ಲ" ಎಂದು ಬಹಳ ಬೇಸರದಿಂದ ಹೇಳಿದಾಗ, ಭೂಮಿಕಾಗೆ ಬಹಳ ಬೇಸರ ಆಗುತ್ತದೆ. ಪುನಃ ಅಪೇಕ್ಷ "ನಾನು ಇದೀಗ ಅಪೇಕ್ಷ ಸದಾಶಿವ ಅಲ್ಲ. ನಾನೀಗ ಪಾರ್ಥ ದಿವಾನ್" ಎಂದು ಹೇಳುತ್ತಾಳೆ. "ನಾನು ಇದೀಗ ಮುಂಚಿನ ಅಪೇಕ್ಷ ಆಗಿ ಉಳಿದಿಲ್ಲ. ನಾನು ಪಾರ್ಥನ ಹೆಂಡತಿ" ಎಂದು ಹೇಳಿದಾಗ ಭೂಮಿಕಾಗೆ ನೋವಾಗುತ್ತದೆ.

ಅಪ್ಪಿ ಮಾತಿಗೆ ನೊಂದುಕೊಂಡ ಭೂಮಿಕಾ

ಅಪ್ಪಿ ಮಾತನಾಡುತ್ತಿರುವುದನ್ನು ಪಾರ್ಥ ಮಹಡಿಯಲ್ಲಿದ್ದು ಕೇಳಿಸಿಕೊಳ್ಳುತ್ತಿರುತ್ತಾನೆ. ತನ್ನ ಅತ್ತಿಗೆಯ ಜೊತೆ ಆತನ ತಂಗಿಯೇ ಹೀಗೆ ನಡೆದುಕೊಂಡಾಗ ಆತನಿಗೆ ಕೂಡ ಬಹಳ ನೋವಾಗುತ್ತದೆ. ಇನ್ನೂ ಶಕುಂತಲಾ ದೇವಿ ಮಾತ್ರ ಒಳ್ಳೆಯವಳ ಹಾಗೆ ನಟನೆ ಮಾಡಿ ಎಲ್ಲರ ಮನಸ್ಸನ್ನೂ ಗೆಲ್ಲುತ್ತಿರುತ್ತಾಳೆ. ಆದರೆ, ಅಕ್ಕ- ತಂಗಿಯ ಮಧ್ಯೆ ವೈ ಮನಸ್ಸು ಮೂಡಿಸುತ್ತಿದ್ದಾಳೆ. ಪಾರ್ಥ ಅಪ್ಪಿಯ ಜೊತೆ ಮೊದಲನೇ ರಾತ್ರಿಯಲ್ಲಿ ಬಹಳ ಸಪ್ಪೆಯಿಂದ ಮಾತನಾಡುತ್ತಾನೆ. "ಅಪ್ಪಿ ನೀನು ಅತ್ತಿಗೆಯ ಬಳಿ ನಡೆದುಕೊಂಡ ರೀತಿ ಸರಿ ಇಲ್ಲ. ನೀನು ಹಾಗೆ ನಡೆದುಕೊಳ್ಳಬಾರದಾಗಿತ್ತು. ನಾವು ಹೊಸ ಜೀವನ ಶುರು ಮಾಡೋಣ. ಆದರೆ ನಿಮ್ಮ ತಂದೆ ಒಪ್ಪಿದ ಬಳಿಕ" ಎಂದು ಹೇಳುತ್ತಾನೆ. ಮುಂದೇ ಈ ಧಾರಾವಾಹಿ ಹೇಗೆಲ್ಲ ಟ್ವಿಸ್ಟ್ ಪಡೆಯುತ್ತೆ ಅನ್ನೋದು ನೋಡಬೇಕಿದೆ.

More from Filmibeat

English summary
Amruthadhaare serial August 19th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X